ಆಯುರ್ವೇದ ಮತ್ತು ಧಾರ್ಮಿಕದಲ್ಲಿ ಎಕ್ಕದ ಗಿಡದ ಮಹತ್ವವೇನು? ಅದರ ಕುರಿತು ಹೋಟೆಲ್ ಉದ್ಯಮಿ, ಲೇಖಕರಾದ ಅರುಣ್ ಪ್ರಸಾದ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ರೆಡ್ಡಿ ಅವರು ಒಂದು ಪೋಸ್ಟ್ ಹಾಕಿದ್ದರು ಓದಿ….
ಎಕ್ಕದ ಹೂವು. ಉತ್ತರ ಭಾರತದಲ್ಲಿ ಈ ಹೂವಿನ ಮಾಲೆಯನ್ನು ಶಿವನಿಗೆ ವಿಶೇಷವಾಗಿ ಅರ್ಪಿಸುತ್ತಾರೆ. ನಮ್ಮಲ್ಲಿ ಇದೊಂದು ಏನಕ್ಕೂ ಬಾರದ ಯಃಕಶ್ಚಿತ್ ಕಳೆ ಗಿಡ. ಇನ್ನೂ ಅರಳದ ಇದರ ಒಳಗೆ ಗಾಳಿ ತುಂಬಿದ ಮೊಗ್ಗಿನ ಬುಡ್ಡೆಯನ್ನು ಅಮುಕಿದರೆ ಅದು ಟಪ್ ಎಂದು ಶಬ್ದ ಮಾಡುತ್ತ ಒಡೆಯುತ್ತದೆ. ನಾನಂತೂ ಚಿಕ್ಕಂದಿನಿಂದ ಈ ಗಿಡ ಮತ್ತು ಅದರ ಅರಳದ ಮೊಗ್ಗಿನ ಬುಡ್ಡೆ ಕಂಡರೆ ಅದನ್ನು ಅಮುಕಿ, ಅದರಿಂದ ಹೊಮ್ಮುವ ಟಪ್ ಶಬ್ದವನ್ನು ಆನಂದಿಸುತ್ತೇನೆ. ನೀವೂ ಹಾಗೆ ಮಾಡಿದ್ದೀರಾ?…
ಇದಕ್ಕೆ ನನ್ನ ಪ್ರತಿಕ್ರಿಯೆ ಎಕ್ಕದ ಹೂವು ಶಿವನಿಗೆ ಗಣಪತಿಗೆ ಅರ್ಪಿಸಿದರೆ, ಎಕ್ಕದ ಎಲೆ ಶನೀಶ್ವರನಿಗೆ ಅರ್ಪಿಸುತ್ತಾರೆ. ಶಿರಡಿ ಸಮೀಪದ ಶನಿ ಶಿಂಗಾಪುರದಲ್ಲಿ ಹೂವಿನ ಪ್ರಸಾದಕ್ಕಿಂತ ಎಕ್ಕದ ಎಲೆಯೇ ಪ್ರಸಾದವಾಗಿ ನೀಡುತ್ತಾರೆ. ಮನೆ ಎದರು ಎಕ್ಕದ ಗಿಡ ಇದ್ದರೆ ಅದೃಷ್ಟ ಎಂಬ ನಂಬಿಕೆ ಇದೆ. ಎಕ್ಕದ ಗಿಡ ಜಾನುವಾರುಗಳು ತಿನ್ನುವುದಿಲ್ಲ ಆದ್ದರಿಂದ ನಮ್ಮ ಸಂಸ್ಥೆ ಮತ್ತು ಮನೆ ಎದುರು ಈ ಗಿಡ ನೆಟ್ಟಿದ್ದೇನೆ.
ಇದಕ್ಕೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಸಾಹಿತಿಗಳಾದ ಶ್ರೀಮತಿ ಸುಮಿತ್ರ ಮೇಡಂ. ಅರುಣವರೇ, ಎಕ್ಕದ ಗಿಡ ಬೆಳೆಯಲು ನೀರು ಬೇಡ. ಹಾಳು ಜಾಗದಲ್ಲಿ ಬೆಳೆಯುತ್ತದೆ. ಮನೆಯೇಕ್ಕುಟ್ಟು ಹೋಗಲಿ… ಎಂಬ ಬೈಗುಳವೆ ಇದೆ. ನಮ್ಮ ಕಡೆ ಮನೆ ಎದುರು ಎಕ್ಕದ ಗಿಡ ಬೆಳೆಯುವುದು ಅಪಶಕುನ ಅಂತ ಭಾವಿಸುತ್ತಾರೆ. ಬೆಳೆದರೆ ಕಿತ್ತು ಹಾಕ್ತಾರೆ.
ಸುಮಿತ್ರಾ ಮೇಡಮ್ , ನಿಮ್ಮ ಮಾತು ನಿಜ. ಆದರೆ ಇದು ತಪ್ಪು ಕಲ್ಪನೆ ಮತ್ತು ನಂಬಿಕೆ ಅಂತ ಗೊತ್ತಾದ ಮೇಲೆ ಮನೆ ಎದುರು ನೆಡುತ್ತಾರೆ. ವಾಸ್ತು ಪ್ರಕಾರ, ಆಯುರ್ವೇದ ಮತ್ತು ಧಾರ್ಮಿಕ ಆಚರಣೆಯಲ್ಲಿ ಎಕ್ಕದ ಗಿಡಕ್ಕೆ ವಿಶೇಷ ಸ್ಥಾನಮಾನ ಇದೆ.

ಫೋಟೋ ಕೃಪೆ : ಅಂತರ್ಜಾಲ
ಎಕ್ಕದ ಗಿಡದ ಮಹತ್ವದ ಏನು ?
- ಎಕ್ಕದ ಹೂವನ್ನು ಶಿವನಿಗೆ ಸಮರ್ಪಣೆ ಮಾಡುವುದರಿಂದ ಶಿವ ಸಂತಸಗೊಳ್ಳುತ್ತಾರೆ ಹಾಗೂ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ. ಅಷ್ಟೇ ಅಲ್ಲ ಮಂಗಳವಾರದ ದಿವಸದಂದು ಎಕ್ಕದ ಹೂವಿನ ಮಾಲೆಯನ್ನು ಗಣಪತಿಗೆ ಅರ್ಪಣೆ ಮಾಡುವುದರಿಂದ ಸರ್ವ ವಿಘ್ನಗಳು ಕೂಡ ಪರಿಹಾರ ಆಗುತ್ತದೆ ಎಂಬ ಆಚರಣೆ ಇದೆ.
- ಯಾವತ್ತಿಗೂ ಕೂಡ ಮನೆಯ ಬಲಭಾಗದಲ್ಲಿ ಈ ಎಕ್ಕದ ಗಿಡವನ್ನು ಬೆಳೆಸಬೇಕು ಎಂದು ಹೇಳಲಾಗುತ್ತದೆ. ಎಕ್ಕದ ಗಿಡದಲ್ಲಿ ವಿಷ್ಣು, ಲಕ್ಷ್ಮೀ, ಗಣಪತಿ ನೆಲೆಸಿರುತ್ತಾರೆ ಎಂಬ ನಂಬಿಕೆಯೂ ಸಹ ಇದೆ.
- ಎಕ್ಕದ ಗಿಡದ ಬೇರಿನಿಂದ ವಿಘ್ನೇಶ್ವರನ ಮೂರ್ತಿಯನ್ನು ಮಾಡಿಸಿ ಅದನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡುವುದರಿಂದ ಮನೆಗೆ ಉಂಟಾಗುವ ತೊಂದರೆಗಳು ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲ ಯಾರ ಜೀವನದಲ್ಲಿ ಕೇವಲ ಅಡೆತಡೆಗಳೆ ಆಗುತ್ತಿದೆ ಹಾಗೂ ಒಳ್ಳೆಯ ಕೆಲಸಗಳಿಗೆ ವಿಘ್ನ ಆಗುತ್ತಿದೆ, ಅಂಥವರು ಮನೆಯಲ್ಲಿ ಎಕ್ಕದ ಬೇರಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬಹುದು. ಎಕ್ಕದ ಬೇರಿನಿಂದ ಮಾಡಿದ ಗಣಪತಿಯ ಆರಾಧನೆ ಮಾಡುವುದಕ್ಕೆ ಶ್ರೇಷ್ಠವಾದ ದಿವಸ ಮಂಗಳವಾರದ ದಿವಸ ಆಗಿರುತ್ತದೆ.
- ಮೊದಲನೆಯ ಮಂಗಳವಾರ ಅಂದರೆ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿದ ಮೊದಲನೇ ಮಂಗಳವಾರ ಅಥವ ಪ್ರತಿಷ್ಠಾಪನೆ ಮಾಡಿದ ದಿವಸದಂದು ಗಣಪತಿಯ ಮೂರ್ತಿಗೆ ಅರಿಶಿಣವನ್ನು ಲೇಪ ಮಾಡಿ ಪೂಜೆಯನ್ನು ಸಮರ್ಪಣೆ ಮಾಡಬೇಕು. ದೀಪಾರಾಧನೆಯ ನಂತರ ಗಣಪತಿಯ ಮಂತ್ರವನ್ನು ಪಠಿಸಬೇಕು, ನಂತರ ಬರುವ ಮಂಗಳವಾರದ ದಿವಸದಂದು ಗಣಪತಿಯ ಮೂರ್ತಿಗೆ ಶ್ರೀಗಂಧವನ್ನು ಲೇಪನ ಮಾಡಿ ಪೂಜೆ ಸಲ್ಲಿಸಬೇಕು.
ಈ ರೀತಿ ಪೂಜೆಯನ್ನು ಗಣಪತಿಗೆ ಮಾಡುವುದರಿಂದ ಸರ್ವ ವಿಘ್ನಗಳು ನಿವಾರಣೆ ಆಗುತ್ತದೆ ಎಂಬ ನಂಬಿಕೆ ಮತ್ತು ಆಚರಣೆ ಇದೆ.

ಫೋಟೋ ಕೃಪೆ : ಅಂತರ್ಜಾಲ
ಔಷಧೀಯ ಗುಣಗಳು :
- ಎಕ್ಕದ ಯಾವುದೇ ಭಾಗವನ್ನಾಗಲಿ ಔಷಧರೂಪದಲ್ಲಿ ಸೇವನೆಗೆ ನೀಡಬೇಕಾದಲ್ಲಿ, ಆ ಭಾಗವನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿಕೊಂಡು ಉಪಯೋಗಿಸಬೇಕು.
- ಯಾವುದೇ ಬಗೆಯ ಜ್ವರವಿದ್ದರೆ, ಎಕ್ಕದ ಬೇರನ್ನು ನಿಂಬೇಹಣ್ಣಿನ ರಸದಲ್ಲಿ ಅರೆದು ಸೇವಿಸಿದರೆ ಉಪಶಮನವಾಗುತ್ತದೆ.
- ಚೇಳುಕಡಿದಲ್ಲಿ ಎಕ್ಕದ ಬೇರನ್ನು ತಣ್ಣೀರಿನಲ್ಲಿ ಅರೆದು ಕುಡಿಯಬೇಕು.
- ಕಫದಿಂದ ಕೂಡಿದ ಕೆಮ್ಮಿದ್ದರೆ, ಎಕ್ಕದ ಬೇರಿನ ತೊಗಟೆಯನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿಟ್ಟುಕೊಂಡು 5 ಚಿಟಿಕೆಯಷ್ಟನ್ನು ಜೇನುತುಪ್ಪದೊಂದಿಗೆ ಸೇರಿಸಿ ದಿನಕ್ಕೆ ಎರಡುಬಾರಿ ಸೇವಿಸಬೇಕು.
- ಮುಖದ ಮೇಲೆ ಕಪ್ಪು ಚುಕ್ಕೆಗಳಿದ್ದರೆ, (ಬಂಗು) ಎಕ್ಕದ ಬೇರನ್ನು ನಿಂಬೆರಸದಲ್ಲಿ ತೇದು ಅದಕ್ಕೆ ಸ್ವಲ್ಪ ಪುನುಗು ಸೇರಿಸಿ, ಲೇಪಿಸಿ ಮೃದುವಾಗಿ ಹಚ್ಚಿಕೊಳ್ಳಬೇಕು.
- ಅಂಗಾಲಿನಲ್ಲಿ ಮುಳ್ಳು ಸೇರಿಕೊಂಡಿದ್ದರೆ, ಮುಳ್ಳನ್ನು ನಿಧಾನವಾಗಿ ತೆಗೆದು ನಂತರ ಎಕ್ಕದ ಹಾಲನ್ನು ಆ ಜಾಗಕ್ಕೆ ಹಾಕುವುದರಿಂದ ಮುಳ್ಳಿನ ವಿಷದ ಬಾಧೆ ನಿವಾರಣೆಯಾಗುತ್ತದೆ.
- ‘ಮೂಲವ್ಯಾಧಿ,’ ಯಿಂದ ಬಳಲುವವರಿಗೆ ಎಕ್ಕದ ಹಾಲಿಗೆ ಅರಿಶಿನ ಬೆರೆಸಿ ಮೊಳಕೆಗಳಿಗೆ ಲೇಪಿಸುವುದರಿಂದ ಬೇಗ ಗುಣವಾಗುತ್ತದೆ.
- ಎಕ್ಕದ ಕಾಂಡವನ್ನು ಹಲ್ಲುಜ್ಜಲು ಬಳಸಬಹುದು ‘ಹಲ್ಲುನೋವಿಗೆ,’ ಇದು ಬಹಳ ಒಳ್ಳೆಯದು.
- ‘ಮೂತ್ರಕಟ್ಟಿದ್ದಲ್ಲಿ,’ ಎಕ್ಕದ ಎಲೆಗಳನ್ನು ಒಣಗಿಸಿ ನಯವಾಗಿ ಪುಡಿಮಾಡಿಟ್ಟುಕೊಂಡು 10ಗ್ರಾಂ ನಷ್ಟನ್ನು ಬಿಸಿನೀರಿನಲ್ಲಿ ಬೆರಸಿ ಕುಡಿಸುವುದರಿಂದ ‘ಮೂತ್ರವಿಸರ್ಜನೆ,’ ಸುಗಮವಾಗುತ್ತದೆ.
ಮೇಲಿಂದ-ಮೇಲೆ ಅಜೀರ್ಣದ ತೊಂದರೆ ಕಾಡುತ್ತಿದ್ದರೆ, ಎಕ್ಕದ ಬೇರಿನ ಭಸ್ಮವನ್ನು ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ, ಜೇನುತುಪ್ಪದೊಂದಿಗೆ ಸೇವಿಸತಕ್ಕದ್ದು. ‘ಗಾಯ,’ ಗಳಿಗೆ ಮತ್ತು ‘ವ್ರಣ,’ ಗಳಿಗೆ ಒಣಗಿಸಿದ ಎಲೆಯನ್ನು ಪುಡಿಮಾಡಿಟ್ಟುಕೊಂಡು ಸಿಂಪಡಿಸಬೇಕು. - ಮಹಿಳೆಯರಿಗೆ ‘ಮುಟ್ಟಿನ ಪ್ರಕ್ರಿಯೆ ಅನಿಯಮಿತವಾಗಿದ್ದಲ್ಲಿ,’ಎಕ್ಕದ ಹೂವು, ಬೆಲ್ಲ ಸೇರಿಸಿ, ಅರೆದು ಗುಳಿಗೆಮಾಡಿಕೊಂಡು, ದಿನಕ್ಕೆ 3-4 ಮಾತ್ರೆಯಂತೆ ಸೇವಿಸುವುದು ಉತ್ತಮ.
‘ಬಿಳಿಸೆರಗಿನಿಂದ ಬಳಲುತ್ತಿರುವ ಮಹಿಳೆಯರು’,ಎಕ್ಕದ ಹೂವನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡು ಒಂದು ಚಿಟಿಕೆ ಪುಡಿಯನ್ನು ಜೇನುತುಪ್ಪಕ್ಕೆ ಸೇರಿಸಿ 15 ದಿನಗಳ ವರೆಗೆ ಸೇವಿಸತಕ್ಕದ್ದು. - ಅಜೀರ್ಣವಿದ್ದರೆ ಎಕ್ಕದ 10 ಹೂಗಳಿಗೆ ಒಂದು ಚಿಟಿಕೆ ಉಪ್ಪು ಬೆರೆಸಿ ತಿನ್ನಬೇಕು. ಕ್ರಿಮಿಕೀಟಗಳು, ಕಜ್ಜಿ, ಊತ ಬಾಧಿಸುತ್ತಿದ್ದರೆ, ಎಕ್ಕದ ಹಾಲನ್ನು ಅದರ ಮೇಲೆ ಲೇಪಿಸಿದರೆ, ಉಪಶಮನ ದೊರೆಯುತ್ತದೆ.
- ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು.
