ಮಂಗಳಾ ಶಂಕರ್ ಅವರು ಕನ್ನಡ ನಾಡು, ನುಡಿಯ ಬಗ್ಗೆ ಬರೆದ ಒಂದು ಸುಂದರ ಲೇಖನವನ್ನು ತಪ್ಪದೆ ಮುಂದೆ ಓದಿ…
ಕನ್ನಡ ಕನ್ನಡ ಉಲಿಯಲು ಸೊಗಸು
ಹಳೆಗನ್ನಡವಾದರೇನ್
ಹೊಸಗನ್ನಡವಾದರೇನ್
ನಿನ್ನೊಲಿದೆ ಬಾವಗಳ ಮಹಾಪೂರ
ನಮ್ಮ ಭಾಷೆ ಬರೆಯಲು ಚೆಂದ
ನಮ್ಮ ಭಾಷೆ ಓದಲು ಅಂದ
ಕೇಳಲು ಕಿವಿಗಳಿಗಾನಂದ
ನುಡಿಯಲು ನಾಲಿಗೆಯೊಳು ಅಂದ
ಮನದ ಭಾವವ ಹೇಳಲು ಪದವಿದೆ
ಹಾಡಲು ಶೃುತಿಯಿದೆ ಕೇಳಲು ಇಂಪಿದೆ ಬರೆಯಲು ಸಾವಿರ ಪದಗುಚ್ಚಗಳಿವೆ
ಕುವೆಂಪು ಬೇಂದ್ರೆ ಕಾರಂತರೆ ಸ್ಪೂರ್ತಿ
ಕನ್ನಡ ನಾಡು ಚಿನ್ನದ ಬೀಡು
ಕವಿ ಕೋಗಿಲೆಗಳ ತವರೂರು
ಪಂಪ ರನ್ನ ಜನ್ನ ರುದಿಸಿದ ನಾಡು
ನಮ್ಮ ಈ ಚೆಲುವ ಕನ್ನಡ ನಾಡು
- ಮಂಗಳಾ ಶಂಕರ್ – ಮೈಸೂರು
