“ಸಹಾಯ” ಉಭಯ ಸಂಕಟವಾಗಬಾರದು

ಹಣ ಕೇಳುವುದು ತಪ್ಪುಲ್ಲ, ಆದರೆ ಬಲವಂತವಾಗಿ ಪಡೆಯುವುದು ತಪ್ಪು. ಸಹಾಯ ಮನದಿಂದ ಹರಿದು ಬರಬೇಕೇ ವಿನಃ ಬಲವಂತವಾಗಬಾರದು – ಶೋಭಾ ನಾರಾಯಣ ಹೆಗಡೆ ಅವರು ಸಹಾಯ ಕುರಿತು ಬರೆದಿರುವ ಒಂದು ಲೇಖನ ತಪ್ಪದೆ ಓದಿ…

“ಸಹಾಯ” ಎನ್ನುವುದು ಉಭಯ ಸಂಕಟ ಎನಿಸಬಾರದು. ತುಂಬು ಮನಸಿನಿಂದ ಮಾಡಿದರೆ ಮಾತ್ರ ಆ ಸಹಾಯ , ಮಾಡಿದುದಕ್ಕೂ ಒಂದು ಸಾರ್ಥಕತೆ ಎನಿಸುತ್ತದೆ.. ಇತ್ತೀಚಿನ ದಿನಗಳಲ್ಲಿ ಹಣ ಎಂದರೆ, ತುಂಬಲಾರದ, ಹರಿದ ಗೋಣಿ ಚೀಲದಂತೆ ಆಗಿದೆ..ಆದರೂ ಎಲ್ಲರ ಬದುಕು ಕೂಡ ಹಾಗೇ ನಡೆಯುತ್ತಿದೆ ಕೂಡ..

ವಿಷಯ ಏನೆಂದರೆ.. ಒಂದು ಒಳ್ಳೆಯ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡರೆ, ಒಬ್ಬರಿಂದ ಅಸಾಧ್ಯ… ಜನತೆ ಕೈ ಗೂಡಿಸಿದರೆ ಬಹು ಸುಲಭ..ನಿಜ ಕೂಡ. ಅಗತ್ಯ ಕೂಡ… ಇಲ್ಲಿ ಪ್ರಸ್ತಾವನೆ ಮಾಡ ಹೊರಟಿದ್ದು ಏನೆಂದರೆ… ಮುಖಪುಟದಲ್ಲಿ,ಸಹಾಯ ಕೇಳಿ ಪೋಸ್ಟ್ ಮಾಡಿದಾಗ,ಸುಮನಸಿನನೇಕರು ಸ್ಪಂಧಿಸಿಯೇ ಸ್ಪಂಧಿಸುತ್ತಾರೆ..ಶಕ್ತಿ ಇರುವವರು ಸಹಾಯ ಮಾಡುತ್ತಾರೆ.ಆಗದವರು ಸುಮ್ಮನೆ ಇರುತ್ತಾರೆ.ಇಲ್ಲಿ ಉಭಯಸಂಕಟಕ್ಕೆ ಒಳಗಾಗೋ ಪ್ರಶ್ನೆ ಬರದು..ಇದು ಆರೋಗ್ಯಕರ ಬೆಳವಣಿಗೆ ನಿಜಕ್ಕೂ..

ಆದರೆ ಇನ್ಬಾಕ್ಸಿನಲ್ಲಿ ಪ್ರತೀಯೊಬ್ಬರಿಗೂ ಮೆಸೇಜ್ ಮೂಲಕ ಹಣ ಸಂಗ್ರಹಿಸುವ ವಿಧಾನ, ಕೆಲವರಿಗೆ ಓಕೆ ಪರವಾಗಿಲ್ಲ ಎಂದಾದರೆ, ಇನ್ನು ಕೆಲವರಿಗೆ ತುಸು ಸಂಕಷ್ಟ ಮಯ..ಕಾರಣ ಇಲ್ಲಿ ಅನಿವಾರ್ಯತೆಗೆ ಕಟ್ಟು ಬಿದ್ದಾದರೂ ನೀಡಲೇಬೇಕು.. .ಇದು ಉಭಯಸಂಕಟದ ಪ್ರಶ್ನೆ. ಹಣ ಕೇಳುವುದು ತಪ್ಪು ಎಂದು ಹೇಳಲಾರೆ…ಆದರೆ ಬಲವಂತವಾಗಿ ಪಡೆಯುವುದು ತಪ್ಪು ಎಂದಷ್ಟೇ ಹೇಳಲು ಸಾಧ್ಯ..


ಫೋಟೋ ಕೃಪೆ : google

ಉದಾಹರಣೆಗೆ ನಮ್ಮನ್ನೇ ತೆಗೆದುಕೊಂಡರೆ…ವೈಯಕ್ತಿಕವಾಗಿಯೇ ನಾವು, ಪ್ರತಿನಿತ್ಯ ಇದನ್ನು ಮನಃಸ್ಫೂರ್ತಿಯಿಂದ ಮಾಡುತ್ತೇವೆ….ನಮ್ಮ ಪಾಸ್ಟ್ ಫುಡ್ ಸೆಂಟರಿನಲ್ಲಿ,ಕಾಲ್ನಡಿಗೆಯಲ್ಲಿ ಬರುವ ವೃದ್ಧ ದಾಸಯ್ಯರು ಚಹಾ,ಮಜ್ಜಿಗೆ ಸೇವಿಸುತ್ತಾರೆ. ಇವರಿಂದ‌ ಹಣ ಪಡೆಯುವುದಿಲ್ಲ ನಾವು….ಏನಿಲ್ಲ ಎಂದರೂ ಗರಿಷ್ಠ ಬಿಡಿ .. ಕನಿಷ್ಟ ಬೆಳಗಿಂದ ಸಂಜೆ ವರೆಗೆ ಒಂದು ನಾಲ್ಕೈದು ಮಂದಿ ಭಿಕ್ಷಾಟನೆಗೆ ಬರುವ ಅಸಹಾಯಕ ವೃದ್ಧರು,ಮಹಿಳೆಯರು ಉಂಡು ಹೋಗುತ್ತಾರೆ..ಇವರಿಗೆ ಹಣವಿಲ್ಲದೇ ಹಾಗೇ ನೀಡುತ್ತೇವೆ..ಇನ್ನು, ಕಾಸಿಲ್ಲ, ಕಾಸು ಕಡಿಮೆ ಇದೆ ಎನ್ನುವ ಬಡ ವರ್ಗದ ಮಂದಿ ಬೇರೆ… ಹಾಗೇ ಅನಾಥ ಆಶ್ರಮಗಳಿಗೆ ದೇಣಿಗೆ ಸಂಗ್ರಹಿಸಿ ಬರುವ ಮಂದಿಗೆ ತುಸು ಕಡಿಮೆ ಬೆಲೆಯಲ್ಲಿ ಊಟ.ಅಲ್ಲಿರುವ ಮಕ್ಕಳಿಗೆ ಒಂದಿಷ್ಟು ಬಿಸ್ಕತ್, ಚಾಕಲೇಟ್ ನೀಡುವಿಕೆ..ಟೆಂಪ್ರವರಿ ಬಸ್ ಕಂಡಾಕ್ಟರ್ ಮತ್ತೆ ಡ್ರೈವರ್ ಅವರಿಗೆ ತುಂಬಾ ಕಡಿಮೆ ಬೆಲೆಯಲ್ಲಿ ಊಟ ,ಟೀ ಕೊಡ್ತೀವಿ…ಹೀಗೆ..ಇಂತಹ ದಿನ ನಿತ್ಯದ ನಮ್ಮ ಕಾಯಕದಲ್ಲಿ ವ್ಯಾಪಾರೀ ಮನೋಭಾವ ಬಿಟ್ಟು, ಲಾಭದ ನಡೆಯಿಂದ ನಡೆಯದೆಯೇ,ತುಸು ಸೇವಾ ಮನೋಭಾವದಿಂದ ಪ್ರತೀನಿತ್ಯ ನಡೆಯುತ್ತಿದ್ದೇವೆ.‌ ನಮ್ಮ ಹಾಗಿರುವ ಸಣ್ಣ ಅಂಗಡಿ ,ಮುಂಗಟ್ಟುಗಳಿಗೆ ಇದು ಸ್ವಲ್ಪ ಕಷ್ಟ ಸಾಧ್ಯವೇ ಸರಿ..ಯಾಕೆಂದರೆ ನಮ್ಮಂತವರ ಬದುಕು, ನಮ್ಮ ನಂಬಿಕೊಂಡ ಕೆಲಸದ ಹುಡುಗರ ಜೀವನ ಕೂಡ ಇದರ ಆದಾಯದಲ್ಲೇ ನಡೆಯಬೇಕು..

ಆದರೂ ಮಾನವೀಯ ಮೌಲ್ಯಗಳನ್ನು ಚೂರು ಅಳವಡಿಸಿಕೊಂಡು ಹೋಗುವ ನಿಟ್ಟಿನಲ್ಲಿ ನಿರಂತರವಾಗಿ ನಡೆದುಕೊಂಡು ಹೋಗುತ್ತೇವೆ..ಯಾಕೆಂದರೆ, ಹಸಿವು,ಬಡತನದಷ್ಟು ಕೆಟ್ಟ ರೋಗ ಇನ್ನೊಂದು ಇಲ್ಲ ಎಂಬ ದೃಷ್ಟಿಯಿಂದ.ಇದರ ಹೊರತಾಗಿ, ಮೆಸೇಜಿನಲ್ಲಿ,ವಾಟ್ಸಾಪ್,ಇನ್ಸ್ಟಾಗ್ರಾಂ, ಗಳಲ್ಲಿ ಬರುವ ಸಂಗ್ರಹಣೆಗೂ ಹಣ ಕಳಿಸಬೇಕು ಎಂದರೆ ಅದು ಅಸಾಧ್ಯದ ಮಾತು..ಇಲ್ಲಿ ಕೆಲವು ಬಾರಿ,ತುಂಬಾ ಉಭಯ ಸಂಕಟವನ್ನು ಅನುಭವಿಸಬೇಕಾಗುತ್ತದೆ..ಹಣ ಹಾಕುವ ಶಕ್ತಿ ಇರದು..ಹಾಕದಿದ್ದರೆ ಅವರ ದೃಷ್ಟಿಯಲ್ಲಿ,ಏನು? ಒಂದು ಐದುನೂರು ರೂಪಾಯಿ ಯೋಗ್ಯತೆ ಇಲ್ವೇ?ಎಂಬ ಭಾವ..

ಹಾಗಾಗಿ ಸಹಾಯ ಎನ್ನುವುದು ಅವರವರ ಯೋಗ್ಯತೆ, ಶಕ್ತಿಗನುಸಾರವಾಗಿ ಮೀಸಲು…

ವೈಯಕ್ತಿಕವಾಗಿಯೂ ನಮ್ಮ ಯಥೇಚ್ಛವಾಗಿ ಸಹಾಯ ಮಾಡಬಹುದು ಹೀಗೂ.‌ ಯಾರನ್ನೂ ಯಾವ ದೃಷ್ಟಿಯಿಂದ ಕೂಡ ಅಳೆಯಲಾಗದು..ಆದರೆ ಸಹಾಯ ಮನದಿಂದ ಹರಿದು ಬರಬೇಕೇ ವಿನಃ ಬಲವಂತವಾಗಿ ಉಣಿಸುವ ತುತ್ತಾಗಬಾರದು.. ಬಲವಂತವಾಗಿ ಉಣಿಸಲು ಹೋದರೆ, ಗಂಟಲಿನಲ್ಲಿ ಇಳಿಯದೇ ನೆತ್ತಿ ಹತ್ತಿ ಕೆಮ್ಮಿಗೆ ಕಾರಣವಾದೀತು…ಬದುಕಿನ ಪ್ರಶ್ನೆ.. ಸಹಾಯ ಮಾಡಿದವನು,ಕೂಡ ಬದುಕಿನಲ್ಲಿ ನೆಮ್ಮದಿಯ ಜೀವನ ಕಾಣಬೇಕೇ ಹೊರತು..ಸಹಾಯ ..ಬದುಕಿಗೆ ತಡೆಯಾಗಬಾರದು …ನನಗೆ ಅನ್ನಿಸಿದ ಬರಹವಷ್ಟೇ…ಯಾವುದಕ್ಕೂ ಅನ್ವಯಿಸದೀ ಬರಹ..ಹಣ ನೀಡಿದರೆ ಮಾತ್ರ ಉತ್ತಮ.. ನೀಡದಿದ್ದರೆ ಸೇವಾಮನೋಭಾವ ಇಲ್ಲ ಎಂದಲ್ಲ.. ಕೊಡಬಾರದು ಎಂದೂ ಅಲ್ಲ… ಆದರೆ ಅವರವರ ವಯಕ್ತಿಕಾನುಸಾರ ಕೆಲವರು ,ಕೆಲವೊಂದು ಆದರ್ಶಗಳನ್ನು ಅನುಸರಿಸುವಾಗ, ಹೊರಗಿನ ದೇಣಿಗೆ, ಸಹಾಯ ಹಸ್ತ ಸ್ವಲ್ಪ ಕಷ್ಟಕರ ವಾಗುತ್ತದೆ… ಎಂಬುದು ನನ್ನ ಅಭಿಪ್ರಾಯ…


  • ಶೋಭಾ ನಾರಾಯಣ ಹೆಗಡೆ, ಶಿರಸಿ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW