ಎಂದೆಂದೂ ಮರೆಯದ ವ್ಯಕ್ತಿತ್ವ ಡಾ.ಅಬ್ದುಲ್ ಕಲಾಮ್ ರವರು ರಾಷ್ಟ್ರಪತಿಯಾದ ಮೊದಲ ಮತ್ತು ಕೊನೆಯ ದಿನದ ಆ ಎರಡು ಮಹತ್ವದ ಘಟನೆಗಳು. ಡಾ. ರಾಜಶೇಖರ ನಾಗೂರ ಅವರ ಜೀವನಕ್ಕೊಂದು ಸ್ಫೂರ್ತಿ ನೀಡುವ ‘ಸ್ಫೂರ್ತಿ ಸಿಂಚನ’ ಅಂಕಣವನ್ನು ತಪ್ಪದೆ ಓದಿ…
(ಘಟನೆ- 1) :
ಆ ದಿನ ಕಲಾಮ್ ರವರು ಮೊದಲಬಾರಿ ರಾಷ್ಟ್ರಪತಿಯಾಗಿ ರಾಷ್ಟ್ರಪತಿ ಭವನದೊಳಗೆ ಪ್ರವೇಶಮಾಡಿ, ವಿಶ್ರಾಂತಿಗಾಗಿ ಆಸನದ ಮೇಲೆ ಆಸೀನರಾಗುತ್ತಿದ್ದಂತೆ ಕೆಲಸದವನೊಬ್ಬ ಓಡೋಡಿ ಬಂದವನೆ, ಅವರ ಕಾಲುಗಳನ್ನು ಮುಟ್ಟಿ ಅವರ ‘ಶೂ’ ತೆಗೆಯಲು ಮುಂದಾದ. ತಕ್ಷಣವೇ ಕಲಾಮ್ ರು ಕಾಲನ್ನು ಹಿಂತೆಗೆದು ಏನು ಮಾಡುತ್ತಿರುವಿ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರವಾಗಿ ಅವನು, ಸರ್ ನಾನಿರುವುದೇ ನಿಮ್ಮ ಪಾದರಕ್ಷೆಗಳನ್ನು ತೆಗೆಯಲು ಮತ್ತು ಹಾಕಲು. ಇದೇ ನನ್ನ ಕೆಲಸವೆಂದ.
ಆಗ ಕಲಾಮ್ ಜಿ ಹೇಳಿದರು you have been dismissed from the job from today, (ಈ ಕ್ಷಣದಿಂದಲೇ ನಿನ್ನನ್ನು ಕೆಲಸದಿಂದ ವಜಾ ಮಾಡಲಾಗಿದೆ) ಎಂದಾಗ ಆತಂಕದಿಂದ ಆ ಕೆಲಸಗಾರ ಸಪ್ಪೆ ಮುಖ ಹಾಕಿ ಕೆಲಸ ಕಳೆದುಕೊಂಡ ಭೀತಿಯಲಿ ನಿಂತನು. ಮರುಕ್ಷಣವೇ ಕಲಾಮ್ ರು You have been reappointed as Gardener (ನೀನು ಗಾರ್ಡನ್ ಮಾಲಿಯಾಗಿ ಮರುನೇಮಕಗೊಂಡಿರುವೆ) ಎಂದಾಗ ಅವನು ಹರ್ಷಭರಿತ ಕಣ್ಣುಗಳಿಂದಲೆ ವಂದಿಸಿದ.
ಇಂದಿನಿಂದ ರಾಷ್ಟ್ರಪತಿ ಭವನದಲ್ಲಷ್ಟೆ ಅಲ್ಲ, ಇಡಿ ಭಾರತದಲ್ಲೆಲ್ಲೂ ಈ ಚಪ್ಪಲಿ ಹಾಕುವ, ತೆಗೆಯುವ ಪದ್ದತಿ ಇರಕೂಡದು ಎಂದು ಹೇಳಿ ತಮ್ಮ ಮೇರು ವ್ಯಕ್ತಿತ್ವವನ್ನು ಪ್ರದರ್ಶಿಸಿದರು.
ಇಷ್ಟಾದರೂ, ಇಂದಿಗೂ ನಮ್ಮ ಅನೇಕ ನಾಯಕರು ಚಪ್ಪಲಿ, ಶೂ ಗಳನ್ನು ಇನ್ನೊಬ್ಬರಿಂದಲೇ ಹಾಕಿಸಿಕೊಳ್ಳುವುದು ವಿಪರ್ಯಾಸ. ಕಲಾಮ್ ಅವರಿಗೆ ಕಲಾಮ್ ಅವರೇ ಸಾಟಿ ಅಲ್ಲವೇ.

(ಘಟನೆ-2) :
ಆ ದಿನ ಡಾ.ಅಬ್ದುಲ್ ಕಲಾಮ್ ರವರು ರಾಷ್ಟ್ರಪತಿಯಾಗಿ ತಮ್ಮ ಐದು ವರ್ಷಗಳ ಅವಧಿಯನ್ನು ಮುಗಿಸಿದ ಮೇಲೆ ರಾಷ್ಟ್ರಪತಿ ಭವನದಿಂದ ನಿರ್ಗಮಿಸುವ ಕೊನೆಯ ದಿನ. ಎಲ್ಲರೂ ಭಾವುಕರಾಗಿದ್ದ ಕ್ಷಣ. ಕೊನೆಯಬಾರಿ ಎಲ್ಲ ರಾಷ್ಟ್ರಪತಿ ಭವನದ ಕೆಲಸದವರನ್ನು ಕರೆದು ಪ್ರೀತಿಯಿಂದ ಮಾತನಾಡಿ, ಐದು ವರ್ಷ ತಮ್ಮ ಸೇವೆಯನ್ನು ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿ, ಅಲ್ಲಿಯೆ ಇದ್ದ ಗಾರ್ಡನ್ ಮಾಲಿಯನ್ನು ಕರೆದು, ನೀನು ಪ್ರತೀದಿನ ಗಾರ್ಡನ್ ಹೂ-ಗಿಡಗಳಿಗೆ ನೀರು ಹಾಕಲು ಉಪಯೋಗಿಸುತ್ತಿಯಲ್ಲ ಆ ನೀರುಣಿಸುವ ಸ್ಪ್ರಿಂಕ್ಲರ್ ನ ತುಂಬಾ ನೀರು ತುಂಬಿಕೊಂಡು ಬಾ ಎಂದರು. ಅವನು ಕ್ಷಣಾರ್ಧದಲ್ಲಿ ತಂದೆಬಿಟ್ಟ.
ಪಕ್ಕದಲ್ಲಿಯೆ ಡಾ.ಕಲಾಮ್ ರ ಪರ್ಸನಲ್ ಸೆಕ್ರೇಟರಿ, ಕಲಾಮ್ ರ ಒಂದು ಬ್ರಿಫ್ಕೇಸ್ ಹಿಡಿದುಕೊಂಡು ನಿಂತಿದ್ದರು. ಅದರಲ್ಲಿ ಕಲಾಮ್ ರ ಒಂದೆರಡು ಬಟ್ಟೆ ಕೆಲ ಪುಸ್ತಕಗಳು ಹಾಗೂ ಲ್ಯಾಪ್ಟಾಪ್ ಇತ್ತು. ಹುದ್ದೆ ತೊರೆಯುವಾಗ ಕಲಾಮ್ ರದು ಅದಷ್ಟೆ ಆಸ್ತಿ.
ಕಲಾಮ್ ರು ಆ ಮಾಲಿಯನ್ನು ಕರೆದು ಸ್ಪ್ರಿಂಕ್ಲರ್ ನಿಂದ ಆ ಬ್ರೀಫ್ಕೆಸ್ ಮೇಲೆ ನೀರನ್ನು ಸಿಂಪಡಿಸಲು ಹೇಳಿದರು. ಮಾಲಿಯು ನೀರನ್ನು ಸಿಂಪಡಿಸಲು ಮುಂದಾದ. ಡಾ.ಕಲಾಮ್ ರ ಪರ್ಸನಲ್ ಸೆಕ್ರೇಟರಿ ಗಾಬರಿಯಿಂದ, ಸರ್ ನೀರು ಹುಯ್ದರೆ ಒಳಗಿನ ಲ್ಯಾಪ್ಟಾಪ್, ಬಟ್ಟೆ, ಪುಸ್ತಕ ಹಾಳಾಗುತ್ತವೆ ಎಂದ.
ಡಾ.ಕಲಾಮ್ ರು ನೀಡಿದ ಮರುತ್ತರವೇನು ಗೊತ್ತೇ?
“I don’t want even a dust from the Rashtrapatibhavan after completion of my term”
(“ನನ್ನ ಅವಧಿ ಮುಗಿದಮೇಲೆ, ಈ ರಾಷ್ಟ್ರಪತಿ ಭವನದ ಒಂದು ಧೂಳಿನ ಕಣವು ನನಗೆ ಬೇಡ”)
ಈ ಕಾರಣದಿಂದಲೇ ಡಾ.ಕಲಾಮ್ ಜಿ ಒಬ್ಬ ವಿಜ್ಞಾನಿಯಷ್ಟೆ ಅಲ್ಲ, ಒಬ್ಬ ರಾಜಕಾರಣಿಯಾಗಿಯೂ ಗ್ರೇಟ್ ಅನಿಸೋದು. ಇವರ ಆದರ್ಶಗಳು ನಮ್ಮ ಸದ್ಯದ ರಾಜಕಾರಣಕ್ಕೆ ಬೇಕೆ ಬೇಕು.
ಭಾವಿ ಭವಿಷ್ಯತ್ತಿನ ಮಕ್ಕಳ ಮನಸಲ್ಲಿ ಅವರ ಆದರ್ಶದ ಬೀಜಗಳನ್ನು ಬಿತ್ತುವ ಮೂಲಕ ಕಲಾಮ್ ರನ್ನು ಮತ್ತೆ ಪಡೆಯೋಣ.

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :
- ನೀ ನನ್ನ ಮನ್ನಿಸು
- ನಿನ್ನ ನೀನು ಮರೆತರೇನು..!
- ಸಂಯುಕ್ತ ಪ್ರಗತಿಯ ಪರಿಣಾಮ
- ನೀವು ಕನಸು ಕಾಣುವವರೆ..!
- ಅಂತರಾಳದ ಮಾತು
- ಮನಸ್ಸೆಂಬ ಮನೆ
- ‘ಸೋಲೇ ಗೆಲುವಿನ ಸೋಪಾನ’
- ಬದುಕಿನಲ್ಲಿ ‘ಬದುಕಿ’ ನಲಿ
- ಕ್ಷಮಿಸುವ ಬ್ಯೂಟಿಫುಲ್ ಮನಸುಗಳು
- ಬದುಕುವ ಗತ್ತು
- ಹೀಯಾಳಿಸದಿರು ಮನವೆ!!
- ‘ಸಾವು ಬದುಕಲು ಕಲಿಸುತ್ತದೆ’
- ಪ್ರೇಮ ಭಕ್ತಿಯಾಗುವುದು ಯಾವಾಗ !
- ಇರುವಾಗ ಎಲ್ಲಾ ನೆಂಟರು, ಇರದಾಗ ಯಾರೂ ಇಲ್ಲಾ…
- ಬರಿ ವಿಶ್ವಾಸ Vs ಸಂಪೂರ್ಣ ಭರವಸೆ
- ಋಣಾನುಬಂಧ
- ಕಷ್ಟದಲ್ಲಿಯೂ ಇಷ್ಟದ ಬದುಕು
- ರತನ್ ಮತ್ತು ಟೀಟು
- ನಿಗರ್ವಿ ಹನುಮ
- ಡಾ. ರಾಜಶೇಖರ ನಾಗೂರ
