ಕಾದಂಬರಿಕಾರ ಶಿವರಾಜ ಯಾದವ್ ಜಿ. ಎಲ್ ಅವರ “ಗಾಮಿನಿ” ನೈಜ ಘಟನೆ ಆಧಾರಿತ ಕಾದಂಬರಿಯು ಒಟ್ಟು ೧೨೦ ಪುಟಗಳಿಂದ ಕೂಡಿದ್ದು, ಕಾದಂಬರಿಯಲ್ಲಿ ಪ್ರೀತಿ, ವಿರಹ, ಬದುಕಿನ ಜವಾಬ್ದಾರಿಗಳ ನಡುವೆ ಸಿಲುಕುವ ಪಾತ್ರಗಳ ಚಿತ್ರಣ ಅದ್ಭುತವಾಗಿದೆ. ಈ ಕೃತಿಯ ಕುರಿತು ಲೇಖಕರಾದ ಓಂಕಾರ ಪಾಟೀಲ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಗಾಮಿನಿ
ಲೇಖಕರು : ಶಿವರಾಜ ಯಾದವ್ ಜಿ. ಎಲ್.
ಪ್ರಕಾಶಕರು: ಮೇಘ ಪ್ರಕಾಶನ ನಾಗರ ಹುಣಸೆ.
ಕಾದಂಬರಿಯ ಬೆಲೆ : ೧೪೦ ರೂಪಾಯಿ.
“ಗಾಮಿನಿ” ಈ ಕಾದಂಬರಿಯು ಲೇಖಕರಾದ ಶಿವರಾಜ ಯಾದವ ಜಿ. ಎಲ್ ಅವರು ಹೇಳಿದಂತೆ ನೈಜಘಟನೆ ಆಧಾರಿತ ಕಾದಂಬರಿಯಾಗಿದ್ದು ಈ ಕಾದಂಬರಿಯು ಅವರ ಲೇಖನನಿಯಿಂದ ಹೊರ ಹೊಮ್ಮಿದ ಚೊಚ್ಚಲ ಕೃತಿಯಾಗಿದೆ.
ಲೇಖಕ ಶಿವರಾಜ ಯಾದವ್ ಜಿ. ಎಲ್. ಅವರು ವೃತ್ತಿಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿದ್ದರೂ ಸಹಾ ಅವರ ಕನ್ನಡ ಸಾಹಿತ್ಯ ಬಗೆಗಿನ ಒಲವು ಅವರನ್ನು ಈ ಕಾದಂಬರಿ ಬರೆಯಲು ಪ್ರೇರಣೆ ನೀಡಿದೆ ಅನ್ನಬಹುದು.

“ಗಾಮಿನಿ” ಕಾದಂಬರಿಯ ಕುರಿತು ವಿಶೇಷವಾಗಿ ಹೇಳಬೇಕಾದರೆ ಈ ಕಾದಂಬರಿಯು ಭಾವನಾತ್ಮಕ ಒಳಹರಿವು ಹಾಗು ಜೀವನದ ಏರಿಳಿತಗಳನ್ನು ಆಪ್ತವಾಗಿ ಚಿತ್ರಿಸುವ ಕಾದಂಬರಿಯಾಗದ್ದು ನೈಜ ಘಟನೆಗಳಿಂದ ಪ್ರೇರಿತವಾಗಿ ರಚಿತವಾದ ಕಾದಂಬರಿಯ ನಾಯಕಿಯಾದ ಪ್ರಣವಿ, ನಾಯಕ ಹೇಮಂತನ ಮನಸಿನ ಭಾವನೆಗಳು ಮೌನ, ಮತ್ತು ಇಬ್ಬರ ಪ್ರೀತಿಯ ಹರಿವನ್ನು ಕಾದಂಬರಿಯ ಶೀರ್ಷಿಕೆಯ ಪದ “ಗಾಮಿನಿ” ಅತ್ಯಂತ ಅರ್ಥಪೂರ್ಣವಾಗಿ ಬಿಂಬಿಸುತ್ತದೆ.
“ಗಾಮಿನಿ” ಕಾದಂಬರಿಯು ಒಟ್ಟು ೧೨೦ ಪುಟಗಳಿಂದ ಕೂಡಿದ್ದು ಕಾದಂಬರಿಯಲ್ಲಿ ಪ್ರೀತಿ, ವಿರಹ, ಬದುಕಿನ ಜವಾಬ್ದಾರಿಗಳ ನಡುವೆ ಸಿಲುಕುವ ಪಾತ್ರಗಳ ಚಿತ್ರಣ ಅದ್ಭುತವಾಗಿದೆ. ಓದುಗರನ್ನು ಓಡಿಸಿಕೊಂಡು ಹೋಗುವ ಕಾದಂಬರಿಯು ಒಂದು ಕ್ಷಣ ಓದುಗರ ಕಣ್ಣಲ್ಲಿ ನೀರು ತರಿಸುವಂತ ಭಾವನಾತ್ಮಕ ಸನ್ನಿವೇಶಗಳನ್ನು ಸೃಷ್ಟಿಸುವ ಕಾದಂಬರಿಯಾಗಿದೆ.

ಕಾದಂಬರಿಯ ಲೇಖಕರಾದ ಶಿವರಾಜ್ ಜಿ.ಎಲ್ ಅವರು ಎಲ್ಲೂ ಕ್ಲಿಷ್ಟಕರ ಪದಗಳನ್ನು ಬಳಸದೆ ಅತ್ಯಂತ ಸರಳ ಮತ್ತು ಸುಂದರವಾದ ಕನ್ನಡ ಶಬ್ದಗಳನ್ನು ಬಳಸಿಕೊಂಡು ಕಥೆ ಹೆಣೆದಿದ್ದಾರೆ.
“ಗಾಮಿನಿ” ಕಾದಂಬರಿಯು ಹೊಸ ತಲೆಮಾರಿನ ಓದುಗರನ್ನು ಆಕರ್ಷಿಸುವ ಜೊತೆಗೆ ಪ್ರತಿಯೊಬ್ಬ ಓದುಗರ ನೆಚ್ಚಿನ ಕಾದಂಬರಿಯಾಗುವದಂತು ಗ್ಯಾರಂಟಿ ಅನ್ನುವುದು ನನ್ನ ಅನಿಸಿಕೆ.
- ಓಂಕಾರ ಪಾಟೀಲ – ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಕಾರ್ಯದರ್ಶಿಗಳು, ಬೀದರ.
