ಖ್ಯಾತ ಸಿನಿ ಪತ್ರಕರ್ತ ಗಣೇಶ್ ಕಾಸರಗೋಡು ಅವರ ಮಗ ಅಲೋಕ್ ರಚಿಸಿದ ಡ್ಯುಡಲ್ ಕೃತಿಯನ್ನು ಅಪ್ಪುಗೆ ಗಿಫ್ಟ್ ಆಗಿ ಕೊಡಲು ಮನೆಗೆ ಹೋದಾಗ, ಅಪ್ಪು ಅಲೋಕನನ್ನು ಪೋತ್ಸಾಹಿಸಿದ ರೀತಿಯನ್ನು ನೆನೆದು ಭಾವುಕರಾದ ಗಣೇಶ ಕಾಸರಗೋಡು ಅವರು, ಅವರೊಂದಿಗೆ ಕಳೆದ ಕೆಲವು ಮಧುರ ಕ್ಷಣವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.ಮುಂದೆ ಓದಿ…
ನವೆಂಬರ್ ೧, ೨೦೧೯ ಕನ್ನಡ ರಾಜ್ಯೋತ್ಸವ ದಿನ. ಎರಡು ವರ್ಷಗಳ ಹಿಂದೆ ನಾನು ಸದಾಶಿವನಗರದ ಪುನೀತ್ ಮನೆಯಲ್ಲಿದ್ದೆ. ಅಂದು ಅವರಿಗೊಂದು ಗಿಫ್ಟ್ ಕೊಡುವುದಿತ್ತು. ಸಿವಿಲ್ ಎಂಜಿನೀಯರ್ ಆಗಿರುವ ನನ್ನ ಕಿರಿಯ ಮಗ ಅಲೋಕ್ ಚಿತ್ರಕಲಾವಿದನೂ ಹೌದು ! ಅದರಲ್ಲೂ ಡ್ಯುಡಲ್ ಕಲೆಯಲ್ಲಿ ಪಳಗಿದ್ದಾನೆ.
(ವಿಡಿಯೋ ನೋಡಲು ಕ್ಲಿಕ್ ಮಾಡಿ)
ರಾಜ್ಯೋತ್ಸವ ದಿನದ ವಿಶೇಷವಾಗಿ ‘ಕನ್ನಡ’ ಅಕ್ಷರವನ್ನು ಪೋಣಿಸಿದ ಡ್ಯುಡಲ್ ಕೃತಿಯನ್ನು ತಯಾರು ಮಾಡಿಕೊಂಡಿದ್ದ ಅಲೋಕ್. ಅದನ್ನು ಅಪ್ಪುವಿಗೆ ಗಿಫ್ಟಾಗಿ ಕೊಡುವುದು ಉದ್ದೇಶ. ಇದೊಂದು ಅನಿರೀಕ್ಷಿತ ಭೇಟಿ. ಫ್ರೇಮ್ ಹಾಕಿಸಿದ್ದ ಆಕರ್ಷಕ ಡ್ಯುಡಲ್ ಕೃತಿಯನ್ನು ಅಪ್ಪು ಕೈಗಿಟ್ಟಾಗ ಕುತೂಹಲದಿಂದ ವೀಕ್ಷಿಸಿದರು. ‘ನನ್ನ ಮಗಳೂ ಡ್ಯುಡಲ್ ಆರ್ಟ್’ನಲ್ಲಿ ಪಳಗಿದ್ದಾಳೆ’ ಎಂದು ಹೇಳುತ್ತಾ ‘ಅಶ್ವಿನಿ’ ಅಂತ ಹೆಂಡತಿಯನ್ನು ಕರೆದು ಅಲೋಕನನ್ನು ಪರಿಚಯಿಸಿದರು. ನಂತರ ತಮ್ಮ ಒಡೆತನದ PRK ಸಂಸ್ಥೆಯ ಡ್ಯುಡಲ್ ಲೋಗೋ ಮಾಡಿಕೊಡುವಂತೆ ‘ಆರ್ಡರ್’ ಕೊಡಿಸಿದರು! ಈ ಹುಡುಗ ಇರುವುದೇ ಹಾಗೆ…
(ಅಲೋಕ ಅವರು ರಚಿಸಿದ ಡ್ಯೂಡಲ್ ಕಲಾಕೃತಿಯಲ್ಲಿ PRK ಸಂಸ್ಥೆಯ ಲೋಗೋ ) ಫೋಟೋ ಕೃಪೆ : ಗಣೇಶ್ ಕಾಸರಗೋಡು

(ಅಲೋಕ ರಚಿಸಿದ ‘ಕನ್ನಡ’ ಡ್ಯೂಡಲ್ ಕಲಾಕೃತಿಗೊಂದು ಎತ್ತರದ ಸ್ಥಾನ ಮಾಡಿಕೊಟ್ಟ ಪುನೀತ್ ರಾಜಕುಮಾರ್ ) ಫೋಟೋ ಕೃಪೆ : ಗಣೇಶ್ ಕಾಸರಗೋಡು

( ಅಲೋಕ ಅವರ ಡ್ಯೂಡಲ್ ಕಲಾಕೃತಿಯಲ್ಲಿ ಮೂಡಿದ PRK ಸಂಸ್ಥೆಯ ಲೋಗೋವನ್ನು ಅತ್ಯಂತ ಕುತೂಹಲದಿಂದ ನೋಡುತ್ತಿರುವ ಪುನೀತ್ ರಾಜಕುಮಾರ್ )
ಫೋಟೋ ಕೃಪೆ : ಗಣೇಶ್ ಕಾಸರಗೋಡು
● ಗಣೇಶ್ ಕಾಸರಗೋಡು (ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು)
