೧೭೬ ಮಿಲಿಯನ್ ವರ್ಷಗಳಿಂದ ಬದುಕಿದ್ದ ದೈತ್ಯ ಡೈನೋಸಾರುಗಳು ಅವುಗಳು ಪ್ರಕೃತಿಗೆ ಏನು ತೊಂದರೆ ಮಾಡದಿದ್ದರೂ ಅವು ನಾಶವಾಗಿ ಹೋದವು.ದೈತ್ಯ ಡೈನೋಸಾರುಗಳ ಬಗ್ಗೆ ಡಾ.ಎನ್.ಬಿ.ಶ್ರೀಧರ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಈಗ ಭೂಮಂಡಲವನ್ನು ಮಾನವ ಆಳುತ್ತಿದ್ದಾನೆ. ಆತನೇ ಸಧ್ಯ ಭೂಮಿಗೆ ಅನಭಿಷಿಕ್ತ ದೊರೆ. ತನ್ನ ಮೆದುಳಿನ ಶಕ್ತಿಯಿಂದ ಇತರ ಎಲ್ಲಾ ಜೀವಿಗಳನ್ನು ತನ್ನ ಬಂಧಿಯಾಗಿಸಿಕೊಂಡು ಸುಖಭೋಗಗಳನ್ನು ಅನುಭವಿಸುತ್ತಿದ್ದಾನೆ. ಮನುಷ್ಯನು ಎಂದೂ ಈ ಭೂಮಿಯ ಮೇಲೆ ಶಾಶ್ವತನಲ್ಲ. ಆತನದೂ ಸಹ ಒಂದಲ್ಲ ಒಂದು ದಿನ ಅವಸಾನ ಬಂದೇ ಬರುತ್ತದೆ.
ಸುಮಾರು ೧೭೬ ಮಿಲಿಯನ್ ವರ್ಷಗಳ (೧೭.೬ ಕೋಟಿ) ವರ್ಷಗಳ ಹಿಂದೆ ಈ ಭೂಮಿಯನ್ನು ಮಹಾರಾಜರುಗಳ ತರ ಆಳಿದ “ಡೈನೋಸಾರು”ಗಳು ಇಂದು ಇಲ್ಲವೇ ಇಲ್ಲ. ಹಾಗಿದ್ದರೆ ಡೈನೋಸಾರುಗಳು ಇದ್ದಕ್ಕಿದ್ದ ಹಾಗೆ ಮಾಯವಾದವೇ? ಮತ್ತೆ ಬರುತ್ತವೆಯೇ? ಇತ್ಯಾದಿ ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಿದೆ.

ಫೋಟೋ ಕೃಪೆ : google
ಅರ್ಜೆಂಟೈನಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಮಂಗೋಲಿಯಾ, ದಕ್ಷಿಣ ಆಫ್ರಿಕಾ, ಸ್ಪೇನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಅಮೇರಿಕಾ ಹೀಗೆ ಪ್ರಪಂಚದ 51 ದೇಶಗಳಲ್ಲಿ ಕಂಡುಬಂದವು. ಅತ್ಯಂತ ಹೆಚ್ಚಿನ ಸಂಖ್ಯೆಯ ಡೈನೋಸಾರುಗಳು ಉತ್ತರ ಅಮೇರಿಕಾ, ಚೈನಾ ಮತ್ತು ಅರ್ಜೆಂಟೈನಾದಲ್ಲಿದ್ದವು. ಭಾರತದ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂದ್ರಪ್ರದೇಶ ಮತ್ತು ಗೋದಾವರಿ ನದಿ ತೀರದಲ್ಲಿ ಕಂಡುಬಂದವು. ತಮಿಳುನಾಡಿನ ಕೆಲ ಭಾಗಗಲ್ಲಿ ಡೈನೋಸಾರುಜಗಳು ಇದ್ದವು.
ಆ ಕಾಲದ ಡೈನೋಸಾರುಗಳು ಕಡಿಮೆ ಗಾತ್ರ ಮತ್ತು ಎತ್ತರ ಹೊಂದಿದ್ದು ಪ್ರಥಮ ಡೈನೋಸಾರಿನ ಹೆಸರು ‘ಎರಾಪ್ಟರ್’ ಎಂದಾಗಿದ್ದು ಇದು 2 ಮೀಟರ್ ಉದ್ದ ಮತ್ತು 25 ಕಿಲೋ ತೂಕದ್ದಾಗಿತ್ತು ಮತ್ತು ಎಲ್ಲಾ ಡೈನೋಸಾರುಗಳ ಮೂಲ “ಪುರುಷ”ನಾಗಿತ್ತು. ನಂತರ ಸುಮಾರು 40 ಮಿಲಿಯನ್ ವರ್ಷಗಳ ನಂತರ ಅವುಗಳ ವಿಕಾಸವಾಗಿ ಅವುಗಳ ದೇಹದ ತೂಕ ಮತ್ತು ಗಾತ್ರವೂ ಸಹ ಬದಲಾಗಿ ದೈತ್ಯ ಡೈನೋಸಾರುಗಳ ಉದಯವಾಯಿತು.

ಫೋಟೋ ಕೃಪೆ : google
ಡೈನೋಸಾರುಗಳು ಬೃಹದಾಕಾರವಾಗಿ ಬೆಳೆದು 70 ಕಿಮಿ/ಗಂಟೆ ವೇಗದಲ್ಲಿ ಓಡಿ ಗಾಳಿಯಲ್ಲಿ ಹಾರಲೂ ಶಕ್ತವಾಗಿದ್ದವು. ಕ್ವಿಟ್ಜಲ್‍ಕೋಆಟಸ್ ಎಂಬ ಡೈನೋಸಾರುಗಳು ಅತ್ಯಂತ ಭಾರದ ಹಾರುವ ಪ್ರಾಣಿಗಳಾದವು. ಈ ಕಾಲ ಡೈನೋಸಾರುಗಳ ಯುಗದಲ್ಲಿಯೇ ಸುವರ್ಣಕಾಲ. ಬಹುತೇಕ ಡೈನೋಸಾರುಗಳು ಮಾಂಸಾಹಾರಿಗಳಾಗಿ ತಮಗಿಂತ ಚಿಕ್ಕ ಡೈನೋಸಾರುಗಳನ್ನು ಅಥವಾ ಸಸ್ಯಗಳನ್ನು ಸೇವಿಸಿಕೊಂಡು ಈಗ ಮನುಷ್ಯನಂತೆ ಆಗಿನ ಕಾಲದಲ್ಲಿ ಆರಾಮವಾಗಿ ಭೂಮಿಗೆ ಮನುಷ್ಯರು ಈಗ ಹೇಗೋ ಹಾಗೆ ಭೂಮಿಗೆ ಅನಭಿಷಿಕ್ತ ದೊರೆಗಳಾಗಿದ್ದವು.
೧೭೬ ಮಿಲಿಯನ್ ವರ್ಷಗಳಿಂದ ಬದುಕಿದ್ದ ದೈತ್ಯ ಡೈನೋಸಾರುಗಳು ಅವುಗಳು ಪ್ರಕೃತಿಗೆ ಏನು ತೊಂದರೆ ಮಾಡದಿದ್ದರೂ ಅವು ನಾಶವಾಗಿ ಹೋದವು. ಮನುಷ್ಯನ ಉಗಮವಾಗಿ ಈಗ ಕೇವಲ 3 ಲಕ್ಷ ವರ್ಷಗಳು ಮಾತ್ರವಾಗಿದ್ದು ಈಗಾಗಲೇ ಪ್ರಕೃತಿಗೆ ಸಾಕಷ್ಟು ಧಕ್ಕೆ ತಲುಪಿಸಿರುವುದರಿಂದ ಆತನ ಅವಸಾನ ಬಹಳ ಹತ್ತಿರದಲ್ಲಿಯೇ ಇದೆ.
ಮಹಾದೈತ್ಯಜೀವಿಗಳು ಈಗ ಪಳಿಯುಳಿಕೆ ಮಾತ್ರ. ಜಗತ್ತಿನ ತುಂಬಾ ತುಂಬಿಹೋಗಿದ್ದ ಡೈನೋಸಾರುಗಳು ಹೇಗೆ ಅವಸಾನಗೊಂಡವು?
- ಡಾ.ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.
