‘ನ್ಯಾಯದ ಕಣ್ಣು’ ಅಂಕಣ – (ಭಾಗ -೨೦)

ರಸಾಯನಿಕ ಗೊಬ್ಬರದ ಬೆಲೆ ಏರಿಕೆ, ಕೂಲಿ ಜನರು ದೊರಕದೆ ಇರುವುದು, ಕಬ್ಬಿಗೆ ಸರಿಯಾದ ಬೆಲೆ ದೊರೆಯದಿರುವುದು ಇವೆಲ್ಲ ಸಮಸ್ಯೆಗಳು ರೈತನಿಗೆ ಕಾಡುತ್ತಲೆ ಇರುತ್ತವೆ. ರೈತರ ಬದುಕು ಪ್ರಕೃತಿ, ನೆರೆಹಾವಳಿ, ಅತಿವೃಷ್ಟಿ, ಅನಾವೃಷ್ಟಿ, ಬರಗಾಲ ಇತ್ಯಾದಿ ಸಮಸ್ಯೆಗಳ ಜೊತೆ ನಿರಂತರ ಹೋರಾಟ ಆಗಿದೆ. ಇದು ರೈತನ ಬದುಕಿನ ಕಥೆ ವ್ಯಥೆಯಾಗಿದೆ. ಆದರೂ ರೈತ ದೇಶದ ಬೆನ್ನೆಲುಬು ಅಂತೆ. ವಕೀಲರಾದ ಪ್ರಕಾಶ ವಸ್ತ್ರದ ‘ನ್ಯಾಯದ ಕಣ್ಣು’ ಅಂಕಣದಲ್ಲಿ “ಆಲೆಮನೆ ಅವಘಡ.ರೈತನ ಬಾಳಿಗೆ ಕಹಿಯಾದ ಬೆಲ್ಲ” ತಪ್ಪದೆ ಮುಂದೆ ಓದಿ…

ಪುಸ್ತಕ : ‘ಅಡ್ವೋಕೇಟ್ ಡೈರಿ ವೃತ್ತಿ ಬದುಕಿನ ಬುತ್ತಿ’
ಬೆಲೆ : 200/
ಖರೀದಿಗಾಗಿ : 9448015613

ಸುಮಾರು 35 – 40 ವರ್ಷಗಳ ಹಿಂದೆ ಹಳ್ಳಿಯ ಮುಂಜಾನೆಯ ಸೊಬಗು. ನೇಸರ ಅದೆ ತಾನೆ ಕೆಂಬಣ್ಣಿನೊಂದಿಗೆ ಭುವಿಗೆ ಬೆಳಕು ನೀಡುತ್ತಿರುವನು. ಹಕ್ಕಿ ಪಕ್ಷಿಗಳ ಕಲರವ ಜೊತೆ ಕೋಳಿ, ನವಿಲುಗಳ ಕೂಗು ಇನ್ನಷ್ಟು ಮುಂಜಾವಿನ ಸೊಬಗಿಗೆ ರಮ್ಯತೆಗೆ ಜೊತೆ ಆಗುತ್ತ ವೆ. ತೋಟಗಳಲ್ಲಿ ಬೆಳಗಿನ ನಸುಕಿನ ತಂಪಲ್ಲಿ ಕಬ್ಬಿನಿಂದ ಬೆಲ್ಲ ತಯಾರಿಸುವ ಆಲೆಮನೆ /ಗಾಣದ ಮನೆಯಿಂದ ಬರುವ ಸಿಹಿ ಸಿಹಿ ಕಂಪು ಸುವಾಸನೆ ಹಳ್ಳಿ ತುಂಬ ಆವರಿಸಿದೆ. ಹಿನ್ನೆಲೆಯಲ್ಲಿ ಕಬ್ಬನ್ನು ಹಿಂಡಿ, ನುರಿಸಿ ರಸ ತೆಗೆಯುವ ಡಿಸೈಲ್ ಇಂಜಿನ್ ಮಾಡುವ ಪುಕ್ಕ್… ಫುಕ್ಕ್. ಲಯ ಬದ್ದ ಸಪ್ಪಳ ಸಂಗೀತವಾಗಿ ಮುಂಜಾವಿಗೆ ಮುದ ನೀಡಿತ್ತು. ಈಗೆಲ್ಲ ಅವೆಲ್ಲ ಹಳೆಯ ದೃಶ್ಯಗಳು, ಕಣ್ಮರೆಯಾಗಿ ನೆನಪು ಮಾತ್ರ ಉಳಿದಿವೆ.

ಆಗೆಲ್ಲ ಸಕ್ಕರೆ ಕಾರ್ಖಾನೆಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದವು. ರೈತರು ಬೆಳೆದ ಕಬ್ಬಿನಿಂದ ಸ್ವಂತ ಗಾಣದ ಮನೆ ನಿರ್ಮಿಸಿ ಬೆಲ್ಲ ತಯಾರಿಸುತ್ತಿದ್ದರು. ಹಲವಾರು ಸಲ ಸಕ್ಕರೆ ಕಾರ್ಖಾನೆಗಳಿಗೆ ಪ್ರೋತ್ಸಾಹಿಸಲು ಆಲೆಮನೆಗಳನ್ನು ತಹಶೀಲ್ದಾರ ಸೀಜ್ ಮಾಡುತ್ತಿದ್ದರು.

ಫೋಟೋ ಕೃಪೆ : ಅಂತರ್ಜಾಲ

ಪಕ್ಕದ ಹಳ್ಳಿಯ ರೈತರೊಬ್ಬರು ಕಾರ್ಮಿಕ ನ್ಯಾಯಾಲಯದಿಂದ ಕಾರ್ಮಿಕನಿಗೆ ಪರಿಹಾರ ಧನಕ್ಕೆ ಬೇಡಿಕೊಂಡ ಪ್ರಕರಣದ ನೋಟಿಸನ್ನು ತೆಗೆದುಕೊಂಡು ಬಂದರು. ನೋಟಿಸಿನಲ್ಲಿ ನ್ಯಾಯಾಲಯದ ಹೆಸರನ್ನು ನೋಡಿ ಹುಬ್ಬು ಏರಿಸಿ ನೋಡಿದೆನು. ಇವರನ್ನು ನೋಡಿದರೆ ಯಾವುದೆ ಕಾರ್ಖಾನೆಗಳ ಮಾಲೀಕ ಅಲ್ಲವೆ ಸಿಬ್ಬಂದಿ ಅನಿಸಲಿಲ್ಲ. ನನ್ನ ನೋಟವನ್ನು ಗಮನಿಸಿ, ” ಸಾಹೇಬ್ರೆ, ನಮ್ಮ ತೋಟದಲ್ಲಿ ಬೆಲ್ಲ ತಯಾರಿಸಲು ಗಾಣದ ಮನೆ ಇದೇರಿ”ಎಂದು ಅನುಮಾನ ಪರಿಹರಿಸಿದ.

ತೋಟದಲ್ಲಿ ಸುಮಾರು ಐದಾರು ಗುಂಟೆ ಜಮೀನಿನಲ್ಲಿ, ತೋಟದ ಮನೆ ಮುಂದೆ ಆಲೆಮನೆ ನಿರ್ಮಿಸಿಕೊಂಡಿದ್ದಾನೆ. ಆರೇಳು ಅಡಿ ಎತ್ತರದ, ಸುಮಾರು 60×60 ಅಡಿ ಅಗಲದ ಕಟ್ಟೆ, ಕಟ್ಟೆಯ ಮೇಲೆ ಬೆಲ್ಲ ಕಾಯಿಸಲು ದೊಡ್ಡ ಒಲೆ, ಅದರ ಮೇಲೆ ಸುಮಾರು 10 ಅಡಿ ವ್ಯಾಸದ ಗಂಗಾಳ ಪಾತ್ರೆ, ಒಲೆ ಉರಿಯಲು, ಕಬ್ಬಿನ ಒಣಗಿದ ಎಲೆ, ಕಬ್ಬುನುರಿಸಿ ಉಳಿದ ಸಿಪ್ಪೆಯಿಂದ ಒಲೆಗೆ ಬೆಂಕಿ ಹಾಕಿ ಕಬ್ಬಿನ ರಸ ಕುದಿಸುತ್ತಾರೆ. ಕಬ್ಬನ್ನು ನುರಿಸುವ ಇಂಜಿನ್, ಬೆಲ್ಲ ಆರಿಸುವ ಕಟ್ಟೆ, ಹತ್ತಾರು ಗಂಡು, ಹೆಣ್ಣು ಆಳುಮಕ್ಕಳು ಕೆಲಸ ಮಾಡುತ್ತಾರೆ.

ಅಂದು ಅವಘಡ ಒಂದು ನಡೆದು ಹೋಯಿತು. ಮುಸ್ಸಂಜೆ ವೇಳೆ ಕಬ್ಬು ನುರಿಸುವ, ಕಬ್ಬಿನ ಹಾಲು ಕುದಿಯುವ ಸಮಯ. ಆಳುಗಳು ತ ಮ್ಮ ತಮ್ಮ ಕಾರ್ಯದಲ್ಲಿ ನಿರತರಾಗಿದ್ದರು. ಇಂಜಿನ್ ಸಪ್ಪಳ ತಾರಕಕ್ಕೆ ಏರಿತ್ತು. ಯುವಕನ ಚೀರಾಟ ಕೇಳಿ ಇಂಜಿನ್ ಬಂದ ಮಾಡಿದರು. ಯುವಕನ ಕೈ ಇಂಜಿನಲ್ಲಿ ಸಿಲುಕಿ ಮೊಳಕೈಯಿಂದ ಮುಂದಿನ ಭಾಗ ನುಜ್ಜು ನುಜ್ಜಾಗಿತ್ತು. ಆಸ್ಪತ್ರೆ ಕರೆದುಕೊಂಡು ಹೋದರು. ಕೈ ತೆಗೆದುಹಾಕುವುದು ಅನಿವಾರ್ಯವಾಯಿತು. ರೈತ ಆಸ್ಪತ್ರೆಯ ಖರ್ಚು ಭರಿಸಿದನು. ಕಾರ್ಮಿಕ ಪರಿಹಾರ ಕೇಳಿ ಕಾರ್ಮಿಕ ನ್ಯಾಯಾಲಯದ ಬಾಗಿಲು ತಟ್ಟಿದ್ದಾನೆ. ನ್ಯಾಯಾಲಯಕ್ಕೆ ಹಾಜರಾಗಿ ಘಟನೆ ಮೊತ್ತದ ಬಗ್ಗೆ ಪ್ರತಿವಾದಿಸಬೇಕು ಎಂದು ಸಲಹೆ ನೀಡಿದೆ. ಮತ್ತೆ ಬರುತ್ತೇನೆ ಎಂದು ಹೋದವನು, ಮರಳಿ ಬರಲಿಲ್ಲ. ಮರೆತು ಬಿಟ್ಟೇನು.

ಈಗೆಲ್ಲ, ಕರ್ನಾಟಕ ತುಂಬ ಸಕ್ಕರೆ ಫ್ಯಾಕ್ಟರಿಗಳು ತಲೆ ಎತ್ತಿವೆ. ನೀರಿನ ಸೌಲಭ್ಯ ಇದ್ದಲ್ಲಿ ರೈತರು ಕಬ್ಬು ಬೆಳೆಯುತ್ತಾರೆ. ದಕ್ಷಿಣ ಕರ್ನಾಟಕದ ಮಂಡ್ಯ, ಮೈಸೂರು ಹಾಸನ ಜಿಲ್ಲೆಗಳಲ್ಲಿ ಕಾವೇರಿ, ಕಬಿನಿ ಜಲಾನಯನ ಪ್ರದೇಶದಲ್ಲಿ ಹೆಚ್ಚಿಗೆ ಕಬ್ಬು ಬೆಳೆಯುತ್ತಾರೆ. ಉತ್ತರ ಕರ್ನಾಟಕದ ಕೃಷ್ಣ, ಘಟಪ್ರಭೆ, ಮಲಪ್ರಭೆ ಇತ್ಯಾದಿ ನದಿ ಜಲಾನಯನ ಪ್ರದೇಶದ ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ಪ್ರಮುಖ ಬೆಳೆ ಕಬ್ಬಿನ ಆಗಿದೆ. ಉಳಿದ ಎಲ್ಲ ಜಿಲ್ಲೆಗಳಲ್ಲಿ ಅಲ್ಲಲ್ಲಿ ಕಬ್ಬು ಬೆಳೆಯುತ್ತಾರೆ.

ಫೋಟೋ ಕೃಪೆ : ಅಂತರ್ಜಾಲ

ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದೆಲ್ಲ ಜಿಲ್ಲೆಗಳು ಕಬ್ಬಿನ ಬೆಳೆಯ ಹಚ್ಚ ಹಸಿರಿನಿಂದ ಕಂಗೊಳಿಸುತ್ತವೆ. ಹಲವು ತಾಲೂಕುಗಳಲ್ಲಿ ಸುಮಾರು 5 -6 ಸಕ್ಕರೆ ಕಾರಖಾನೆಗಳು ಕಾರ್ಯನಿರ್ವಸುತ್ತಿವೆ. ಕಬ್ಬು ಬೆಳೆಯುವ ರೈತನ ಆರ್ಥಿಕವಾಗಿ ಸಾಲದ ಜೊತೆ ಬೆಳೆದಿದ್ದಾನೆ. ಒಕ್ಕಲುತನದಲ್ಲಿ ನಿರಂತರ ಒಂದಲ್ಲ ಒಂದು ಸಮಸ್ಯೆ ಇದ್ದೆ ಇರುತ್ತದೆ. ರಸಾಯನಿಕ ಗೊಬ್ಬರದ ಬೆಲೆ ಏರಿಕೆ, ಕೂಲಿ ಜನರು ದೊರಕದೆ ಇರುವುದು, ಕಬ್ಬಿಗೆ ಸರಿಯಾದ ಬೆಲೆ ದೊರೆಯದಿರುವುದು ಇವೆಲ್ಲ ಸಮಸ್ಯೆಗಳು ಕಾಡುತ್ತಲೆ ಇರುತ್ತವೆ. ರೈತರ ಬದುಕು ಪ್ರಕೃತಿ, ನೆರೆಹಾವಳಿ, ಅತಿವೃಷ್ಟಿ, ಅನಾವೃಷ್ಟಿ, ಬರಗಾಲ ಇತ್ಯಾದಿ ಸಮಸ್ಯೆಗಳ ಜೊತೆ ನಿರಂತರ ಹೋರಾಟ ಆಗಿದೆ. ಇದು ರೈತನ ಬದುಕಿನ ಕಥೆ ವ್ಯಥೆಯಾಗಿದೆ. ಆದರೂ ರೈತ ದೇಶದ ಬೆನ್ನೆಲುಬು ಅಂತೆ.

ಸುಮಾರು ಮೂರು ನಾಲ್ಕು ವರ್ಷದ ನಂತರ ಅದೆ ರೈತ ಪ್ರತ್ಯಕ್ಷಣಾದನು. ಕೈಯಲ್ಲಿ ಕಾರ್ಮಿಕ ನ್ಯಾಯಾಲಯದ ಧರ ಕಾಸ್ತ /ಎಗ್ಜಿಕ್ಯುಷನ್ ಕೇಸಿನ ನೋಟಿಸು, 50 ಸಾವಿರ ರೂ ಪಾಯಿ ಕಾರ್ಮಿಕನಿಗೆ ಪರಿಹಾರಧನ ಕೊಡಲು ಆದೇಶವಾಗಿ, ವಸೂಲಿ ನೋಟಿಸು. ಅವಾಗ ಒಂದು ಎಕರೆ ಜಮೀನಿಗೆ 18 ಸಾವಿರ ಬೆಲೆ ಇದ್ದ ಕಾಲ, ರೈತ ಕಂಗಾಲು ಆಗಿದ್ದನು. ಮೂರು ನೋಟಿಸು ಬರುವರೆಗೆ ಹೋಗಬೇಡಾ ಎಂದು ಹಳ್ಳಿಯಯ ಕಟ್ಟಿ ಕಂಪನಿ ಸಲಹೆಗಾರರ ಮಾತು ಕೇಳಿ ಕಾರ್ಮಿಕ ಕೊರ್ಟಿಗೆ ಹಾಜರು ಆಗಿರಲಿಲ್ಲವಂತೆ. ಸಮಯ ಮೀರಿತ್ತು. ಸಾಲ ಸೂಲ ಮಾಡಿ, ಒಂದಿಷ್ಟು ಹೊಲ ಮಾರಿ ಪರಿಹಾರ ಭರಿಸಿದನಂತೆ. ಕೋರ್ಟ್ ನಿಯಮಗಳ ಬಗ್ಗೆ ಹೀಗೆ ಉಹಾಪೋಹಗಳು ಹರಿದಾಡುತ್ತಲೆ ಇರುತ್ತವೆ, ನಂಬಬಾರದು. ಸೂಕ್ತ ನ್ಯಾಯ ಸಲಹೆಯ ಪಡೆಯಬೇಕು.

‘ನ್ಯಾಯದ ಕಣ್ಣು’ ಅಂಕಣದ ಹಿಂದಿನ ಸಂಚಿಕೆಗಳು :


  • ಪ್ರಕಾಶ ವಸ್ತ್ರದ – ವಕೀಲರು, ಲೇಖಕರು, ಮುಧೋಳ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading