ಬಾಡಿ ಹೋಗದ ಪ್ರೀತಿ ಜಲವು…ಬಗೆದರಷ್ಟೆ ಒಳಗೆ ಪಸೆಯು…ವಾಣಿ ಭಂಡಾರಿ ಅವರ ಲೇಖನಿಯಲ್ಲಿ ಮೂಡಿದ ಪ್ರೀತಿಯ ಕವಿತೆ, ತಪ್ಪದೆ ಮುಂದೆ ಓದಿ…
ಎಷ್ಟು ಜನುಮ ಕಾಯಬೇಕೊ
ಒಲಿದ ಒಲವ ಪಡೆಯಲು,,
ಎಷ್ಟು ಆಳದ ಭಾವ ಚೆಲ್ಲಬೇಕೊ
ಒಲಿದ ಜೇನ ಸವಿಯಲು//ಎಷ್ಟು//
ಆಳಕ್ಕಿಳಿದ ಬೇರಿನಂತೆ ನೆಲದ
ಕಸುವು ಮರಕೆ ತಾನೆ ಹಿತವು,,
ಪ್ರೀತಿ ಬಳ್ಳಿ ಹಬ್ಬಿದಂತೆ ಸುಮದ
ಚಿಗುರು ಪ್ರೇಮಕಲ್ಲವೆ ಗೆಲವು//೨//.
ಬಾಡಿ ಹೋಗದ ಪ್ರೀತಿ ಜಲವು
ಬಗೆದರಷ್ಟೆ ಒಳಗೆ ಪಸೆಯು,,
ಹಿಡಿ ನಲ್ಮೆಗಾಗಿ ಕಾದು ಕುಳಿತು
ಬೊಗಸೆ ತುಂಬಿ ಹರಿವ ಒಲವು//೩//.
ಎಷ್ಟು ಕಾಲ ಕಾಯಬೇಕು ಕಾದ
ನೆಲವು ತಬ್ಬಿ ತಂಪ ನೀಗಲು,,,
ಸುರಿವ ಮಳೆಗೂ ಕಾಲ ಬರಬೇಕು
ನಲಿದ ಪ್ರೀತಿ ಉಕ್ಕಿ ಹರಿಯಲು//೪//
- ವಾಣಿ ಭಂಡಾರಿ
