ಆ ದಿನಗಳು – ಅವಿನಾಶ ಸೆರೆಮನಿ

ದೀಪಾವಳಿ ಮತ್ತು ಗಣೇಶ್ ಹಬ್ಬ ಬಂದಾಗಂತೂ ಮನೆ ತಲುಪುವುದೇ ಅಪರೂಪವಾಗುತ್ತಿತ್ತು. ಯಾರಾದರೂ ಸ್ನೇಹಿತ ಪಟಾಕ್ಷಿ ಹಾರಿಸೋಣ ಎಂದಾಗ ಎಲ್ಲರೂ ಅವರ ಮನೆ ಹತ್ತಿರ ಸೇರುತ್ತಿದ್ದೆವು,ಹೀಗೆ ಆ ದಿನಗಳು ಸಂಭ್ರಮ, ಸಂತಸದ ಅಧ್ಯಾಯಗಳು. ಅವಿನಾಶ ಸೆರೆಮನಿ ಅವರ ಬಾಲ್ಯದ ನೆನಪು.

ಬದುಕಿನ ಕಾಲ ಘಟ್ಟದಲ್ಲಿಯ ದಿನಗಳು ಸದಾ ಸ್ಮರಣೀಯವಾಗಿರುತ್ತವೆ. ಆದರೆ ಇಂದಿನ ಯುಗವು ಸಂಪೂರ್ಣ ಡಿಜಿಟಲ್ ಯುಗವಾಗಿದ್ದು ತಂತ್ರಜ್ಞಾನವು ಪ್ರತಿವಲಯವನ್ನು ಆವರಿಸಿದೆ. ಆದರೆ ನಮ್ಮ ಬಾಲ್ಯಕ್ಕೆ ಮರಳಿ ಹೋದಾಗ ಅರಿವಾಗುತ್ತದೆ. ಆಗ ತಂತ್ರಜ್ಞಾನ ಇಲ್ಲದಿರುವುದು. ಆಗ ನಾವು ವಿವಿಧ ರೀತಿಯಲ್ಲಿ ಮನರಂಜನೆಯಲ್ಲಿ ತೊಡಗಿಕೊಳ್ಳುತ್ತಿದ್ದೆವು.

ನಮ್ಮ ಬಾಲ್ಯದ ನೆನಪುಗಳ ಬುತ್ತಿಗಳನ್ನು ತೆರೆದಾಗ ನಿಜಕ್ಕೂ ಆಶ್ಚರ್ಯ ಜೊತೆಗೆ ಕುತೂಹಲವೂ ಮೂಡುತ್ತದೆ. ಕಾರಣವಿಷ್ಟೇ ಮನದಲ್ಲಿ ಯಾವುದೇ ಕಪಟವಿರದ ಏನು ತಿಳುವಳಿಕೆಯಿಲ್ಲದ ವಯಸ್ಸದು. ಈ ಸಮಯದಲ್ಲಿ ಒಬ್ಬರಿಗೊಬ್ಬರು ಕೂಡಿ ಆಡಿ ನಲಿಯುತ್ತಿದ್ದೆವು. ವಿರಾಮಕ್ಕೆ ಗಂಟೆ ಬಾರಿಸುವುದೇ ತಡ ಅಂಗಡಿಗೆ ಲಗ್ಗೆ ಹಾಕುತ್ತಿದ್ದೆವು. ಆಗ ಅಲ್ಲಿ ಅಜ್ಜಿ ಒಬ್ಬೊಬ್ಬರೇ ಹೇಳಿ ಯಾಕೆ ಜಾತ್ರಿ ಮಾಡತ್ತಿದ್ದೀರಿ ಎಂದು ಬೈಯುತ್ತಿದ್ದರು. ಆದರೂ ಅಮ್ಮಾ ಲಗುನ ಕೊಡ ಬೆ, ಬೆಲ್ ಹೊಡಿತದ ಒಳಗೆ ಹೋಗಲಿಕ್ಕೆ… ಎನ್ನುತ್ತಾ ತಿನ್ನಲಿಕ್ಕೆ ಕವಾ ರಸಗುಲ್ಲಾ, ಕಡ್ಲಿ ತೆಗೆದುಕೊಳ್ಳುತ್ತಿದ್ದೆವು. ಅದೇ ಗದ್ದಲದಲ್ಲಿ ಸ್ನೇಹಿತರೆಲ್ಲ ನನಗೆ ನನಗೆ ಎನ್ನುತ್ತ ಕೈಯಲ್ಲಿನ ಕಡ್ಲಿಗಳು ಕೆಲವು ಬಾಯಿಗೆ ಅರ್ಪಿತವಾದರೆ ಇನ್ನು ಕೆಲವು ಭೂತಾಯಿ ಪಾಲಾಗುತ್ತಿದ್ದವು.

ಫೋಟೋ ಕೃಪೆ : google

ಪರಸ್ಪರ ಸ್ನೇಹಿತರ ಜೊತೆಗೂಡಿ ವಿಷಯಗಳ ಚರ್ಚೆ ಮಾಡುತ್ತಿದ್ದೆವು. ಶಾಲೆಯಲ್ಲಿ ಕಳೆದಿಹ ದಿನಗಳು ಅವಿಸ್ಮರಣೀಯ ದೈಹಿಕ ಶಿಕ್ಷಣ ತರಗತಿಯಿದ್ದಾಗ ಮನರಂಜನೆಗೋಸ್ಕರ ವಿವಿಧ ಆಟಗಳನ್ನು ಆಡುತ್ತಿದ್ದೆವು. ಅದರಲ್ಲಿ ಕಿರ್, ಖೋ ಖೋ, ಕಬ್ಬಡ್ಡಿ ಆಡುತ್ತಿದ್ದೆವು. ಆಡದಿದ್ದರೆ ಅವರ ಆಟ ಆಡುವ ರೀತಿಯನ್ನು ನೋಡುತ್ತಾ ಪ್ರೋತ್ಸಾಹಿಸುತ್ತಿದ್ದೇವು. ಜೊತೆಗೆ ಚಿನ್ನಿ ದಾಂಡು, ಗೋಲಿ, ಕಣ್ಣುಮುಚ್ಚಾಲೆ, ಮುಟ್ಟಾಟಾ, ಆಡುತ ಸಮಯವನ್ನು ಕಳೆದು ಸಂತಸದಿಂದ ಕುಣಿದು ಕುಪ್ಪಳಿಸುತ್ತಿದ್ದೆವು. ಇವುಗಳೆಲ್ಲ ಶಾಲೆಯಲ್ಲಿ ಮನರಂಜನಾ ಮಾಧ್ಯಮಗಳಾಗಿದ್ದವು.

ಶಾಲೆಯಿಂದ ಮನೆಗೆ ತೆರಳುವಾಗ ಸ್ನೇಹಿತರೊಂದಿಗೆ ಹರಟೆ ಹೊಡೆಯುತ ನೀರು ಕುಡಿಯುವ ಬಾಟಲಿಯ ಕ್ಯಾಪ್ ಗೆ ಸಣ್ಣ ರಂಧ್ರ ಮಾಡಿ ನೀರು ಚಿಮುಕಿಸುತ್ತಾ ರಸ್ತೆ ತುಂಬಾ ಓಡಾಡುತ್ತಾ ಮನೆ ತಲುಪುವವರೆಗೆ ಮಾತನಾಡುತ್ತಾ. ಬೇಗ ಮೈದಾನಕ್ಕೆ ಬಾ ಕ್ರಿಕೆಟ್ ಆಡೋಣ… ಎನ್ನುತ್ತ ಸರಿಯಾದ ಸಮಯಕ್ಕೆ ಸ್ನೇಹಿತರೆಲ್ಲ ಮೈದಾನಕ್ಕೆ ತೆರಳುತ್ತಿದ್ದೆವು. ಆಗ ಸ್ನೇಹಿತರು ಯಾರಾದರೂ ಏನಾದರು ತಿನ್ನುತ್ತ ಬರುತ್ತಿದ್ದರೆ ಅವರನ್ನು ಬೆನ್ನಟ್ಟಿ ಕಸಿದುಕೊಂಡು ಪರಸ್ಪರ ಹಂಚುತ ಖುಷಿ ಪಡುತ್ತಿದ್ದೆವು. ಸಂಜೆ ಕತ್ತಲಾದರೂ ಮನೆಗೆ ತೆರಳುತ್ತಿರಲಿಲ್ಲ. ಆಗ ಮನೆಯವರು ಬಂದು ನಿಮಗೇನ ಓದುದು ಬರೆಯೋದು ಇದೆಯೋ ಇಲ್ಲ ಸೂರ್ಯಾ ಮುಳುಗಿದರು ನಿಮಗೆ ಬುದ್ದಿ ಇಲ್ಲ ಅಂತ ಬೈಯುತ್ತ ಕಟಗಿ ಹಿಡಿದುಕೊಂಡು ಬರುತ್ತಿದ್ದರು. ಆಗ ಎಲ್ಲರೂ ಓಡುತ್ತ ಮನೆಯವರ ಕೈಗೆ ಸಿಗದೆ ದಿಕ್ಕಾಪಾಲಾಗಿ ಅವರಿಗಿಂತ ಮುಂಚೆ ಮನೆ ಸೇರುತ್ತಿದ್ದೆವು. ಈ ರೀತಿಯಲ್ಲಿ ಮನರಂಜನೆಯಲ್ಲಿ ತೊಡಗಿಕೊಳ್ಳುತ್ತ ಖುಷಿಯಿಂದ ಸಂಭ್ರಮಿಸುತ್ತಿದ್ದೆವು.

ರಜಾ ದಿನಗಳಲ್ಲಿ ಅಂತೂ ಸಮಯದ ಪರಿವಿಲ್ಲದೆ ಮನೆಯನ್ನು ಲೆಕ್ಕಿಸದೆ ಹಸಿವನ್ನು ಅರಿಯದೆ ಮೈದಾನದಲ್ಲೇ ಠಿಕ್ಕಾಣಿ ಹೂಡುತ್ತಿದ್ದೆವು. ಆಕಸ್ಮಾತ್ ಯಾರಾದರೂ ಊಟಕ್ಕೆ ಕರೆಯಲು ಬಂದರೆ ಹತ್ತೇ ನಿಮಿಷದಲ್ಲಿ ಊಟ ಮಾಡಿ ಮತ್ತೆ ಮೈದಾನಕ್ಕೆ ಖುಷಿಯಿಂದ ಕೇಕೆ ಹಾಕುತ್ತಾ ಬರುತ್ತಿದ್ದೆವು.ಆಟ ಸಾಕಾದರೆ ಅಲ್ಲೇ ಕುಳಿತುಕೊಳ್ಳುತ್ತ ಮಾತನಾಡುತ್ತ ಪರಸ್ಪರ ನಗಿಸುತ್ತ ರಜಾ ಸಮಯ ಕಳೆಯುತ್ತಿದ್ದೆವು.

ಕೆಲವು ಸಮಯದಲ್ಲಿ ಒಬ್ಬನೇ ಇದ್ದಾಗ ಗಿಡಗಳ ಪೋಷಣೆಯಲ್ಲಿ ತೊಡಗುತ್ತಿದ್ದೆ,ಯಾವುದಾದರೂ ಗಿಡಗಳು ಅತಿ ಎತ್ತರ ಬೆಳೆದರೆ ಅಥವಾ ಫಲ ಕೊಡುವ ಸಮಯ ಮುಗಿದಾಗ ಅವುಗಳನು ಕತ್ತರಿಸುತ್ತಿದ್ದೆ. ಮನೆ ಸುತ್ತಮುತ್ತ ಕಸವೇನಾದರೂ ಬೆಳೆದರೆ ಅವುಗಳನ್ನು ಕೀಳುತ್ತ ಆ ಜಾಗವನ್ನು ಸ್ವಚ್ಛ ಮಾಡುತ್ತ ವಿಭಿನ್ನ ಗಿಡಗಳನ್ನು ಬೇರೆ ಮನೆಯಿಂದ ತಂದು ನೇಡುತ ಖುಷಿ ಪಡುತ್ತಿದ್ದೆವು.ಜಾತ್ರೆಗೆಲ್ಲ ಸ್ನೇಹಿತರ ಜೊತೆಗೆ ಹೋಗಿದ್ದು ತೀರಾ ಕಡಿಮೆ.ಜಾತ್ರೆ ಸುತ್ತಾಡುತ ಬಂದಿರುವ ಆಟಿಕೆಗಳನು ವಸ್ತುಗಳನ್ನು ನೋಡಿ ಎನ್ ಭಾರಿ ಇದೆ ಲೆ ಅದು ಎನ್ನುತ್ತಾ ಮುಂದೆ ಸಾಗುತ್ತಿದ್ದೆವು.

ಫೋಟೋ ಕೃಪೆ : google

ನಾನು ನವೋದಯ ಕೋಚಿಂಗ್ ತರಬೇತಿಗೆ ಹಚ್ಚಿದಾಗ ದಿನಾಲೂ 5 ಗಂಟೆಗೆ ತರಗತಿ ಮುಗಿಯುತ್ತಿದ್ದವು.ಆಗ ಬಸನಿಲ್ದಾಣ ಹತ್ತಿರ ಸಂಗಮ ಹೋಟೆಲ್ ಇದೆ ಇದು ನಮ್ಮೂರಿ ಗೆ ಬಜಿಗೆ ಪ್ರಸಿದ್ದಿ ಪಡೆದ ಹೋಟೆಲ್ ನಮ್ಮ ದೋಸ್ತ್ ಗೆ ಹೇಳ್ತಿದ್ದೆ ದೋಸ್ತ್ ಬಜಿ ತುಗೊಂಡ್ ತಿನ್ನಕ್ಕೊಂತ್ ಹೋಗುನು ಅಂತ ಆಗ ಅವ ನನ್ನ ಕಡೆ ಒಂದು ರೂಪಾಯಿ ಇದೆ ಎಂದಾಗ ನನ್ನ ಕಡೆ ಎರಡು ರೂಪಾಯಿ ಇದೆ ಎಂದು ಮೂರು ರೂಪಾಯಿಗೆ ಆಗ 2 ಬಜಿ ಬರುತ್ತಿದ್ದೆವು ಜೊತೆಗೆ ಸ್ವಲ್ಪ ಚುರುಮುರಿ ಕೊಡುತ್ತಿದ್ದರು.ಆಗ 2 ಬಜಿ ತುಗೊಂಡ ತಿನ್ನಕೊಂತ ಬರುತ್ತಿದ್ದರೆ ಮನೆಯು ಎಷ್ಟು ಬೇಗ ಬಂತು ಅನ್ನುವುದೇ ತಿಳಿಯುತ್ತಿರಲಿಲ್ಲ.ಹೀಗೆ ಮನರಂಜನೆ ಮಾಡುತ್ತ ಪ್ರತಿಕ್ಷಣ ಅನುಭವಿಸುತ್ತಿದ್ದೆವು.

ದೀಪಾವಳಿ ಮತ್ತು ಗಣೇಶ್ ಹಬ್ಬ ಬಂದಾಗಂತೂ ಮನೆ ತಲುಪುವುದೇ ಅಪರೂಪವಾಗುತ್ತಿತ್ತು. ಯಾರಾದರೂ ಸ್ನೇಹಿತ ಪಟಾಕ್ಷಿ ಹಾರಿಸೋಣ ಎಂದಾಗ ಎಲ್ಲರೂ ಅವರ ಮನೆ ಹತ್ತಿರ ಸೇರುತ್ತಿದ್ದೆವು, ಅವನು ಉದನಕಡ್ಡಿ ಹಚಕೊಂಡ ಪಟಾಕ್ಷಿ ಸರ ತೆಗೆದುಕೊಂಡು ಬರತಿದ್ದ ನಾವು ಆ ಸರಗಳನ್ನು ಬಿಚ್ಚಿ ಒಂದೊಂದೇ ಪಟಾಕ್ಷಿ ಹಾರಿಸುತ್ತ ಸಗಣೆಯಲ್ಲಿ,ಕೊಬರಿ ಚಿಪ್ಪಿನಲ್ಲಿ,ಬಾಟಲಿಯಲ್ಲಿ ಉಸುಕಿನಲ್ಲಿ,ಹೀಗೆ ಬೇರೆ ಬೇರೆ ರೀತಿಯಲ್ಲಿ ಪಟಾಕ್ಷಿಗಳನ್ನು ಇಟ್ಟು ಹಾರಿಸುತ್ತ ಸಂತಸದಿ ಕೇಕೆ ಹೊಡೆಯುತ್ತ ಆನಂದಿಸುತ್ತಿದ್ದೆವು.ಹೀಗೆ ಹಬ್ಬಗಳಲ್ಲಿ ಸಮಯವನ್ನು ಸವೆಸುತ್ತಿದ್ದೆವು.

ಮನೆಯಲ್ಲಿನ ವಿದ್ಯುಚ್ಛಕ್ತಿ ಸ್ಥಗಿತಗೊಂಡಾಗ ಓಣಿಯಲ್ಲಿ ಎಲ್ಲರೂ ಕೂಡಿ ವಿದ್ಯುಚ್ಛಕ್ತಿ ಬರುವವರೆಗೂ ಕೂಗಾಡುತ ಕಣ್ಣುಮುಚ್ಚಾಲೆ ಆಟ ಆಡುತ್ತಿದ್ದೆವು.ಇಲ್ಲದಿದ್ದರೆ ಕತೆ,ಹಾಡಿನ ಬಂಡಿಯನ್ನು ಕಟ್ಟುತ್ತ ಮನರಂಜನೆಯಲ್ಲಿ ತೇಲುತ್ತಿದ್ದೆವು.ಈ ದಿನಗಳನ್ನು ಎಷ್ಟು ನೆನಪಿಸಿದರೂ ಕಡಿಮೆಯೇ ಅಷ್ಟು ಸಂತೋಷ,ಖುಷಿಯನ್ನು ನಮಗೆ ನೀಡುವುದಲ್ಲದೆ ನಮ್ಮಲ್ಲಿನ ಆಂತರಿಕ ಗುಣಗಳ ಅನಾವರಣಗೊಳಿಸಿ ಪರಸ್ಪರರಲ್ಲಿ ನಂಬಿಕೆ ವಿಶ್ವಾಸಕ್ಕೆ ಪ್ರೇರಕವಾಗುತ್ತಿದ್ದವು.

ಹೀಗೆ ಆ ದಿನಗಳು ಸಂಭ್ರಮ, ಸಂತಸದ ಅಧ್ಯಾಯಗಳು.ತಂತ್ರಜ್ಞಾನವಿರದ ಆ ಕ್ಷಣಗಳನು ಹೇಳಲು ಅಸದಳ ಅನುಭವಿಸಿದ ಕಳೆದ ಮನಗಳಿಗೆ ಗೊತ್ತು ಸವಿದ ಆ ಸಮಯ.ಹೀಗೆ ಇವೆಲ್ಲದರ ಮೂಲಕ ಮನರಂಜನೆ ಪಡೆದು ನಿಷ್ಕಲ್ಮಶದಿ ನಲಿಯುತ್ತಿದ್ದೆವು.


  • ಅವಿನಾಶ ಸೆರೆಮನಿ – ಬೈಲಹೊಂಗಲ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW