“ಗೋಡೆ” ಕವನ – ವಿಶಾಲ್ ಮ್ಯಾಸರ್

ಹೆಣ್ಣು ಹಾವಿನಂತೆ ಪೋರೆಬಿಚ್ಚಿ ಮತ್ತೆ ಮತ್ತೆ ಹೊಸದಾಗುತ್ತದೆ ಈ ಗೋಡೆ…ಯುವ ಕವಿ ವಿಶಾಲ್ ಮ್ಯಾಸರ್ ಅವರ ಲೇಖನಿಯಲ್ಲಿ ಮೂಡಿದ ಗೋಡೆ ಕವನ, ತಪ್ಪದೆ ಓದಿ ಮತ್ತು ಅಭಿಪ್ರಾಯ ಹಂಚಿಕೊಳ್ಳಿ…

ಆ ಕಡೆಗೂ ಈ ಕಡೆಗೂ
ಒಂದು ಗೋಡೆ!
ಗೋಡೆ ಆಚೆಗಿನ ಮಂದಿ ಕುಲೀನರು
ಇಚೆಗೆ ಇರುವವರು ಕುಲ ಹೀನರು.
ಇಚೆಗಿನ ಎರಡಕ್ಷರ ಕೇರಿ ಆಚೆಗಿನ ನಾಲ್ಕಕ್ಷರ ಅಗ್ರಹಾರ
ಎರೆಡು ಕಡೆ ಸುಳಿದಾಡುವ ಆಕಳು
ಅಲ್ಲಿ ಗೋ ಆದರೆ ಇಲ್ಲಿ ಬರೀಯ ದನ
ಅವರು ಹೇಳಿದ್ದೆ ಇವರು ಕೇಳೋದು
ಅವರ ಮಾತೆ ಇವರಿಗೆ ವೇದವಾಕ್ಯ.
ಅಲ್ಲಿಯ ಗಂಡು ಇಲ್ಲಿಯ ಹೆಣ್ಣು
ಇವರ ಸಂಬಂಧ
ಈಚೆಗೆ ಪ್ರೆಮವಾದರೆ ಆಚೆಗೆ ಬರೀಯ ಹಾದರ
ಗೋಡೆ ಇದೆಯಲ್ಲ ಶತ ಶತಮಾನಗಳ
ಕಾಲದಿಂದಲೂ ಸ್ಥಾಯಿ .
ಬೀಳಿಸಲು ಆಗೊಬ್ಬರು ಈಗೊಬ್ಬರು
ಹುಟ್ಟುತ್ತಲೇ ಇರುತ್ತಾರೆ,
ಬೀಳಿಸುತ್ತಾರೆ ಸಹ ,
ಅದು ಬೀಳುತ್ತದೆ ಎಂದು ಕನಸಿದಾಕ್ಷಣ.
ಹೆಣ್ಣು ಹಾವಿನಂತೆ ಪೋರೆಬಿಚ್ಚಿ ಮತ್ತೆ ಮತ್ತೆ ಹೊಸದಾಗುತ್ತದೆ.
ಇವೆರೆಡೂ ಕಡೆಯವರನ್ನು ,
ಗೋಡೆಯನ್ನು
ಹೊತ್ತು ಮಲಗಿದ್ದ ನೆಲದವ್ವ ಮಾತ್ರ ಮಹಾಮೌನಿ.


  • ವಿಶಾಲ್ ಮ್ಯಾಸರ್ – ವಿಶಾಲ್ ಮ್ಯಾಸರ್ ಮೂಲತಃ ಹೊಸಪೇಟೆಯವರು ಪ್ರಸ್ತುತ ವಿಜಯನಗರ ಮಹಾವಿದ್ಯಾಲಯ ಹೊಸಪೇಟೆಯಲ್ಲಿ ಬಿ.ಎಸ್ಸಿ ಪದವಿಯನ್ನ ವ್ಯಾಸಂಗ ಮಾಡುತ್ತಿದ್ದಾರೆ “ಬಟ್ಟೆಗಂಟಿದ ಬೆಂಕಿ” ಇವರ ಪ್ರಕಟಿತ ಕವನ ಸಂಕಲನ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading