ಒಂದೆಡೆ ಯುವ ಜನತೆ ಪಾಶ್ಚ್ಯಾತ್ಯ ಶೈಲಿಗೆ ಒಗ್ಗಿಕೊಳ್ಳುತ್ತಿದೆ, ಇನ್ನೊಂದೆಡೆ ದಾಂಪತ್ಯ ಗೀತೆ ವಿಚ್ಛೇದನ ಮೂಲಕ ಅಂತ್ಯ ಕಾಣುತ್ತಿದೆ ಎನ್ನುವುದು ಬೇಸರದ ಸಂಗತಿ…ಕವಿ ಖಾದರ ಅವರು ‘ವಿಚ್ಛೇದನ’ ಕವನ ಓದಿ..ನಿಮ್ಮ ಅಭಿಪ್ರಾಯ ತಿಳಿಸಿ…
ಸಾಗರದ ಕಷ್ಟವ ಉಂಡು ಮಾನೆಯೊಳಗಿದ್ದೆ ನಾ
ಕರೆದ ಸದ್ದಾಯಿತು ಹೊರ
ಕಂಬನಿ ಬತ್ತಿ ಹೋಗಿದ್ದ ಕಣ್ಣಲಿ
ಬಂದವನು ಯಮನಂತೆ ಕಂಡ
ಆ ಕ್ಷಣದಿ ಯೋಚನೆಯ ಲಹರಿಯು
ಬಹುದೂರ ಸಾಗಿತ್ತು
ಕಣ್ಣು ಕುಕ್ಕುವ ತೇಜಸ್ಸು ಜಗ ಮರೆಸುವ
ಸೌಂದರ್ಯ ಉಳ್ಳವಳು ನಾನಾಗಿದ್ದೆ
ಋಣವಿದ್ದ ಸಾಹುಕಾರ ಕರೆತಂದಿದ್ದ
ಸಂಬಂಧಿಗಳ ಸಂಬಂಧ ಹೂಡಲು
ಅದೇನನ್ನೋ ಬೇಡವೆಂದು ಅಂದವ
ಮೆಚ್ಚಿ ಬರಿಗೈಲಿ ದಾರವ ಕಟ್ಟಿದ
ನಗುಮುಖದೀ ನಾಟಕವಾಡಿ ಇರುವ
ಯವ್ವನವ ಹಿಂಡಿಹಾಕಿದ್ದ
ವಯಸ್ಸಿನ ಪರದಿಯು ಸರಿದು
ವಿರೂಪವಾದಾಗ ತುಂಬಿ ತರಲು ಹೇಳಿದ
ಧನವ ಹೊತ್ತು ತರಲು ಹೇಳಿ
ದನದ ರೀತಿ ಬಡಿದು ಕಳಿಹಿಸಿದ್ದ
ದಿನದ ಕೂಳಿಗೆ ಕೂಗಾಡುತ್ತಿದ್ದ ನನ್ನವರಿಗೆ
ಅವನ ಚೀಲ ತುಂಬುವುದು ಭಾರವಾಗಿತ್ತು
ವಜ್ರದ ಯವ್ವನವ ಒಡೆದು ಹಾಕಿದ್ದ
ಮೌಲ್ಯವಿಲ್ಲದ ಮುತ್ತಾಗಿದ್ದೆ ನಾ
*ಎಚ್ಚರವಾಯಿತು*
ಹೊರಬಂದವನ ಕಡೆ ನಡೆದೆ
ಮುಚ್ಚಿದ ಲಕ್ಕೋಟೆಯಲ್ಲಿ ಪತ್ರವಂದಿತ್ತು
ತೆರೆದು ನೋಡಿದೆ ಸಾವನ್ನು ಕಂಡತಾಯಿತು
ಅದರಲಿತ್ತು divorce divorce divorce
- ಖಾದರ್ ಎ ಕೆ (ಯುವ ಕವಿ, ಬರಹಗಾರರು)
