ಗುರುಪೂರ್ಣಿಮೆ ದಿನದಂದು ಶಿಕ್ಷಕಿ ಅನ್ನಪೂರ್ಣ ಪದ್ಮಸಾಲಿ ಅವರು ಮಕ್ಕಳಿಗಾಗಿ ಬರೆದ ಒಂದು ಅಪೂರ್ವ ಕವನವನ್ನು ತಪ್ಪದೆ ಮುಂದೆ ಓದಿ….
ಓ ವಿದ್ಯಾರ್ಥಿ..!!
ಓದು ನೀ ಓದು
ಓದಿಗಾಗಿ ಓದು
ಅರಿವಿಗಾಗಿ ಓದು
ಅಂಕಗಳ ಭಯವ
ತೊರೆದು ನೀ ಓದು.
ಭಕ್ತಿಗಾಗಿ ಭಕ್ತಿ
ಮಾಡಿದನಂತೆ
ಹನುಮಂತ
ಹಾಗೆಯೇ ನೀನು
ಓದು ನೀ ಓದು
ಓದಿಗಾಗಿ
ತಿಳುವಳಿಕೆಗಾಗಿ ಓದು.
ಓದು ಒಂದು ಧ್ಯಾನ
ಅದು ಅರಿವಿನ ಯಾನ
ಮನಸ್ಸು ಉತ್ಸಾಹ
ನಿರೀಕ್ಷೆಗಳ ತಾಣ
ನೀ ಮಾಡು ಅಧ್ಯಯನ
ಕಲಿವ ಮನಸಿರೆ
ಕಲ್ಗೊಂಬೆ ಸಾಲದೆ..?
ಮೂರ್ತಿಯಿಂದ
ವಿದ್ಯೆ ಕಲಿತ ಏಕಲವ್ಯ
ಜಗತ್ತಿಗೆ ಸಾರಿದನ್ನಲ್ಲವೇ
ಆಸಕ್ತಿ ಶೃದ್ಧೆಯೇ
ಕಲಿಕೆಗೆ ಮೂಲ ಎಂದು?
ಓದು ನೀ ಓದು
ನಿತ್ಯ ನಿರಂತರ
ನಿತ್ಯದ ಬದುಕಿಗೆ
ನವಚೈತನ್ಯವದು
ಓದು ನೀ ಓದು
ಓದಿಗಾಗಿ ಓದು.
- ಅನ್ನಪೂರ್ಣ ಪದ್ಮಸಾಲಿ – ಶಿಕ್ಷಕಿ, ಕೊಪ್ಪಳ.