ನನ್ನಮ್ಮ ಜಿಮ್, ವರ್ಕೌಟ್ ಮಾಡಿಲ್ಲ…



ಈಗಿನ ಹಾಗೆ ಯಾವುದರಲ್ಲಿ ಪ್ರೊಟೀನ್, ನ್ಯೂಟ್ರಿನ್ ಇರುತ್ತೆ ಎಂದು ಹುಡುಕಿ ತಿಂದವರಲ್ಲ ನಮ್ಮ ತಾಯಿ, ಮನೆಯಲ್ಲಿ ಉಳಿದದ್ದು ತಿಂದು ಎಂಬತ್ತು ವರ್ಷ ದಾಟಿದ್ದಾರೆ ಎಂದು ತಮ್ಮ ತಾಯಿಯ ಫಿಟ್ನೆಸ್ ಬಗ್ಗೆ ಹೆಮ್ಮೆಯಿಂದ  ಲೇಖಕ ಡಾ.ವಡ್ಡಗೆರೆ ನಾಗರಾಜಯ್ಯ ಹೇಳಿಕೊಳ್ಳುತ್ತಾರೆ.ಮುಂದೆ ಓದಿ…

“ಜಿಮ್-ಗಳಲ್ಲಿ ವರ್ಕೌಟ್ ಮಾಡುವುದು ದೇಹವನ್ನು ಮಾತ್ರ ಆಕರ್ಷಕಗೊಳಿಸಿದರೆ… ಯೋಗಾಭ್ಯಾಸವು, ದೇಹ ಮತ್ತು ಮನಸ್ಸು ಎರಡನ್ನೂ ಆರೋಗ್ಯಕರವಾಗಿ ಇರಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಜಿಮ್ ನಲ್ಲಿ ವರ್ಕೌಟ್ ಮಾಡಿ ಬಾಡಿ ಬಿಲ್ಡ್ ಮಾಡಲು ಮಾಂಸಾಹಾರ ಸೇವನೆಯು ಹೆಚ್ಚು ರೂಢಿಗೆ ಬರುತ್ತಿದೆ.

ಜಾನಪದ ಕಥನಗಾರ್ತಿ ವಡ್ಡಗೆರೆ ಕದರಮ್ಮ

ಜಿಮ್ ಗಳು ಯುವಕರಲ್ಲಿ 6-ಪ್ಯಾಕ್ 8-ಪ್ಯಾಕ್ ಎಂದು #ಬಾಡಿ_ಬಿಲ್ಡಿಂಗ್‌ ಕಡೆಗೆ craze ಬೆಳೆಸುತ್ತಿವೆ. ಯೋಗಾಭ್ಯಾಸವು ಈ ರೀತಿಯಲ್ಲಿ craze ಬೆಳೆಸುವುದಿಲ್ಲ. ಮಾಂಸಾಹಾರ ಮತ್ತು additional food supplements ಬಳಸುವ ಕಡೆಗೆ ಆಕರ್ಷಿಸುವ ಜಿಮ್ ವರ್ಕೌಟ್ ಮಾಡುವುದಕ್ಕಿಂತಲೂ, ಸರಳ ಸಸ್ಯಾಹಾರದ ಅಭಿರುಚಿ ಬೆಳೆಸುವ ಯೋಗಾಭ್ಯಾಸ ಎಲ್ಲರಿಗೂ ಅತ್ಯಂತ ಸೂಕ್ತವಾದದ್ದು”.

ಹೀಗೆಂದು ಮಾತಾಡುತ್ತಾ ಯೋಗಾಭ್ಯಾಸ ಮತ್ತು ಸಸ್ಯಾಹಾರ ಪದ್ದತಿಯನ್ನು ಮಾತ್ರ ಶ್ರೇಷ್ಠವೆಂದು promote ಮಾಡುವ ಹವಣಿಕೆಗಳು ನಡೆಯುತ್ತಿವೆ. ಇದರ ಹಿಂದಿನ ಅಸಲಿ ನಿಜಗಳೇನೆಂಬುದನ್ನು ಪರಿಶೀಲಿಸಿ ನೋಡಿದಾಗ ಮಾಂಸಾಹಾರ- ಸಸ್ಯಾಹಾರವಾಗಲೀ ಅಥವಾ ಜಿಮ್ – ಯೋಗಾಭ್ಯಾಸವಾಗಲೀ ನಮ್ಮ ಆರೋಗ್ಯ- ಆಯುಷ್ಯದ ಬಗ್ಗೆ ಯಾವುದೇ ಖಾತ್ರಿಪಡಿಸಲಾರವು ಎಂಬುದು ತಿಳಿಯುತ್ತದೆ. ಆರೋಗ್ಯ ತಜ್ಞರು ಕೂಡಾ ಇವುಗಳ ಬಗ್ಗೆ ನಿರ್ದಿಷ್ಟವಾಗಿ ದೃಢಪಡಿಸಿ ಏನನ್ನೂ ಹೇಳಲಾರರು.



ಆಗಾಗ ತಾಂಬೂಲ ತಂಬಾಕು ಸೇವಿಸುವ, ರಾಗಿಮುದ್ದೆ ಅನ್ನ ತಂಗಳು ಬಂಗಳು, ಗೊಡ್ಡುಗಾರ – ಸುಟ್ಟ ಒಣಬಾಡು ಯಾವುದಾದರೂ ಸರಿ ಹೊತ್ತಿಗೆ ಸರಿಯಾಗಿ ಹೊಟ್ಟೆ ತುಂಬಾ ಮಂಗಳಿಸುವ ನನ್ನ ಅತ್ತೆಯೊಬ್ಬಳು (ಕಲ್ಕೆರೆ ಪುಟ್ಟಮ್ಮತ್ತೆ) ಈಗ ನೂರು ವರ್ಷಗಳ ಗಡಿ ಮುಟ್ಟಿದ್ದಾಳೆ!

#ಯೋಗಾಭ್ಯಾಸ – ಜಿಮ್ ಎಂದರೇನೆಂದು ತಿಳಿಯದಿರುವ ನನ್ನ ಅಮ್ಮ ಕದರಮ್ಮ ಈಗಲೂ ಸೊಂಟದಲ್ಲೊಂದು ನೆತ್ತಿ ಮೇಲೊಂದು ತುಂಬಿದ ಕೊಡ ಹೊತ್ತು ನಡೆಯಬಲ್ಲವಳಾಗಿ ಎಂಭತ್ತು ವರ್ಷಗಳನ್ನು ದಾಟಿದ್ದಾಳೆ!!


  • ಡಾ.ವಡ್ಡಗೆರೆ ನಾಗರಾಜಯ್ಯ  (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು, ಲೇಖಕರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading