ಮುಂಬೈನ ‘ಧಾರಾವಿ’ ಕತ್ತಲ ಬದುಕು

ಇದು ವಿದೇಶಿಯರ ನೆಚ್ಚಿನ ಸ್ಥಳ ಮುಂಬೈಗೆ ಬಂದವರೆಲ್ಲ ಈ ಪ್ರದೇಶ ನೋಡದೆ ಹೋಗಲು ಸಾಧ್ಯನೆಯಿಲ್ಲ. ಈ ಪ್ರದೇಶ ತೋರಿಸಲು ಮುಂಬೈನಲ್ಲಿ ಗೈಡ್ ಗಳು ಸಿಗುತ್ತಾರೆ. ಅಷ್ಟೊಂದು ಫೇಮಸ್ ಆಗಿದೆ ಈ ಪ್ರದೇಶ. ಯಾವುದು ಆ ಸ್ಲಂ ಪ್ರದೇಶ. ಮುಂದೆ ಓದಿ…

ಫೋಟೋ ಕೃಫೆ : BBC

ಈ ಕೊಳಗೇರಿ ಪ್ರದೇಶ ಇಡೀ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಭಾರತದ ವಾಣಿಜ್ಯ ನಗರಿ ಮುಂಬೈ ನಲ್ಲಿ ಬದುಕು ಕಟ್ಟಿಕೊಳ್ಳದ ಜನ ಇಲ್ಲ,ಮಾಡದ ಉದ್ಯೋಗ ಇಲ್ಲ ಇಡೀ ಭಾರತದ ಬೇರೆ ಬೇರೆ ಜನ ಇಲ್ಲಿ ಜೀವನ ನಡೆಸುತ್ತಿದ್ದಾರೆ. ಇಂತಹ ಬೃಹತ್ ನಗರದಲ್ಲಿರುವ ಪ್ರದೇಶವೇ ಈ “ಧಾರಾವಿ”.



ಜಗತ್ತಿನ ಅತಿ ದೊಡ್ಡ ಕೊಳಚೆ ಪ್ರದೇಶ ಅಂತ ಗುರುತಿಸಿಕೊಂಡಿರುವ ಇದು ವರ್ಷಕ್ಕೆ ಆರನೂರಾ ಐವತ್ತ ರಿಂದ ಒಂದು ಬಿಲಿಯನ್ ಡಾಲರ್ ನಷ್ಟು ವ್ಯಾಪಾರ ಮಾಡುತ್ತೆ. ಈ ಪ್ರದೇಶದಲ್ಲಿ ಸುಮಾರು ಐದು ಸಾವಿರ ಗೃಹ ಕೈಗಾರಿಕೆಗಳಿವೆ.ಈ ಕೊಳಚೆ ಪ್ರದೇಶ ೨.೧ ಚದುರ ಕಿಲೋಮೀಟರ್ ವಿಸ್ತೀರ್ಣ ದಲ್ಲಿದೆ. ಇಲ್ಲಿ ಹನ್ನೆರಡು ಲಕ್ಷ ಜನ ವಾಸಿಸುತ್ತಾರೆ ಇದು ವಿಶ್ವದ ಅತಿ ಹೆಚ್ಚು ಜನ ಸಾಂದ್ರತೆ ಹೊಂದಿರುವ ಸ್ಥಳ ಎಂದು ಗುರುತಿಸಲಾಗಿದೆ. ಇದರಲ್ಲಿ ಎರಡು ಭಾಗಗಳಿವೆ, ಒಂದು ಕಮರ್ಷಿಯಲ್ ಧಾರಾವಿ, ಇನ್ನೊಂದು ರೆಸಿಡೆನ್ಸಿಯಲ್ ಧಾರಾವಿ. ಸ್ವಚ್ಛತೆ ಹಾಗೂ ಧಾರಾವಿಗೆ ಒಂದಿಷ್ಟು ಸಂಬಂಧವಿಲ್ಲ. ಚಿಕ್ಕ ಚಿಕ್ಕ ಗಲ್ಲಿಗಳು,ಗುಡಿಸಲುಗಳು,ಮಧ್ಯೆ ಮಧ್ಯೆ ಹರಿಯುವ ಚರಂಡಿಗಳು,ಕಾಲಿಟ್ಟಕಡೆಯಲ್ಲ ಕೊಳಕಿನ ನಡುವೆ ಲಕ್ಷಾಂತರ ಜನ ವಾಸಮಾಡುತ್ತಿದ್ದಾರೆ. ಇದೆಕ್ಕೆಲ್ಲ ಕಾರಣ ಇಲ್ಲಿನ ಮನೆಗಳಿಗೆ ಇರುವ ಕಡಿಮೆ ಭಾಡಿಗೆ. ಮುಂಬೈ ನಗರದಲ್ಲಿ ಕಡಿಮೆ ಭಾಡಿಗೆಯಂದರೆ ೨೦ರಿಂದ೩೦ ಸಾವಿರ,ತಿಂಗಳಿಗೆ ೨೦ರಿಂದ ೩೦ ಸಾವಿರ ಅದಾಯವಿರುವ ಕಾರ್ಮಿಕರಿಗೆ,ಕೂಲಿ ಮಾಡುವರಿಗೆ,ಅಂಗಡಿಯಲ್ಲಿ ಕೆಲಸ ಮಾಡುವವರಿಗೆ ಅಷ್ಟೊಂದು ಭಾಡಿಗೆ ಕೊಡಲು ಸಾಧ್ಯವಿಲ್ಲ ಹಾಗಾಗಿ ಇಂಥವರು ಈ ಧಾರಾವಿಯನ್ನ ಅವಲಂಬಿಸಿದ್ದಾರೆ.

ಫೋಟೋ ಕೃಫೆ : financialexpress

ಮುಂಬೈನಲ್ಲಿ ಮನುಷ್ಯ ಯಂತ್ರದ ಹಾಗೆ ದುಡಿಯುತ್ತಾನೆ. ಇವರ ಬಹುತೇಕ ಸಮಯ ಇವರು ಕೆಲಸ ಮಾಡುವ ಸ್ಥಳಗಳಲ್ಲಿ, ಲೋಕಲ್ ಟ್ರೆನ್ ಗಳಲ್ಲಿ ಕಳೆದುಹೋಗುತ್ತೆ, ಹೀಗಾಗಿ ರಾತ್ರಿ ಮಲಗಲು ಮಾತ್ರ ಸ್ಥಳ ಸಿಕ್ಕರೆ ಸಾಕು ಅದು ಇಲ್ಲಿ ಕೇವಲ ಮೂರು ನಾಲ್ಕು ಸಾವಿರ ರೂಪಾಯಿಗಳಲ್ಲಿ ಸಿಗುತ್ತದೆ. ಹೀಗಾಗಿ ಧಾರಾವಿ ತನ್ನ ಒಡಲತುಂಬಾ ಕಾರ್ಮಿಕರನ್ನು ಇಟ್ಟುಕೊಂಡ ಪುಟ್ಟ ಭಾರತ. ಇಲ್ಲಿ ಜಾತಿ,ಮತ,ಭಾಷೆ,ಬಣ್ಣಗಳ ಹಂಗಿಲ್ಲ ಇಲ್ಲಿ ದೇವಾಲಯಗಳಿವೆ,ಮಸೀದಿಗಳಿವೆ. ಚರ್ಚಗಳೂ ಇವೆ ಹೀಗೆ ಎಲ್ಲ ಕೋಮಿನ ಜನ ಬಂದು ಇಲ್ಲಿ ನೆಲೆಸೋದಕ್ಕೆ ಶುರುಮಾಡಿ ೧೪೦ವರ್ಷಗಳೇ ಕಳೆದಿವೆ.



ಅಯ್ಯೋ… ಈ ಧಾರಾವಿ ಬಗ್ಗೆ ಈಗ ಯಾಕೆ ಚರ್ಚೆ ಅಂತೀರಾ..? ಅದಕ್ಕೆ ಕಾರಣ ಕೋವಿಡ್ ಸೋಂಕು, ಭಾರತದಲ್ಲಿ ಎಲ್ಲೆಡೆ ಹಬ್ಬಿರುವ ಈ ಸೋಂಕು ಮುಂಬೈ ಹಾಗೂ ಪುಣೆಯಲ್ಲಿ ಸಾಕಷ್ಟು ಆತಂಕವನ್ನು ಸೃಷ್ಟಿ ಮಾಡಿದೆ. ನಾವು ದೂರ ದೂರ ಮನೆ ಇರುವವರೆ ಈ ಸೋಂಕಿಗೆ ತತ್ತರಿಸಿ ಹೋಗಿದ್ದೇವೆ .ಅಂತದ್ರಲ್ಲಿ ಧಾರಾವಿ ಎಂಬ ಪ್ರದೇಶದಲ್ಲಿ ಇದು ಹಬ್ಬಿದರೆ ಭಾರತದ ಪರಿಸ್ಥಿತಿ ಊಹಿಸಲು ಸಾಧ್ಯವಿಲ್ಲ. ಧಾರಾವಿ ಪ್ರದೇಶದವರಿಗೆ ಇದೇನೂ ಹೊಸದೆನಲ್ಲ.

ಫೋಟೋ ಕೃಫೆ : thecinnamonroll  (‘ಸಲಾಂ ಬಾಂಬೆ’ ಚಿತ್ರದ ಒಂದು ದೃಶ್ಯ)

೧೭೮೬ರಲ್ಲಿ ಇಲ್ಲಿಗೆ ಅಕ್ರಮಿಸಿದ ಪ್ಲೇಗ್ ನಿಂದ ಇಲ್ಲಿನ ಅರ್ಧದಷ್ಟು ಜನ ಸಾವನ್ನಪ್ಪಿದ್ದರು. ಆದರೆ ಕರೊನಾ ಮಹಾಮಾರಿ ಇಲ್ಲಿ ಅಕ್ರಮಿಸಿದರೆ ಪೂರ್ತಿ ಮುಂಬೈ ನಗರ ಮರಣದ ಮಹಾ ಉತ್ಸವ ನೋಡುವ ಪರಿಸ್ಥಿತಿ ಬರಬಹುದು ಹಾಗಾಗಿ ಇಲ್ಲಿರುವ ಸರ್ಕಾರಕ್ಕೆ ಇದು ತಲೆನೋವಾಗಿದಂತೂ ಸುಳ್ಳಲ್ಲ. ಇಲ್ಲಿ ಅನೇಕ ಸಿನಿಮಾಗಳ ಚಿತ್ರೀಕರಣ ನಡೆದಿದೆ ಅವುಗಳಲ್ಲಿ ಮುಖ್ಯವಾದುವು “ದಿವಾರ್” “ಸಲಾಂ ಬಾಂಬೆ” “ಸ್ಲಾಮ್ ಡಾಗ್ ಮಿಲೇನಿಯರ್” ಹಾಗೂ ತಮಿಳಿನ “ನಾಯಗನ್” ಮತ್ತು “ಕಾಲಾ”.

ಇಂತಹ ಧಾರಾವಿಯಲ್ಲಿ ಹೆಚ್ಚು ಸಮಸ್ಯೆ ಆಗದಿರಲಿ ಎಂದು ನಾವೆಲ್ಲರೂ ಪ್ರಾರ್ಥನೆ ಮಾಡೋಣ.


  • ರಾಘವೇಂದ್ರ ಇನಾಮದಾರ, ಹುಬ್ಬಳ್ಳಿ

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading