ಡ್ರೈ ಫ್ರೂಟ್ಸ್ ಹಾಗೂ ಫ್ರೂಟ್ಸ್ ಗಳಿಂದ ರುಚಿಕರವಾದ ಸ್ಮೂಥಿ. ಮಾಡಬಹುದು. ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು ಮಾಡುವ ವಿಧಾನವನ್ನು ಹೇಳಿಕೊಟ್ಟಿದ್ದಾರೆ, ತಪ್ಪದೆ ಮುಂದೆ ಓದಿ…
ಬೇಕಾಗುವ ಪದಾರ್ಥಗಳು :
- ಬಾಳೆಹಣ್ಣು 1
- ಖರ್ಜೂರ 4
- ಬಾದಾಮಿ 10
- ಗೋಡಂಬಿ 10
- ದ್ರಾಕ್ಷಿ 15
- ಪಾಲಕ್ ಎಲೆ 2
- ಮೊಸರು ಒಂದು ಕಪ್
- ಕಾಮ ಕಸ್ತೂರಿ ಬೀಜಗಳು ನೆನೆಸಿದ್ದು 1 ಜಾಮೂನ್ ಕಪ್
- ಕಲ್ಲಂಗಡಿ ಹಣ್ಣಿನ ಬೀಜ ಸ್ವಲ್ಪ



ಮಾಡುವ ವಿಧಾನ :
ಡ್ರೈ ಫ್ರೂಟ್ಸ್ ಗಳನ್ನು ರಾತ್ರಿಯೇ ನೆನೆಸಿಡಬೇಕು. ಮಿಕ್ಸಿ ಜಾರಿಗೆ ಬಾಳೆಹಣ್ಣು , ನೆನೆಸಿಟ್ಟ ಫ್ರೂಟ್ಸ್ , ಪಾಲಕ್ ಎಲೆ ಹಾಕಿ ಗ್ರೈಂಡ್ ಮಾಡಿಕೊಳ್ಳಿ ನಂತರ ಮೊಸರು ಹಾಕಿ ಇನ್ನೊಂದು ಸಲ ಗ್ರೈಂಡ್ ಮಾಡಿಕೊಳ್ಳಿ. ನೆನೆಸಿಟ್ಟ ಕಾಮ ಕಸ್ತೂರಿ ಬೀಜಕ್ಕೆ ರುಬ್ಬಿದ ಮಿಶ್ರಣ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬೇಕಿದ್ದಲ್ಲಿ 2 ಸ್ಪೂನ್ ಜೇನುತುಪ್ಪ ಬೆರೆಸಿ. ರುಚಿಯಾದ ಸ್ಮೂಥಿ ರೆಡಿ.
ದ್ರಾಕ್ಷಿ, ಕಿತ್ತಳೆ, ಸೇಬು, ಸಪೋಟ , ಡ್ರಾಗನ್ ಫ್ರೂಟ್ಸ್ ಕೂಡ ಉಪಯೋಗಿಸಿ ರುಚಿಕರವಾದ ಸ್ಮೂಥಿ ತಯಾರು ಮಾಡಬಹುದು. ನಾನಿವತ್ತು ಮೇಲೆ ಹೇಳಿದ ಪದಾರ್ಥಗಳನ್ನು ಮಾತ್ರ ಬಳಸಿ ಮಾಡಿದ್ದೇನೆ.
- ಶಕುಂತಲಾ ಸವಿ
