“ಡೂಡಲ್ ಕಥೆಗಳು” ಪುಸ್ತಕ ಪರಿಚಯ – ರಾಘವೇಂದ್ರ ಇನಾಮದಾರ

 ಕಥೆಗಾರ್ತಿ ಪೂರ್ಣಿಮಾ ಮಾಳಗಿಮನಿ ಅವರ “ಡೂಡಲ್ ಕಥೆಗಳು” ಕುರಿತು ಲೇಖಕ ರಾಘವೇಂದ್ರ ಇನಾಮದಾರ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಸೂರೊಳಗೊಂದು ಕಿಟಕಿ ಎಂಬ ಪುಟ್ಟ ಕಥೆಯೊಂದಿಗೆ ಆರಂಭವಾಗುವ “ಡೂಡಲ್ ಕಥೆಗಳು” ಎಂಬ ಕಥಾ ಸಂಕಲನ ವಿಭಿನ್ನ ಕಥೆ ಬಯಸುವ ಓದುಗರಿಗೆ ಇಷ್ಟ ಆಗುತ್ತದೆ. ಲೇಖಕಿ ಪೂರ್ಣಿಮಾ ಮಾಳಗಿಮನಿಯವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ರೀತಿ ಮೊದಲನೇ ಚೆಂಡಿಗೆ ಸಿಕ್ಸರ್ ಹೊಡೆದಂತೆ ಮೊದಲನೆ ಕಥೆ ಇದೆ. ಇಲ್ಲಿ ಬರುವ ಶಾಲಿನಿ ಪರಿಸ್ಥಿತಿ ಓದಿದಾಗ ತುಂಬಾ ಬೇಸರ ಆಗುತ್ತೆ. ಮಹಾ ನಗರದಲ್ಲಿ ಒಳ್ಳೆಯ ಬದುಕು ಕಟ್ಟಿಕೊಳ್ಳಬಹುದು ಎಂಬ ಭ್ರಮೆಯಲ್ಲಿ ಬರುವ ಹೆಣ್ಣುಮಕ್ಕಳ ಚಿತ್ರಣವನ್ನು ಈ ಕಥೆ ಮೂಲಕ ಲೇಖಕಿ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.

ಪ್ರೀತಿ ಹಾಗೂ ವಂಚನೆಗೆ ಸಂಭಂಧಿಸಿದ ಎರಡನೆಯ ಕಥೆಯೇ “ರನ್” ಈ ಕಥೆ ಸಾಧಾರಣ ಅನಿಸಿದರೂ ಪೂರ್ಣಿಮಾ ಅವರ ನಿರೂಪಣೆ ಶೈಲಿಯಲ್ಲಿ ತುಂಬಾ ವಿಭಿನ್ನವಾಗಿ ಮೂಡಿ ಬಂದಿದೆ. ಇದರಲ್ಲಿ ಬರುವ ಸೂರ್ಯನ ಪಾತ್ರವಂತೂ ನನಗೆ ತುಂಬಾ ಇಷ್ಟ ಆಯ್ತು.

“ಶರದ್ರುತು” ಈ ಕಥೆಯಂತೂ ತುಂಬಾ ವಿಭಿನ್ನವಾಗಿದೆ. ಇಲ್ಲಿ ಬೆಳ್ಳಕ್ಕಿ ಎಂಬ ಬೆಕ್ಕಿನ ಬಗ್ಗೆ ಓದುವಾಗ ತುಂಬಾ ನಗು ಬಂತು. ಅದೇ ಬೆಕ್ಕು ಗಂಡ ಹೆಂಡತಿಯ ವಿಚ್ಛೇದನಕ್ಕೆ ಕಾರಣವಾದದ್ದು ಹೇಗೆ..? ಎಂದು ತಿಳಿಯಲು ಕಥೆ ಓದಲೇ ಬೇಕು.

“ಡೂಡಲ್ ಕಥೆಗಳು” ಲೇಖಕಿ ಪೂರ್ಣಿಮಾ ಮಾಳಗಿಮನಿ

“ಜೀವನ ಕೊಡದ ಅಪ್ಪ ಮಗನಿಂದ ಸಾವು ಬಯಸಿದ್ರು!” ಎಂಥಾ ಸಾಲು, ನಿಜಕ್ಕೂ ವಿಪರ್ಯಾಸ ಅಲ್ಲವೇ ? ಹೀಗೊಬ್ಬ ಅಪ್ಪ ಮಗನಿಂದ ಸಾವು ಬಯಸಿದ್ದಾದರೂ ಏಕೆ..? ಅಂತ ತಿಳಿಯಲು “ಜೀವದಾನ” ಕಥೆ ಓದಲೇಬೇಕು.

ಈ ಸಂಕಲನದಲ್ಲಿ ಇದೇ ರೀತಿಯ ಇನ್ನೂ ಅನೇಕ ಕಥೆಗಳಿದ್ದು. ಅವುಗಳು ಓದುಗನ ಮನಸ್ಸಿನ್ನು ತಣಿಸುತ್ತವೆ ಎಂದರೆ ತಪ್ಪಾಗಲಾರದು.


  • ರಾಘವೇಂದ್ರ ಇನಾಮದಾರ – ಪುಸ್ತಕ ವಿಮರ್ಶಕರು, ಕತೆಗಾರರು, ಲೇಖಕರು, ಹುಬ್ಬಳ್ಳಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading