‘ಬೆಳಕಾಗಿ ಬನ್ನಿ’ ಕವನ

ಸಾವುನೋವಿನ ಆಟದಲಿ, ಬದುಕ ಭಸ್ಮವಾಗಿದೆ…ಕವಿ ಮಹಾಮನೆ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…

ಬೆಳಕಾಗಿ ಬನ್ನಿ
ಕಂದಮ್ಮಗಳೇ ಬನ್ನಿ
ಎಲ್ಲಿ ಹೋದಿರಿ ಮಕ್ಕಳೇ
ತೋರದ ಲೋಕದಲಿ ಇರುವಿರೇ
ಅಮ್ಮನೂ ಅಲ್ಲಿ
ನಿಮ್ಮ ಜೊತೆಗೇ ಇರುವಳೆ

ಕಾಣೆನು ನಾನು
ಎಂದು ಬರುವೆನೆಂದು
ಅಲ್ಲಿಗೆ..
ಎನ್ನ ಜೀವ ನಿಮ್ಮಲ್ಲಿದೆ
ಇರುವೆ ನಾನು ಇಲ್ಲಿ
ಸುಮ್ಮನೆ..

ನನ್ನಮ್ಮ ಇರುವಳು
ನನ್ನ ಜೊತೆಯಲಿ
ಅವಳ ಬಿಟ್ಟು ನಾ
ಬರಲಾಗದು ಮಕ್ಕಳೇ
ನನಗಾರು ಇದ್ದಾರೆ ಇಲ್ಲಿ
ನನ್ನಮ್ಮನ ಬಿಟ್ಟು..

ಅವ.. ಎಂಥ ಭೇದವಿಕ್ಕಿದ
ನಮ್ಮಲ್ಲಿ
ಕೂಡು ಬದುಕು ಕೊಡದೆ
ಬೆಂಕಿ ಇಟ್ಟ ನಮ್ಮೆಲ್ಲರಲಿ
ನಮ್ಮ ನಿಮ್ಮ ಹೃದಯಗಳಲಿ

ಕಳ್ಳುಬಳ್ಳಿಯ
ತೊರೆದು ಬಾಳಲುಂಟೇ
ನಿಮ್ಮ ನೆನಪು..
ಭೂತದ ನೆರಳು..
ಕಾಡ್ಗಿಚ್ಚಿನಲಿ ಕತ್ತಲಾವರಿಸಿದೆ
ಕತ್ತಲಾ ದಾರಿಯಲಿ
ನಡಿಯಲುಂಟೇ

ಒಡಲು ಮಿಡಿಯುತಿದೆ
ಮನದೊಳಗೆ ಆವುದೀ ಕದನ
ಸಾವುನೋವಿನ ಆಟದಲಿ
ಬದುಕ ಭಸ್ಮವಾಗಿದೆ

ಕಳೆದುದು ಕಳೆದುಹೋಯಿತು
ಉಳಿದುದಾವುದು ಅಳಿದುದಾವುದು
ತಿಳಿಯದಾಗಿದೆ

ಲೋಕದ ಮಕ್ಕಳೇ
ನೀವೇ ನನ್ನವರು..
ಬನ್ನಿ
ಕಂಗಾಲು ಕಣ್ಣಲಿ
ಬೆಳ್ಳಿಯ ದೀಪ ಹಚ್ಚಿ
ಕಪ್ಪಿಟ್ಟ ಬಾಳಲಿ
ಪುಟ್ಟದೊಂದು ಹಣತೆ ಹಚ್ಚಿವ
ಬನ್ನಿ

ಮಕ್ಕಳೇ ಬನ್ನಿ
ಕಳೆದ ಪಾಡ ಮರೆತು
ಹೊಸ ಹಾಡ
ಹಾಡುವ ಬನ್ನಿ
ಬರಿದಾದವರ ಬಾಳಲೊಂದು
ಹೊಸ ಕವಿತೆಯ ಹಾಡುವ
ಅಮ್ಮನಾಗಿ.. ಅವ್ವೆಯಾಗಿ
ತಂದೆಯಾಗಿ.. ತಾಯಿಯಾಗಿ
ಬನ್ನಿ
ಲೋಕದ ಮಕ್ಕಳೇ
ನನ್ನವರೆನ್ನಿ
ಬನ್ನಿ ಮಕ್ಕಳೇ..

ಚಿತ್ರ ಕೃಪೆ : ದತ್ತಾತ್ರೇಯ ತೊಂಬರೆ. ಪುಣೆ


  • ಮಹಾಮನೆ – ಕವಿಗಳು, ಖ್ಯಾತ ರಂಗ ನಿರ್ದೇಶಕರು, ಸಂಘಟಕರು, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading