‘ದಾಸಿ’ ಕವನ – ಚನ್ನಕೇಶವ ಜಿ ಲಾಳನಕಟ್ಟೆ



ನೊಂದ ಹೆಣ್ಣು (ವೈಶ್ಯ) ಅನುಭವಿಸುವ ನೋವನ್ನು ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಒಂದು ಕವಿತೆಯಲ್ಲಿ ಕಟ್ಟುಕೊಟ್ಟಿದ್ದಾರೆ, ಮುಂದೆ ಓದಿ….

ಹಾದರದಲಿ ಹೆಣ್ಣೊಬ್ಬಳು
ಹಾಲ್ಧಾರೆಯ ಹರಿಸಿ
ತನ್ಮಕ್ಕಳ ಸಾಕಿಹಳು
ವಿಧಿಬರಹವ ಶಪಿಸಿ

ಹೊರೆ ಬಳಗವ ತೊರೆದೋಡುತ
#ಪ್ರೀತಿಯಲಿ ಬಿದ್ದು
ಅದರಾಳಕೆ ಇಳಿದೇಳೆಲು
ಮಿಂದ್ಹೋದನು ಎದ್ದು

ಅವನಿಳಿಸಿಹ ರೇತಸ್ಸಿಗೆ
ತಾಯಾದಳು ಅಬಲೆ
#ನವಮಾಸವು ತುಂಬುತ್ತಿರೆ
ಹೆಣ್ ಹೆತ್ತಳು ಸಬಲೆ

ತನ್ನೊಡಲಲಿ ನೋವುಣ್ಣುತ
ಹಸುಗೂಸಿಗೆ ತುಪ್ಪ
ಬೆನ್ನೆಲುಬಿಗೆ ನಿಂತಿರುವಳು
ತಾನಾಗುತ ಅಪ್ಪ

ಮಗುವಾಡುತ ಕೇಳ್ಕೇಳಲು
ಹೆತ್ತಪ್ಪನು ಯಾರು
ಬಾಯ್ತಪ್ಪಿಯು ಇವಳೇಳಳು
ಉಂಡಿರುವ ನೋವು

ಜಗದೊಳಗಡೆ ಇವಳೊಬ್ಬಳು
ಮೈಎರೆಯುವ ದಾಸಿ
ಇವಳೊಳಗಡೆ ಇಳಿದುಳಿದಿರೊ
ಬರೆನೋವಿನ #ರಾಶಿ

ಮಳೆಬೀಳಲಿ ಇವಳಾಳಕೆ
ತಂಬೆಲರನು ಸೂಸಿ
ನೋವೆಲ್ಲವು ನಲಿವಾಗಲಿ
ತಾಯ್ಮನವನು ಹರಸಿ.


  • ಚನ್ನಕೇಶವ ಜಿ ಲಾಳನಕಟ್ಟೆ  (ಕವಿಗಳು, ಲೇಖಕರು) ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW