ರಾಜಣ್ಣ ನಮ್ಮನಗಲಿ ಏಪ್ರಿಲ್ 12 ಕ್ಕೆ ಹದಿಮೂರು ವರ್ಷಗಳಾದರೂ ನಾಡಿನ ಎಲ್ಲರ ಹೃದಯದಲ್ಲಿ ಶಾಶ್ವತವಾಗಿ ಮನೆ ಮಾಡಿದ್ದಾರೆ ಎಂಬುದಕ್ಕೆ ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಗೊಟಗೋಡಿಯ ಉತ್ಸವ ರಾಕ್‍ಗಾರ್ಡನ್ ಸಾಕ್ಷಿಯಾಗಿದೆ. – ಟಿ.ಶಿವಕುಮಾರ್, ತಪ್ಪದೆ ಮುಂದೆ ಓದಿ…
ಕಲ್ ಖೇಲ್ ಮೇ, ಹಮ್ ಹೋ ನ ಹೋ, ಗರ್ದಿಶ್ ಮೇ ತಾರೆ ರಹೇಂಗೆ ಸದಾ (ನಾಳೆಯ ಆಟದಲ್ಲಿ ನಾನೀರಲಿ ಬಿಡಲಿ, ಆಕಾಶದಲ್ಲಿ ನಕ್ಷತ್ರಗಳು ಸದಾ ಇರುತ್ತವೆ.). ಇವು ಹಿಂದಿ ಚಿತ್ರರಂಗದ ಶೋ ಮ್ಯಾನ್ ದಿ.ರಾಜ್‍ಕಪೂರ್ ಮಾತುಗಳು. ಇವು ಕನ್ನಡ ಚಿತ್ರರಂಗದ ಮಹಾನ್ ನಟ ದಿ.ರಾಜ್‍ಕುಮಾರ್ ಅವರಿಗೆ ಹೋಲಿಕೆ ಆಗುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಯಾಕೆ? ಅಂತೀರಾ! ಏಪ್ರಿಲ್ ತಿಂಗಳು ಕನ್ನಡಿಗರ ಪಾಲಿಗೆ ಸುಃಖ ದುಃಖ ಸಮವಾಗಿ ಸ್ವೀಕರಿಸುವ ತಿಂಗಳು ಅಭಿಮಾನಿಗಳಲ್ಲಿ ದೇವರನ್ನು ಕಂಡಿದ್ದ ಆರು ಕೋಟಿ ಕನ್ನಡಿಗರ ಕಣ್ಮಣಿ ಡಾ. ರಾಜ್‍ಕುಮಾರ್ ಏ 12 ನಮ್ಮನಗಲಿದ ಹಾಗೂ ಏ 24 ರಂದು ಜನಿಸಿದ ದಿನ. ರಾಜಣ್ಣ ನಮ್ಮನಗಲಿ ಏ 12 ಕ್ಕೆ ಹದಿಮೂರು ವರ್ಷಗಳಾದರೂ ನಾಡಿನ ಎಲ್ಲರ ಹೃದಯದಲ್ಲಿ ಶಾಶ್ವತವಾಗಿ ಮನೆ ಮಾಡಿದ್ದಾರೆ ಎಂಬುದಕ್ಕೆ ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಗೊಟಗೋಡಿಯ ಉತ್ಸವ ರಾಕ್‍ಗಾರ್ಡನ್ ಸಾಕ್ಷಿಯಾಗಿದೆ. ರಾಜ್ ಅಗಲಿದ ಒಂದೇ ವರ್ಷದಲ್ಲಿ ನಟನ ಸ್ಮರಣಾರ್ಥ ರಾಜ್‍ಸರ್ಕಲ್ ನಿರ್ಮಿಸಿ ರಾಜ್ಯವನ್ನು ಬೆರಗುಗೊಳಿಸಿತು. ಈ ಸರ್ಕಲ್ ನಲ್ಲಿ ರಾಜಣ್ಣ ಅಭಿನಯದ ಭಕ್ತಿ ಪ್ರಧಾನ ಹಾಗೂ ಸಾಮಾಜಿಕ ಚಿತ್ರಗಳ ಶಿಲ್ಪಗಳಿವೆ.
ಈ ಗಾರ್ಡನ್ ಪ್ರವೇಶ ಮಾಡುತ್ತಿದ್ದಂತೆ ಪ್ರವಾಸಿಗರಿಗೆ ಮೊದಲು ನೋಡಲು ಸಿಗುವುದೇ ರಾಜಣ್ಣ ಅಭಿನಯದ ಪ್ರಥಮ ಚಿತ್ರ ಬೇಡರ ಕಣ್ಣಪ್ಪ ಚಿತ್ರದ ಶಿವನಿಗೆ ಕಣ್ಣನ್ನು ಆರ್ಪಿಸುವ ದೃಶ್ಯ. ಎಲ್ಲರ ಕಣ್ಮನ ಸೆಳೆಯುತ್ತದೆ.
ರಾಜ್ ಸರ್ಕಲ್ ಬಲಭಾಗದಲ್ಲಿ ಗುರಿ, ಮೇಯರ್ ಮುತ್ತಣ್ಣ, ಗಂಧದ ಗುಡಿ, ದೇವರ ಗೆದ್ದ ಮಾನವ, ವೀರ ಕೇಸರಿ, ಸಂಪತ್ತಿಗೆ ಸವಾಲ್, ಬಂಗಾರದ ಮನುಷ್ಯ, ಕವಿರತ್ನ ಕಾಳಿದಾಸ, ಹಾಗೂ ಆಕಸ್ಮಿಕ ಚಿತ್ರದ ದೃಶ್ಯಗಳು ಶಿಲ್ಪಗಳ ರೂಪದಲ್ಲಿ ನೋಡುಗರ ಕಣ್ಮನ ಸೆಳೆಯುತ್ತದೆ.
ಡಾ ರಾಜ್ ಒಬ್ಬ ಅಪ್ಪಟ ಯೋಗಪಟು ಅವರು ಯೋಗಾಭ್ಯಾಸದಲ್ಲಿ ತೊಡಗಿರುವ ದೃಶ್ಯಗಳನ್ನು ಶಿಲ್ಪಗಳ ರೂಪದಲ್ಲಿ ತೋರಿಸಲಾಗಿದೆ. ಯೋಗಾಸನದಿಂದಾಗುವ ಪ್ರಯೋಜನಗಳ ಬಗೆಗಿನ ವಿವರ ಬರಹ ರೂಪದಲ್ಲಿ ಹಾಗೂ ಯೋಗದ ಮಹತ್ವ ತಿಳಿಸುವ ನಾಮಫಲಕ ಪ್ರವಾಸಿಗರ ಮಾಹಿತಿಗಾಗಿ ನಾಮಫಲಕವನ್ನು ಆಳವಡಿಸಲಾಗಿದೆ. ಯೋಗಕ್ಕೆ ಸಂಬಂಧಿಸಿದ ಪುಸ್ತಕಗಳ ಮಾರಾಟ ವ್ಯವಸ್ಥೆಯೂ ಇಲ್ಲಿ ಇರುತ್ತದೆ.
ಎಡ ಭಾಗದಲ್ಲಿ ಕನಕದಾಸರು, ಪುರಂದರದಾಸರು, ವಾಲ್ಮೀಕಿ, ಸರ್ವಜ್ಞ, ಗೌತಮ ಬುದ್ಧ, ಸನಾದಿ ಅಪ್ಪಣ್ಣ, ಸಂತ ತುಕಾರಾಮ ರೂಪದಲ್ಲಿ ಕುಳಿತ ಚಿತ್ರಗಳ ದೃಶ್ಯಗಳು ಇದ್ದು. ಪಕ್ಕದಲ್ಲಿ ಇರುವ ಗ್ಯಾಲರಿಯ ಮಧ್ಯಭಾಗದಲ್ಲಿ ಪದ್ಮಾಸನ ರೂಪದಲ್ಲಿ ಅಸೀನರಾಗಿರುವ ದೃಶ್ಯವಿದೆ. ಅದರ ಎಡ ಮತ್ತು ಬಲ ಭಾಗದಲ್ಲಿ ಸೂರ್ಯ ನಮಸ್ಕಾರ ಹಾಕುತ್ತಿರುವ ಶಿಲ್ಪಗಳು, ಅದರಲ್ಲಿ ವಜ್ರಾಸನ, ಶೀರ್ಷಾಸನ, ವೃಕ್ಷಾಸನ, ತಾಡಾಸನ, ಊಧ್ರ್ವ ಹಸ್ತಾಸನ ದೃಶ್ಯಗಳಿವೆ.
ಬೆಂಗಳೂರು ಮೈಸೂರು ಕಡೆಗಳಿಂದ ಬರುವವರು ಶಿಗ್ಗಾಂವ್‍ಗೆ ಬರಬೇಕು ಶಿಗ್ಗಾಂವ್‍ನಿಂದ 6 ಕಿ.ಮೀ. ಮಹಾರಾಷ್ಟ್ರ ಮತ್ತಿತರ ಕಡೆಗಳಿಂದ ಬರುವವರು ಹುಬ್ಬಳ್ಳಿಗೆ ಬಂದು ಅಲ್ಲಿಂದ 36 ಕಿ ಮೀ ರಾಷ್ರೀಯ ಹೆದ್ದಾರಿ 4 ರಲ್ಲಿದೆ.
- ಚಿತ್ರ ಲೇಖನ: ಟಿ.ಶಿವಕುಮಾರ್, ಸಹ ಶಿಕ್ಷಕ, ಸ ಹಿ ಪ್ರಾ ಶಾಲೆ ಅರಳೇಶ್ವರ, (ತಾ) ಹಾನಗಲ್ಲ (ಜಿ) ಹಾವೇರಿ.