ವೃತ್ತಿ ಬದುಕಿನ ನಡುವೆ ಕೆಲವು ಹಾಸ್ಯಮಯ ಪ್ರಸಂಗಗಳು

ದಿನನಿತ್ಯ ಜಂಜಾಟದ ನಡುವೆ ಹಾಸ್ಯವೆಂಬ ಮನೆಮದ್ದನ್ನೇ ಮರೆತಿದ್ದೇವೆ. ಡಾ ಯುವರಾಜ್ ಹೆಗಡೆ ಅವರ ಅನುಭವದಲ್ಲಿ ನೆಡದ ಕೆಲವು ಹಾಸ್ಯ ಸನ್ನಿವೇಶಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಮಾಲೀಕ : ಡಾಕ್ಟ್ರೆ, ನಿನ್ನೆ ನಮ್ಮ ನಾಯಿಯ ಚರ್ಮ ರೋಗಕ್ಕೆ ಮಾತ್ರೆ ಕೊಟ್ರಲ್ಲ ,ಅದು ತಿನ್ನೋಕೆ ಕೇಳಲ್ಲ .ಅದು ತುಂಬಾ ಕಹಿ ಇರತ್ತಾ ಸಾರ್… ??
ನಾನು :  ಗೊತ್ತಿಲ್ಲಪ್ಪಾ … ನಾನ್ಯಾವತ್ತೂ ತಿಂದು ನೋಡಿಲ್ಲ.

*****

ಮಾಲೀಕ : ಡಾಕ್ಟ್ರೆ, ನಮ್ ದನಕ್ಕೆ ಕಳೆದ ಬಾರಿ ಇನ್ಸಮಿನೇಷನ್ ಮಾಡಿದ್ದು ಸೆಟ್ ಆಗಿಲ್ಲ. ಮತ್ತೆ ಬೆದೆಗೆ ಬಂದಿದೆ.
ನಾನು : ಸರಿ ಇವತ್ತು ಮತ್ತೆ ಮಾಡನ.
ಮಾಲೀಕ : (ಏರು ಧ್ವನಿಯಲ್ಲಿ) ಅಲ್ಲಾ ಸಾರ್, ಹೋದ್ವರ್ಷ ಒಂದೇ ಸಲಕ್ಕೆ ನಿಂತಿತ್ತಲ್ಲ.
ನಾನು : ( ಸಮಾಧಾನದಿಂದ) ಅದು ಹಾಗಲ್ವಪ, ನಾವು ಕೃತಕ ಗರ್ಭದಾರಣೆ ಮಾಡೋ ಸಮಯ, ನಿಮ್ಮ ದನದ ಆರೋಗ್ಯ, ನೀವು ಕೊಡುವ ಆಹಾರ,ಹೋರಿಯ ವೀರ್ಯದ ಗುಣಮಟ್ಟ ….ಹೀಗೆ ಮುಂತಾದ ಅಂಶಗಳು ಎಲ್ಲವೂ ಸೆಟ್ ಆಗಬೇಕು, ನಸೀಬು ಇರಬೇಕು.
ಮಾಲೀಕ : ಅದೆಲ್ಲಾ ಗೊತ್ತಿಲ್ಲ ಸಾ…. ಈ ಸಲ ಹಸ ಗಬ್ಬ ಆಗ್ತದೋ ಇಲ್ವೋ ಅದ್ಹೇಳಿ.
ನಾನು : ನಿಮಗೆ ಮದ್ವೆ ಆಗಿ ಎಷ್ಟು ಸಮಯ ಆದ್ಮೇಲೆ ಮಗು ಆಯ್ತು?
ಮಾಲೀಕ : ( ನಗುತ್ತ ) ಮೂರು ವರ್ಷ ಆದ್ಮೇಲೆ ಸಾ…. ಗೊತ್ತಾಯ್ತ್ ಬಿಡಿ ಸಾ….

*****

ನಾನು :
ರಂಗಣ್ಣ, ದನಕ್ಕೆ ಸರ್ಕಾರದ ಇನ್ಸೂರೆನ್ಸ್ ಮಾಡಿಸಿ, ಭದ್ರತೆ ಇರತ್ತೆ.
ಮಾಲೀಕ : ಸಾರ್… ಹೋದ್ವರ್ಷ ಮಾಡ್ಸಿದ್ದು ಏನೂ ಉಪಯೋಗ ಆಗ್ಲಿಲ್ಲ. ಈ ವರ್ಷ ಏನಾದ್ರೂ ಬೆನಿಫಿಟ್ ಸಿಗೋದಾದ್ರೆ ಮಾಡಿಸ್ತೀನಿ.

*****
ಮಾಲೀಕ : ನಾಯಿಗೆ ಹೊಟ್ಟೆ ಹುಳಕ್ಕೆ ಮಾತ್ರೆ ಹಾಕಿ ಇವತ್ತಿಗೆ ಸರಿಯಾಗಿ ಮೂರು ತಿಂಗಳಾಯ್ತು.ಪ್ರತಿ ಮೂರು ತಿಂಗಳಿಗೆ ನಾನು ಯಾವತ್ತೂ ತಪ್ಸಲ್ಲ ಸಾರ್.
ನಾನು : ಹೌದ, ವೆರಿಗುಡ್. ನೀವು ಕೂಡ ಜಂತಿಗೆ ಔಷಧಿ ತಗೋತೀರ ತಾನೆ?
ಮಾಲೀಕ : ಅದಾ ಸಾ…, ನಾನು ಐದನೇ ತರಗತಿಯಲ್ಲಿದ್ದಾಗ ನಮ್ಮಪ್ಪ ಕೊಟ್ಟಿದ್ದೇ ಲಾಸ್ಟು. 35 ವರ್ಷ ಆಗಿರಬಹುದು.

*****

ಗುಂಡಾಡಿ ಗುಂಡ :
ಸಾರ್, ನಮ್ಮನೆ ಹೋರಿ ಮನೆಗೆ ಸರಿಯಾಗಿ ಬರಲ್ಲ. ಅದರ ಬೀಜ ಕಸಿ ಮಾಡಿಕೊಡ್ತೀರ
ನಾನು : ಹೋರಿಗೂ, ನಿನಗೂ ಅವತ್ತೇ ಮಾಡಿಕೊಡ್ತೀನಿ

*****

ಮಾಲೀಕ :
ಸಾರ್, ನಮ್ ಜರ್ಸಿ ಮಣಕ ಬೇಗ ದಪ್ಪ ಆಗಂಗೆ ಇಂಜಕ್ಷನ್ ಕೊಡಿ
ನಾನು : ಆ ತರ ಔಷಧಿ ಇದ್ದಿದ್ರೆ ಮೊದಲಿಗೆ ನಾನೆ ಕೊಟ್ಗೋತಾ ಇದ್ದೆ

*****

ಮಾಲೀಕ : ಸಾರ್, ನಮ್ಮನೆಯವಳು ಕೈ ಮುರ್ಕೊಂಡು ಮಣಿಪಾಲಕ್ಕೆ ಹೋಗಿ ರಾಡ್ ಹಾಕಿಸ್ಕೊಂಡು ಬಂದ್ವಿ.
ನಾನು : ಹೌದ, ಮತ್ತೆ ಇಲ್ಯಾಕಪ್ಪ ಕರ್ಕೊಂಡು ಬಂದೆ? ಅವರಿಗೆ ರೆಸ್ಟ್ ಬೇಕಪ. ಮನೇಲಿ ಇರೋದಲ್ವ

ಮಾಲೀಕ : ಅದೇ ಸಾ, ನಮ್ಮನೆ ಕುನ್ನಿಗೆ ಕಾಲು ಮುರ್ಕೊಂಡಾಗ ನೀವು ರಾಡ್ ಹಾಕಿ ಗುಣ ಮಾಡಿರಲಿಲ್ವ.
ನಾನು : ಹಂ… ಅದಕ್ಕೇನಿವಾಗ!!!
ಮಾಲೀಕ : ನೀವು ಒಂದು ಸಲ ನೋಡಿದ್ರೆ ನಂಗೆ ಧೈರ್ಯ ಸಾರ್

*****

ಮಾಲೀಕನ ಹೆಂಡತಿ : ಸಾರ್, ನಮ್ಮನೆ ದನ ವೀರ್ಯ ತಿಂದು ಒದ್ದಾಡ್ತಿದೆ.
ನಾನು : ಏನು ಇನ್ನೊಂದು ಸಲ ಹೇಳಿ ( ಆಶ್ಚರ್ಯದಿಂದ)
ಮಾಲೀಕ : ಏ ಥೂ, ಹೋಗತ್ಲಾಗೆ … ( ಟವಲ್ ನಲ್ಲಿ ಮುಖ ಮುಚ್ಚಿಕೊಂಡು) ಸಾರ್, ಅದು ಗದ್ದೆಗೆ ಹಾಕಕ್ಕೆ ತಂದ ಒಂದು ಮುಷ್ಟಿ “ಯೂರಿಯಾ” ತಿಂದಿದೆ.

*****

ಅಸಿಸ್ಟೆಂಟ್ : ಸಾರ್ ಕುರಿ ಪೋಸ್ಟ್ ಮರ್ಟಮ್ ಮಾಡ್ತೀರಲ , ಬಾಡಿ ಅವರಿಗೇ ಕೊಡಬೇಕ?
ನಾನು : ಮತ್ತೇನು ಇಲ್ಲೇ ಹೂತಾಕ್ತೀಯ
ಅಸಿಸ್ಟೆಂಟ್ : ( ನಗುತ್ತಾ) ಇಲ್ಲಾ ಸಾರ್, ಗುಡ್ಡೆ ಮಾಂಸ ಮಾಡಂಗಿಲ್ವ..


  • ಡಾ ಯುವರಾಜ್ ಹೆಗಡೆ (ಪಶುವೈದ್ಯರು, ತೀರ್ಥಹಳ್ಳಿ)

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW