ನಮ್ಮ ಕನ್ನಡ ಸಾಹಿತ್ಯ ಅಮೋಘ, ಅನನ್ಯ, ಉತ್ಕೃಷ್ಟ ಬರಹಗಳ ಸಾಗರ. ಈ ಸಾಗರ ಒಡಲಲ್ಲಿರುವ ಹವಳಗಳು ಹಲವು ಅದರಲ್ಲಿ ಡಿ.ವಿ.ಜಿ ಎಂದೇ ಖ್ಯಾತರಾದ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ಅವರ ” ಮಂಕುತಿಮ್ಮನ ಕಗ್ಗ” ಪಂಡಿತರಿಂದ, ಪಾಮರರನ್ನು ತನ್ನತ್ತ ಸೆಳೆದ ಕೃತಿ. ಈ ಕೃತಿಯ ಬಗ್ಗೆ ರೇಶ್ಮಾ ಗುಳೇದಗುಡ್ಡಾಕರ್ ಅವರು ಬರೆದ ಲೇಖನ. ಮುಂದೆ ಓದಿ…
ಕೃತಿ: ಮಂಕುತಿಮ್ಮನ ಕಗ್ಗ, ತಾತ್ಪರ್ಯ ಸಹಿತ
ಲೇಖಕರು : ಕವಿತಾ ಕೃಷ್ಣ
ಪ್ರಕಾಶಕರು : ತನುಮನು ಪ್ರಕಾಶನ
ಮೂಲ : ಗೋಖಲೇ ಸಾರ್ವಜನಿಕ ವಿಚಾರ ಸಂಸ್ಥೆ
ಬೆಲೆ : 140
ನನ್ನ ಮೆಚ್ಚಿನ ಹೊತ್ತಿಗೆ ಅಥವಾ ಲೇಖಕ, ಲೇಖಕಿ, ಬರಹಗಾರರು ಯಾರು ಎಂದು ನಿರ್ದಿಷ್ಟವಾಗಿ ಹೇಳಲು ಬಹು ಅಸಾಧ್ಯ. ನಮ್ಮ ಕನ್ನಡ ಸಾಹಿತ್ಯ ಅಮೋಘ, ಅನನ್ಯ, ಉತ್ಕೃಷ್ಟ ಬರಹಗಳ ಸಾಗರ.
ಈ ಸಾಗರ ಒಡಲಲ್ಲಿರುವ ಹವಳಗಳು ಹಲವು ಅದರಲ್ಲಿ ಡಿ.ವಿ.ಜಿ ಎಂದೇ ಖ್ಯಾತರಾದ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ಅವರ ” ಮಂಕುತಿಮ್ಮನ ಕಗ್ಗ” ಪಂಡಿತರಿಂದ, ಪಾಮರರನ್ನು ತನ್ನತ್ತ ಸೆಳೆದ ಕೃತಿ. ಕನ್ನಡ ಭಗವದ್ಗೀತೆ ಎಂದೇ ಪ್ರಸಿದ್ದಿ ಪಡೆದಿದೆ. ಇಂದಿನ ದಿನಗಳಲ್ಲಿ ಮೊಬೈಲ್ ಅಲ್ಲಿಯೂ ಈ ಕೃತಿ ಲಭ್ಯವಾಗಿವಾಗಿ ವಿದ್ಯಾರ್ಥಿಗಳಿಗೂ ಓದುಗರಿಗೂ ಜ್ಞಾನ ಧಾರೆ ಎರೆದಿದೆ.
ಈ ಕೃತಿ ಬಾಲ್ಯದಿಂದಲೂ ನನಗೆ ಚಿರಪರಿಚತ ಎಷ್ಟು ಓದಿದರು ಮನ ತಣಿಯದ ಅದಮ್ಯ ಅನುಭೂತಿಯನ್ನು ನೀಡುತ್ತದೆ. ಮೌಕಿಕವಾಗಿಯೂ, ಪ್ರಸ್ತುತ ವರ್ತಮಾನದ ಅರಿವಾಗಿಯು ಈ ಕೃತಿ ಬಹು ಮೌಲಿಕವಾದುದು. ಬಹುಶಃ ಈ ಕೃತಿಯ ಬಗ್ಗೆ ತಿಳಿಯದವರೂ ಯಾರು ಇಲ್ಲ, ನಮ್ಮ ನಾಡಿನಲ್ಲಿ. ವಿಜ್ಞಾನ, ತತ್ವಶಾಸ್ತ್ರ, ತಾರ್ಕಿಕ ಚಿಂತನೆ, ವೈಚಾರಿಕ ವಿಚಾರ ಧಾರೆ, ದೈವೀಕ ನಂಬಿಕೆ ಎಲ್ಲವೂ ಈ ಕೃತಿಯಲ್ಲಿ ಸಮನ್ವಯಗೊಂಡು ಮನದ ಕಡಲನ್ನು ಸ್ವಚ್ಛಗೊಳಿಸಿ ಬದುಕಿನ ನಂಬಿಕಯನ್ನು ಹೆಚ್ಚಿಸುತ್ತದೆ.

ಈ ಕೃತಿಯು ಹಲವು ಭಾಷೆಗೆ ಅನುವಾದಗೊಂಡು ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದಿದೆ. ಡಿ.ವಿ.ಜಿ ಅವರಿಗೆ ಡಿ.ವಿ.ಜಿಯೇ ಸಾಟಿ ಎಂಬಂತೆ ಕೃತಿ ಅನಾವರಣಗೊಂಡಿದೆ. ಪ್ರಬಂದ, ಭಾಷಣ, ಚರ್ಚೆಯಯಲ್ಲಿಯೂ ಕಗ್ಗ ಸ್ಥಾನ ಪಡೆದು ಜನಪ್ರಿಯವಾಗಿದೆ. ಕಾಲ ಮತ್ತು ದೇಶಗಳ ಗಡಿಯನ್ನು ಮೀರಿ ನಿರಂತರವಾಗಿ ಈ ಕೃತಿ ಸರ್ವಕಾಲಿಕ ಸತ್ಯದ ಮೂಲಕ ಮನುಕುಲಕ್ಕೆ ದೀವಿಗೆಯಾಗಿದೆ.
ಲೇಖಕರು ಕವಿತಾ ಕೃಷ್ಣ ಅವರು ಈ ಕಗ್ಗ ವನ್ನು ತಾತ್ಪರ್ಯ ಸಹಿತವಾಗಿ ಓದುಗರಿಗೆ ನೀಡಿದ್ದಾರೆ. ಈ ಪುಟ್ಟ ಕೃತಿಯಲ್ಲಿ ಕಗ್ಗ ದ ವಿಚಾರಧಾರೆ ಗಳು ಸರಳೀಕೃತ ಗೊಂಡಿವೆ.
ಆವುದರಿನಾವಾಗ ದೈವ ತಾನೊಲಿದೀತೋ ? |
ಪೂರ್ವಿಕದ ನಿಯತಿಯನದೆಂದು ಸಡಲಿಪುದೋ ? ||
ಭಾವಿಸುಕೃತವದೆಂದು ಪೂರ್ವ ದುರಿತಕೆ ಮಿಗಿಲೂ ? |
ದೈವಿಕರಹಸ್ಯವದು – ಮಂಕುತಿಮ್ಮ || ೫೧೩ ||
ದೈವದ ಯಾವುದರಿಂದ ನಮಗೆ ಒಲಿಯುತ್ತದೆ , ನಮ್ಮ ಪಾಪ ದ ಫಲ ಅನುಭವಿಸಲು ರಿಯಾಯಿತಿ ತೋರುವದೇ ? ಹಿಂದಿನ ಪಾಪಕ್ಕಿಂತ ಮುಂದೆ ನಾವು ಗಳಿಸುವ ಪುಣ್ಯ ಲಾಭ ನೀಡಿತೆ ? ಉತ್ತರಿಸುವರು ಇಲ್ಲ. ಇದು ದೈವದ ರಹಸ್ಯವಾಗಿದೆ.
ಬರದಿಹದರೆಣಿಯಲಿ ಬಂದಿಹುದ ಮರೆಯದಿರು |
ಗುರುತಿಸೊಳಿತರುವುದನು ಕೇಡುಗಳ ನಡುವೆ ||
ಇರುವ ಭಾಗ್ಯವೆ ನೆನೆದು ಬಾರನೆಂಬುದು ಬಿಡು|
ಹರುಷಕದೆ ದಾರಿಯೆಲೊ – ಮಂಕುತಿಮ್ಮ || ೭೫೯ ||
ಇಲ್ಲದಿರುವ ದಕ್ಕೆ ಚಿಂತಿಸುತ್ತಾ ,ಇರುವ ಸಿರಿಯನ್ನು ಮರೆಯದಿರು. ಕೆಟ್ಟದರ ನಡುವೆ ಒಳ್ಳೆಯದಿರುವುದರ ಗುರುತಿಸಿಕೊ.ಇರುವ ಸುಖಕ್ಕೆ ಮೆರೆದು, ಕರೆದರೆ ಬಾರೆನು ಎನ್ನಬೇಡ. ಅದೇ ಸುಖದ ಹಾದಿ.
ಜನ್ಮ ಸಾವಿರ ಬರಲಿ ,ನಷ್ಟವದರಿಂದೇನು ?
ಕರ್ಮ ಸಾವಿರವಿರಲಿ ,ಕಷ್ಟ ನಿನಗೇನು ? ||
ಬ್ರಹ್ಮ ಹೃದಯದಿ ನಿಲ್ಲೆ ಮಾಯೆಯೇಗೈದೊಡೇಂ |
ಇಮ್ಮಿದಳ ಸರಸವದು – ಮಂಕುತಿಮ್ಮ || ೯೧೬ ||
ಮಾನವನೇ ನಿನಗೆ ಸಾವಿರ ಜನ್ನ ಬರಲಿ, ನಷ್ಟ ವಿಲ್ಲ ಸಾವಿರ ಕರ್ಮ ಇರಲಿ ನಿನಗೆ ಕಷ್ಟವಿಲ್ಲ. ಹೃದಯದಲ್ಲಿ ದೇವರು ನೆಲೆಯಾದರೆ ಮಾಯೆ ಏನು ಮಾಡಿದರೂ ಅದು ಇನಿಯಳ್ ಸರಸವಷ್ಟ !ಕಗ್ಗದ ಒಡಲಿನ ವಿಸ್ತಾರ ಅಪಾರ ರಾಜಕೀಯ, ಧಾರ್ಮಿಕ, ಸೈದ್ದಾಂತಿಕ ವಾಗಿಯು ಕಗ್ಗ ತಿಳಿವಿನ ಹರಿವನ್ನು ಹರಿಸುತ್ತದೆ ಕಗ್ಗ ದಲ್ಲಿ ಚರ್ಚಿಸದ ವಿಷಯಗಳೇ ಇಲ್ಲ. ಇದರಿಂದಾಗಿ ಮನೆತನಗಳಲ್ಲಿ ನಿರಂತರವಾಗಿ ಜನಪ್ರಿಯವಾಗಿದೆ.
ಕಗ್ಗ ಓದಿ ಅರ್ಥೈಸಿಕೊಳ್ಳಲು ಸುಲಭ ಅಲ್ಲ ಅಂತಯೇ ಪರಿಚಯಿಸುವದು ಸಹ ಸಾಧ್ಯವಾದಷ್ಟು ಈ ಮೇರು ಕೃತಿಯ ಪರಿಚಯವನ್ನು ಹಾಕಿದ್ದೇನೆ.
- ರೇಶ್ಮಾ ಗುಳೇದಗುಡ್ಡಾಕರ್