ಉತ್ತರಕನ್ನಡ ಜಿಲ್ಲೆಯ ಜನಪ್ರಿಯ ಲೇಖಕಿ ಭಾಗೀರಥಿ ಹೆಗಡೆಯವರು ಬರೆದ ನೂರಾರು ಕಥೆಗಳಲ್ಲಿ ತಮಗೆ ತೃಪ್ತಿ ನೀಡಿದ ೨೬ ಕಥೆಗಳನ್ನಾರಿಸಿ ‘ಹಿಮನದಿ’ ಸಂಕಲನವನ್ನು ಪ್ರಕಟಿಸಿರುವುದ್ದಾರೆ.ಈ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಹಿಮನದಿ.
ಲೇಖಕರು: ಭಾಗೀರಥಿ ಹೆಗಡೆ.
ಪ್ರಕಾಶನ : ಕೀರ್ತನ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ: ೨೦೧೫.
ಪುಟಗಳು : ೩೭೬
ಬೆಲೆ: ರೂ.೨೦೦ .
ಭಾಗೀರಥಿ ಹೆಗಡೆಯವರು ಅನೇಕ ಗೌರವ ಪ್ರಶಸ್ತಿಗಳಿಗೆ ಭಾಜನರಾಗಿರುವ ಅವರು ಉತ್ತಮ ವಾಗ್ಮಿಗಳೂ ಹೌದು. ಕಳೆದ ತಿಂಗಳು ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿ ಅವರ ಮಾತುಗಳನ್ನು ಆಲಿಸಿದ ಸಂತಸ ನನ್ನದು.
ಪೌರಾಣಿಕ, ಸಾಮಾಜಿಕ ಯಾವುದೇ ಸಂಗತಿ ಇರಲಿ ಅವರು ಕಥೆಗಳಲ್ಲಿ ಬಳಸುವ ಪ್ರಾದೇಶಿಕ ಆಡುನುಡಿ, ಕಥಾವಸ್ತುವಿನ ಆಯ್ಕೆ, ಅವನ್ನು ನಿರೂಪಿಸುವ ಮಾದರಿ, ವೈಚಾರಿಕತೆ ಇವೆಲ್ಲವೂ ಅತ್ಯಂತ ಗಮನಾರ್ಹ.
ಗಿಳಿಪದ್ಮ * ದಂತಹ ಇಲ್ಲಿರುವ ಕೆಲವು ಕಥೆಗಳನ್ನು ನಾನು ಈ ಹಿಂದೆ ಓದಿದ್ದೇನಾದರೂ ಇಂದು ಪುಸ್ತಕ ತೆರೆದಾಗ ನನಗೆ ಅಚ್ಚರಿ ಎಂಬಂತೆ ಮೊದಲು ಕಂಡ *ವಂದೇ ಮಾತರಂ. ಹೆಸರಿನ ಕಥೆ. ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ’ ೨೦೦೯ರ ಗಾಂಧಿಜಯಂತಿ ಕಥಾಸ್ಪರ್ಧೆ’ಯಲ್ಲಿ ಇದಕ್ಕೆ ದ್ವಿತೀಯ ಬಹುಮಾನ ದೊರಕಿದೆ. ಹಾಗಾಗಿ ಇಂದಿನ ಗಾಂಧಿಜಯಂತಿ ದಿನಕ್ಕೆ ಇದನ್ನು ಪರಿಚಯಿಸ ಬೇಕೆನ್ನಿಸಿತು.

“ಬೋಲೋ ಭಾರತ್ ಮಾತಾಕಿ ಜೈ.. ವಂದೇ ಮಾತರಂ….” ಎಂದು ಜಿಟಿ ಜಿಟಿ ಸುರಿಯುವ ಮಳೆಯಲ್ಲಿ ನೆನೆಯುತ್ತ ಕೈ ಎತ್ತಿ ಮುಷ್ಠಿಯಲ್ಲಿ ಗಾಳಿಗೆ ಗುದ್ದುತ್ತ ಕೋಲೂರಿಕೊಂಡೇ ತುಂಗಜ್ಜಿ ಅಂಗಳದಲ್ಲಿ ಉತ್ಸಾಹದಿಂದ ಪ್ರಭಾತಪೇರಿ ನಡೆಸಿದ್ದಳು.!
ಆಗ ಹೊರಬಂದ ಸೊಸೆ ಮಕ್ಕಳ ಹಾಂಗೆ ಮಳೆಯಲ್ಲಿ ತೊಯ್ಯುತ್ತಿರುವ ೮೮ ರ ಅತ್ತೆಯನ್ನು ಕಂಡು” ಹೀಗೆ ಮಳೆಯಲ್ಲಿ ನೆನೆದು ಜ್ವರ ಬಂದರೆ ನೋಡುವವರ್ಯಾರು? ಎಂದು ಗದರಿಸಿ ಒಳಗೆ ಎಳೆತರುತ್ತಾಳೆ.
” ಅಖಂಡ ೮೮ ಮಳೆಗಾಲ ಕಂಡು ನುಗ್ಗು ನುರಿಯಾದ ಜೀವ.ಎಲುಬು ಚರ್ಮದ ಗೂಡನ್ನು ತೊರೆಯಲಾರದೇ ಅಂಟಿಕೊಂಡ ಆತ್ಮಪಕ್ಷಿ, ಬೆಳ್ಳಿ ಸರಿಗೆಯಾದ ನೂರೊಂದು ತಲೆಗೂದಲನ್ನು ಕಟ್ಟಿದ ಬೆಳ್ಳುಳ್ಳಿ ಗಂಟು, ಬೆಳ್ಳಕ್ಕಿಯಷ್ಟು ಬೆಳ್ಳಗಿನ ಸೀರೆ,ಪಲಕ.ಹಸಿರು ಹಣೆ, ಖಾಲಿ ಕೊರಳು, ನರ ನರ ಮೇಲೆದ್ದ ಬರಿಗೈ, ಆದರೆ ಕಣ್ಣೋ?… ಕರೆಂಟಿಲ್ಲದ ಜಗಲಿಗೆ ಹಚ್ಚಿಟ್ಟ ಹಣತೆ ದೀಪ.ಮುಖದ ನೂರು ನೆರಿಗೆಗಳಲ್ಲಿ ಸಾವಿರ ಸೋಲು ಗೆಲುವುಗಳನ್ನು ನುಂಗಿದ ಧೈರ್ಯ,ದೇಹಕ್ಕೆ ಬಂದ ಮುಪ್ಪನ್ನೂ ಮನಸ್ಸಿಗೆ ಅಡರಿಸಿಕೊಳ್ಳುವ ಮರವೆಯನ್ನೂ ಗುಡಿಸಿ ಒಲೆಗೆ ಹಾಕುವ ಆತ್ಮವಿಶ್ವಾಸ.” ಹೀಗೆ ಅಜ್ಜಿಯ ವ್ಯಕ್ತಿತ್ವದ ಬಣ್ಣನೆಯೇ ಸ್ವಾರಸ್ಯಕರ.!
ಸ್ವಾತಂತ್ರ್ಯಪೂರ್ವದಲ್ಲಿ ಹದಿನೈದರ ಬಾಲೆಯಾಗಿದ್ದಾಗಲೇ ಸಂಕದಳ್ಳಿ ಯ ತುಂಬು ಕುಟುಂಬದ ಆರನೆಯ ಸೊಸೆಯಾಗಿ ಬಂದ ತುಂಗಾ ಶಾಲೆಗೆ ಹೋದವಳಲ್ಲ. ಅವಳ ಗಂಡ ಸೊಪ್ಪಿನ ಮರದಿಂದ ಬಿದ್ದು ಸತ್ತು ಹೋದಾಗ ಅವಳ ತಲೆಬೋಳಿಸಿ ಕೆಂಪು ಸೀರೆ ಉಡಿಸಿದ್ದರು. ಆಗ ದೇಶದ ತುಂಬಾ ಚಲೇಜಾವ್ ಚಳುವಳಿ! ಒಂದು ವರ್ಷದ ಮಗನನ್ನು ಎದೆಗವಚಿಕೊಂಡು ಎಲ್ಲರ ವಿರೋಧದ ನಡುವೆ ಆಕೆಯೂ ಬಾವುಟ ಹಿಡಿದು ಜೈಕಾರ ಹಾಕುತ್ತಾ ಹೋರಾಟಕ್ಕಿಳಿದು ಜೈಲು ಸೇರಿದ್ದಳು. ಮನೆಯೂ ಕೂಡ ಅವಳ ಪಾಲಿಗೆ ಜೈಲೇ ಆಗಿದ್ದರಿಂದ ಇಲ್ಲೂ ಆಕೆಗೆ ವ್ಯತ್ಯಾಸವೇ ಕಾಣಲಿಲ್ಲ.ಇಡೀ ದೇಶ ಬಾಂಧವರ ಸಂಕಷ್ಟದೆದುರು ತನ್ನದು ಏನೇನೂ ಅಲ್ಲ ಎಂದು ಎಲ್ಲವನ್ನೂ ಸಹಿಸಿದ ಆಕೆ,ಮುಂದೆ ಬಿಡುಗಡೆಯಾದಾಗ ಸಾಬರಮತಿ ಆಶ್ರಮಕ್ಕೆ ಸ್ಥಳಾಂತರಗೊಂಡಳು.

ಅಲ್ಲಿ ಅವಳು ಬೆಳೆದಳೆ?…. ಅವಳ ಮಗ ಬೆಳೆದನೆ?… ಅಥವಾ ಬೆಳವಣಿಗೆಯ ಹಾದಿಯಲ್ಲಿ ಸೇವಾದೀಕ್ಷೆ ತೊಟ್ಟಳೇ ?…. ಅವಳಿಗೇ ಗೊತ್ತಿಲ್ಲ…. ಎಂಬ ಸಾಲುಗಳೇ ನಮಗೆ ಸಮಸ್ತ ವಿಷಯವನ್ನೂ ಹೇಳುವಂತಿದೆ. ಗಾಂಧೀಜಿಯವರ ಹತ್ಯೆಯಾದ ಸಂದರ್ಭದಲ್ಲಿ ದೇಶವೇ ಅಲ್ಲೋಲಕಲ್ಲೋಲವಾದಾಗ ಅದು ಹೇಗೋ ಮರಳಿ ಊರುಸೇರಿದ ತುಂಗಾ ಮತ್ತೆ ಸ್ವಾಭಿಮಾನದ ಬದುಕು ಕಟ್ಟಿ ಕೊಂಡಿದ್ದು , ಮಗನನ್ನು ಓದಿಸಿ ದಡ ಹಚ್ಚಿ ಮದುವೆ ಮಾಡಿದ್ದು, ಸೊಸೆ ಮೊಮ್ಮಕ್ಕಳ ಒಡನಾಟ , ಹಳ್ಳಿಯ ಅಭಿವೃದ್ಧಿಗೆ ತುಡಿಯುವ ಅವಳನ್ನು ಗ್ರಾಮ ಪಂಚಾಯಿತಿ ಚುನಾವಣೆಗೆ ನಿಲ್ಲಿಸುವ,ಜೊತೆಗೆ ಅವಳ ಸ್ಥಾನ ಕಸಿಯಲು ಊರ ಸತ್ಯ( ಸುಳ್ಳು)ನಾರಾಯಣ ಎಂಬ ಮುಖಂಡನ ಸಂಚು,ಇವೆಲ್ಲಾ ಕಥೆಯಲ್ಲಿ ಎದ್ದುಕಾಣುವ ಅಂಶಗಳು.
ಇಂತಹ ಅಜ್ಜಿಗೆ ಈಗ ವಯಸ್ಸಾಗಿದೆ.ಆದರೆ ಪ್ರತೀವರ್ಷ ಆಗಸ್ಟ್ ೧೫ ರಂದು ಪೆಟ್ಟಿಗೆಯಲ್ಲಿನ ಬಿಳಿ ಸೀರೆಯುಟ್ಟು ಅವಳು ಹೀಗೆ ಗತದ ಸ್ಮೃತಿಯಲ್ಲಿ ಜಾರುವುದು ನಗೆಯುಕ್ಕಿಸುವುದರ ಜೊತೆ ,ಅವಳ ಧಾರುಣಬದುಕಿನ ಬಗ್ಗೆ ಓದುವಾಗ ನಮ್ಮಲ್ಲೂ ಒಂದು ವಿಷಾದ
ಮಡುಗಟ್ಟುತ್ತದೆ.
ಕೊನೆಯಲ್ಲಿ ಅವಳಿಗೆ “ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ್ತಿ ” ಎಂದು ಸರ್ಕಾರದ ಪರವಾಗಿ ಸನ್ಮಾನ ಮಾಡಲು ತಹಶೀಲ್ದಾರರು ಸಹಾಯಕರೊಡನೆ ಜೀಪಿನಲ್ಲಿ ಅವರ ಮನೆಗೆ ಬರುತ್ತಾರೆ. ಆಗ ತುಳಸಿ ಮಣಿಯೊಂದಿಗೆ ರಾಮನಾಮ ಜಪ ಮಾಡುತ್ತಿದ್ದ ತುಂಗಜ್ಜಿ ನಡುಗುತ್ತಾ ಹೇಳಿದ ಮಾತುಗಳೇನು?…ಕೊನೆಗೆ ಅವಳು ಸನ್ಮಾನವನ್ನು ಸ್ವೀಕರಿಸಿದಳೇ ?….
ತುಂಗಜ್ಜಿಯ ಆದರ್ಶದ ನಿಲುವನ್ನು ಪ್ರತಿಪಾದಿಸುವ ಮತ್ತು ಆಕೆಯ ಮನಸ್ಸಿನ ಒಳಸುಳಿಗಳು ನಮಗೂ ಕೇಳಿಸುವಷ್ಟು ಸ್ಪಷ್ಟವಾಗಿ ಲೇಖಕಿ ಕಥೆಯನ್ನು ಕಟ್ಟಿದ ರೀತಿ ಅವರ ಕಥನ ಕೌಶಲ್ಯಕ್ಕೊಂದು ನಿದರ್ಶನ. ಒಂದು ಹಿರಿಯ ಜೀವದ ಈ ಹೃದಯಂಗಮ ಕಥೆ ಓದಿ ಮನಸ್ಸು ಭಾರವಾಯಿತು.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ಅಗಮ್ಯ’ ಕೃತಿ ಪರಿಚಯ
- ‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ
- ‘ದೀಪದ ಮಲ್ಲಿಯರು’ ಕೃತಿ ಪರಿಚಯ
- ‘ಕಾಡು ತಿಳಿಸಿದ ಸತ್ಯಗಳು’ ಕೃತಿ ಪರಿಚಯ
- ‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿ ಪರಿಚಯ
- ‘ಒಲ್ಲೆಯೆನದಿರು ನಮ್ಮದಲ್ಲದ ನಾಳೆಗಳ’ ಕೃತಿ ಪರಿಚಯ
- ‘ಗಾದೆ ಮಾತಿನ ಗುಟ್ಟು’ ಕೃತಿ ಪರಿಚಯ
- ‘ಕಿಚ್ಚಿಲ್ಲದ ಬೇಗೆ’ ಕೃತಿ ಪರಿಚಯ
- ‘ಅಗಸ್ತ್ಯ’ ಕೃತಿ ಪರಿಚಯ
- ‘ಸಾಂದರ್ಭಿಕ’ ಕೃತಿ ಪರಿಚಯ
- ರೇಖಾ ಕಾಖಂಡಕಿ ಅವರು ಕೃತಿ ಪರಿಚಯ
- ಗೌರಿ ಕೃತಿ ಪರಿಚಯ
- ‘ನಿಮ್ಮ ಸಿಮ್ಮ’ ಕೃತಿ ಪರಿಚಯ
- ‘ಪಣಿಯಮ್ಮ’ ಕೃತಿ ಪರಿಚಯ
- ‘ಚಿಗುರಿದ ಕನಸು’ ಕೃತಿ ಪರಿಚಯ
- ‘ಅಶ್ವತ್ಥಾಮೋ ಹತಃ’ ಪರಿಚಯ
- ‘ಹೂ ದಂಡಿ’ ಕೃತಿ ಪರಿಚಯ
- ‘ಬೂದಿ ಮುಚ್ಚಿದ ಕೆಂಡ’ ಕೃತಿ ಪರಿಚಯ
- ‘ಇಲಿಯಡ್’ ಕೃತಿ ಪರಿಚಯ
- ‘ಅಲೆಯೊಳಗಿನ ಮೌನ’ ಕೃತಿ ಪರಿಚಯ
- ‘ಹೂಲಿ ಶೇಖರರ ನಾಟಕಗಳು’ ಕೃತಿ ಪರಿಚಯ
- ‘ನನ್ನಕ್ಕ ನಿಲೂಫರ್’ ಕೃತಿ ಪರಿಚಯ
- ‘ಅರಣ್ಯಕಾಂಡ’ ಕೃತಿ ಪರಿಚಯ
- ‘ವಿಕ್ರಮಾರ್ಜುನ ವಿಜಯ’ ಕೃತಿ ಪರಿಚಯ
- ‘ಸುನೀತಗಳು’ ಕೃತಿ ಪರಿಚಯ
- ‘ಮೈ- ಮನಸ್ಸುಗಳ ಸುಳಿಯಲ್ಲಿ ಸಖಿ!’ ಕೃತಿ ಪರಿಚಯ
- ‘ಪದ್ದಣ ಮನೋರಮೆ’ ಕೃತಿ ಪರಿಚಯ
- ‘ಬ್ರಹ್ಮರಾಕ್ಷಸ’ ಕೃತಿ ಪರಿಚಯ
- ‘ಬದುಕ ಭಿತ್ತಿಯ ಚಿತ್ರಗಳು’ ಕೃತಿ ಪರಿಚಯ
- ‘ಅಮ್ರಪಾಲಿ’ ಪುಸ್ತಕ ಪರಿಚಯ
- ‘ಇದು ಕತೆಯಲ್ಲ ಜೀವನ’ ಕೃತಿ ಪರಿಚಯ
- ‘ಕೇದಗೆ ಪುಷ್ಪ’ ಕೃತಿ ಪರಿಚಯ
- ‘ಬಂಕಿಮಚಂದ್ರರ ಶ್ರೇಷ್ಠ ಕತೆಗಳು’ ಕೃತಿ ಪರಿಚಯ
- ‘ಸೀಳುದಾರಿ’ ಪುಸ್ತಕ ಪರಿಚಯ
- ‘ಲವ್ ಟುಡೆ’ ಕೃತಿ ಪರಿಚಯ
- ‘ಕ್ಲಾಸ್ ಟೀಚರ್’ ಕೃತಿ ಪರಿಚಯ
- ‘ಒಂದು ಎಂಟಾಣೆಯ ಕಥೆ’ ಕೃತಿ ಪರಿಚಯ
- ‘ನಿಮಗ ತಿಳಿಯೋದಿಲ್ಲ ಬಿಡ್ರಿ’ ಕೃತಿ ಪರಿಚಯ
- ‘ಮಾಸದ ವಿಜಯ’ ಕೃತಿಯ ಪರಿಚಯ
- ‘ಅರಳಿಮರ’ ಪುಸ್ತಕ ಪರಿಚಯ
- ‘ಆಸೆಯ ಅಲೆಗಳ ಮೇಲೆ’ ಕೃತಿ ಪರಿಚಯ
- ‘ಬರ್ಬರಿಕ’ ಕೃತಿ ಪರಿಚಯ
- ‘ನನ್ನ ದನಿಗೆ ನಿನ್ನ ದನಿಯು’ ಕೃತಿ ಪರಿಚಯ
- ‘ಅಂತರಂಗ’ ಕೃತಿ ಪರಿಚಯ
- ‘ಕಾಡುಬಳ್ಳಿ’ ಕೃತಿ ಪರಿಚಯ
- ‘ನಂಟು’ ಪುಸ್ತಕ ಪರಿಚಯ
- ‘ಶಕುನದ ಹಕ್ಕಿ’ ಕೃತಿ ಪರಿಚಯ
- ‘ಪರ್ಷಿಯಾ ಪರಿಮಳ’ ಕೃತಿ ಪರಿಚಯ
- ‘ತೀರದ ತುಡಿತ’ ಕೃತಿ ಪರಿಚಯ
- ‘ಅಪೂರ್ವ ಕುಸುಮಗಳು’ ಕೃತಿ ಪರಿಚಯ
- ‘ಹುಲಿ ವೇಷ’ ಕೃತಿ ಪರಿಚಯ
- ‘ಆನೆ ಸಾಕಲು ಹೊರಟವಳು’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್ – ಕಿರಿಯ ಸಹಾಯಕರು, ಲೋಕೋಪಯೋಗಿ ಇಲಾಖೆ ಉಪವಿಭಾಗ, ಸಿದ್ದಾಪುರ.
