ಕಡಲೆಕಾಳು, ಹಲಸಿನ ಬೀಜದ ಸಾರು

ಕಡಲೆಕಾಳು, ಹಲಸಿನ ಬೀಜದ ಸಾರನ್ನು ರುಚಿಕರವಾಗಿ ಮಾಡುವುದು ಹೇಗೆ ಅನ್ನುವುದನ್ನು ಚಂದ್ರಕಲಾ ಮಂಜುನಾಥ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಬೇಕಾಗುವ ಸಾಮಗ್ರಿಗಳು :
ರಾತ್ರಿ ನೆನೆಸಿಟ್ಟ ಕಡಲೆಕಾಳು – 1 ಕಪ್
ಸಿಪ್ಪೆ ತೆಗೆದ ಹಲಸಿನ ಬೀಜಗಳು.
ಈರುಳ್ಳಿ – 1
ಟೊಮ್ಯಾಟೊ – 1

ರುಬ್ಬಲು ಬೇಕಾದ ಸಾಮಗ್ರಿಗಳು:

ತೆಂಗಿನ ತುರಿ – ಒಂದು ಕಪ್
ಈರುಳ್ಳಿ – 1
ಟೊಮ್ಯಾಟೊ – 1
ಬೆಳ್ಳುಳ್ಳಿ – 10-12 ಎಸಳು
ಶುಂಠಿ – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಚಕ್ಕೆ- 1 ಇಂಚು
ಲವಂಗ – 4
ಅಚ್ಚಖಾರದ ಪುಡಿ – 2 ಚಮಚ
ಧನಿಯಾ ಪುಡಿ – 1 ಚಮಚ.

ಎಲ್ಲವನ್ನೂ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ.

ಕುಕ್ಕರ್‌ನಲ್ಲಿ ಒಗ್ಗರಣೆಗೆ ಎಣ್ಣೆ 2 ಚಮಚ, ಸಾಸಿವೆ, ಕರಿಬೇವು, ಈರುಳ್ಳಿ ಹಾಕಿ ಹುರಿಯಿರಿ. ಇದಕ್ಕೆ ನೆನೆಸಿದ ಕಡಲೆ ಕಾಳು ಹಾಕಿ ಒಂದೆರಡು ನಿಮಿಷ ಹುರಿದು, ಹಲಸಿನ ಬೀಜಗಳನ್ನು ಹಾಕಿ. ನಂತರ ಟೊಮ್ಯಾಟೊ ಹಾಕಿ, ರುಬ್ಬಿದ ಮಸಾಲೆ ಮಿಶ್ರಣ ಸೇರಿಸಿ ಕಲೆಸಿ. ಇದಕ್ಕೆ ತಕ್ಕಷ್ಟು ನೀರು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮೂರು ವಿಷಲ್ ಕೂಗಿಸಿ.

ಕಡಲೆಕಾಳು, ಹಲಸಿನ ಬೀಜದ ಮಸಾಲೆ ಸಾರು ಸವಿಯಲು‌ ಸಿದ್ಧ.


  • ಚಂದ್ರಕಲಾ ಮಂಜುನಾಥ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading