ಸ್ವಾರ್ಥ ಬದುಕು

ಮನುಷ್ಯ ತನ್ನ ಸ್ವಾರ್ಥಕ್ಕೆ ತಾನಷ್ಟೇ ಬಲಿಯಾಗದೆ ಇಡೀ ಸಮಾಜಕ್ಕೆ ಕೇಡು ಬಯಸುತ್ತಾನೆ. ಡಾ. ಕೃಷ್ಣವೇಣಿ. ಆರ್. ಗೌಡ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಜೀವನವೇ ಒಂದು ಉಡುಗೊರೆಯಾಗಿ ಬಂದಿರುವ ಮಾನವ ಜಗದೊಳು ಏನೆಲ್ಲ ಅಯೋಮಯವಲ್ಲವೇ,  ಮಾಧ್ಯಮಗಳಲ್ಲಿ ಅಪರ್ಣ ಪರಲೋಕಕ್ಕೆ ಪಾದರ್ಪಣೆ ಮಾಡಿರುವ ಸಂಗತಿ ಮನ ಕೊಂಚ ಬೇಸರದ ಅಲೆಗೆ ಕೊಂಡೊಯ್ದು ವಾಲಿತು. ಯಾಕೋ ಗೊತ್ತಿಲ್ಲ ಸ್ವಾರ್ಥ ಮಲಿನದ ಕೊಚ್ಚೆ ಚರಂಡಿಯೊಳು ಬದುಕು ಇನ್ನೂ ಹರಿಯುತ್ತಿದೆಯಲ್ಲ. ಎಲ್ಲಾ ತಿಳುವಳಿಕೆಗಳು ಎಚ್ಚರಿಸಿದರು. ಮನುಷ್ಯ ಆಗಿನ ಪೂರ್ತಿ ಸುಮ್ಮನಿದ್ದು ಮತ್ತೆ ಗೆದ್ದಲು ಹುಳುವಿನ ಹಾಗೆ ಅದೇ ಸ್ವಾರ್ಥಕ್ಕೆ ಬಲಿಯಾಗಿ ಒಮ್ಮತ ಬಂಧುತ್ವವನು ಹಾಳು ಮಾಡಿಕೊಂಡು ಇನ್ನೊಬ್ಬರ ಸಂತೋಷಕ್ಕೂ ಕಲ್ಲು ಹಾಕುವ ಪರಿಧಿಯನ್ನು ನಾನು ಇತ್ತೀಚಿಗೆ ಸಾಕಷ್ಟು ನೋಡುತ್ತಿದ್ದೇನೆ.

ಇದು ಪೀಠಿಕೆಯ ಅಚ್ಚು ಆದರೂ ಜೀವ ಸೃಷ್ಟಿಯಲಿ ದಿನದ ಆಟವಾಗಿದೆ. ಸೂಕ್ಷ್ಮಅವಲೋಕನದ ದೃಷ್ಟಿ ಕೋನದಲ್ಲಿ ಪಾಠವೆಂಬ ಪ್ರಕೃತಿ ಮನಸನ್ನು ಹಿಗ್ಗಾ ಮುಗ್ಗವಾಗಿ ಎಳೆಯುತ್ತಿದೆ. ಸ್ಥಿರವಿಲ್ಲದ ದೇಹಕ್ಕೆ ಎಷ್ಟೊಂದು ಪರಿಕರಗಳು?. ಇದು ಬರೀ ಪ್ರಶ್ನೆಯಾಗಿ ಕಾಡಿ ಚಿಂತನೆಗೆ ಈಡು ಮಾಡಿದೆ. ಮಂತನದ ಕಟೀಲಿಗೆ ಒಳ್ಳೆಯತನ ಒಂದು ನೆಪದ ಬಿಂದುವಾಗಿದೆ.

ಕ್ಷಣದ ಅನುಗಣನೆಗೆ ಸತ್ಯ ಬುಟ್ಟಿಯಲಿ ಮುಚ್ಚಿ ಸುಳ್ಳಿನ ಮುಳ್ಳ ಬಿಗಿತ ಶಾಂತಿಯ ಕೋರದೆ ವಿಲಿ ವಿಲಿ ಒದ್ದಾಡಿ ಉಸಿರು ಕುಸಿಯುತಿದೆ. ಹೋರಾಟದ ಕೈಗೆ ಬಂದಿಕೆಯ ಬೇಡಿ ಎನ್ನುವ ನೋಟ ಬೆಳಕೊಳು ಕಂಡರೂ ಮುಗ್ದ ಅಮಾಯಕ ನಿಲುವಿಲ್ಲದ ಗುಡಿಸಲು ಕಣ್ಣಲ್ಲಿಯೇ ರಕ್ತದ ನೀರು ಹರಿಸುತ್ತಿವೆ.

ಇದು ಬರೀ ಒಂದು ಊರಿನ ಸಮಸ್ಸೆಯಲ್ಲ, ಇಡೀ ರಾಷ್ಟ್ರ ಸಂಕುಲದ ವ್ಯವಸ್ಥೆ…. ಪರಿಹಾರದ ಮೊಗಕ್ಕೆ ಸಲ್ಲದ ಕುತಂತ್ರ ಬೊಂಬೆಗಳು ಸಲಾಕೆಯ ಕೈಯೊಳು ಆಟ ಆಡಿಸುತ್ತ ವ್ಯಂಗ್ಯ ಸೂಚಿಸುತ್ತಿವೆ. ಇದಕ್ಕೆ ಕಡಲು ಗೊತ್ತಿದೆ ಕಿಚ್ಚಿನ ಮೃದಂಗ ಎಬ್ಬಿಸುತ್ತಿದೆ. ನದಿಯ ಶಾಂತಿ ಅಬ್ಬರಿಸಿ ಅರಚುತ್ತಿದೆ. ಸ್ವಾತಂತ್ರ್ಯದ ಬಸಿರಿಗೆ ಗುಂಡೇಟ ಸದ್ದು ಮೇಣದ ಬೆಳಕ ಮುಚ್ಚುತ್ತಿದೆ.  ಇದರೊಳು ಸ್ವಾರ್ಥ ಹದ್ದಿನ ಹಾಗೆ ಹಾರಾಡುತ್ತಿದೆ. ಹೋಲಿಕೆಯ ಪದದೊಳು ಶುಭಾಷಿತಗಳೆಲ್ಲ ಬರೀ ನೋಟದ ಅಚ್ಚು ಪಡಿಯಾದವೇ ವಿನಃಹ ತಿಳುವಳಿಕೆಯ ಪುಟಗಳಾಗಲಿಲ್ಲ.

ರಾಷ್ಟ್ರ ರಾಜಕೀಯಕ್ಕೆ ಪ್ರತಿ ಮನದ ಮನೆಯೊಳು ಧರ್ಮ ಸೋಲುತ್ತಿದೆ ಎನ್ನುವ ಭಯ ಭೀತಿ ಕನಸುಗಳ ಕನವರಿಕೆಗೆ ಸಾಕ್ಷಿಯಾಗುತಿವೆ. ಒಂದು ಕಾಲದಲ್ಲಿ ಯಾವುದೇ ಸ್ವಾರ್ಥವಿಲ್ಲದ ಧರ್ಮದ ರಾಷ್ಟ್ರ ತಲೆ ಎತ್ತಿ ಬೀಗಿ ಇಡೀ ಮನುಕುಲವೇ ಒಂದಾಗಿ ಮಾನವ ಮಾನವನಿಗೆ ಸಹಾಯಗೊಳ್ಳುವ ನಡೆ ನುಡಿ ಸನ್ನದ್ಧತೆ ಸಂಸ್ಕಾರ ಒಂದು ಕಾಲದ ಇತಿಹಾಸವೇ ಸೃಷ್ಟಿಯಾಗಿ ಜಗದ ಪುಟದ ಪಾಠವಾಗಿ ಸಮ ಸಮಾಜದ ಹರ್ಷಕ್ಕೆ ದಾರಿಯಾಗಿ ಸ್ವಾರ್ಥ ಪಿಡುಗನ್ನು ಹೋಗಲಾಡಿಸಿ ಧರ್ಮ ಕರ್ಮಗಳ ಅಲೆ ತೇಲಿಸಿ ಸ್ವಾಸ್ತ್ಯಕ್ಕೆ ನಾಂದಿ ಹಾಡಿ ಜೈವಿಕ ಲೋಕವನೇ ಪುಟ್ಟಿದೆಬ್ಬಿಸಿತ್ತು.

ಆಲೋಚನೆಯ ಮಿಗಿಲು ಮುಗಿಲು ಮುಟ್ಟಬೇಕು ವಿನಃ ಹತಾಷೆಯ ಪರಿಯಾಗಬಾರದು. ಏನೇ ಆಗಲಿ ಸ್ಥಿರವಿಲ್ಲದ ದೇಹಕ್ಕೆ ಇನ್ನಾದರೂ ಬುದ್ಧಿ ಮತ್ತೆ ಮಂಥನದ ಅಮೃತ ಬಿಂದುವಾಗಲಿ. ಕೊಳೆ ಕಳೆಯಲಿ ಒಮ್ಮತ ನಕ್ಷತ್ರ ಮಿನುಗಲಿ.


  • ಡಾ. ಕೃಷ್ಣವೇಣಿ. ಆರ್. ಗೌಡ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading