‘ನ್ಯಾಯದ ಕಣ್ಣು’ ಅಂಕಣ – (ಭಾಗ -೩)

ಕೆಲವು ಸದಸ್ಯರ ಹೆಸರಿನಲ್ಲಿ ಗಳಿಸಿದ ಆಸ್ತಿಗಳು, ಜಂಟಿ ಕುಟುಂಬದ ಆಸ್ತಿಗಳು ಎಂದು ರುಜುವಾತು ಪಡಿಸುವುದು ಸುಲಭವಲ್ಲ.  ಪಿತ್ರಾರ್ಜಿತ, ಸ್ವಯಾರ್ಜಿತ ನಡುವಿನ ಅಂತರದ ಕುರಿತು ವಕೀಲರಾದ ಪ್ರಕಾಶ ವಸ್ತ್ರದ ಅವರು ಬರೆದ ‘ನ್ಯಾಯದ ಕಣ್ಣು’ ಅಂಕಣವನ್ನು ತಪ್ಪದೆ ಮುಂದೆ ಓದಿ…

ಪುಸ್ತಕ :”ಅಡ್ವೋಕೇಟ್ ಡೈರಿ ವೃತ್ತಿ ಬದುಕಿನ ಬುತ್ತಿ”
ಬೆಲೆ : 200/
ಖರೀದಿಗಾಗಿ : 9448015613 

ವಾದಿಯರ ಪರ ವಕೀಲರು ಆವೇಶದಿಂದ ತಮ್ಮ ವಾದವನ್ನು ಅಚ್ಚ ಕನ್ನಡಲ್ಲಿ ಕೋರ್ಟ್ ಹಾಲ್ ರಿಂಗ ನಿಸುವಂತೆ ಮಂಡಿಸುತ್ತಿದ್ದರು. ಬೇರೆ ಪ್ರಕರಣಗಳ ಲ್ಲಿ ಬಂದ ಕಕ್ಷಿದಾರರರು ಕೋರ್ಟ್ ಹಾಲ್ ಬಾಗಿಲು ಬಳಿ ಬಂದು ಇಣುಕಿ ನೋಡಿ ಕೇಳುತ್ತಿದ್ದರು. ಅದೊಂದು ವಿಭಜನೆ ಮತ್ತು ಪ್ರತ್ಯೇಕ ಸ್ವಾಧೀನ ಕುರಿತು ದಾವೆ. ನನ್ನ ಪ್ರತಿವಾದಿ ಕಕ್ಷಿದಾರರರ ಬೇಡಿಕೆಯನ್ನು ವಾದಿಯ ಮೇಲೆ ಭಾರ ಹೇರಿ, ಸುಮ್ಮನೆ ಕುಳಿತು ವಾದ ವನ್ನು ಕೇಳುತ್ತ, ನೋಟ್ಸ್ ದಾಖಲಿಸುತ್ತ ಕುಳಿತ್ತಿದ್ದೆ.

ವಾದಿ ಪರ ವಕೀಲರು ವಾದಿಸುತ್ತ, ಯುವರ್ ಆನರ್, ವಾದಿಯ ದಾವೆಯ ಸಂಗತಿಗಳು ಏನೆಂದರೆ, ವಾದಿ ಪ್ರತಿವಾದಿಯರ ಮೂಲ ಪುರುಷ ರಾಮದೇ ವ ಬಹಳ ವರ್ಷಗಳ ಹಿಂದೆ ಮೃತನಾಗಿದ್ದಾನೆ. ಮೃತನಿಗೆ ಹೆಂಡತಿ ಮತ್ತು ವಿಷ್ಣು ಶ್ಯಾಮ, ಸಂಕೇತ, ಸಾಗರ, ವಾದಿ ರಾಜೇಶ ಅನ್ನುವ ನಾಲ್ಕು ಜನ ಗಂಡು ಮಕ್ಕಳು ಮತ್ತು ಅನಸೂಯಾ ಅನ್ನುವ ಒಬ್ಳಳು ಹೆಣ್ಣು ಮಗಳು. (ಎಲ್ಲ ಹೆಸರುಗಳನ್ನು ಬದಲಾಯಿಸಲಾಗಿದೆ) ರಾಮದೇವ ಮೃತನಾಗಿದ್ದಾಗ, ಹಿರಿಯ ಮಗ ವಿಷ್ಣು (ನನ್ನ ಕಕ್ಷಿದಾರ) ನನ್ನು ಹೊರತು ಪಡಿಸಿ ಉಳಿದೆಲ್ಲ ಮಕ್ಕಳು ಮೈನರ್ ಆಗಿದ್ದರು. ಮೈನರ್ ಮಕ್ಕಳಿಗೆ ತಾಯಿ ಮೈನರ್ ಗಾರ್ಡಿಯನ್ ಆಗಿದ್ದಳು. ಮೂಲ ಪುರುಷ ರಾಮದೇವ ಮೃತನಾದ ನಂತರ ಅವನ ಹೆಂಡತಿ ಮಕ್ಕಳ ಹೆಸರುಗಳು, ಕುಟುಂಬದ
ಆಸ್ತಿಗಳ ದಾಖಲೆಗಳಲ್ಲಿ ದಾಖಲಾದವು. ಕೊನೆಯ ಮಗ ವಾದಿ ರಾಜೇಶ ತನ್ನ ಪಿತ್ರಾರ್ಜಿತ ಸ್ವತ್ತುಗಳಲ್ಲದೆ, ತನ್ನ ಮೃತ ಸಹೋದರರಾದ ಸಂಕೇತ ಹಾಗು ಸಾಗರ ಖರೀದಿಸಿದ ಆಸ್ತಿಗಳಲ್ಲಿ ಹಿಸ್ಸೆ ಕೇಳಿ ಈ ದಾವೇಯನ್ನು ದಾಖಲಿಸಿದ್ದಾನೆ. ಕೊನೆಯ ಮಗ ವಾದಿ ರಾಜೇಶ, ಅಶೀಕ್ಷಿತನಾಗಿ ಜಂಟಿ ಆಸ್ತಿಗಳನ್ನ ಉಸ್ತುವಾರಿ ಮಾಡಿ ಕೊಂಡು ಊರಲ್ಲಿಯೇ ಉಳಿದನು.

ಫೋಟೋ ಕೃಪೆ : google

ಮೂರು ಜನ ಸಹೋದರರು ಬೇರೆ ಬೇರೆ ಕಡೆ ನೆಲೆಗೊಂಡಿರುತ್ತಾರೆ. ಮೊದಲ ಮಗ ಶ್ಯಾಮ, ಕೊನೆಯ ಮಗ ವಾದಿ ರಾಜೇಶ ಯಾವುದೆ ಆಸ್ತಿ ಸಂಪಾದಿಸಿಲ್ಲ. ವಾದಿ ರಾಜೇಶನ ವಾದ ಏನೆಂದರೆ, ಸಂಕೇತ ಮತ್ತು ಸಾಗರ ಸಂಪಾದಿಸಿದ ಸ್ವತ್ತುಗಳು ಕೂಡ ಐದು ಜನರ ಜಂಟಿ ಕುಟುಂಬದ ಆಸ್ತಿಗಳು. ಜಂಟಿ ಜಮೀನಿನ ಉತ್ಪನ್ನದಿಂದ, ವಾದಿ ಹಾಗು ಇತರರು ದುಡಿದು ಗಳಿಸಿದ ಹಣನದಿಂದ, ಇಬ್ಬರು ಸಹೋದರರ ಹೆಸರಿನಲ್ಲಿ ಖರೀದಿಸಿದ್ದೇವೆ, ಆದ್ದರಿಂದ ಜಂಟಿ ಆಸ್ತಿಗಳು ಮತ್ತು ಇಬ್ಬರು ಮೃತ ಸಹೋದರ ಹೆಸರಿನಲ್ಲಿ ಖರೀದಿಸಿದ ಆಸ್ತಿಗಳಲ್ಲಿ ಸಮನಾಗಿ ವಿಭಜನೆ ಆಗಬೇಕು ಎಂದು ಪ್ರಾ ರ್ಥಿಸಿ ಈ ದಾವೆ ಮಾಡಿದ್ದಾನೆ. ವಾದ ಮುಂದುವರೆಸಿ, ಯುವರ್ ಆನರ್, ಪ್ರತಿವಾದಿ ಶ್ಯಾಮ ವಾದಿಯ ದಾವೆಯನ್ನು ಅನುಸರಿಸಿ ತಕರಾರು/ ಕೈಫಿಯತ್ ಸಲ್ಲಿಸಿ ದಾವೆ ಆಸ್ತಿಗಳಲ್ಲಿ ಸಮಪಾಲು ಕೇಳಿದ್ದಾನೆ.

ಹೆಣ್ಣು ಮಗಳು ಅನಸೂಯಾ ಗೈರು ಹಾಜರು ಉಳಿದಿದ್ದಾಳೆ. ಮೃತ ಸಹೋದರ ಸಾಗರ ಮತ್ತು ಸಂಕೇತನ ವಾರಸುದಾರರು ತಕರಾರು / ಕೈಫಿಯತ ಸಲ್ಲಿಸಿ ಸಂಕೇತ, ಸಾಗರ ತಮ್ಮ ನೌಕರಿಯಿಂದ ಬಂದ ಸಂಬಳದಲ್ಲಿ ಉಳಿಸಿ ಬೇರೆ ಬೇರೆ ಊರುಗಳಲ್ಲಿ ಮನೆ ಜಮೀನು ಖರೀದಿಸಿದ್ದಾರೆ, ಅವುಗಳು ಅವರ ಸ್ವಯಾರ್ಜಿತ ಆಸ್ತಿಗಳು. ಸಂಕೇತ ಮೃತನಾದ ನಂತರ
ಮಕ್ಕಳು ತಂದೆಯ ಆಸ್ತಿಗಳನ್ನು ನೋಂದಾಯಿತ ವಿಭಜನೆ ಪತ್ರದ ಮೂಲಕ ಬೇರೆ ಬೇರೆ ಮಾಡಿಕೊಂಡು ವಾಸಿಸುತ್ತಿದ್ದಾರೆ. ಸಾಗರ ಮೃತನಾದ ನಂತರ ಅವನ ಹೆಂಡತಿ ಮಕ್ಕಳು, ಸಾಗರನ ಹೆಸರಲ್ಲಿರುವ ಆಸ್ತಿಗಳಿಗೆ ತಮ್ಮ ತಮ್ಮ ಹೆಸರುಗಳನ್ನು ದಾಖಲಿಸಿಕೊಂಡಿದ್ದಾರೆ. ಮಗಳು ಅನಸುಯಾ ತನ್ನ ಗಂಡನ ಮನೆಯಲ್ಲಿ ಸುಖವಾಗಿ ಇದ್ದಾಳೆ. ವಾದಿಗೆ ಜಂಟಿ ಕುಟುಂಬದ ಆಸ್ತಿಗಳಲ್ಲಿ ಮಾತ್ರ ಸಮನಾದ ಹಿಸ್ಸೆ ಇರುತ್ತದೆ. ವಾದಿ ಹಾಗೂ 1 ನೆ ಪ್ರತಿವಾದಿ ಶ್ಯಾಮಗೆ, ಸಂಕೇತ ಮತ್ತು ಸಾಗರ ಇವರ ಆಸ್ತಿಗಳಲ್ಲಿ ಹಿಸ್ಟೇ ಇರುವುದಿಲ್ಲ ಎಂದು ವಾದಿಸಿದರು. ಮತ್ತೆ ಮುಂದುವರೆದು, ಯುವರ್ ಆನರ್, ಈ ದಾವೆಯಲ್ಲಿ ವಾದಿಯು ತನ್ನ ಹಾಗೂ ತನ್ನ ಪರವಾಗಿ ಮೂರು ಜನರ ಸಾಕ್ಷಿಯನ್ನು ಮಂಡಿಸಿದ್ದಾನೆ. ಎಲ್ಲ ಸಾಕ್ಷಿದಾರರು ಸ್ಪಷ್ಟವಾಗಿ ದಾವೆಯ ಆಸ್ತಿಗಳು ಅಂದರೆ ವಾದಿಯ ತಂದೆಯಿಂದ ಬಂದಂತಹ ಆಸ್ತಿಗಳು, ಸಾಗರ ಮತ್ತು ಸಂಕೇತ ಸಹೋದರರು ಗಳಿಸಿದ ಆಸ್ತಿಗಳು ಜಂಟಿ ಕುಟುಂಬದ ಎಂದು ನುಡಿದಿದ್ದಾರೆ. ಆದ್ದರಿಂದ ಮಾನ್ಯ ನ್ಯಾಯಾಲಯವು ವಾದಿಯ ದಾವೆಯನ್ನು ಡಿಕ್ರಿಗೊಳಿಸಿ, ಸಮಪಾಲು ನೀಡಲು ಆದೇಶ ಮಾಡಲು ವಿನಂತಿಸಿಕೊಂಡು ತಮ್ಮ ವಾದಕ್ಕೆ ವಿರಾಮ ಹೇಳಿದರು.

ಸಂಕೇತ ಮತ್ತು ಸಾಗರನ ವಾರಸುದಾರ ಪ್ರತಿವಾ ದಿಯರ ಪರ ವಕೀಲರು ತಮ್ಮ ವಾದವನ್ನು ಮಂಡಿ ಸುತ್ತ, ವಾದಿ ಪ್ರತಿವಾದಿಯರ ತಂದೆ ರಾಮದೇವ ಮೃತನಾದ ನಂತರ, ಮೊದಲ ಮಗ ಶ್ಯಾಮ, ಸಂಕೇತ, ಸಾಗರ ವಿದ್ಯೆ ಪಡೆದು, ನೌಕರಿ ದೊರಕಿಸಿ ಕೊಂಡು ಬೇರೆ ಬೇರೆ ಊರುಗಳಲ್ಲಿ ನೆಲೆಗೊಂಡಿದ್ದಾರೆ. ಸಾಗರ ಮತ್ತು ಸಂಕೇತ ತಮ್ಮ ಮಕ್ಕಳಿಗೂ ಕೂಡ ಒಳ್ಳೆಯ ವಿದ್ಯಾಭ್ಯಾಸವನ್ನು ನೀಡಿ, ಅವರಿಗು ಒಳ್ಳೆಯ ಸರ್ಕಾರಿ ಹುದ್ದೆ ಕೊಡಿಸಿದ್ದಾರೆ. ತಂದೆ ಮಕ್ಕಳು ತಮ್ಮ ಸ್ವಸಂಪಾದನೆಯಿಂದ ತಮ್ಮ ತಂದೆ ಹೆಸರುಗಳಲ್ಲಿ ಆಸ್ತಿಗಳನ್ನು ಗಳಿಸಿದ್ದಾರೆ. ಸಂಕೇತ ಮತ್ತು ಸಾ ಗರ ಹೆಸರಿನಲ್ಲಿದ್ದ ಆಸ್ತಿಗಳು ಸ್ವ ಸಂಪಾದನೆಯ ಆ ಸ್ತಿಗಳು. ಆ ಆಸ್ತಿಗಳಲ್ಲಿ ವಾದಿಗೆ ಹಾಗೂ ಹಿರಿಯ ಮಗ ಶಾಮ ಮಗಳು ಅನುಸೂಯ ಇವಳಿಗೆ ಯಾವುದೇ ಹಕ್ಕು ಇರುವುದಿಲ್ಲ. ವಾದಿಯು ವಾದಿಸುವಂತೆ ಜಂಟಿ ಕುಟುಂಬದ ಸದಸ್ಯರು ತಮ್ಮ ಸಂಪಾದನೆಯಿಂದ ಸಾಗರ ಹಾಗೂ ಸಂಕೇತನ ಹೆಸರಿನಲ್ಲಿ ಜಮೀನು ಸಂಪಾದಿಸಿದ್ದಾರೆ ಅನ್ನುವ ವಾದದಲ್ಲಿ ಯಾವುದೇ ಹುರುಳು ಇರುವುದಿಲ್ಲ. ಸಾಗರ ಮತ್ತು ಸಂಕೇತ ಆಸ್ತಿ ಖರೀದಿಸಿದ ಸಮಯದಲ್ಲಿ ವಾದಿ ಮೈನರ ಇದ್ದನು. ವಾದಿಯು ಕೆಟ್ಟ ಚಟಗಳಿಗೆ ಅಂಟಿಕೊಂಡಿದ್ದು, ಜಂಟಿ ಕುಟುಂಬದ ಉತ್ಪನ್ನವನ್ನು ತನ್ನ ಸಹೋದರರಿಗೆ ಹಾಗೂ ಸಹೋದರನ ಮಕ್ಕಳಿಗೆ ಕೊಟ್ಟಿರುವುದಿಲ್ಲ ಅದನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ. ಜಂಟಿ ಕುಟುಂಬದ ಸದಸ್ಯರು ಸಾಗರ ಮತ್ತು ಸಂಕೇತನ ಹೆಸರಿನಲ್ಲಿ ಜಮೀನುಗಳಿಸಿದ್ದಾರೆ ಅನ್ನುವ ವಾದದಲ್ಲಿ ಗಟ್ಟಿತನ ಇರುವುದಿಲ್ಲ. ಈ ರೀತಿ ಯಾದ ವಾದದಲ್ಲಿ ಪ್ರಬಲವಾದ,ಕಾನೂನು ಬದ್ದ ಲಿಖಿತ, ಮೌಕಿಕ, ನಂಬುವಂತ ಸಾಕ್ಷಾಧಾರ ಇರುವುದಿಲ್ಲ. ಆದ್ದರಿಂದ ಜಂಟಿ ಕುಟುಂಬದಲ್ಲಿ ಸಂಕೇತ ಮತ್ತು ಸಾಗರನ ವಾರಸುದಾರರಿಗೆ ಜಂಟಿ ಕುಟುಂಬದ ಆಸ್ತಿಗಳಲ್ಲಿ ಸಮ ಹಿಸ್ಸೆ ನೀಡಿ ಆದೇಶ ಮಾಡಬೇಕು ಮತ್ತು ಸಾಗರ ಮತ್ತು ಸಂಕೇತನ ಹೆಸರಿನಲ್ಲಿ ಇರುವ ಆಸ್ತಿಗಳ ಸಂಬಂಧ ವಾದಿಯ ದಾವೆಯನ್ನು ಖರ್ಚು ಸಹಿತ ವಜಾಗೊಳಿಸಬೇಕು ಎಂದು ದೀರ್ಘ ವಾದ ಮಂಡಿಸಿ, ಮುಕ್ತಾಯಗೊಳಿಸಿದರು.

ಫೋಟೋ ಕೃಪೆ : google

ನ್ಯಾಯಾಲಯವು ವಾದಿ ಮತ್ತು ಪ್ರತಿವಾದಿ ಪರ ವಕೀಲರ ಸುದೀರ್ಘವಾದ ವಾದವನ್ನು ಆಲಿಸಿ ಅಂತಿಮ ತೀರ್ಪನ್ನು ನೀಡುತ್ತ, ವಾದಿ ದಾವೆಯನ್ನು ಭಾಗಶಃ ಡಿಕ್ರಿಗೊಳಿಸಿ, ಜಂಟಿ ಕುಟುಂಬದ ಸ್ವತ್ತಿನಲ್ಲಿ ಸಮ ಹಿಸ್ಸೆ ನೀಡಿ, ಸಾಗರ ಮತ್ತು ಸಂಕೇತ ಗಳಿಸಿದ ಆಸ್ತಿಗಳ ಸಂಬಂಧ ದಾವೆಯನ್ನು ವಜಾ ಗೊಳಿಸಿದರು. ನ್ಯಾಯಾಲಯವು ತಮ್ಮ ತೀರ್ಪಿನಲ್ಲಿ, ವಾದಿಯು ಕೇಳಿಕೊಂಡಂತೆ ತನ್ನ ಇಬ್ಬರು ಸಹೋದರರು ಗಳಿಸಿದ ಆಸ್ತಿ ಜಂಟಿ ಕುಟುಂಬದ ಆಸ್ತಿ ಎಂದು ರುಜುವಾತು ಪಡಿಸಲು ವಿಫಲರಾಗಿದ್ದಾನೆ. ಎಲ್ಲ ಜಂಟಿ ಕುಟುಂಬದ ಸದಸ್ಯರು, ಒಬ್ಬ ಸದಸ್ಯನ ಹೆಸರಿನಲ್ಲಿ ಆಸ್ತಿಯನ್ನು ಗಳಿಸಿದ್ದಾರೆ ಅನ್ನುವ ಸಂದರ್ಭದಲ್ಲಿ ಪ್ರತಿಯೊಂದು ವಿವರವಾದ ಸಾಕ್ಷಾಧಾರ ಬೇಕಾಗುತ್ತದೆ. ಈ ಪ್ರಕರಣದಲ್ಲಿ ವಾದಿಯು, ತನ್ನ ಸಹೋದರರು ಆಸ್ತಿಯನ್ನು ಖರೀದಿಸಿದ ಸಮಯದಲ್ಲಿ ಇನ್ನೂ ಮೈನರರಿದ್ದನ್ನು ಅನ್ನುವುದು ಸ್ಪಷ್ಟವಾಗುತ್ತದೆ. ಅಲ್ಲದೆ ಜಂಟಿ ಕುಟುಂಬದ ಆಸ್ತಿಗಳು ಫಲವತ್ತಾದ ಭೂಮಿಗಳಲ್ಲ, ಅವುಗಳಿಂದ ಯಾವುದೇ ಉತ್ಪನ್ನ ಬರುವುದಿಲ್ಲ ಅನ್ನುವ ದು ಸ್ಪಷ್ಟವಾಗಿದೆ. ಆದ್ದರಿಂದ ಸಾಗರ ಮತ್ತು ಸಂಕೇತ ಖರೀದಿಸಿದ ಆಸ್ತಿಗಳು ಜಂಟಿ ಕುಟುಂಬದ ಆಸ್ತಿಗಳು ಎಂದು ಪರಿಗಣಿಸಲಾಗುವದಿಲ್ಲವೆಂದು
ಅಭಿಪ್ರಾಯ ಪಟ್ಟಿತು.

ಜಂಟಿ ಕುಟುಂಬದ ಆಸ್ತಿಗಳಲ್ಲಿ, ವಾರಸುದಾರಿಕೆಯಿಂದ ಬಂದ ಆಸ್ತಿಗಳೆಂದು ರುಜುವಾತು ಪಡಿಸುವುದು ಸುಲಭ ಸಾಧ್ಯ. ಆದರೆ ಕೆಲವು ಸದಸ್ಯರ ಹೆಸರಿನಲ್ಲಿ ಗಳಿಸಿದ ಆಸ್ತಿಗಳು, ಜಂಟಿ ಕುಟುಂಬದ ಆಸ್ತಿಗಳು ಎಂದು ರುಜುವಾತು ಪಡಿಸುವುದು ಸುಲಭವಲ್ಲ. ಅದಕ್ಕೆ ಬಲವಾದ, ನಂಬುವಂತ ಲಿಖಿತ ಮೌಕಿಕ ಸಾಕ್ಷಾಧಾರ, ಪುರಾವೆ ಬೇಕಾಗುತ್ತವೆ.

‘ನ್ಯಾಯದ ಕಣ್ಣು’ ಅಂಕಣದ ಹಿಂದಿನ ಸಂಚಿಕೆಗಳು :


  • ಪ್ರಕಾಶ ವಸ್ತ್ರದ – ವಕೀಲರು, ಲೇಖಕರು, ಮುಧೋಳ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading