ಸಬ್ಬಸ್ಸಿಗೆ ಸೊಪ್ಪಿನ ಮಹತ್ವ – ಮಂಜುನಾಥ್ ಪ್ರಸಾದ್

ಸಬ್ಸಿಗೆ ಸೊಪ್ಪಿನಲ್ಲಿ ಅದ್ಭುತವಾದ ಔಷಧೀಯ ಗುಣಗಳಿದ್ದು, ಸಬ್ಬಸ್ಸಿಗೆ ಸೊಪ್ಪಿನ ರಸದ ಸೇವನೆ ಅಥವಾ ಬೀಜಗಳ ಸೇವನೆಯಿಂದ ಅಜೀರ್ಣದ ಹೊಟ್ಟೆ ನೋವು ವಾಸಿಯಾಗುತ್ತದೆ – ಮಂಜುನಾಥ್ ಪ್ರಸಾದ್, ತಪ್ಪದೆ ಮುಂದೆ ಓದಿ…

ಇದು ನಾವು ಸಾಮಾನ್ಯವಾಗಿ ಕರೆಯುವ, ಎಲ್ಲಾ ಕಡೆ ಸಿಗುವ ಸಬ್ಬಸ್ಸಿಗೆ / ಸಬ್ಸಿಗೆ ಸೊಪ್ಪು ( ಇತರ ಪ್ರಾದೇಶಿಕ ಹೆಸರುಗಳೂ ಇವೆ ). ಇಂಗ್ಲಿಷ್ ನಲ್ಲಿ Dill ಎಂದು ಕರೆಯಲ್ಪಡುವ ಇದರ ಸಸ್ಯ ಶಾಸ್ತ್ರೀಯ ಹೆಸರು Anethum graveolens ( ಯೂರೋಪ್ ತಳಿ ) ಹಾಗೂ Anethum sowa ( ಭಾರತೀಯ ತಳಿ ) Apiaceae ಕುಟುಂಬ.

ಇದರ ಸುವಾಸನೆಯನ್ನು ವಿವರಿಸಲು ಸ್ವಲ್ಪ ಕಷ್ಟಕರ. ಸ್ವಲ್ಪ ಘಾಟು, ಸ್ವಲ್ಪ ಕಹಿ, ಒಗಚು, ಹುಳಿ ಮಿಶ್ರಿತ. ಇದೇ ಸುವಾಸನೆಗಾಗಿ ಬಹಳಷ್ಟು ಜನರಿಗೆ ಇಷ್ಟವಾದ ಅಡುಗೆ ಸೊಪ್ಪು ಆದರೆ ಸಮ ಪ್ರಮಾಣದಲ್ಲಿ ಇಷ್ಟಪಡದವರೂ ಇದ್ದಾರೆ. ಈ ಸುವಾಸನೆಗೆ ಕಾರಣ ಸಬ್ಬಸಿಗೆಯಲ್ಲಿರುವ ತೈಲದಲ್ಲಿರುವ Apiole ಮತ್ತು Dillapiole ಎಂಬ ರಾಸಾಯನಿಕ ಅಂಶ.

ಇದೊಂದು ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿರುವ ಅಪರೂಪದ ಸಸ್ಯ. ಇದರಲ್ಲಿರುವ Calcium ( ಸುಣ್ಣ ) ಅಂಶ Phosphorus ಅಂಶದ ಜೊತೆ ಸೇರಿ ಮೂಳೆಗಳನ್ನು ಸದೃಡಗೊಳಿಸುವುದು.

Vitamin – A ಕಣ್ಣುಗಳು, ಶ್ವಾಷಕೋಶ ( lungs ) ಹಾಗೂ ಮೂತ್ರಪಿಂಡಗಳ ( kidney ) ಆರೋಗ್ಯವನ್ನು ಕಾಪಾಡಿದರೆ, Niacin ಎಲ್ಲಾ ಹೃದಯ ಸಂಬಂಧಿ ತೊಂದರೆಗಳು ಬಾರದಂತೆ ತಡೆಯುತ್ತದೆ. ರಕ್ತದೊತ್ತಡ ಸಹ ನಿಯಂತ್ರಣಕ್ಕೆ ಬರುತ್ತೆ.

ಸಬ್ಬಸಿಗೆಯ ನಿಯಮಿತ ಸೇವನೆಯಿಂದ :

  • ಮನಸ್ಸಿನ ಆತಂಕ, ದುಗುಡ ನಿವಾರಣೆ ಆಗಿ ಮನಸ್ಸು ಪ್ರಸನ್ನವಾಗುತ್ತೆ ( anxiety and depression ).
  • ದೇಹದಲ್ಲಿ ದಿನನಿತ್ಯ ಶೇಕರಣೆಯಾಗುವ ವಿಷಕಾರಿ ಅಂಶಗಳು ( toxins ) ಮಲ ಮತ್ತು ಮೂತ್ರದಲ್ಲಿ ಕೊಚ್ಚಿಹೋಗಿ ಆರೋಗ್ಯ ಸುಸ್ಥಿತಿಯಲ್ಲಿ ಇರುವುದು.
  • ದೇಹವನ್ನು ಸೇರುವ ಹಾನಿಕಾರಕ ಬ್ಯಾಕ್ಟೀರಿಯಾ ಹಾಗೂ ವೈರಾಣುಗಳು ಕೂಡಲೇ ಸಾಕಷ್ಟು ನಿರ್ಮೂಲನೆ ಆಗುತ್ತೆ.
  • ಮೂರ್ಛೆರೋಗ ( fits / epilepsy ) ಬಾರದಂತೆ ತಡೆಯುವುದಲ್ಲದೆ, ಇದ್ದರೆ ತೊಂದರೆಗಳು ಕಡಿಮೆಯಾಗುತ್ತದೆ.
  • ದೇಹದಲ್ಲಿ ಕೊಬ್ಬಿನಾಂಶ ( Cholesterol ) ಹೆಚ್ಚಾಗದಂತೆ ತಡೆದು, ಹೃದಯಾಘಾತ ಆಗುವ ಸಾಧ್ಯತೆ ಸಾಕಷ್ಟು ಕಡಿಮೆಯಾಗುತ್ತದೆ.
  • ಜೀರ್ಣಾಂಗ ಗಳು ಸುಸ್ಥಿತಿಯಲ್ಲಿ ಇರುವಂತೆ ಸಹಾಯ ಮಾಡುವುದಲ್ಲದೆ, ಜೀರ್ಣ ಕ್ರಿಯೆ ಸರಿಯಾಗಿ ಆಗುವಂತೆ ಮಾಡಿ ಆಮ್ಲಿಯತೆ ( acidity / gastric ) ಹಾಗೂ ಹೊಟ್ಟೆಯ ಹುಣ್ಣು ( Ulsers ) ಆಗದಂತೆ ತಡೆಯುತ್ತದೆ.
  • ಸಬ್ಬಸ್ಸಿಗೆ ಸೊಪ್ಪನ್ನು ನುಣ್ಣಗೆ ಅರೆದು ಲೇಪಿಸಿಕೊಂಡರೆ ಗಾಯಗಳು ಬೇಗ ವಾಸಿಯಾಗುತ್ತದೆ ಅಲ್ಲದೆ ಚರ್ಮದ ಅಲರ್ಜಿಗೆ ಉತ್ತಮ.
  • ಸಕ್ಕರೆ ಖಾಯಿಲೆ ಇರುವವರಿಗೆ ಅವಶ್ಯವಾಗಿ ಸೇವಿಸಬೇಕಾದ ಸೊಪ್ಪು. ಹಾಗೆಯೇ ಮದ್ಯಪಾನ ಅಥವ ಇತರ ಕಾರಣಕ್ಕೆ ಆಗಿರುವ ಮತ್ತು ಆಗುವ fatty liver ಸಮಸ್ಯೆ ಸಹಾ ನಿವಾರಣೆಯಾಗುತ್ತೆ.
  • ಸಬ್ಬಸ್ಸಿಗೆ ಸೊಪ್ಪಿನ ರಸದ ಸೇವನೆ ಅಥವ ಬೀಜಗಳ ಸೇವನೆಯಿಂದ ಅಜೀರ್ಣದ ಹೊಟ್ಟೆ ನೋವು ವಾಸಿಯಾಗುತ್ತದೆ.
  • ಬಾಣಂತಿಯರು ಸೊಪ್ಪನ್ನು ಸೇವಿಸುವುದರಿಂದ ತಾಯಿಯಹಾಲು ಜಾಸ್ತಿ ಆಗುವುದು, ಅಲ್ಲದೆ ಮಗುವಿನ ಮಲ, ಮೂತ್ರ ವಿಸರ್ಜನೆ ಸರಿಯಾಗಿ ಆಗುವುದು, ಮಗು ಸಹಾ ಆರೋಗ್ಯವಾಗಿ ಬೇಳೆಯುವುದು. ಮಕ್ಕಳು ನಿಯಮಿತವಾಗಿ ಸೇವಿಸುವುದರಿಂದ ಅವರ ಜ್ಞಾಪಕ ಶಕ್ತಿ ಹಾಗೂ ಬುದ್ದಿ ಶಕ್ತಿ ಸಹ ಹೆಚ್ಚುವುದು.
  • ಸಬ್ಬಸ್ಸಿಗೆಯಲ್ಲಿ ವಿಟಮಿನ್ B1, B2, B5, B6, B9 ಮತ್ತು B12 ಇದೆ. ಜೊತೆಗೆ ಆರೋಗ್ಯವಂತ ದೇಹಕ್ಕೆ ಅತ್ಯಂತ ಅವಶ್ಯವಾದ Calcium, Iron, Magnesium, Phosphorus, Potassium, Sodium, Zinc, Copper ಮುಂತಾದ 18 ಖನಿಜಾಂಶ ಗಳು ಇದೆ.
  • ಸಬ್ಬಸಿಗೆ ಸಸ್ಯದ ಬೀಜಗಳಿಂದ ತೆಗೆದ ಎಣ್ಣೆ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಎಣ್ಣೆಯನ್ನು ಮೇಲೆತಿಳಿಸಿದ ಕಾರಣಕ್ಕೆ ಅಲ್ಲದೆ ಪರಿಮಳ ದ್ರವ್ಯಗಳನ್ನು ಹಾಗೂ ಇತರ ಔಷದಿಗಳನ್ನು ತಯಾರಿಸಲು ಬಳಸಲಾಗುತ್ತಿದೆ. ( Gripe Water ನೆನಪಿದೆಯೇ….? ).

ಮೇಲೆ ನಾನು ತಿಳಿಸಿದ ಪ್ರಯೋಜನಗಳು ಸಸ್ಯದ ಕಾಲು ಭಾಗ ಸಹ ಅಲ್ಲ. ಜಾಗದ ಕೊರತೆಯಿಂದ ಹೇಳದೆ ಬಿಟ್ಟಿರುವುದು ಬಹಳಷ್ಟು. ಒಟ್ಟಿನಲ್ಲಿ ಪ್ರತೀಯೊಬ್ಬರು ಸುಲಭವಾಗಿ ಸಿಗುವ ಸಬಸ್ಸಿಗೆಯನ್ನು ಉಪಯೋಗಿಸಿ ಎಲ್ಲಾ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಗಮನಿಸಿ :- ಸೊಪ್ಪನ್ನು ಕೊಳ್ಳುವಾಗ ಹಳದಿಯಾದ ಅಥವಾ ಆಗುತ್ತಿರುವ ಸೊಪ್ಪನ್ನು ತೆಗೆದುಕೊಳ್ಳಬೇಡಿ. ಆದಷ್ಟು ಹಸಿರಾಗಿ, ಎಳೆಯದಾಗಿ ಇರಲಿ. ಬೆರಳಲ್ಲಿ ಅದುಮಿದಾಗ ಸಾಕಷ್ಟು ಸುವಾಸನೆ ಭರಿತ ರಸ ಬರಬೇಕು.


  •  ಮಂಜುನಾಥ್ ಪ್ರಸಾದ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW