ಗೇರುಬೀಸು ಎನ್ನುವುದು ಒಂದು ಪುಟ್ಟ ಹಳ್ಳಿ. ಅಲ್ಲಿ ಕೃಷ್ಟಣ್ಣರ ಪತ್ನಿ ಹೊನ್ನಮ್ಮಅವರಿಗೆ ರಕ್ತದ ಅವಶ್ಯಕತೆ ಇತ್ತು. ಆ ಊರಲ್ಲಿ ಅರುಣ್ ಪ್ರಸಾದ್ ಅವರ ರಕ್ತ ಕೃಷ್ಟಣ್ಣರ ಪತ್ನಿಯವರ ರಕ್ತ ಒಂದೇ ಆಗಿತ್ತು. ಅದೇ ಅವರ ಮೊದಲ ರಕ್ತದಾನ. ಅದರ ಅನುಭವದ ಕುರಿತು ಅರುಣ್ ಪ್ರಸಾದ್ ಅವರೇ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಗೇರುಬೀಸು ಒಂದು ಸಣ್ಣ ಗ್ರಾಮ. ಈ ಊರು ಗೇರುಬೀಸಿನ ನನ್ನ ಆತ್ಮೀಯ ಕೃಷ್ಟಣ್ಣರ ಪತ್ನಿ ಹೊನ್ನಮ್ಮ ಅವರು ಅನೇಕ ವರ್ಷ ಅರುಣ್ಣನ ರಕ್ತ ನನ್ನ ಮೈಯಲ್ಲಿ ಹರೀತಾ ಇದೆ ಎಂಬ ಮುಗ್ಧತೆಯ ಮಾತು ಹೇಳುತ್ತಿದ್ದರು.
ನನ್ನ ಜೀವಮಾನದ ಮೊದಲ ರಕ್ತದಾನ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಮಾಡಿದ್ದೆ. ಗೇರುಬೀಸೆಂಬ ನನ್ನ ಪ್ರೀತಿಯ ಹಳ್ಳಿ. ಆಗ ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದೆ, 1996ರಲ್ಲಿ ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಗೇರುಬೀಸು ಎಂಬ ಊರಿನ ನನ್ನ ಆಪ್ತಮಿತ್ರ ಗೇರುಬೀಸು ಕೃಷ್ಣಣ್ಣ ತಮ್ಮ ಪತ್ನಿ ಶ್ರೀಮತಿ ಹೊನ್ನಮ್ಮನವರಿಗೆ ತಕ್ಷಣ ರಕ್ತ ಬೇಕಾಗಿದೆ ಅಂದಾಗ ಅವರಿಗೆ ರಕ್ತ ಪಡೆಯುವ ಮಾಹಿತಿ ನೀಡಿದ್ದೆ.
ಆಗ ಶಿವಮೊಗ್ಗದಲ್ಲಿ ವೆಲ್ ಡನ್ ಲ್ಯಾಬೊರೇಟರಿಗೆ ಹೋಗಿ ರೋಗಿಗೆ ಬೇಕಾದ ರಕ್ತದ ಗುಂಪಿನವರೇ ರಕ್ತ ನೀಡಿ ಅದನ್ನು ಆಸ್ಪತ್ರೆಗೆ ಕೊಂಡೊಯ್ದು ಕೊಡಬೇಕಾದ ಕಾಲ. ಅವತ್ತು ಆ ಗೇರುಬೀಸೆಂಬ ಹಳ್ಳಿಯ ಎಲ್ಲಾ ಮನೆಯ ಯಜಮಾನರೂ ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಹೊನ್ನಮ್ಮನನ್ನ ನೋಡಲು ಹೋಗಿದ್ದರು.

ಫೋಟೋ ಕೃಪೆ : ಅಂತರ್ಜಾಲ
ಅವರೆಲ್ಲ ಸೇರಿ ವೆಲ್ ಡನ್ ಲ್ಯಾಬೊರೇಟರಿಗೆ ಹೋಗಿದ್ದಾರೆ ಮತ್ತು ಅವರಲ್ಲಿ ಯಾರದ್ದಾದರೂ A+ ರಕ್ತ ಆಗಿದ್ದರೆ ಹೊನ್ನಮ್ಮನಿಗೆ ರಕ್ತದಾನ ಮಾಡುವ ನಿರ್ಧಾರ ಕೂಡ ಮಾಡಿದ್ದರು.
ಶಿವಮೊಗ್ಗದ ವೆಲ್ ಡನ್ ಲ್ಯಾಬೋರೇಟರಿಯ ಸಿಬ್ಬಂದಿಗಳು ರಕ್ತದಾನ ಮಾಡಲು ಬಂದವರಿಗೆ ರಕ್ತದ ಗುಂಪು ಪರೀಕ್ಷೆ ಮಾಡುವ ಮೊದಲು ಅವರ ತೂಕ ನೋಡಿದ್ದಾರೆ. ಅವತ್ತು ಇಡೀ ಗೇರುಬೀಸೆಂಬ ಹಳ್ಳಿಯಲ್ಲಿ ಯಾರೂ ನಲವತ್ತು ಕೆಜಿ ಮೇಲೆ ತೂಗುತ್ತಿರಲಿಲ್ಲ.ಆದ್ದರಿಂದ ಅವರ್ಯಾರು ರಕ್ತದಾನ ಮಾಡಲು ಅರ್ಹರಲ್ಲ ಎಂದು ಅವರಿಗೆ ತಿಳಿಸಿದ್ದಾರೆ.
ಇದರಿಂದ ಗೇರುಬೀಸು ಕೃಷ್ಣಣ್ಣ ಗಾಭರಿಯಾಗಿ ಆಸ್ಪತ್ರೆಯಲ್ಲಿದ್ದ ತನ್ನ ಪತ್ನಿಗೆ ರಕ್ತ ನೀಡಬೇಕಾದ ಅನಿವಾರ್ಯತೆ ಇದ್ದಿದ್ದರಿಂದ ಇದನ್ನು ನನಗೆ ತಿಳಿಸಲು ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಚೇರಿಗೆ ಬಂದಿದ್ದರು, ನಾನೇ ಶಿವಮೊಗ್ಗದ ವೆಲ್ ಡನ್ ಲ್ಯಾಬೋರೇಟರಿಗೆ ಹೋಗಿ ವಿಚಾರಿಸಿದಾಗ ಅಲ್ಲಿ ನಮ್ಮ ಗೇರುಬೀಸಿನ ಇವರೆಲ್ಲ ಪೌಷ್ಟಿಕತೆ ಕೊರತೆಯಿಂದ ಬಳಲುತ್ತಿರುವುದರಿಂದ ಯಾರೊಬ್ಬರೂ 40 ಕೆ.ಜಿ. ದಾಟಿ ತೂಗುತ್ತಿರಲಿಲ್ಲ 40 ಕಿಲೋ ಒಳಗೆ ತೂಕ ಇರುವವರಿಂದ ರಕ್ತ ದಾನ ಮಾಡಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದರು.
ಆ ತಕ್ಷಣ ನಾನು ನನ್ನದು A+ ರಕ್ತ ಆದ್ದರಿಂದ ನಾನೇ ರಕ್ತದಾನ ಮಾಡಿದೆ, ನಂತರ ಎಷ್ಟೋ ವರ್ಷಗಳ ಕಾಲ ಹೊನ್ನಮ್ಮ “ನನ್ನ ದೇಹದಲ್ಲಿ ಅರುಣಣ್ಣನ ರಕ್ತ ಹರಿಯುತ್ತಿದೆ” ಎಂದು ಮುಗ್ದತೆಯಿಂದ ಉಪಕಾರ ಸ್ಮರಣೆ ಮಾಡುತ್ತಿದ್ದರು.
ನಂತರ ಇಡೀ ಗೇರುಬೀಸು ಎಂಬ ಹಳ್ಳಿ ಹೊನ್ನಮ್ಮನ ಪತಿ ಕೃಷ್ಣಣ್ಣರ ನಾಯಕತ್ವ ಮತ್ತು ದುಡಿಮೆಯ ಬುದ್ಧಿವಂತಿಕೆ ಮತ್ತು ವಾಣಿಜ್ಯ ಬೆಳೆಗಳಿಂದ ಶ್ರೀಮಂತವಾಯಿತು.
ಇವತ್ತು ಆ ಊರಲ್ಲಿ ಪೌಷ್ಟಿಕತೆಯ ಕೊರತೆಯ ಒಬ್ಬರೂ ಸಿಗುವುದಿಲ್ಲ.
ಇಡೀ ಊರಿನ ಅಭಿವೃದ್ದಿಯ ಹರಿಕಾರ ಮುಖಂಡರಾದ ನನ್ನ ಆತ್ಮೀಯ ಗೆಳೆಯ ಗೇರುಬೀಸು ಕೃಷ್ಣಣ್ಣ ಕೆಲ ವರ್ಷಗಳ ಹಿಂದೆ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು.
ಇದೆಲ್ಲ ರಕ್ತದಾನದ ನೆನಪುಗಳು,ನಾನು ನನ್ನ ಮೊದಲ ರಕ್ತದಾನ ಮಾಡಿದ್ದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅದು ಶಿವಮೊಗ್ಗದ ಬಡ ಮಹಿಳಾ ರೋಗಿಗೆ ಇದಕ್ಕಾಗಿ ವಿಕ್ಟೋರಿಯ ಆಸ್ಪತ್ರೆ ರಕ್ತ ದಾನ ಮಾಡಿದ ಬಗ್ಗೆ ಒಂದು ಸರ್ಟಿಫಿಕೇಟ್ ಕೊಟ್ಟಿದೆ,ಈಗ ಆ ಪದ್ದತಿ ಇದೆಯೋ ಇಲ್ಲವೋ ಗೊತ್ತಿಲ್ಲ.
- ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು, ಆನಂದಪುರಂ
