ಚಪಾತಿ ಉಳಿದಿದೆಯಾ? ಚಿಂತಿಸಬೇಡಿ..ಅದಕ್ಕೊಂದು ಪರಿಹಾರವಾಗಿ ರುಚಿಕರ ಅಡುಗೆ ಹೀಗೆ ಮಾಡಬಹುದು ಅಂತಾರೆ ನಳಪಾಕ ಪ್ರವೀಣೆ ಚಂದ್ರಕಲಾ ಮಂಜುನಾಥ್ ಅವರು, ತಪ್ಪದೆ ಓದಿ..ಚಪಾತಿ ವೇಸ್ಟ್ ಮಾಡಬೇಡಿ…
ಬೇಕಾಗುವ ಸಾಮಗ್ರಿಗಳು:
ಚಪಾತಿ – 3 ಚಪಾತಿಗೆ 7 ಉಂಡೆಗಳಾಗಿವೆ.
ಬೆಲ್ಲ – ನಿಮ್ಮ ರುಚಿಗೆ ತಕ್ಕಷ್ಟು
ಒಣಕೊಬ್ಬರಿ – ಸ್ವಲ್ಪ
ಗಸಗಸೆ -ಸ್ವಲ್ಪ
ಗೋಡಂಬಿ, ಬಾದಾಮಿ – (ನಿಮಗೆ ಅಗತ್ಯವೆನಿಸಿದ ಡ್ರೈ ಫ್ರೂಟ್ಸ್)
ಏಲಕ್ಕಿ – 2
ಮಾಡುವ ವಿಧಾನ :
ಗಸಗಸೆ ಸ್ವಲ್ಪ ಬೆಚ್ಚಗೆ ಹುರಿದು ಒಣಕೊಬ್ಬರಿ, ಸ್ವಲ್ಪ ಬಾದಾಮಿ, ಗೋಡಂಬಿ, ಏಲಕ್ಕಿ ಹಾಕಿ ಪುಡಿ ಮಾಡಿ.
ಚಪಾತಿಯನ್ನು ತುಂಡುಗಳಾಗಿ ಕತ್ತರಿಸಿ, ಬೆಲ್ಲ ಸೇರಿಸಿ ಮಿಕ್ಸಿಯಲ್ಲಿ ಪುಡಿ ಮಾಡಿ. ಗಸಗಸೆ, ಒಣಕೊಬ್ಬರಿ ಪುಡಿ ಮಾಡಿದ್ದನ್ನು ಸೇರಿಸಿ, ಇನ್ನಷ್ಟು ತುಂಡುಗಳಾಗಿ ಕತ್ತರಿಸಿದ ಡ್ರೈ ಫ್ರೂಟ್ಸ್ ಜೊತೆಗೆ ಸ್ವಲ್ಪ ತುಪ್ಪ ಹಾಕಿ ಉಂಡೆ ಕಟ್ಟಿ. ಬಹಳ ರುಚಿ ಮತ್ತು ಆರೋಗ್ಯಕರ ಲಡ್ಡು ಇದು. ಬೇಕಿದ್ದವರು ಅಂಟು ಸಹ ಸೇರಿಸಬಹುದು.
- ಕೈಚಳಕ : ಚಂದ್ರಕಲಾ ಮಂಜುನಾಥ್
