ಹಣತೆಯಾಗು ಮನೆಯ ಬೆಳಗಲು ನೊಂದ ಮನದ ದುಃಖ ದುಮ್ಮಾನ ಕಳೆಯಲು…ಕವನ ಪ್ರೊ.ಅಶೋಕ ಕುಮಾರ ಎಸ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನಗಳು ತಪ್ಪದೆ ಓದಿ…
ಬತ್ತಿಯಾಗು ದೀಪ ಬೆಳಗಲು
ಎಣ್ಣೆಯಾಗು ಬತ್ತಿ ಉರಿಯಲು
ಕಣ್ಣಾಗು ಜಗದ ಮಹಿಮೆ ನೋಡಲು.
ಕೈಯೊಡ್ಡು ವರವ ಬೇಡಲು
ಮನಸೊಡ್ಡು ಸತ್ಪಥದಲ್ಲಿ ನಡೆಯಲು
ಬಾಯೊಡ್ಡು ಜೀವಾಮೃತವ ಕುಡಿಯಲು.
ಮಾತಾಗು ಮೌನ ಮುರಿಯಲು
ಹಣತೆಯಾಗು ಮನೆಯ ಬೆಳಗಲು
ನೊಂದ ಮನದ ದುಃಖ ದುಮ್ಮಾನ ಕಳೆಯಲು.
ಧರೆಗೆ ಮಳೆಯ ಸುರಿಯಲು
ಬಿರಿದ ಭುವಿಯ ಮನವ ತಣಿಸಲು
ಹಸಿದ ಹೊಟ್ಟೆಗಳಿಗೆ ಅನ್ನವನುಣಿಸಲು.
ಭಾವ ಶುದ್ಧಿ ಬೆಳೆಯಲು
ಮನದ ಕ್ಲೇಶ ಕಲ್ಮಷವ ಕಳೆಯಲು
ಪಯಣದ ದಾರಿಗೆ ದೀಪವಾಗಿ ಉಳಿಯಲು.
ಹೃದಯ ಬೆಳದಿಂಗಳಾಗಿ ಬೆಳಗಲು
ದೀಪದ ಬೆಳಕಾಗು ಕಾರ್ಗತ್ತ ಕಳೆಯಲು
ಮಿನುಗುವ ಮಿಂಚಾಗು ಕತ್ತಲಲ್ಲಿ ಹೊಳೆಯಲು.
- ಪ್ರೊ. ಅಶೋಕ ಕುಮಾರ ಎಸ್ ಮಟ್ಟಿ – ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ ಯಾದಗಿರಿ ಜಿಲ್ಲೆ.
