ಸಿವಿಲ್ ಪ್ರಕರಣಗಳಲ್ಲಿ ಮುಖ್ಯವಾಗಿ ವಿಳಂಬ ಆಗುವುದಕ್ಕೆ ಕಾರಣ ಎದುರುದಾರ, ಪ್ರತಿವಾದಿಗಳಿಗೆ, ಅವರ ಮರಣದ ನಂತರ ವಾರಸುದಾರರಿಗೆ ಸಮನ್ಸ್, ನೋಟಿಸ್ ತಲುಪುವುದು. ಕೀಲರಾದ ಪ್ರಕಾಶ ವಸ್ತ್ರದ ‘ನ್ಯಾಯದ ಕಣ್ಣು’ ಅಂಕಣದಲ್ಲಿ ‘ ನ್ಯಾಚುರಲ್ ಜಸ್ಟಿಸ್ :ನೈಜ, ಸಮಾನ, ಮುಕ್ತ ಅವಕಾಶ’ ತಪ್ಪದೆ ಮುಂದೆ ಓದಿ…
ಪುಸ್ತಕ : ‘ಅಡ್ವೋಕೇಟ್ ಡೈರಿ ವೃತ್ತಿ ಬದುಕಿನ ಬುತ್ತಿ’
ಬೆಲೆ : 200/
ಖರೀದಿಗಾಗಿ : 9448015613
“ನ್ಯಾಚುರಲ್ ಜಸ್ಟಿಸ್ ನೈಜ, ಸಮಾನ, ಮುಕ್ತ ಅವಕಾಶ ಅನ್ಯಾಯಕ್ಕೆ ಒಳಗಾಗಿ ತನ್ನ ಹಕ್ಕನ್ನು ಸ್ಥಾಪಿಸಗೊಳಿಸಿಕೊಳ್ಳಲು ವ್ಯಕ್ತಿಗೆ ಕೋರ್ಟ ಮೊರೆ ಹೋಗಲು ಅವ್ಯಕ್ತ ಭಯ ಕಾಡುತ್ತದೆ. ಕೋರ್ಟಿಗೆ ಹೋದರೆ ತನ್ನ ಜೀವಿತ ಅವಧಿಯಲ್ಲಿ ನ್ಯಾಯ ಸಿಗಲಾರದು. ತನ್ನ ವಾರಸುದಾರರಿಗೆ ಆಸ್ತಿಯ ಜೊತೆ ವ್ಯಾಜ್ಯವನ್ನು ಬಿಟ್ಟು ಹೋಗ ಬೇಕಾಗುವುದು ಅನ್ನುವ ದುಗುಡ.
ವಿಳಂಬಕ್ಕೆ ಹಲವು ಕಾರಣಗಳು. ಸಿವಿಲ್ ಪ್ರಕರಣವನ್ನು ವಿಚಾರಣೆಗೆ ಒಳ ಪಡಿಸಲು ದಿವಾಣಿ ಪ್ರಕ್ರಿಯಾ ಸಂಹಿತೆ (ಸಿವಿಲ್ ಪ್ರೊ ಸೀಜರ್ ಕೋಡ್ ) ಮತ್ತು ಸಿವಿಲ್ ರೂಲ್ಸ್ ಆಫ್ ಪ್ರಾ ಕ್ಟಿಸ್ ಅನ್ವಯ ಆಗುತ್ತವೆ. ಬ್ರಿಟಿಷ ಸಂಜಾತ ನ್ಯಾಯವ್ಯ ವಸ್ಥೆಯಿಂದ ವ್ಯಕ್ತಿ ಹತಾಷನಾಗುತ್ತಾನೆ. ಶೀಘ್ರ ನ್ಯಾಯದಾನ ಪ್ರಕ್ರಿಯೆ ಚುರುಕುಗೊಳ್ಳಲು ಸಿ ಪಿ ಸಿಯಲ್ಲಿ ಹಲವು ತಿದ್ದುಪಡಿ ತರಲಾಗಿದೆ.
ಸಿವಿಲ್ ಪ್ರಕರಣಗಳಲ್ಲಿ ಮುಖ್ಯವಾಗಿ ವಿಳಂಬ ಆಗುವುದಕ್ಕೆ ಕಾರಣ ಎದುರುದಾರ, ಪ್ರತಿವಾದಿಗಳಿಗೆ, ಅವರ ಮರಣದ ನಂತರ ವಾರಸುದಾರರಿಗೆ ಸಮನ್ಸ್, ನೋಟಿಸ್ ತಲುಪುವುದು. ಕೋರ್ಟ್ ಬೇಲಿಫ್ ಪ್ರತಿವಾದಿಯನ್ನು ಹುಡುಕಿ, ಊರಲ್ಲಿ ಇಲ್ಲವೆಂದೊ, ಮನೆ ಕೀಲಿ ಹಾಕಲಾಗಿದೆ ಎಂದೋ, ಈ ಹೆಸರಿನವರು ಊರಲ್ಲಿ ಯಾರು ಇಲ್ಲವೆಂದೊ ರಿಪೋಟ್ ಹಾಕುತ್ತಾರೆ. ಈಗೆಲ್ಲ ಅದಕ್ಕೂ ಬ್ರೇಕ್ ಬಿದ್ದಿದೆ. ಬೇಲಿಫ್ ಮನೆಗೆ ಹೋಗಿ ಲೊ ಕೇಶನ್ ಹಾಕಿ ಫೋಟೋ ತೆಗೆದು ಜಾರಿ ಮಾಡಬೇಕಿದೆ. ಸಮನ್ಸ್ ಜಾರಿಯಾಗದಿದ್ದರೆ. ರಿಜಿಸ್ಟರ್ ಪೋಸ್ಟ್ ಮುಖಾಂತರ ಜ್ಯಾರಿ ಆಗಬೇಕು. ಆದು ತಲುಪದಿದ್ದರೆ, ವ್ಯಾಪಕವಾಗಿ ಪ್ರಸಾರಗೊಳ್ಳುವ ದಿನ ಪತ್ರಿಕೆಯಲ್ಲಿ ಸಮನ್ಸ್ ಪ್ರಕಟ ಆಗಬೇಕಾಗುತ್ತದೆ. ತಿದ್ದುಪಡಿ ಕಾನೂನಿನಂತೆ ಈ ಗೆಲ್ಲ ವಾಟ್ಸಾಪ್, ಮೇಲ್ ಮೂಲಕ ತಲುಪಿಸಲು ಅವಕಾಶ ಇದೆ.

ಹೀಗೆಲ್ಲ ಪ್ರಯಾಸದ ನಂತರ ತಲುಪಿದ ನಂತರ ಪ್ರತಿ ವಾದಿ ಲಿಖಿತ ಹೇಳಿಕೆ ಸಲ್ಲಿಸುವ ವಿಳಂಬ.ಮೊದಲೆಲ್ಲ ಲಿಖಿತ ಹೇಳಿಕೆ ಸಲ್ಲಿಸಲು ಕಾಲಮಿತಿ ಇರಲಿಲ್ಲ. ನಂತರ ದಿವಾಣಿ ಪ್ರಕ್ರಿಯಾ ಸಂಹಿತೆಗೆ ತಿದ್ದುಪಡಿಯ ನಂತರ ಲಿ ಖಿತ ಹೇಳಿಕೆ ಸಲ್ಲಿಸಲು 90 ದಿನ ಗರಿಷ್ಟ ಅವಧಿ ವಿಧಿಸಲಾಯಿತು. 90 ದಿವಸದ ನಂತರವು ಕಾರಣ ನೀಡಿ ಪರ ವಾನಿಗೆ ನ್ಯಾಯಯಾಲಯ ನೀಡಿದವು. ಇತ್ತೀಚಿನ ತಿದ್ದು ಪಡಿಯಂತೆ 120 ದಿನ ಗರಿಷ್ಟ ಕಡ್ಡಾಯ ಮಿತಿ ವಿಧಿಸಲಾಯಿತು. ಇತ್ತೀಚಿಗೆ ಉಚ್ಚ ನ್ಯಾಯಾಲಯವು 120 ದಿನ ಕಡ್ಡಾಯವಲ್ಲ, ತದನಂತರ ಸೂಕ್ತ ಕಾರಣ ನೀಡಿದರೆ ಲಿಖಿತ ಹೇಳಿಕೆ ಸಲ್ಲಿಸಲು ಕೋರ್ಟ್ ಪರವಾನಿಗೆ ನೀಡಬಹುದು ಎಂದು ತೀರ್ಪು ನೀಡಿದೆ. ಇದರಿಂದ ಅ ನವಶ್ಯಕ ಮುದ್ದತ್ತುಗಳಿಗೆ ಕಡಿವಾಣ ಬಿದ್ದಿದೆ.
ನೈಸಿರ್ಗಿಕ ಕಾನೂನು ತತ್ವದ ಅಡಿಯಲ್ಲಿ, ನ್ಯಾಯ ಪ್ರಕ್ರಿಯೆಯಲ್ಲಿ ಪಾಲುಗೊಳ್ಳುವ, ತನ್ನ ಹಕ್ಕು ಸಾಧಿಸುವ ಮುಕ್ತ, ಸಮಾನ ಅವಕಾಶ ಇರಬೇಕು. ಯಾರದೆ ಗೈರು ಹಾಜರಿಯಲ್ಲಿ ವಿಚಾರಣೆ ನಡೆಯಬಾರದು, ಸಾಕಷ್ಟು ಕಾಲಾವಕಾಶ ನೀಡಬೇಕು, ನ್ಯಾಯ ಮಂಡನೆಯ ಅವಕಾಶದಿಂದ ವಂಚಿತ ಆಗಬಾರದೆನ್ನುವ ಸದಾಶಯವಿದೆ.
ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಮಹಿಳೆಯೊಬ್ಬಳು ತನ್ನ ತವರು ಮನೆಯ ಸ್ವತ್ತುಗಳಲ್ಲಿ ಸಹೋದರರ ವಾರಸುದಾರರ ಮೇಲೆ ಪಾಲು ಮತ್ತು ವಿಭಜನೆಗೆ ಪ್ರಾರ್ಥಿಸಿ ದಾವೆ ಸಲ್ಲಿಸಿದ್ದಳು. ದಾವೆ ಸ್ವತ್ತು ಪಿತ್ರಾರ್ಜಿತ, ಜಂಟಿ ಕುಟುಂಬದ ಆಸ್ತಿ. ತಂದೆ ನಾಲ್ವರು ಗಂಡು ಮಕ್ಕಳು, ವಾದಿ ಹಾಗು ತಾಯಿಯನ್ನುಯನ್ನು ಬಿಟ್ಟು ಮೃತನಾದನು. ವಾದಿ ಮತ್ತು ಅವಳ ತಾಯಿಯನ್ನು ಹೊರತು ಪಡಿಸಿ ಕೇವಲ ಗಂಡು ಮಕ್ಕಳು ಮಾತ್ರ ಜಮೀನು, ಮನೆ ದಾಖಲಾತಿಗಳಲ್ಲಿ ವಾದಿಗೆ ಗೊತ್ತಾಗದ ಹಾಗೆ ಹೆಸರುದಾರರು ದಾಖಲಿಸಿಕೊಂಡರು. ಎಲ್ಲ ಸಹೋದರರು ಹಾಗು ತಾಯಿ ಬಹಳ ವರ್ಷಗಳ ಹಿಂದೆ ಮೃತರಾಗಿದ್ದಾರೆ. ಆದರೆ ದಾವೆ ಆಸ್ತಿಗಳ ದಾಖಲೆಗಳಲ್ಲಿ ಮೃತ ಸಹೋದರರ ಹೆಸರು ಜಮೀನು ಮನೆ ದಾಖಲೆಯಲ್ಲಿ
ಮುಂದುವರೆದಿವೆ. ಆನಂತರ ಮೃತ ಸಹೋದರರ ಮಕ್ಕಳು ಹಲವಾರು ವಾರಸುದಾರರನ್ನು ಬಿಟ್ಟು ಮೃತರಾಗಿದ್ದಾರೆ.

ವಂಶ ಮೂರು ತಲೆ ಮಾರಿಗೆ ಬೆಳೆದು ಹರಡಿದೆ. ವಂಶ ವೃಕ್ಷ ರಚಿಸುವುದೇ ಒಂದು ದೊಡ್ಡ ಪ್ರಯಾ ಸದ ಕೆಲಸವಾಯಿತು. ವಾದಿಗೆ ಇತ್ತೀಚಿನ ಸಹೋದರರ ವಂಶ ಸ್ತರ ಬಗ್ಗೆ ಮಾಹಿತಿ ಇರಲಲ್ಲ. ಯಾರು ಎಲ್ಲಿ ಇದ್ದಾರೆ, ಯಾವಾಗ ಮೃತರಾಗಿದ್ದಾರೆ. ಹೆಣ್ಣುಮಕ್ಕಳನ್ನು ಯಾರ ಮನೆತನಕ್ಕ ಕೊಟ್ಟಿದ್ದಾರೆ. ವಿಳಾಸಗಳ ಸಂಪೂರ್ಣ ವಿವರ. ಹೀಗೆಲ್ಲ ಮಾಹಿತಿ ಕಲೆ ಹಾಕಿಕೊಂಡು ಬರಲು. ಒಂದು ವರ್ಷಕ್ಕಿಂತ ಹೆಚ್ಚಿಗೆ ಸಮಯ ಸರಿಯಿತು. ಇಷ್ಟಾದರೂ ಸಂಪೂರ್ಣ ವಾರಸುದಾರರ ಮಾಹಿತಿ ಅಪೂರ್ಣ ಅನಿಸುತ್ತಿತ್ತು. ಕಲೆ ಹಾಕಿದ ವಿಷಯದಂತೆ ಬರೋಬ್ಬರಿ 65 ಪ್ರತಿ ವಾದಿಯರ ಸೇರ್ಪಡೆ ಆಯಿತು. ಪ್ರತಿಯೊಬ್ಬ ಪ್ರತಿವಾದಿಗೂ ವಾದ ಪತ್ರ, ಡಾಕ್ಯೂಮೆಂಟ್ ಗಳ ಜೆರಾಕ್ಸ್ ಪ್ರತಿ ಕೊಡುವುದು ಅವಶ್ಯ. ಹೀಗಾಗಿ ಪ್ರಕರಣದ ವಿಷಯಕ್ಕಿಂತ ಪ್ರತಿವಾದಿಗೆ ತಲುಪಿಸುವ ಪ್ರತಿಗಳಿಂದ ದೊಡ್ಡದೊಂದು ಫೈಲ್ ನಿರ್ಮಾಣವಾಗಿ, ಮೂಗಿಗಿಂತ ಮುಗುಬಟ್ಟು ಭಾರವಾದಂತೆ ಆಯಿತು.
ಪ್ರತಿವಾದಿಗಳಲ್ಲಿ ಬೆರಳೆಣಿಕೆಯ ಜನಕ್ಕೆ ಸಮನ್ಸ್ ತಲುಪಿದವು.ಕೆಲವು ಜನರು ಮೃತರಾಗಿದ್ದಾರೆ ಎಂದು ವರ ದಿಯಾಯಿತು. ಮೃತರ ವಾರಸುದಾರರ ಹುಡುಕಾಟ, ಸೇರ್ಪಡೆ. ಉಳಿದವರ ವಿಳಾಸ ಹುಡುಕಾಟ. ವಿಳಾಸ ದೊರಕಿದಾಗ, ರಿಜಿಸ್ಟರ್ ಪೋಸ್ಟ್ ಮೂಲಕ ಸಮನ್ಸ್ ಹೋಯಿತು. ಹಲವರು ದೊರೆಯದಾದಾಗ ದಿನ ಪತ್ರಿಕೆಯಲ್ಲಿ ಸುಮನ್ಸ್ ಪ್ರಕಟಣೆಯಾಯಿತು. ವಾರಸುದಾರಲ್ಲಿ ಹಲವರು ಮರಣ, ವಾರಸುದಾರರ ವಾರಸುದಾ ರರ ಹುಡುಕಾಟ. ಅಂತೂ ಕೊನೆಗೆ ಪ್ರತಿ ವಾದಿಯಾರಿ ಗೆಲ್ಲ ಸಮನ್ಸ್ ಜಾರಿ ಆದವು ಅಷ್ಟರಲ್ಲಿ ಯಾರಾದರು ಪ್ರತಿವಾದಿ ಮರಣ ಹೊಂದುತ್ತಿದ್ದನು. ಅವನ ವಾರಸುದಾರರ ಸೇರ್ಪಡೆ ಪ್ರಕ್ರಿಯೆ ಪ್ರಾರಂಭವಾಯಿತು.
ಇಷ್ಟೆಲ್ಲ ಪ್ರಕ್ರಿಯೆಗಳು ಮುಗಿದು ಪ್ರಕರಣ ಕುಂಟುತ್ತ, ತೆವಳುತ್ತ ನ್ಯಾಯಯಾತ್ರೆ ನಡೆಯಿತು. ನಿಜವಾದ ವಿಚಾರಣೆ ಪ್ರಾರಂಭವಾಗಿದ್ದು ಬರೋಬ್ಬರಿ ಏಳು ವರ್ಷಕ್ಕೆ.
‘ನ್ಯಾಯದ ಕಣ್ಣು’ ಅಂಕಣದ ಹಿಂದಿನ ಸಂಚಿಕೆಗಳು :
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೨)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೩)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೪)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೫)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೬)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೭)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೮)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೯)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೦)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೧)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೨)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೩)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೪)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೫)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೬)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೭)
- ಪ್ರಕಾಶ ವಸ್ತ್ರದ – ವಕೀಲರು, ಲೇಖಕರು, ಮುಧೋಳ.
