ಬುಲ್ ಬುಲ್ ಅಥವ ಕನ್ನಡದ ಪಿಕರಾಳ ಹಕ್ಕಿ

ನಮ್ಮ ಪಿಕರಾಳ ಹಕ್ಕಿಯ ಮೂರು ಮೊಟ್ಟೆ ಇಟ್ಟಿದೆ. ಮರಿ ಮೊಟ್ಟೆಯಿಂದ ಯಾವಾಗ ಬರುತ್ತದೆ?.  ಪಕ್ಷಿಗಳು ಮನುಷ್ಯ ತ್ಯಾಜ್ಯದ ಪ್ಲಾಸ್ಟಿಕ್ ನಿಂದ ತನ್ನ ಗೂಡುಗಳಿಗೆ ಬಳಸುತ್ತಿರುವುದು ದುರಂತವಾಗಿದೆ. ಅರುಣ ಪ್ರಸಾದ್ ಅವರ ಪುಟ್ಟ ಲೇಖನವನ್ನು ತಪ್ಪದೆ ಮುಂದೆ ಓದಿ… 

ಪಿಕರಾಳ ಹಕ್ಕಿ ಗೂಡಿನಲ್ಲಿ ಒಂದು ಮೊಟ್ಟೆ ಇತ್ತು. ಇವತ್ತು ಬೆಳಗಿನ ಮಳೆಯಲ್ಲೇ ವಾಕಿಂಗ್ ಪ್ರಾರಂಭಿಸಿದಾಗ ಈ ಗೂಡಲ್ಲಿ ಎರಡು ಮೊಟ್ಟೆಗಳಿದೆ. ಪಿಕರಾಳ ಅಥವ ಬುಲ್ ಬುಲ್ ಹಕ್ಕಿ ವೃತ್ತಾಕಾರದ ಚಿಕ್ಕದಾದ ಸುಂದರ ಗೂಡು ಹೆಣೆಯುತ್ತದೆ ಆದರೆ ಮನುಷ್ಯ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿದರೂ ಪಕ್ಷಿಗಳು ಮನುಷ್ಯ ತ್ಯಾಜ್ಯದ ಪ್ಲಾಸ್ಟಿಕ್ ತನ್ನ ಗೂಡುಗಳಿಗೆ ಬಳಸುತ್ತಿರುವುದು ದುರಂತ.

ಪಿಕರಾಳ ಹಕ್ಕಿ ಬಗ್ಗೆ ಗೂಗಲ್ ನಲ್ಲಿರುವ ಈ ಕೆಳಕಂಡ ಮಾಹಿತಿ ಯಥಾವತ್ ಆಗಿ ಇಲ್ಲಿದೆ ಓದಿ.

ಪಿಕಳಾರ (Bulbul) : ಮೈನಾಕ್ಕಿಂತ ಕೊಂಚ ಚಿಕ್ಕದಾದ ಗುಬ್ಬಿಗಿಂತ ದೊಡ್ಡದಾದ ಈ ಹಕ್ಕಿ ಭಾರತದಾದ್ಯಂತ ಕಂಡುಬರುವ ಒಂದು ಸಾರ್ವತ್ರಿಕ ಹಕ್ಕಿ. ಇವುಗಳನ್ನು ದಟ್ಟ ಕಾಡುಗಳಲ್ಲಿ, ಪೇಟೆಯ ಉದ್ಯಾನಗಳಲ್ಲಿ, ಮನೆಯ ಹೂದೋಟ ಹೀಗೆ ಎಲ್ಲೆಡೆ ನೋಡಬಹುದು. ಪಶ್ಚಿಮ ಘಟ್ಟದ ಕಾಡುಗಳಲ್ಲಿ ನಾಡಿನಲ್ಲಿ ಗುಬ್ಬಚ್ಚಿಗಳು ಹೇಗೊ ಹಾಗೆ ವಿಪುಲವಾಗಿವೆ.

ಕರ್ನಾಟಕದಲ್ಲಿ ಇವುಗಳ ಅನೇಕ ಪ್ರಭೇದಗಳನ್ನು ನೋಡಬಹುದು : ಕೆಂಪು ಕಪೋಲದ ಪಿಕಳಾರ ಅಥವಾ ಕೆಮ್ಮೀಸೆ ಪಿಕಳಾರ(Red-whiskered Bulbul), ಕೆಂಪು ಬಾಲದ ಪಿಕಳಾರ (Red-vented Bulbul), ಕರಿ ಪಿಕಳಾರ (Black Bulbul), ಹಳದಿ ಕತ್ತಿನ ಪಿಕಳಾರ (Yellow-throated Bulbul), ಬಿಳಿ ಹುಬ್ಬಿನ ಪಿಕಳಾರ (White-browed Bulbul).

ಕೆಂಪು ಕಪೋಲದ ಪಿಕಳಾರ ಅಥವಾ ಕೆಮ್ಮೀಸೆ ಪಿಕಳಾರದ ತಲೆಯ ಮೇಲೆ ಜುಟ್ಟಿನಂತಹ ಚೊಟ್ಟಿ ಇದ್ದು, ಕಪೋಲದ ಭಾಗ ಕೆಂಪಾಗಿರುತ್ತದೆ. ಇವನ್ನು ಸಾಮಾನ್ಯವಾಗಿ ನಗರದ ಹೂದೋಟಗಳಿಂದ ಹಿಡಿದು ಮಲೆನಾಡಿನ ಕಾಡುಗಳಲ್ಲಿ ಎಲ್ಲೆಡೆ ನೋಡಬಹುದು. ಕೆಂಪು ಬಾಲದ ಪಿಕಳಾರಗಳ ಬಾಲದ ಬುಡದಲ್ಲಿ ಕೆಂಪು ಬಣ್ಣವಿದ್ದು, ಇವು ಹೆಚ್ಚಾಗಿ ತೋಟ, ಉದ್ಯಾನದಲ್ಲಿ ಕಾಣಿಸಿಕೊಳ್ಳುತ್ತವೆ. ಬೆಳಗಿನ ಸಮಯದಲ್ಲ್ಲಿ ಸಿಳ್ಳು ಹಾಕುತ್ತಾ ಸುಶ್ರಾವ್ಯವಾಗಿ ಹಾಡುತ್ತವೆ.ಇವು ಗುಂಪಿನಲ್ಲಿರುವುದು ಅಪರೂಪ, ಬದಲಾಗಿ ಒಂಟಿ ಅಥವಾ ಜೋಡಿ ಹಕ್ಕಿಗಳಾಗಿ ಕಾಣಿಸಿಕೊಳ್ಳುವುದು ಹೆಚ್ಚು ಪಿಕಳಾರಗಳ ಆಹಾರ ಕೀಟಗಳು,ಸಣ್ಣ ಹಣ್ಣುಗಳು ಮತ್ತು ಹೂವಿನ ಮಕರಂದ.ಇವು ಪೊದೆಗಳ ಕವಲುಗಳಲ್ಲಿ ನಾರು, ಹುಲ್ಲು, ಜೇಡರ ಬಲೆಗಳಿಂದ ಬಟ್ಟಲಾಕಾರದ ಗೂಡು ಕಟ್ಟುತ್ತವೆ. ಗೂಡು ಜನವಸತಿಯ ಹತ್ತಿರವೂ ಇರಬಹುದು.

ಉದಾಹರಣೆಗೆ ಮನೆಯ ಹೂದೋಟದಲ್ಲಿ ಹಬ್ಬಿಸಿದ ಮಲ್ಲಿಗೆ ಬಳ್ಳಿಯ ಚಪ್ಪರದಲ್ಲಿ ಪಿಕಳಾರಗಳು ಗೂಡು ಕಟ್ಟಬಹುದು.


  • ಅರುಣ ಪ್ರಸಾದ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW