ಅಪ್ಪ (ಕಾಕಾ) ಕೊನೆಗೆ ಕ್ಯಾನ್ಸರ್ ಕಾಯಿಲೆಗೆ ಬಿದ್ದು, ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಗುಣವಾಗದೇ ಡಿಸ್ಚಾರ್ಜ್ ಆಗಿ ಮನೆಗೆ ಬಂದರು. ಮುಂದೇನಾಯಿತು ಅನ್ನೋದನ್ನ ಕೆ ಬಿ ದೊಡ್ಡಮನಿ ಅವರು ತಮ್ಮ ತಂದೆಯ ಕುರಿತು ಬರೆದ ಒಂದು ಭಾವನಾತ್ಮಕ ಬರಹವನ್ನು ತಪ್ಪದೆ ಮುಂದೆ ಓದಿ…
ಅಪ್ಪ (ಕಾಕಾ) ನನಗೆ ಕಣ್ಣಿಗೆ ಗೋಚರಿಸುವ ಯಾವುದೇ ಆಸ್ತಿ ಮಾಡದಿದ್ದರೂ, ನನ್ನನ್ನು ಅಗೋಚರ ಆಸ್ತಿವಂತನನ್ನಾಗಿ ಮಾಡಿದ್ದಾನೆ. ಪಾಲನೆ, ಪೋಷಣೆ ಅಭಯ ಹಸ್ತ ನೀಡಿದ್ದಾನೆ. ತಾನು ಹವ್ಯಾಸಿ ಬೇಟೆಗಾರನಗಿದ್ದರು. ನಮ್ಮನ್ನು ಅದರ ಚಟಕ್ಕೆ ಬಿಡದಂತೆ ರಕ್ಷಿಸಿದ್ದಾನೆ. ಸರಳ, ಸಜ್ಜನಿಕೆ, ಪ್ರಾಮಾಣಿಕತೆ, ಕರುಣಾ ಗುಣಗಳನ್ನು ದಯಪಾಲಿಸಿದ್ದಾನೆ. ಪ್ರಾಣಿಗಳಿಗೆ ಹೆದರದೇ ವಿಷ ಮನುಜರಿಗೆ ಹೆದರುತ್ತಿದ್ದ. ಯಾರನ್ನೂ ಬೇಡದೆ ತನ್ನ ಬಳಿ ಇದ್ದ ಅಲ್ಪ ಸ್ವಲ್ಪ ದುಡ್ಡಿನ ನೆರವನ್ನು ಅಹರ್ರರಿಗೆ ಮಾಡುತ್ತಿದ್ದ, ತನ್ನ ಸಂಸಾರವನ್ನು ಲೆಕ್ಕಿಸದೇ. ನನ್ನ ತಾಯಿ ಅವನ ಅಕ್ಕನ ಮಗಳು. ಮನೆಗೆ ತಾತ್ಸಾರ ಮಾಡುತ್ತಿದ್ದರಿಂದ ನನ್ನ ಅವ್ವ (ಅಕ್ಕ )ಅವನಿಗೆ ಸಂನ್ಯಾಸಿ ಅಂತಾ ನೊಂದು ಹೀಗಳೆದರೂ ಅವನು ಅದಕ್ಕೆ ಪ್ರತಿ ಭಟಿಸುತ್ತಿರಲಿಲ್ಲ. ಅನೋನ್ಯವಾಗಿಯೇ ಇದ್ದರು, ಏನೂ ಆಗಿಲ್ಲವಂತೆ. ನಿರಕ್ಷರಿ ಅವನು. ಆದರೆ ನಮ್ಮ ಆಟ ಅವನ ಮುಂದೆ ನಡೆಯುತ್ತಿರಲಿಲ್ಲ. ಮರಾಠಿ, ಮುಸ್ಲಿಂ ಭಾಷೆ ಸಂಪರ್ಕದಿಂದ ಅರಿತು ಮಾತಾಡುತ್ತಿದ್ದ ನಾನು ಹೈಸ್ಕೂಲಿನಲ್ಲಿರುವಾಗ ಇಂಗ್ಲೀಷನ non ಡೀಟೇಲ್ ಪಠ್ಯ ಪುಸ್ತಕದಲ್ಲಿಯ ಕತೆಗಳನ್ನು ರಾತ್ರಿ ಹೊಲದಲ್ಲಿಯ ಕಣದಲ್ಲಿ ಮಲಗುವಾಗ ಕುತೂಹಲಕ್ಕೆ ದೊಡ್ಡ ಶ್ಯಾಣ್ಯಾ ಆಗಿ ಕನ್ನಡದಲ್ಲಿ ವಿವರಿಸುವಾಗ ಪದೇ ಪದೇ ತಿಳಿಸಿ ಹೇಳುವಾಗ ಸಿಟ್ಟು ಮಾಡಿ ‘ಒಮ್ಮೆ ಹೇಳಲೇ, ಪುರಾಣ ಹೇಳುವವರ ಹಾಗೆ ರಿಪೀಟ್ ಮಾಡಬೇಡ ‘ಅಂತಾ ಎಚ್ಚರಿಸುತ್ತಿದ್ದ.
ನನ್ನ ಕಿರಿಯ ಸಹೋದರರು ನಾವು ಒಟ್ಟಿಗೇ ಕಣದಲ್ಲಿ ಮಲಗುತ್ತಿದ್ದೆವು. ಅವರೂ ಕೂಡಾ ಸಾಮಾನ್ಯ ಪ್ರಜ್ಞೆಯುಳ್ಳವರಿದ್ದುದರಿಂದ ನನ್ನನ್ನು ನೋಡಿ ಮೆಲ್ಲನೆ ನಗುತ್ತಿದ್ದರು., ಅಪ್ಪನ ಮೇಧಾವಿತನ ಮೆಚ್ಚಿ. ನಾವು ಕೆಳ ಮಧ್ಯಮ ವರ್ಗದ ಜನ. ಬಡವರೆಂದರೂ ಸರಿಯೇ. ಬಿಎ ತರಗತಿಗೆ ಪ್ರವೇಶ ಮಾಡಿಕೊಂಡಿದ್ದೆ. ಬೆಟ್ಟೆರ್ಮೆಂಟ್ ಫೀ 150/ರೂಪಾಯಿ ಕೊಡುವದಿತ್ತು. ನಾನು ಇಂಗ್ಲೀಷನಲ್ಲಿ ಹಾಗೆ ಅಂದು ದುಡ್ಡು ಕೇಳಿದೆ. ‘ಕನ್ನಡದಲ್ಲಿ ಹೇಳಪಾ ಅದನ್ನ. ಇಂಗ್ಲಿಷ್ ತಿಳಿಯುವದಿಲ್ಲಾ ಅಂತಾ ನನಗೆ ಆ ಶಬ್ಧ ಉಪಯೋಗಿಸಬೇಡ, ನನ್ನ ಬಳಿ ಈಗ ಎಷ್ಟಿದೆ ಅಷ್ಟು ಕೊಡತನಿ, ಮುಂದೆ ಸರಿ ಮಾಡತನಿ ‘ಅಂತಾ ಎಚ್ಚರಿಸುತ್ತಿದ್ದ. ಖಾಸಗಿ ಕಾಲೇಜು ಆಗಿದ್ದರಿಂದ ಬೇಟರ್ಮೆಂಟ್ ಫೀ, caution money ಅಂತಾ ಅನೇಕ ಶಬ್ದಗಳನ್ನು ಅವನ ಮುಂದೆ ಉಪಯೋಗಿಸುವದನ್ನು ಬಿಟ್ಟೆ.

ಅಕ್ಷರ ಕಲಿತವರು, ವಿದ್ಯಾರ್ಜನೆ ಮಾಡಿದವರಷ್ಟೇ ಬುದ್ಧಿವಂತರು, ಉಳಿದವರು ದಡ್ಡರು, ನಿರುಪಯೋಗಿಗಳು ಅನ್ನುವ ನನ್ನ ತಿಳುವಳಿಕೆ ತಿಳಿಯಾಯಿತು.
ಹೊಳೆಯಲ್ಲಿ ಬಲೆಗೆ ಬೀಳದ ಮೀನನ್ನು ಸ್ವತಃ ಕೈ ಬಾಂಬು ತಯಾರಿಸಿ ಮಡುವಿನಲ್ಲಿ ಹಾಕಿ ಮೀನು ಹಿಡಿಯುತ್ತಿದ್ದರು. ನಮಗೆ ಅದನ್ನು ತಿಳಿಯಲು ಬಿಡುತ್ತಿರಲಿಲ್ಲ. ಫೈರಿಂಗನಲ್ಲಿಯೂ ಅವನು ಶಾರ್ಪ್ ಶೂಟರ್. ಅಷ್ಟು ಗುರಿವಂತ. ನಮಗೆ ಆ ಕಡೆ ಲಕ್ಷ್ಯ ಹಾಕದಂತೆ ನೋಡಿಕೊಂಡ.
ಯಾರದೇ ಮನೆಗೆ ಹೋದಾಗ ಅಲ್ಲಿ ಹಣ ಹಾಗೂ ಇತರೇ ವಸ್ತುಗಳು ಕಂಡಲ್ಲಿ ಅವನ್ನು ಬಿಲ್ಕುಲ್ ಮುಟ್ಟಬಾರದು ಅಂತಾ ನಾನು ಹೊರಗೆ ಕಲಿಯಲು ಹೋದಾಗ ಹೇಳುತ್ತಿದ್ದ. ಅವ್ವ ಅಮ್ಮರೂ ಅದನ್ನು ಒತ್ತಿ ಒತ್ತಿ ಹೇಳುತ್ತಿದ್ಎಷ್ಟು ತಂದೆಯ ಬಗ್ಗೆ ಬರೆದರೂ ಕಡಿಮೆ ಎನಿಸುತ್ತದೆ. ಕೊನೆಗೆ ಅವನು ಕ್ಯಾನ್ಸರ್ ಕಾಯಿಲೆಗೆ ಬಿದ್ದು, ಬೆಂಗಳೂರು ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಗುಣವಾಗದೇ ಡಿಸ್ಚಾರ್ಜ್ ಆಗಿ ಮನೆಗೆ ಬಂದ. ಮರಣದ ದಿನಾಂಕ ನನ್ನ ಸೋದರ ಮಾವನಿಗೆ ಗೊತ್ತಿದ್ದುದು ಅವನಿಗೂ ಗೊತ್ತಾಗಿತ್ತು ದಿನಾಂಕ ಹೊರತು ಪಡಿಸಿ.
ಸಾಂದರ್ಭಿಕ ಚಿತ್ರ (ಫೋಟೋ ಕೃಪೆ : google)
ನನಗೆ ‘ನೀನು ಕಾಲೇಜು ಮುಂದುವರೆಸು, ಬಿಡಬೇಡ, ನನ್ನ ಕಾಯಿಲೆ ಆರಾಮ ಆಗುವದಲ್ಲ, ನೀನು ಕಲಿಕೆ ಹಾಳು ಮಾಡಿಕೊಳ್ಳಬೇಡ’ ಅಂತಾ ಕಾಳಜಿಯಿಂದ ಹೇಳಿದನು. ಆ ವರ್ಷ ಬಿಟ್ಟು 81 ನೇ ಸಾಲಿನಲ್ಲಿ ನಾನು ಕಾನೂನು ಓದಲು ಸೇರಿ ಮೂರು ವರ್ಷ ಕೋರ್ಸ್ ಮುಗಿಸಿ ವಕಾಲತ್ತು ಪ್ರಾರಂಭಿಸಿದೆ. ಇದಕ್ಕೆ ನನ್ನ ತಂದೆ, ಮಾವ, ದೊಡ್ಡಪ್ಪ, ತಾಯಿ ಕಾರಣರು.ಅವರ ಋಣ ತೀರಿಸಲಾರೆ ಸಂಪೂರ್ಣ.
ತಂದೆ ನನ್ನನ್ನು ಇನ್ನೂ ರಕ್ಷಿಸುತ್ತಾನೆ ಎಂಬ ನಂಬಿಕೆ.
ಕಾಕಾ ನೀನು ಅಮರ.
- ಕೆ ಬಿ ದೊಡ್ಡಮನಿ – ವಕೀಲರು