ನಾರಿ ನಿನ್ನ ಮುಡಿಯ ಜಡೆಗೆ ಮಲ್ಲೆ ಮುಡಿಸೊ ಆಸೆಯು ….ಆಸೆಗಳು ಕವನಕ್ಕೆ ಸ್ಫೂರ್ತಿಕೊಡುತ್ತವೆ. ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಬರೆದಿರುವ ಕವನ ಸುಂದರವಾಗಿದೆ. ಮುಂದೆ ಓದಿ…
ನೀರೆ ನಿನ್ನ ಮೊಗವ ನೋಡಿ
ಮೂಡಿತೆನೆಗೆ ಆಸೆಯು
ನಾರಿ ನಿನ್ನ ಮುಡಿಯ ಜಡೆಗೆ
ಮಲ್ಲೆ ಮುಡಿಸೊ #ಆಸೆಯು
ಸೂರೆಗೈದು ನಿನ್ನ ಸೊಬಗ
ಸವಿಯಲೆನಗೆ ಆಸೆಯು
ಸೇರಿ ನಿನ್ನ ಅಧರದೊಳಗೆ
#ಸುಧೆಯ ಹೀರೊ ಆಸೆಯು
ತಾರೆಯಂತೆ ಹೊಳೆವ ವದನ
ನೋಡಲೆನಗೆ ಆಸೆಯು
ತೀರದಲ್ಲಿ ಕುಳಿತು ಬೆರೆತು
ನಿನ್ನಲಿಳಿಯೊ ಆಸೆಯು
ಸಣ್ಣ ನಡುವ ಹಿಡಿದು ಬಳಸಿ
ಮುತ್ತನಿಡುವ ಆಸೆಯು
ಕಣ್ಣ ಸನ್ನೆಯಲ್ಲಿ ನೋಡಿ
ತುತ್ತನಿಡುವ ಆಸೆಯು
ನಿನ್ನ ಕಾಡಿ ಜಗಳವಾಡಿ
ಕೋಪ ತರಿಸೊ ಆಸೆಯು
ನಿನ್ನ ದಾಹ ಶಮನ ಮಾಡಿ
ತಾಪವಿಳಿಸೊ ಆಸೆಯು
ಜಾರಿ ಹೋದ #ಸೀರೆ ಸೆರಗು
ಉಡಿಸಲೆನಗೆ ಆಸೆಯು
ಕೇರಿ ಒಳಗೆ ನಿನ್ನ ಬಳಸಿ
ನಿನ್ನ ವರಿಸೊ ಆಸೆಯು.
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು
