ಮಿಶ್ರ ಚಟ್ನಿ ಮಾಡುವ ವಿಧಾನ – ಚಂದ್ರಕಲಾ ಮಂಜುನಾಥ್

ಮನೆ ಮಂದಿಗೆ ರುಚಿಯಾದ ಅಡುಗೆ ಮಾಡಿಕೊಟ್ಟರೆ ಗೃಹಿಣಿಗೆ ಸಂತೃಪ್ತಿ. ಆರೋಗ್ಯಕರ, ರುಚಿಕರ ರೊಟ್ಟಿ ಮಾಡಿದ ಮೇಲೆ ಅದಕ್ಕೊಂದು ಚಟ್ನಿ ಬೇಕಲ್ವಾ? ಮಿಶ್ರ ಧಾನ್ಯಗಳ ರೊಟ್ಟಿ ಜೊತೆ ಸಾಮಾನ್ಯ ಚಟ್ನಿ ಇದ್ರೆ ಸಾಲದು, ಅದಕ್ಕೆ ಈ ರೀತಿ ಚಟ್ನಿ ಮಾಡಿ ತಿಂದು ನೋಡಿ ಎನ್ನುತ್ತಾರೆ ನಳಪಾಕ ಪ್ರವೀಣೆ ಚಂದ್ರಕಲಾ ಮಂಜುನಾಥ್ ಅವರು, ಮನೆಯಲ್ಲಿ ತಪ್ಪದೆ ನೀವು ಈ ಚಟ್ನಿ ಮಾಡಿ ನೋಡಿ…

ಮಿಶ್ರ ಚಟ್ನಿ :

ಬೇಕಾಗುವ ಸಾಮಗ್ರಿಗಳು :

ಈರುಳ್ಳಿ – 1
ಟೊಮ್ಯಾಟೊ – 1
ಬೆಳ್ಳುಳ್ಳಿ – 4 ಎಸಳು
ಹಸಿ/ಒಣ ಮೆಣಸಿನಕಾಯಿ – 4
ಜೀರಿಗೆ – 1/4 ಚಮಚ.
ಕರಿಬೇವು – ಒಂದು ಕಡ್ಡಿಯಷ್ಟು.
ಹುರಿದ ಕಡಲೆಬೀಜ/ ಶೇಂಗಾ ಬೀಜ – 2 ರಿಂದ 4 ಚಮಚ
ಹುರಿಗಡಲೆ – 2 ಚಮಚ
ಹುಣಸೆಹಣ್ಣು – ಚಿಟಿಕೆಯಷ್ಟು.
ಹಸಿ ತೆಂಗು ಅಥವಾ ಒಣ ಕೊಬ್ಬರಿ ತುರಿ – 2 ಚಮಚ.
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮನೆಯಲ್ಲಿರುವ ಯಾವುದೇ ತರನಾದ ಚಟ್ನಿ‌ ಪುಡಿ – 2 ಚಮಚ.
ಎಣ್ಣೆ – 2 ಚಮಚ
ಉಪ್ಪು- ರುಚಿಗೆ ತಕ್ಕಷ್ಟು.

ಎರಡು ಚಮಚ ಎಣ್ಣೆಯಲ್ಲಿ ಹೆಚ್ಚಿದ ಈರುಳ್ಳಿ, ಟೊಮ್ಯಾಟೊ, ಹಸಿ ಅಥವಾ ಒಣಮೆಣಸಿಕಾಯಿ, ಬೆಳ್ಳುಳ್ಳಿ ಎಸಳು, ಕರಿಬೇವಿನ ಎಲೆಗಳು, ಜೀರಿಗೆ, ಕೊತ್ತಂಬರಿ ಸೊಪ್ಪು ಹಾಕಿ ಹುರಿದುಕೊಳ್ಳಿ.

ಹುರಿದುಕೊಂಡ ಮಿಶ್ರಣಕ್ಕೆ ಸ್ವಲ್ಪ ಹುಣಸೆಹಣ್ಣು (ನಾಟಿ ಟೊಮ್ಯಾಟೊ ಆದರೆ ಹುಣಸೆಹಣ್ಣು ಅಗತ್ಯವಿಲ್ಲ), ಹುರಿಗಡಲೆ, ಹುರಿದ ಶೇಂಗಾ/ಕಡಲೆಬೀಜ, ಚಟ್ನಿಪುಡಿ, ತೆಂಗಿನತುರಿ, ಉಪ್ಪು, ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ. ರೊಟ್ಟಿ, ಚಪಾತಿ, ದೋಸೆ ಜೊತೆಗೆ ವಿಭಿನ್ನ ರೀತಿಯ ಮಿಶ್ರ ಚಟ್ನಿ ಸವಿಯಲು ಸಿದ್ಧ.


  • ಕೈ ಚಳಕ : ಚಂದ್ರಕಲಾ ಮಂಜುನಾಥ್ 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading