ಕೊತ್ತಂಬರಿ ಸೊಪ್ಪಿನ ಗೊಜ್ಜು… – ವಸುಧಾ ಪ್ರಭು

ನಳಪಾಕ ಪ್ರವೀಣೆ ವಸುಧಾ ಪ್ರಭು ಅವರು ಕೊತ್ತಂಬರಿ ಸೊಪ್ಪಿನ ಗೊಜ್ಜು ಮಾಡುವುದು ಹೇಗೆ ಎನ್ನುವುದನ್ನು ಹೇಳಿಕೊಟ್ಟಿದ್ದಾರೆ, ತಪ್ಪದೆ ಮಾಡಿ, ರುಚಿ ನೋಡಿ ಹೇಳಿ …

ಬೇಕಾಗುವ ಸಾಮಾಗ್ರಿಗಳು :

ಒಂದು ಕಟ್ಟು ಕೊತ್ತಂಬರಿ ಸೊಪ್ಪು,
ಐದು ಬ್ಯಾಡಗಿ ಕೆಂಪು ಮೆಣಸಿನಕಾಯಿ
ದೊಡ್ಡ ತುಂಡು ಬೆಲ್ಲ
ಎರಡು ನಿಂಬೆಗಾತ್ರದಷ್ಟು ಹುಳಿ
ಒಗ್ಗರಣೆಗೆ ಸ್ವಲ್ಪ ಎಣ್ಣೆ
ಸಾಸಿವೆ ಕರಿಬೇವಿನ ಸೊಪ್ಪು

ಮಾಡುವ ವಿಧಾನ :
ಮಿಕ್ಸಿಯಲ್ಲಿ ಕೊತ್ತಂಬರಿ ಸೊಪ್ಪನ್ನು ಚೂರು ಮಾಡಿ (ತುಂಡು) ಹಾಕಿ, ಅದಕ್ಕೆ ರುಚಿ ಬೇಕಾಗುವಷ್ಟು ಉಪ್ಪು, ಬೆಲ್ಲ, ಮೆಣಸಿನಕಾಯಿ ಹುಣಸೇ ಹಣ್ಣು ಹಾಕಿ ನಯವಾಗಿ ಕಡೆಯಿರಿ, ನಂತರ ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ.. ಬಾಯಿರುಚಿಗೆ ಒಳ್ಳೆಯದು, ರೊಟ್ಟಿ, ಚಪಾತಿಗೂ ಸೈ.


  • ಕೈ ಚಳಕ : ವಸುಧಾ ಪ್ರಭು (ಲೇಖಕಿ, ನಳಪಾಕ ಪ್ರವೀಣೆ), ಮುಂಬೈ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW