ಹಾಗೆ ತಿನ್ನಲು ರುಚಿಯಾಗಿರುವ ಕ್ಯಾರೆಟ್ ನಲ್ಲಿ ರಸಂ ಮಾಡಿದರೆ ಇನ್ನೂ ಸೂಪರ್. ಕ್ಯಾರೆಟ್ ರಸಂ ಮಾಡುವ ವಿಧಾನದ ಬಗ್ಗೆ ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಬೇಕಾಗುವ ಪದಾರ್ಥಗಳು :
- ಕ್ಯಾರೆಟ್ – 2
- ಟೊಮೆಟೊ – 2
- ಹಸಿಮೆಣಸಿನಕಾಯಿ – 3 ಮತ್ತು 4
- ಹುಣಸೆರಸ – ಸ್ವಲ್ಪ
- ಜೀರಿಗೆ – ಸ್ವಲ್ಪ
- ಕಾಳುಮೆಣಸು – ಸ್ವಲ್ಪ
- ಬೆಳ್ಳುಳ್ಳಿ – ಸ್ವಲ್ಪ
- ಸಾಸಿವೆ- ಸ್ವಲ್ಪ
- ಇಂಗು – ಸ್ವಲ್ಪ
- ಉಪ್ಪು – ರುಚಿಗೆ ತಕ್ಕಷ್ಟು
- ಸಕ್ಕರೆ – ಬೇಕಿದ್ದರೆ
- ಅರಶಿನ – ಸ್ವಲ್ಪ
- ಕೊತ್ತಂಬರಿ – ಸ್ವಲ್ಪ
- ಕರಿಬೇವು – ಸ್ವಲ್ಪ
ಮಾಡುವ ವಿಧಾನ :
ಮೊದಲಿಗೆ ಒಂದು ಪ್ಯಾನ್ ಗೆ ಕ್ಯಾರೆಟ್, ಮೆಣಸಿನಕಾಯಿ, ಟೊಮೆಟೊ ಬೇಯಲು ಹಾಕಿ ಎರಡರಿಂದ ಮೂರು ವಿಶಲ್ ಕೂಗಿಸಿಕೊಳ್ಳಿ. ಜೀರಿಗೆ, ಕಾಳು ಮೆಣಸು, ಬೆಳ್ಳುಳ್ಳಿ ಚೆನ್ನಾಗಿ ಕುಟ್ಟಿ ಪೇಸ್ಟ್ ಮಾಡಿಕೊಳ್ಳಿ ( ಮಿಕ್ಸಿಗೆ ಹಾಕಿದರೂ ಓಕೆ ). ಈಗ ಬೆಂದ ಕ್ಯಾರೆಟ್, ಟೊಮೆಟೊ, ಮೆಣಸಿನಕಾಯಿ ಚೆನ್ನಾಗಿ ಸ್ಮ್ಯಾಶ್ ಮಾಡಿಕೊಳ್ಳಿ.
ಒಂದು ಬಾಣಲಿಗೆ ಇಲ್ಲ ಅದೇ ಪ್ಯಾನ್ ಗೆ ಒಂದು ಸ್ಪೂನ್ ತುಪ್ಪ ಅಥವಾ ಎಣ್ಣೆ ಹಾಕಿ. ಸಾಸಿವೆ, ಇಂಗು, ಕರಿಬೇವು, ಒಂದು ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ ಕುಟ್ಟಿದ ಜೀರಿಗೆ, ಮೆಣಸು, ಬೆಳ್ಳುಳಿ ಹಾಕಿ ಹುರಿಯಿರಿ. ನೀರು, ಹುಣಸೆ ರಸ, ಅರಶಿನ , ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಬೇಕಾದರೆ ಹುರಿಯಿರಿ ಸ್ಪೂನ್ ಸಕ್ಕರೆ ಹಾಕಿ. ಕೊತ್ತಂಬರಿ ಸೊಪ್ಪು ಉದುರಿಸಿ.
ರುಚಿಯಾದ ಕ್ಯಾರೆಟ್ ರಸಂ ರೆಡಿ.
ಬಾಣಂತಿಯರಿಗೆ ಈ ರಸಂ ಕೊಡುವುದಾದರೆ ಹಸಿ ಮೆಣಸಿನಕಾಯಿ ಬದಲು ಒಣ ಮೆಣಸಿನ ಕಾಯಿ ಹಾಕಿ.
- ಶಕುಂತಲಾ ಸವಿ – ನಳಪಾಕ ಪ್ರವೀಣೆ, ಮೈಸೂರು.
