‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೯)

ಶ್ರೀಶೈಲದಲ್ಲಿ ಆಕೆ “ಜೀವನ ಪರ್ಯಂತ ಕೈ ಬಿಡೋದಿಲ್ಲಲ್ಲಾ?” ಎಂದು ಕೇಳಿದಳು. ಅವನು ನಸುನಕ್ಕು. ಮನೆಯವರ ಸಮ್ಮುಖದಲ್ಲಿ ಕೈ ಹಿಡಿದ.ಕೊನೆಗೆ ಏನಾಯಿತು? ವಕೀಲರಾದ ಪ್ರಕಾಶ ವಸ್ತ್ರದ ‘ನ್ಯಾಯದ ಕಣ್ಣು’ ಅಂಕಣದಲ್ಲಿ ‘ಶ್ರೀಶೈಲದಲ್ಲಿ ಕೈ ಹಿಡಿದು, ಕೋರ್ಟಲ್ಲಿ ಬಿಟ್ಟಳು’ ತಪ್ಪದೆ ಮುಂದೆ ಓದಿ…

ಪುಸ್ತಕ : ‘ಅಡ್ವೋಕೇಟ್ ಡೈರಿ ವೃತ್ತಿ ಬದುಕಿನ ಬುತ್ತಿ’
ಬೆಲೆ : 200/
ಖರೀದಿಗಾಗಿ : 9448015613

ಪೊಲೀಸರು ತಂದುಕೊಟ್ಟ ಕೋರ್ಟ್ ನೋಟಿಸನ್ನು ಕೈಗಿಟ್ಟನು. ಮುಖದಲ್ಲಿ ಆತಂಕದ ದುಃಖದ ಛಾಯೆ ಮಡುಗಟ್ಟಿತ್ತು. ಪರಿಶೀಲಿಸಿದೆ. ಸ್ವಚ್ಛ ಕನ್ನಡಲ್ಲಿ ಇರುವ ಅರ್ಜಿಯನ್ನು ತಿಳಿಯುವಂತೆ ಓದಿದೆ. ಮೊದಲಿನ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ ಪಿಸಿ) ಸೆಕ್ಷನ್ 125 ಈಗಿನ ಸೆಕ್ಷ ನ್ 144 ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಡಿಯಲ್ಲಿಜ್ಯು ಡಿಸಿಯಲ್ ಮ್ಯಾಜಿಸ್ಟ್ರೇಟ್ ಫಸ್ಟ್ ಕ್ಲಾಸ್ (ಜೆ ಎಂಎಫ್ ಸಿ) ಕೋರ್ಟಲ್ಲಿ ಉಪ ಜೀವನಕ್ಕೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಕೊಡುವಂತೆ ಪ್ರಾರ್ಥಿಸಿ ಹೆಂಡತಿ ಕೇಸು ದಾಖಲಿಸಿದ್ದಳು. ಅರ್ಥವಾಯಿತೇ? ನೀನು ಏನು ಹೇಳುವೆ ಎಂದು ಅವನೆ ಡೆಗೆ ಉತ್ತರಕ್ಕೆ ನೋಟ ಬೀರಿದೆ.

ಅವನು ಹೇಳಿದ ಪ್ರೇಮ ಕಥೆಯೊಂದು ಶಾರ್ಟ್ ಮೂವಿಗೆ ಒಳ್ಳೆಯ ಕಥೆ ಆಗುವಂತಿತ್ತು. ಕಟ್ಟು ಮಸ್ತಾದ ದೈಹಿಕ ಆರೋಗ್ಯವುಳ್ಳ 35 ವಯಸ್ಸಿನ ಯುವಕ. ಸುಮಾರು ಹತ್ತು ವರ್ಷಗಳಿಂದ ಪ್ರತಿವರ್ಷ ಹೋಳಿ ಹುಣ್ಣುಮೆಯ ಮರುದಿನ ಊರಿನ ಯುವಕ, ಯುವತಿಯರ, ಶ್ರೀಶೈಲ ಮಲ್ಲಿಕಾರ್ಜುನ ಭಕ್ತರ ತಂಡ ಕಟ್ಟಿಕೊಂಡು, ಯುಗಾದಿಯಂದು ಶ್ರೀಶೈಲ ಕ್ಷೇತ್ರಕ್ಕೆ ತಲುಪಲು ಪಾದಯಾತ್ರೆ ಹೋರಡುತ್ತಾನೆ.

ಅವಳು ಅದೆ ಊರಿನ ಯುವತಿ. ಐದು ವರ್ಷದಿಂದ ಶ್ರೀಶೈ ಲ ಪಾದಯಾತ್ರೆಗೆ ಹೆಜ್ಜೆ ಹಾಕುತ್ತಾಳೆ. ಮದುವೆಗೆ ಮೀರಿದ ವಯಸ್ಸು ಆಗಿಲ್ಲ. ಗೆಳತಿಯರ ಜೊತೆ ಪಾದಯಾತ್ರೆಯಲ್ಲಿ ಸೇರುತ್ತಾಳೆ,  ಜೊತೆಗೂಡುತ್ತಾಳೆ. ಮನೆಯಲ್ಲಿ ದೇವರ ದರುಶನಕ್ಕೆ ಹೋಗಲು ಕಟ್ಟು ಪಾಡುಗಳು ಇಲ್ಲ. ಯುಗಾದಿಯಂದು ಪರ್ವತ ಮಲ್ಲಯ್ಯನ ದರುಶನ ಮಾಡಬೇಕೆಂಬ ಸಂಕಲ್ಪ, ಮಾಡುತ್ತಾಳೆ.

ಆಂಧ್ರಪ್ರದೇಶ ರಾಜ್ಯದ ನಂದ್ಯಾಲ ಜಿಲ್ಲೆಯ ನಲ್ಲಮಲ್ಲ ಅರಣ್ಯದಲ್ಲಿ ಶ್ರೀಶೈಲದಲ್ಲಿ ಭ್ರಮರಾಂಬ ಶಕ್ತಿಪೀಠ, ಶ್ರೀ ಮಲ್ಲಿಕಾರ್ಜು ನಸ್ವಾಮಿಯ ಜ್ಯೋತಿರ್ಲಿಂಗ ಪುಣ್ಯ ಕ್ಷೇತ್ರ ಇದೆ. ಹೊಸ ವರ್ಷ ಯುಗಾದಿಯಂದು ಜಾತ್ರೆ, ರಥೋತ್ಸವ ನಡೆಯುತ್ತದೆ. ಮಲ್ಲಿಕಾರ್ಜುನ ಸ್ವಾಮಿಯ ಅಭಿಷೇಕ, ಶ್ರೀಶೈಲ ಜಗದ್ಗುರುಗಳು ಅಡ್ಡಪಲ್ಲಕ್ಕಿ ಮೂಲಕ ದೇವಸ್ಥಾನ ಪ್ರವೇಶ ದೃಶ್ಯ ಕಣ್ಣು ತುಂಬಿಕೊಳ್ಳಲು ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರದಿಂದ ಲಕ್ಷಾಂತರ ಜನರು ನೂರಾರು ಕಿಲೋಮೀಟರ್ ಕಾಲು ನಡಿಗೆಯಿಂದ, ಕೆಲವರು ಮರಗಾಲು ಕಟ್ಟಿಕೊಂಡು, ಶ್ರೀಶೈಲ ತಲಪುತ್ತಾರೆ. ಆಂಧ್ರ ಪ್ರದೇಶ, ದಕ್ಷಿಣ ಕರ್ನಾಟಕ ಇತರರು ಶಿವರಾತ್ರಿಯಂದು ಶ್ರೀಶೈಲಕ್ಕೆ ಹೋಗುತ್ತಾರೆ. ಸಾವಿರಾರು ಜನರು ಇರುವ ತಂಡಗಳ ಪಾದಯಾತ್ರಾರ್ಥಿಗಳಿಗೆ ದಾರಿಯ ಇಕ್ಕೆಲಗಳಲ್ಲಿ, ಹಗಲು ರಾತ್ರಿ ಎನ್ನದೆ ಊಟ, ವಸತಿ, ನಾಸ್ಟಾ, ತಂಪು ಪಾನೀಯ, ವೈದ್ಯಕೀಯ ಔಷದೊಪಚಾರ ವ್ಯವಸ್ಥೆ ಮಾಡಿ ಭಕ್ತರು ಧನ್ಯತೆ ಮೆರೆಯುತ್ತಾರೆ. ಹಲವು ಭಕ್ತರು ಯಾರ್ತಾರ್ಥಿಗಳ ಕಾಲುಗಳಿಗೆ ಎಣ್ಣೆ ಹಚ್ಚಿ ಮಾಲಿಶ್ ಸೇವೆ ಮಾಡಿ ಕೃತಾರ್ಥರಾಗುತ್ತಾರೆ. “ಮಲ್ಲಯ್ಯ… ಮಲ್ಲಯ್ಯ ಗಿರಿ ಗಿರಿ ಮಲ್ಲಯ್ಯನ ನೋಡೋಣ ಬನ್ನಿ” ಹಾಡುತ್ತ, ಪರುತ ಮಲ್ಲಯ್ಯ ಘೆ.. ಅನ್ನುವ ರಾಗಬದ್ದ ಜೈಕಾರದಿಂದ ಪಾದಯಾತ್ರೆ ಸಾಗುತ್ತದೆ.

ನೂರಾರು ಕಿಲೋಮೀಟರ ಕರ್ನಾಟಕದಲ್ಲಿ ಸಾಗಿ ಆಂಧ್ರಪ್ರದೇಶ ಗಡಿ ದಾಟುತ್ತದೆ. ಅಲ್ಲಿಂದ ನಂದ್ಯಾಲ ಜಿಲ್ಲೆಯ ಆತ್ಮಕೂರು, ವೆಂಕಟಾಪುರಂ ಹಳ್ಳಿಯವರೆಗೆ ಸರಾಗವಾಗಿ ದಾರಿ ಸಾಗುತ್ತದೆ. ವೆಂಕಟಾಪುರಂದಿಂದ ಶ್ರೀಶೈಲದವರೆಗೆ ದುರ್ಗಮವಾದ ಕುರುಚಲು ಬೆಟ್ಟ, ಕಾಡು, ರಾಶಿ ರಾಶಿ ಕಲ್ಲು ಬಂಡಿಗಳಿಂದ ಭಯಾನಕ ಪ್ರಪಾತ ತಿರುವು, ಏರು ಇಳಿವು, ಕಾಲು ಜಾರಿ ಬೀಳುವ ಸಂಭವ ಇರುವ ನಲ್ಲಮಲ್ಲ ಅರಣ್ಯ ಪ್ರದೇಶ. ಹುಲಿ ಚಿರತೆ ಹಿಂಸ್ರ ಪ್ರಾಣಿಗಳಿಗೆ ಬಲಿಯಾಗುವ ಅಪರೂಪದ ಸಂಧರ್ಭ ಎದಿರು ಆಗುತ್ತದೆ. ಬೇಸಿಗೆಯ ನೆತ್ತಿ ಸುಡುವ ರಣ ರಣ ಬಿಸಿಲು, ಮೈಯಿಂದ ಸುರಿ ಯುವ ಬೆವರು ಹರಿಯುತ್ತದೆ. ಯುಗಾದಿ ಮತ್ತು ಶಿವರಾತ್ರಿಗಳಲ್ಲಿ ಮಾತ್ರ ಅರಣ್ಯ ಇಲಾಖೆ ಯಾತ್ರಾರ್ಥಿಗಳಿಗೆ ಅರಣ್ಯ ಪ್ರವೇಶದ ಪರವಾನಿಗೆ ಕೊಟ್ಟು. ಊಟ ಉಪಚಾರ, ವಸತಿಗೆ ವ್ಯವಸ್ಥೆ ಮಾಡುತ್ತದೆ. ಇಷ್ಟೆಲ್ಲ ಕಷ್ಟ ಕಾರ್ಪಣ್ಯ ಅನುಭವಿಸಿ, ಮೊದಲು ಶ್ರೀವೀರಭದ್ರನ ದರ್ಶನದ ನಂತರ ಶ್ರೀಶೈಲ ಪುರ ಪ್ರವೇಶವಾಗಿ ಪಾದಯಾತ್ರೆ ಸಂಪನ್ನ ಆಗುತ್ತದೆ.

ಸುಮಾರು ನೂರು ಕಿಲೋಮೀಟರು ನಡಿಗೆ ಆಗಿತ್ತು. ಅವಳಿಗೆ ಜ್ವರ ಪ್ರಾರಂಭವಾಯಿತು. ಅವನು ಔಷಧ. ವೈದ್ಯಕೀಯ ಆರೈಕೆ ಮಾಡಿ ಹತ್ತಿರವಾದನು. ವಸತಿ ಜಾಗದಲ್ಲಿ ರಾತ್ರಿಯಲ್ಲ ಆರೈಕೆ ಮಾಡಿದ. ಚೇತರಿಸಿಕೊಂಡಳು. ಪಾದಯಾತ್ರೆ ನಲ್ಲಮಲ್ಲ ಕಾಡನ್ನು ಪ್ರವೇಶಿಸಿತು. ಪರುತ ಮಲ್ಲಯ್ಯ ಘೆ… ಶ್ರೀಶೈಲ ಮಲ್ಲಯ್ಯ ಘೆ… ಅನ್ನುವ ಜೈಕಾರ ಮುಗಿಲು ಮುಟ್ಟಿತು. ಬೆಟ್ಟ ಹತ್ತಿ ಬಂಡೆಗಲ್ಲು ಏರಿ ಇಳಿಯುವ, ಕಡಿದಾದ ದಾರಿಯಲ್ಲಿ ಸಾಗಬೇಕು. ಎಲ್ಲರೂ ಇವರಿಗಿಂತ ಮುಂದೆ ಸಾಗಿದ್ದರು. ಜ್ವರದ ತಾಪದಿಂದ ಅಶಕ್ತಗೊಂಡವಳಿಗೆ ಬಂಡೆಗಲ್ಲು ಏರಿ ಇಳಿಯುವದು ಅಸಾಧ್ಯವಾಯಿತು. ಧನ್ಯತೆಯಿಂದ ಬಲಗೈ ಸಹಾಯಕ್ಕೆ ಚಾಚಿದಳು. ಗಟ್ಟಿಯಾಗಿ ಹಿಡಿದುಕೊಂಡನು. ಶ್ರೀಶೈಲ ಮುಟ್ಟುವ ಮೊದಲು “ಜೀವನ ಪರ್ಯಂತ ಕೈ ಬಿಡೋದಿಲ್ಲಲ್ಲಾ?” ಎಂದು ಕೇಳಿದಳು. ಭರವಸೆ ನಗು ನಕ್ಕು ಇನ್ನಷ್ಟು ಭದ್ರವಾಗಿ ಕೈ ಹಿಡಿದುಕೊಂಡನು.

ಮನೆಯವರು ಒಪ್ಪಿಕೊಂಡು ಮದುವೆ ಮಾಡಿದರು. ವರ್ಷ ಕಳೆಯುವಷ್ಟರಲ್ಲಿ ಕೈ ಸಡಿಲಾದವು. ಹೊಂದಾಣಿಕೆ ಅಸಾಧ್ಯವಾಯಿತು. ತವರು ಮನೆ ಸೇರಿದಳು. ಮತ್ತೊಂದು ವರ್ಷ ಕಳೆಯಿತು. ಕೋರ್ಟಿಗೆ ಹೋದಳು. ನ್ಯಾಯಾಧೀಶರು ಸಂಧಾನಕ್ಕೆ ಪ್ರಯತ್ನಿಸಿದರು, ವಿಫಲವಾಯಿತು. ಅನಿವಾರ್ಯವಾಗಿ ಪರಸ್ಪರ ಒಪ್ಪಿಗೆ ಮೇಲೆ ವಿವಾಹ ವಿಚ್ಛೇದನೆ ಅರ್ಜಿ ಸಲ್ಲಿಸಿದರು. ನ್ಯಾಯಾಧೀಶರು ಸಂಧಾನಕ್ಕೆ ಮಿಡಿಷಯೆನ್ ಕೇಂದ್ರಕ್ಕೆ ಸಿಫಾರಸು ಮಾಡಿದರು. ಹಿರಿಯರು, ವಕೀಲರ ಹಾಜರಿಯಲ್ಲಿ ಹಲವಾರು ಸುತ್ತಿನ ಮಾತುಕತೆ ಆದವು. ಸಂಧಾನ ವಿಫಲವಾಯಿತು. ನ್ಯಾಯಾಧೀಶರು ವಿವಾಹ ವಿಚ್ಛೇದನೆ ಆದೇಶ ಘೋಷಿಸಿಸಿದರು. ತೆರೆದ ನ್ಯಾಯಾಲಯದಿಂದ ಭಾರವಾದ ಮನಸಿನಿಂದ ನಿರ್ಗಮಿಸಿದರು. ಜೀವನ ಪರ್ಯಂತ ಕೈ ಬಿಡೋದಿಲ್ಲ ? ಎಂದು ಕೈ ಚಾಚಿದ ದೃಶ್ಯ ಕಣ್ಣಿಂದ ಕಣ್ಮರೆ ಆಗಲೆ ಇಲ್ಲ.

‘ನ್ಯಾಯದ ಕಣ್ಣು’ ಅಂಕಣದ ಹಿಂದಿನ ಸಂಚಿಕೆಗಳು :

Anatomy

  • ಪ್ರಕಾಶ ವಸ್ತ್ರದ – ವಕೀಲರು, ಲೇಖಕರು, ಮುಧೋಳ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading