‘ಯುಗ ಯುಗಾದಿ’ ಕವನ

ಋತುರಾಜನ ತೇರು ಈ ಯುಗಾದಿ, ಸಂಭ್ರಮಿಸೋಣ ಈ ಯುಗಾದಿ…ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಯುಗದಾದಿಯ ನೆನಪಿಳಿಸುವ
ಹಬ್ಬವಿದು ಯುಗಾದಿ
ಯುಗಯುಗಗಳು ಉರುಳುತಿರಲು
ಮರಳಿದೆ ಯುಗದಾದಿ

ತರುಲತೆಗಳ ಕಣಕಣದಲು
ಮೈದುಂಬಿದ ಚಿಗುರು
ಧರೆಗಿನಿತನು ತಂದಿರುವುದು
ಋತುರಾಜನ ತೇರು

ಇಳೆಗಿಳಿವುದು ಮೊದಮೊದಲಿಗೆ
ತಂಪಿಳಿಸುತ ಮಳೆಯು
ನಳನಳಿಸುವ ಗಿರಿಕಾನನ
ಭೂ ಭಾಗಕೆ ಸಿರಿಯು

ನವತನವಿರೆ ಪ್ರಕೃತಿಯೊಳು
ಅದುವೇ ಹೊಸ ವರ್ಷ
ಸವಿಯಡಗೆಯ ಸಂಭ್ರಮದೊಳು
ಸವಿಯಲು ಬಲು ಹರ್ಷ.


  • ಚನ್ನಕೇಶವ ಜಿ ಲಾಳನಕಟ್ಟೆ

Leave a Reply

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading