‘ಅಪ್ಪ ಮಗಳ ಬಾಂಧವ್ಯ’ ದ ಕತೆ

ಪ್ರೀತಿಸಿದ ಹುಡುಗನ ಹಿಂದೆ ಮನೆ ಬಿಟ್ಟು ಹೊರಟ ಶಾನ್ವಿಗೆ ತಂದೆಗೆ ಅವಳ ಆಯ್ಕೆ ಇಷ್ಟವಿರಲಿಲ್ಲ. ತಂದೆಯ ವಿರೋಧದ ನಡುವೆ ಶ್ವಾನಿ ತಾನು ಇಷ್ಟ ಪಟ್ಟ ವೈದಿಕ್ ನನ್ನು ಮದುವೆಯಾದಳು. ಮುಂದೆ ವೈದಿಕ್ ಬಣ್ಣ ಬದಲಾಯಿತು. ಗುರುಮೂರ್ತಿ ಅವರ ಅಪ್ಪ ಮಗಳ ಬಾಂಧವ್ಯದ ಕತೆಯನ್ನು ತಪ್ಪದೆ ಮುಂದೆ ಓದಿ…

ಅಪ್ಪ ನಾನು ವೈದಿಕ್ ನ ಪ್ರೀತಿ ಮಾಡ್ತ ಇದ್ದಿನಿ. ಅವನನ್ನೆ ಮದುವೆಯಾಗ ಬೇಕೆಂದಿರುವೆ ಎಂದು ಮಗಳು ಶಾನ್ವಿ ಹೇಳಿದಾಗ ಅವಳ ಮುಖವನ್ನು ನೋಡಿದೆ. ಯಾವುದೆ ಆತಂಕವಿಲ್ಲದೆ ಮನದ ಆಸೆಯನ್ನು ಹೊರ ಹಾಕಿದ್ದಳು. ಬೇಡ ಮಗಳೇ ,ವೈದಿಕ್ ನಿನಗೆ ಸೂಕ್ತ ಹುಡುಗನಲ್ಲ. ನಿನ್ನ ಪ್ರೀತಿಯನ್ನು ನಿಲ್ಲಿಸಿ, ಅವನ ಮೇಲಿನಾಸೆಯನ್ನು ಬಿಟ್ಟು ಬಿಡು ಎಂದು ನೇರವಾಗಿ‌ ಹೇಳಿದೆ. ಇಲ್ಲ ಅಪ್ಪ, ಅವನು ತುಂಬಾ ಒಳ್ಳೆಯವನು. ಒಳ್ಳೆಯ ಕೆಲಸ, ಕೈತುಂಬಾ ಸಂಬಳ, ಸ್ವಂತ ಮನೆ ಎಲ್ಲಾ ಇದೆ ಅವನಿಗೆ ಎಂದಳು ಶಾನ್ವಿ.

ಎಲ್ಲಾ ಇದೆ ನಿಜ, ಆದರೆ ಒಳ್ಳೆಯ ಗುಣ ವಿಲ್ಲವಲ್ಲ, ಅವನ ಬಗ್ಗೆ ಕಾಲೇಜ್ ನ ದಿನಗಳಿಂದಲೂ ಒಳ್ಳೆಯ ಅಭಿಪ್ರಾಯವಿಲ್ಲ‌ ಮಗಳಿಗೆ ಉತ್ತರಿಸಿದೆ. ಅದು ನಿಮಗೆ ಯಾರೋ ತಪ್ಪು ಅಭಿಪ್ರಾಯವನ್ನು‌ನೀಡಿದ್ದಾರೆ ಅಷ್ಟೆ ಅವನು ತುಂಬಾ ಒಳ್ಳೆಯ ಹುಡುಗ I Like him Very much ಎಂದಳು ಶಾನ್ವಿ. ಅದೇಕೊ ನನಗೆ ಇಷ್ಟವಿಲ್ಲ, ಇದರ ಮೇಲೆ ನಿನ್ನ ಇಷ್ಟ.ನಿನಗೆ ಹೇಳುವಷ್ಟು ಜಾಣ ನಾನಲ್ಲ ಎಂದು ಮಾತಿಗೆ ವಿರಾಮ ಹೇಳಿದೆ.

ಒಂದು ತಿಂಗಳ ಕಾಲ ಅವನ ವಿಷಯ ಪ್ರಸ್ತಾಪ ಆಗಲೇ ಇಲ್ಲ. ಮಗಳು ನನ್ನ ಮಾತುಗಳನ್ನು ಕೇಳಿ ಅವನಿಂದ ದೂರವಾಗಿರಬಹುದೆಂದು ಅಂದು ಕೊಂಡೆ. ನಾನು ವೈದಿಕ್ ಮದುವೆ ಮಾಡಿಕೊಳ್ಳುತ್ತಾ ಇದ್ದೆವೆ,ನಿಮ್ಮ ಆಶೀರ್ವಾದ ಬೇಕು ನನಗೆ ಎಂದು ನನ್ನ ಬಳಿ ನಿಂತಳು ಶಾನ್ವಿ. ಬೇಡ ಅನ್ನೊ ಹುಡುಗನ ಜೊತೆ ಹಟಕ್ಕೆ ಬಿದ್ದು ಮದುವೆಯಾಗಲು ಹೊರಟ ಹುಡುಗಿಗೆ ನನ್ನ ಆಶೀರ್ವಾದ ಇಲ್ಲ ಸ್ವಲ್ಪ ಕಟುವಾಗಿ ಹೇಳಿದೆ.

ಸಣ್ಣವಳಿದ್ದಾಗಿನಿಂದಲು ನನಗೆ ಯಾವುದನ್ನು ಬೇಡ ಅನ್ನಲಿಲ್ಲ. ಈ ವಿಷಯದಲ್ಲೆಕೆ ಕಟುಕನಾಗಿರುವೆ ಕೇಳಿದಳು ಶಾನ್ವಿ. ತಾಯಿಯಿಲ್ಲದ ಮಗುವಿಗೆ ತಂದೆಯಾಗಿ ತಾಯಿಯಾಗಿ ಅಕ್ಕರೆಯಿಂದ ಸಾಕಿರುವೆ. ತಾಯಿಯ ಮಮತೆಯನ್ನು ತಂದೆಯ ಪ್ರೀತಿಯನ್ನು ಧಾರೆ ಎರೆದಿರುವೆ ಈ ಒಂದು ವಿಷಯಕ್ಕೆ ಹಟಕ್ಕೆ ಬೀಳದೆ ನನ್ನ ಮಾತನ್ನು ಕೇಳಿ ವೈದಿಕ್ ನ ಸಹವಾಸದಿಂದ ದೂರವಿರು ಎಂದು ಅಂಗಲಾಚಿದೆ.

ನನ್ನ ಮನಕ್ಕೆ ವೈದಿಕ್ ಯೋಗ್ಯ ಎನಿಸಿದ್ದಾನೆ ನಾನು ಮದುವೆಯಾಗುವುದಾದರೆ ಅವನನ್ನೆ ಮದುವೆಯಾಗೊದು, ಬೇಡ ಎಂದು ಹಟ ಹಿಡಿಯದೆ ಹಾರೈಸಿ ಕಳುಹಿಸಿ ಕೊಡಿ ಎಂದಳು ಶಾನ್ವಿ.

 

ಇನ್ನೂ ನಾನೇನು ಹೇಳಲಾರೆ, ನೀನೇನು ಚಿಕ್ಕ ಮಗುವಲ್ಲ ನಿನ್ನ ಹಣೆಯ ಬರಹದಲ್ಲಿ ಆಗಬೇಕಾದ್ದು ಆಗುತ್ತೆ ಆ ದೇವರು ನಿನ್ನ ಕಾಪಾಡಲಿ ಎಂದು ಹೇಳಿ ಗೋಡೆಯ ಮೇಲಿದ್ದ ಹೆಂಡತಿಯ ಫೋಟೊವನ್ನು ನೋಡಿದೆ. ಫೋಟೊಗೆ ಹಾಕಿದ್ದ ಹೂವಿನ ಹಾರ ಎಡ ಬದಿಯಿಂದ ಜಾರಿ ಬಿತ್ತು. ನೋಡು ನಿನ್ನ ಅಮ್ಮನಿಗೂ ಈ ಸಂಬಂಧ ಇಷ್ಟವಿಲ್ಲ ಎಂದು ಮಗಳ ಮುಖ ನೋಡಿದೆ.
ಯಾವುದನ್ನು ಲೆಕ್ಕಿಸದೆ ತನ್ನ ಬ್ಯಾಗ್ ನ್ನು ಹಿಡಿದು ಹೊರಟು ನಿಂತಳು ಶಾನ್ವಿ.

ಹೊರಟು ನಿಂತ ಶಾನ್ವಿಯ ತಡೆದು, ಅವಳ ಅಮ್ಮನ ಚಿನ್ನದ ಸರವನ್ನು ಹೊರ ತೆಗೆದು ಅವಳ ಮುಂದೆ ಹಿಡಿದೆ. ಅಮ್ಮನ ಚಿನ್ನದ ಸರವನ್ನು ತೆಗೆದುಕೊಂಡು ಮನೆಯಿಂದ ಹೊರಗೆ ಹೆಜ್ಜೆ ಗಳನ್ನು ಹಾಕಿದಳು ಶಾನ್ವಿ ನಾಲ್ವರು ಸ್ನೇಹಿತರ ಮಧ್ಯೆ ಶಾನ್ವಿ ಮದುವೆಯಾಯಿತೆಂದು ಕೇಳಪಟ್ಟೆ. ಮದುವೆಯಾದ ಮಗ ಸೊಸೆಯನ್ನು ಅವನಪ್ಪ ಅಮ್ಮ ಹೊರಗಿಟ್ಟರೆಂದು,ಮೂರು ದಿನಗಳ ಕಾಲ ಸ್ನೇಹಿತನ ರೂಮಿನಲ್ಲಿದ್ದು, ಬೇರೆ ಮನೆ ಹುಡುಕಿ ಹೊಸ ಸಂಸಾರ ಶುರುವಿಟ್ಟಳು ಶಾನ್ವಿ.

ಮೊದ ಮೊದಲು ಚೆನ್ನಾಗಿ ಸಾಗಿದ ಸಂಸಾರ,ನಂತರದ ದಿನಗಳಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಮನಸ್ತಾಪಗಳು ಮನೆ ಮಾಡಿದವು. ಅದರಲ್ಲೂ ಆ ರಾತ್ರಿ ಸ್ನೇಹಿತನೊಬ್ಬನ ಹೆಂಡತಿಯನ್ನು ತನ್ನೊಡನೆ ಮಲಗಿಸಿಕೊಂಡು ಕಳುಹಿಸಿಕೊಟ್ಟ ವೈದಿಕ್ ನ ವರ್ತನೆಯನ್ನು ಸಹಿಸಿಕೊಳ್ಳಲಿಲ್ಲ ಶಾನ್ವಿ. ಗಂಡನ ಜೊತೆ ಜಗಳಕ್ಕೆ ಇಳಿದಳು. ಅದರಲ್ಲೂ ಆ ರಾತ್ರಿ ವೈದಿಕ್ ಕುಡಿದು ಸ್ನೇಹಿತನ ಜೊತೆ ಬಂದು ನೀನು ಅವನ ಜೊತೆ ಮಲಗು ಎಂದು ಗಂಟು ಬಿದ್ದಾಗ ಶಾನ್ವಿಯ ಸಹನೆಯ ಕಟ್ಟೆ ಒಡೆಯಿತು.

ಗಂಡನ ಮನೆಯಿಂದ ನೇರವಾಗಿ ಅಪ್ಪನ ಮನೆಗೆ ಬಂದಳು. ಮನೆಗೆ ಬಂದ ಮಗಳಿಗೆ ಮನೆಯಿಂದ ಹೊರಡುವ ದಿನ ನಾ ಆಡಿದ ಮಾತುಗಳನ್ನು ಜ್ಞಾಪಿಸಿದೆ. ತನ್ನ ತಪ್ಪನ್ನು ಒಪ್ಪಿಕೊಂಡಳು ಶಾನ್ವಿ. ಮಗಳೆಂಬ ಮಮಕಾರದಿಂದ ಅವಳನ್ನು ಮನೆಗೆ ಸೇರಿಸಿದೆ. ಹೆಂಡತಿಯನ್ನು ಕಳುಹಿಸಿ ಕೊಡಿ ಎಂದು ವೈದಿಕ್ ಮನೆ ಬಾಗಿಲಲ್ಲಿ ನಿಂತು ಕೇಳಿದ. ಇಲ್ಲ ಸಾಧ್ಯವಿಲ್ಲ. ನಾನು ಮಗಳನ್ನು ಕಳುಹಿಸುವುದಿಲ್ಲ ಎಂದು ಹೇಳಿದೆ. ಗಲಾಟೆ ಮಾಡಿದ. ಅವನ ಯಾವ ಗಲಾಟೆಗೂ ಬಗ್ಗಲಿಲ್ಲ.ಶಾನ್ವಿ ಮನೆಯಿಂದ ಹೊರ ಬರಲಿಲ್ಲ. ಮೂರು ದಿನಗಳ ನಂತರ ವೈದಿಕ್ ತನ್ನ ಸ್ನೇಹಿತರನ್ನು ಸಂಧಾನಕ್ಕೆ ಕಳಿಹಿಸಿದ. ಸ್ನೇಹಿತರು ನನ್ನ ಬಳಿ ಬಂದು ಕುಡಿತದ ಅಮಲಿನಲ್ಲಿ ವೈದಿಕ್ ತಪ್ಪು ಮಾಡಿದ್ದಾನೆ, ಇಂತಹ ತಪ್ಪು ಮುಂದೆ ಎಂದಿಗೂ ಆಗುವುದಿಲ್ಲ, ದಯವಿಟ್ಟು ಅವನನ್ನು ಕ್ಷಮಿಸಿ ಶಾನ್ವಿಯನ್ನು ಕಳಿಹಿಸಿ ಕೊಡಿ ಎಂದು ಮಧ್ಯಸ್ಥಿಕೆ ವಹಿಸಿದರು. ಅವರ ಮಧ್ಯಸ್ಥಿಕೆಯ ಮಾತುಗಳಿಗೆ ಜಗ್ಗಲಿಲ್ಲ. ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂತಿರುಗಿದರು.

ಅಪ್ಪ ನಾನು ವೈದಿಕ್ ಗೆ ವಿಚ್ಚೇದನ ನೀಡ ಬಯಸಿರುವೆ ಮಗಳು ಬಂದು ಹೇಳಿದಳು. ಮಗಳನ್ನು ಒಮ್ಮೆ ನೋಡಿದೆ. ಹೌದು ಅವನಿಗೆ ವಿಚ್ಚೇದನ ನೀಡುವೆ, ಸಹಾಯ ಮಾಡುವೆಯಾ? ಕೇಳಿದಳು. ಗೊತ್ತಿರುವ ವಕೀಲರ ಹತ್ತಿರ ಮಗಳನ್ನು ಕರೆದು ಕೊಂಡು ಹೋಗಿ ವಿಚ್ಚೇದನದ ಅರ್ಜಿಯನ್ನು ಹಾಕಿಸಿದೆ. ಆರು ತಿಂಗಳ ಕಾಲ ಮಗಳ ಜೊತೆ ಕುಟುಂಬ ನ್ಯಾಯಲಯಕ್ಕೆ ಅಲೆದೆ. ಕೊನೆಗೂ ವಿಚ್ಚೇದನ ದೊರೆಯಿತು. ಮಗಳ ಮುಖ ಅರುಳಿತು. ವಿಚ್ಚೇದನ ಪತ್ರ ಕೈಯಲ್ಲಿ ಹಿಡಿದು ತಂದ ಮಗಳಿಗೆ ಕೇಳಿದೆ ಮುಂದೇನು? ಎಂದು. ನೀವು ಹೇಗೆ ಹೇಳುವಿರೊ ಹಾಗೆ‌ ಕೇಳುವೆ ಎಂದಳು ಮಗಳು. ಮರು ಮದುವೆ ಕೇಳಿದೆ.ನಿಮ್ಮಿಷ್ಟ ಅಂದಳು ಶಾನ್ವಿ. ಮಗಳ ಮರು ಮದುವೆಗೆ ಹುಡುಗಾಟ ಪ್ರಾರಂಭಿಸಿದೆ.ಗಂಡು ನಾವು ಎಣಿಸದಷ್ಟು ಸುಲಭವಾಗಿ ಸಿಗಲಿಲ್ಲ.

ಶಾನ್ವಿ ನೋಡಲು ಬಂದವರು ವಿಚ್ಚೇದನದ ಕಾರಣ ಕೇಳಿದರು. ವಿಚ್ಚೇದನ ಕೊಟ್ಟ ಹುಡುಗಿಯ ಮನೆ ಸೊಸೆಯನ್ನಾಗಿ ಮಾಡಿಕೊಳ್ಳಲು ಭಯವಾಗುತ್ತದೆಂದು ಹಿಂಜರಿದರು.
ಮದುವೆಯಾಗಲು ಮುಂದೆ ಬಂದವನು ಕಾರ್ತಿಕ್. ಅವನು ಕೂಡ ವಿಚ್ಚೇದನ ಪಡೆದವನಾಗಿದ್ದ . ಇಬ್ಬರು ಒಬ್ಬರಿಗೊಬ್ಬರು ಮಹಡಿಗೆ ಹೋಗಿ ಮಾತನಾಡಿ ನಗುನಗುತಾ ಬಂದರು.
ಮದುವೆಯಾದ ಮೇಲೆ ಅವನೊಡನೆ ಅಮೆರಿಕಾಗೆ ಹೋಗಲು ಒಪ್ಪಿದ್ದಳು ಶಾನ್ವಿ.

ಇದ್ದ ಒಬ್ಬ ಮಗಳನ್ನು ದೂರದ ಅಮೆರಿಕಾಗೆ ಕಳುಹಿಸಲು ಮನಸ್ಸು ಒಪ್ಪಲಿಲ್ಲ. ಮಗಳು ಆಸೆ ಪಟ್ಟಿದ್ದಾಳೆ ಬೇಡ ಅನ್ನುವ ಮನಸ್ಸಾಗಲಿಲ್ಲ.  ಮದುವೆಗೆ ಸಮ್ಮತಿಸಿದೆ. ಗೋಡೆಯ ಮೇಲಿನ ನನ್ನವಳ ಫೋಟೊಗೆ ಹಾಕಿದ ಹಾರ ಈ ಬಾರಿ ಬಲಗಡೆಯಿಂದ ಜಾರಿತು. ನನ್ನವಳಿಗೂ ಈ ಮದುವೆ ಇಷ್ಟವಿದೆ ಎಂದು ,ಮಗಳ ಮದುವೆ ಮಾಡಿಕೊಟ್ಟೆ. ಮದುವೆಯಾದ ತಿಂಗಳಿಗೆ ಅಮೆರಿಕಾಕ್ಕೆ ಹಾರಿದಳು ಶಾನ್ವಿ.

ಅಮೆರಿಕಾದಿಂದ ಬರುತ್ತಿದ್ದ ಮಗಳ ಫೋನಿನಲ್ಲಿ ತಾನು ಚೆನ್ನಾಗಿರುವೆ, ಸಂಸಾರ ಚೆನ್ನಾಗಿ ಸಾಗಿದೆ, ನಿಮ್ಮ ಅಳಿಯ ನನ್ನ ಚೆನ್ನಾಗಿ ನೋಡಿ ಕೊಳ್ಳುತ್ತಿದ್ದಾನೆ ಎಂಬ ಮಗಳ ಮಾತುಗಳ ಕೇಳಿ ಖುಷಿಪಡುತ್ತಿದೆ. ತಾಯಿಯಿಲ್ಲದ ಮಗಳನ್ನು ಇಪ್ಪತೈದು ವರ್ಷ ಸಾಕಿದ ತಂದೆಗೆ ಇದಕ್ಕಿಂತ ಹೆಚ್ಚಿನದೇನು ಬೇಕು. ಮಗಳು ಒಳ್ಳೆಯ ಮನೆ ಸೇರಿದಳಲ್ಲ ಎಂಬ ಸಂತೃಪ್ತಿ ಮನೆ ಮಾಡಿತು.
ತಂದೆ ಮಗಳ ಅನುಬಂಧ ದಿನದಿನಕ್ಕೂ ಹೆಚ್ಚಾಯಿತು. ಮಗಳು ಅಳಿಯನ ಒತ್ತಾಯದಿಂದ ನಾನು ಅಮೆರಿಕಾಗೆ ಹೋಗಿ ಅವರೊಡನೆ ನೆಲೆಸಿದೆ.

ಜೀವನದಲ್ಲಿ ತನಗಾದ ಕಹಿ ಘಟನೆಯನ್ನು ಮರೆತು,ನಗು ನಗುತ್ತಾ ಸಂಸಾರ ನಡೆಸುತ್ತಿರುವ ಮಗಳ ಕಂಡು ನೆಮ್ಮದಿ ಅನಿಸಿತು. ಇಳಿ ವಯಸ್ಸಿನ ನನಗೆ ಇದಕ್ಕಿಂತ ಇನ್ನೇನು ಬೇಕು ಅಲ್ವಾ!!!


  • ಗುರುಮೂರ್ತಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW