ಪೋಷಕಾಂಶವುಳ್ಳ ನುಗ್ಗೆ ಸೊಪ್ಪಿನ ವಿಶೇಷ ಚಟ್ನಿ ಮಾಡುವ ವಿಧಾನವನ್ನು ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು ಮಾಡುವ ವಿಧಾನವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮಾಡಿ ರುಚಿ ನೋಡಿ ಹೇಳಿ…
ಬೇಕಾಗುವ ಪದಾರ್ಥಗಳು :
- ನುಗೆಸೊಪ್ಪು – ಸ್ವಲ್ಪ
- ಉದ್ದಿನ ಬೇಳೆ – 1 ಸ್ಪೂನ್
- ಬಿಳಿ ಎಳ್ಳು- 1 ಸ್ಪೂನ್
- ಬ್ಯಾಡಗಿ ಮೆಣಸಿನಕಾಯಿ – 8
- ಗುಂಟೂರು – 6
- ಉಪ್ಪು – ರುಚಿಗೆ ತಕ್ಕಷ್ಟು
- ಬೆಲ್ಲ – ಸ್ವಲ್ಪ
- ಹುಣಸೆ ಹಣ್ಣು – ಚೂರು

ಮಾಡುವ ವಿಧಾನ :
ನುಗ್ಗೆ ಸೊಪ್ಪಿನ ಎಲೆಗಳನ್ನು ಬಿಡಿಸಿಕೊಂಡು ಒಂದು ದಿನ ಬಿಸಿಲಿನಲ್ಲಿ ಒಣಗಿಸಿ ಕೊಳ್ಳಿ. ನಂತರ ಒಂದು ಬಾಣಲಿಗೆ ಎರಡು ಸ್ಪೂನ್ ಎಣ್ಣೆ ಹಾಕಿ ಮೇಲೆ ಹೇಳಿದ ಪದಾರ್ಥಗಳನ್ನು ಒಟ್ಟಿಗೆ ಹಾಕಿ ಹುರಿದು ಕೊಳ್ಳಿ.
ಕೊನೆಗೆ ಸ್ಟೋವ್ ಉರಿಯನ್ನು ಸಣ್ಣಗೆ ಮಾಡಿಕೊಂಡು ಒಣಗಿದ ನುಗ್ಗೆ ಸೊಪ್ಪನ್ನು ಕೈಯಲ್ಲಿ ಪುಡಿ ಮಾಡಿ ಮಿಕ್ಸ್ ಮಾಡಿ. ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನೈಸ್ ಆಗಿ ಪುಡಿ ಮಾಡಿಕೊಳ್ಳಿ. ಈಗ ರುಚಿಯಾದ ನುಗ್ಗೆ ಸೊಪ್ಪಿನ ಚಟ್ನಿ ಪುಡಿ ರೆಡಿ. ಬಿಸಿ ಅನ್ನಕ್ಕೆ ತುಪ್ಪ , ಹಾಕಿ ಸವಿಯಿರಿ, ದೋಸೆ ಮಾಡಿದಾಗ ದೋಸೆ ಮೇಲೆ ತುಪ್ಪ ಹಾಕಿ ಈ ಚಟ್ನಿಪುಡಿ ಉದುರಿಸಿದರೆ ರುಚಿಕರವಾಗಿರುತ್ತದೆ. ಪುಡಿ ಇಡ್ಲಿಗೆ ಕೂಡ ಈ ಪುಡಿ ಸೂಪರ್ ಆಗಿರುತ್ತದೆ.

ನುಗ್ಗೆ ಸೊಪ್ಪಿನ ಟಿಪ್ಸ್
ಉತ್ತಮ ಪೋಷಕಾಂಶಗಳಿಂದ ಕೂಡಿದ ಇದು ತೂಕ ಕಮ್ಮಿ ಮಾಡಲು, ಕೊಲೆಸ್ಟ್ರಾಲ್ ಕಮ್ಮಿ ಮಾಡಲು , ಜೀರ್ಣಾಂಗ ವ್ಯವಸ್ಥೆಯ ಸುಧಾರಣೆ, ನಿದ್ರಾಹೀನತೆ, ಹಾರ್ಮೋನುಗಳ ಹೆಚ್ಚಳ,ಹೆಚ್ಚಿನ ಕಬ್ಬಿಣಾಂಶದ ಜೊತೆ ಹಾಲಿನಲ್ಲಿರುವ ಪ್ರೋಟೀನ್ ಗಿಂತ 2 ಪಟ್ಟು ಹೆಚ್ಚಿನ ಪ್ರೋಟೀನ್ ನಿಂದ ಕೂಡಿದೆ.
- ಶಕುಂತಲಾ ಸವಿ
