‘ನ್ಯಾಯದ ಕಣ್ಣು’ ಅಂಕಣ – (ಭಾಗ -೯)

“ಅಡ್ವೋಕೇಟ್ ಡೈರಿ” ಅಂಕಣ ಮೃತನ ಚೆಕ್ಕ್ ಬ್ಯಾಂಕಿಗೆ. ವ್ಯವಹಾರ ಸಂಶಯಾಸ್ಪದ ‘ ಅದೊಂದು ಸಿವಿಲ್ ಮೇಲ್ಮನವಿಯ ಪ್ರಕರಣ. ಮೇಲ್ಮನವಿದಾರ ಪರ ವಕೀಲರು ತಮ್ಮ ವಾದವನ್ನು ಹಿಂದಿನ ಮುದ್ದತ್ತಿನಂದು ಮುಗಿಸಿದ್ದರು. ಎದುರುದಾರರ ಪರವಾಗಿ ಇಂದು ಪ್ರತಿವಾದ ಮಂಡಿಸಲು ಕೋರ್ಟ್ ಕೊನೆಯ ಅವಕಾಶ ನೀಡಿತ್ತು. ಮುಂದೇನಾಯಿತು ವಕೀಲ ಪ್ರಕಾಶ ವಸ್ತ್ರದ ಅವರು ‘ನ್ಯಾಯದ ಕಣ್ಣು’ ಅಂಕಣವನ್ನು ತಪ್ಪದೆ ಮುಂದೆ ಓದಿ…

ಪುಸ್ತಕ : ”ಅಡ್ವೋಕೇಟ್ ಡೈರಿ ವೃತ್ತಿ ಬದುಕಿನ ಬುತ್ತಿ”
ಬೆಲೆ : 200/
ಖರೀದಿಗಾಗಿ : 9448015613

“ಅಡ್ವೋಕೇಟ್ ಡೈರಿ” ಅಂಕಣ ಮೃತನ ಚೆಕ್ಕ್ ಬ್ಯಾಂಕಿಗೆ. ವ್ಯವಹಾರ ಸಂಶಯಾಸ್ಪದ ‘ಅದೊಂದು ಸಿವಿಲ್ ಮೇಲ್ಮನವಿಯ ಪ್ರಕರಣ. ಮೇಲ್ಮನವಿದಾರ ಪರ ವಕೀಲರು ತಮ್ಮ ವಾದವನ್ನು ಹಿಂದಿನ ಮುದ್ದತ್ತಿನಂದು ಮುಗಿಸಿದ್ದರು. ಎದುರುದಾರರ ಪರವಾಗಿ ಇಂದು ಪ್ರತಿವಾದ ಮಂಡಿಸಲು ಕೋರ್ಟ್ ಕೊನೆಯ ಅವಕಾಶ ನೀಡಿತ್ತು. ಮೆಲ್ಮನವಿಧಾರ ಪರ ವಕೀಲರು ತಮ್ಮ ವಾದದಲ್ಲಿ ಕೇಸಿನ ಸಂಗತಿಗಳನ್ನು ಬಿಚ್ಚಿಟ್ಟಿದರು ಕೂಡ ಮತ್ತೊಮ್ಮೆ ಗಮನಕ್ಕೆ ತರುವದು ಅವಶ್ಯವಿರುತ್ತದೆ. ಕೋಟ ಸರಿ ಪಡಿಸಿಕೊಂಡು ವಾದ ಮಂಡನೆಗೆ ಎದ್ದು ನಿಂತೆನು.

ಕೋರ್ಟ್ ಹಾಲಿನಲ್ಲಿ ಏನೋ ಒಂಥರ ಗದ್ದಲ.”ಯುವರ್ ಆನರ್ ” ಎಂದು ವಾದವನ್ನು ಪ್ರಾರಂಭಿಸಿ, ಒಂದು ಕ್ಷಣ ಕೋರ್ಟ್ ಹಾಲ್ ಸುತ್ತಲು ದೃಷ್ಟಿಬೀ ರಿ ಸುಮ್ಮನೇ ನಿಂತೆನು. ನ್ಯಾಯಾಧೀಶರು ಅರ್ಥ ಮಾಡಿಕೊಂಡು ಬೆಲ್ ಒತ್ತಿ ಶಾಂತತೆ ಕಾಪಾಡಲು ಸೂಚನೆ ನೀಡಿದರು. ಮತ್ತೆ ವಾದವನ್ನು ಪ್ರಾರಂಭಿಸಿ, ” ಯುವರ್ ಆನರ್, ಈ ಕೇಸಿನ ಮೇಲ್ಮನವಿದಾರ/ ವಾದಿ ಕೆಳ ನ್ಯಾಯಾಲಯದಲ್ಲಿ ಹಣದ ವಸೂಲಾತಿಗಾಗಿ ಸಿವಿಲ್ ದಾವೆ ಸಲ್ಲಿಸಿದ್ದನು. ವಿಚಾರಣೆ ನ್ಯಾ ಯಾಲಯ ದಾವೆಯನ್ನು ವಜಾವಳಿಸಿ ತೀರ್ಪು ನೀ ಡಿದ್ದನ್ನು ಪ್ರಶ್ನಿಸಿ ವಾದಿ ಮೇಲ್ಮನವಿಯನ್ನು ಸಲ್ಲಿಸಿದ್ದಾನೆ. ವಾದಿ ದಾವೆಯ ವಾದ ಪತ್ರದಲ್ಲಿ, ಪ್ರತಿವಾದಿಯ ಗಂಡ ಸುನೀಲ (ಹೆಸರು ಬದಲಿಸಲಾಗಿದೆ), ಮತ್ತು ತಾನು ಒಬ್ಬರಿಗೊಬ್ಬರು ಬಹಳ ವರ್ಷಗಳಿಂದ ಪರಿಚಯದವರು ಮತ್ತು ಸ್ನೇಹಿತರು ಆಗಿದ್ದೆವು. ಸುನೀಲ ಕೌಟುಂಬಿಕ ಅಡಚಣೆಗಾಗಿ 4 ಲಕ್ಷ ರೂಪಾಯಿ ಕೈ ಸಾಲ ಪಡೆದುಕೊಂಡಿದ್ದನು. ಹಲವಾರು ಸಲ ಸುನೀಲನಿಗೆ ಮರಳಿ ಕೊಡಲು ವಿನಂತಿಸಿಕೊಂಡನು. ಇಂದು ನಾಳೆ ಎಂದು ದಿನ ನೂಕಲಾರಂಭಿಸಿದನು. ಕೊನೆಗೆ ಸುನಿಲ ತನ್ನ ಹೆಸರಿಗೆ 4 ಲಕ್ಷ ರೂಪಾಯಿಗಳ ಚೆಕ್ಕನ್ನು ನೀಡಿರುತ್ತಾನೆ. ಚೆಕ್ಕನ್ನು ತನ್ನ ಉಳಿತಾಯ ಖಾತೆ ಇರುವ ಬ್ಯಾಂಕಿನಲ್ಲಿ ಹಾಜರು ಪಡಿಸಿದೆನು. ಬ್ಯಾಂಕಿನವರು ಖಾತೆಯಲ್ಲಿ ಸಾಕಷ್ಟು ಹಣ ಇರುವುದಿಲ್ಲ ಎಂದು ಮೆಮೊ ನೀಡುತ್ತಾರೆ. ಅಷ್ಟರಲ್ಲಿ ಸುನೀಲ ಅನಾರೋಗ್ಯದಿಂದ ಮೃತನಾದನು. ಮೃತನ ಹೆಂಡತಿ ಪ್ರತಿವಾದಿಯನ್ನು ಹಲವಾರು ಸಲ ಭೇಟಿಯಾಗಿ ಕೇಳಿದಾಗ, ಇಂದು ನಾಳೆ ಅಂತ ದಿನಗಳನ್ನು ನೂಕಿದಳು. ಕೊನೆಗೆ ತಾನು ತನ್ನ ವಕೀಲರ ಮುಖಾಂತರ ನೋಟಿಸ ನೀಡಿದ್ದೇನೆ. ಆ ನೋಟಿಸಿಗೆ ಪ್ರತ್ಯುತ್ತರ ನೀಡಿ ಎಲ್ಲ ಸಂಗತಿ ನಿರಾಕರಿಸಿರುತ್ತಾಳೆ. ಆದ್ದರಿಂದ ದಾವೆ ಮಾಡಿದ್ದು, ಸುನೀಲನ ವಾರಸುದಾರಳಾದ ಪ್ರತಿವಾದಿ ಹಣವನ್ನು ಕೊಡಲು ಜವಾಬ್ದಾರಳು ಇದ್ದು, ನಾಲ್ಕು ಲಕ್ಷ ಹಣ ವಸೂಲಿ ಮಾಡಿ ಕೊಡಲು ತೀರ್ಪು ಕೋರಿ ದಾವೆ ಸಲ್ಲಿಸಿದ್ದನು.

ಪ್ರತಿವಾದಿ ತನ್ನ ಪರ ವಕೀಲರ ಮುಖಾಂತರ ಕೋರ್ಟಿಗೆ ಹಾಜರಾಗಿ, ವಾದಪತ್ರದ ಸಂಗತಿಗಳನ್ನು ನಿರಾಕರಿಸಿ ಕೈಫಿಯತ್/ತಕರಾರನ್ನು ಸಲ್ಲಿಸಿದಳು. ವಾದಿ ತನ್ನ ಪರವಾಗಿ ತನ್ನ ಹಾಗೂ ಮಗನ ಮುಖ್ಯ ವಿಚಾರಣೆ ಪ್ರಮಾಣ ಪತ್ರವನ್ನು ಸಲ್ಲಿಸಿದನು. ಅವರನ್ನು ಪಾಟಿ ಸವಾಲಿಗೆ ಒಳಪಡಿಸಲಾಯಿತು. ಪಾಟಿಸ ವಾಲಿನಲ್ಲಿ ಇಬ್ಬರು, ಉತ್ತರ ನೀಡಿ, ” ಮೃತ ಸುನೀಲ ಮತ್ತು ವಾದಿಯ ನಡುವೆ ಸುಮಾರು 20-25 ವರ್ಷಗಳ ಅಂತರವಿದೆ ‘” ಎಂದು ಒಪ್ಪಿಕೊಂಡಿದ್ದಾರೆ.ಆದ್ದರಿಂದ ಇಬ್ಬರೂ ಸ್ನೇಹಿತರ ಆಗಿರಲು ಸಾಧ್ಯವಿಲ್ಲ. ವಾದಿಯು ಮೃತ ಸುನೀಲನಿಗೆ ಯಾವ ದಿನಾಂಕ, ವಾರ, ಎಷ್ಟನೇ ಇಸ್ವಿಯಲ್ಲಿ, ಹಣ ಕೊಟ್ಟ ಬಗ್ಗೆ ಗೊತ್ತಿಲ್ಲವೆಂದು, ಇಷ್ಟು ಹಣ ಕೊಟ್ಟ ಬಗ್ಗೆ ಮೃತನಿಂದ ಯಾವುದೇ ಪತ್ರವನ್ನು ಮಾಡಿಕೊಂಡಿಲ್ಲವೆಂದು ಒಪ್ಪಿ ಕೊಂಡಿದ್ದಾರೆ. ಮೃತ ಸುನೀಲನ ಕುಟುಂಬದ ಬಗ್ಗೆ ಎಲ್ಲ ಗೊತ್ತಿದೆ ಎಂದು ಹೇಳುವ ವಾದಿಯು, ಚೆಕ್ಕನ್ನು ಸುನಿಲನು ಮೃತನಾದ 10 ದಿವಸಗಳ ನಂತರ ಬ್ಯಾಂಕಿಗೆ ನಗದಿಕರಣಕ್ಕೆ ಸಲ್ಲಿಸಿದ್ದಾನೆ. ಇದು ವಾದಿ ಮತ್ತು ಮೃತ ಸುನೀಲನ ನಡುವೆ ವ್ಯವಹಾರ ಇದೆ ಅನ್ನುವ ಬಗ್ಗೆ ಸಂಶಯಕ್ಕೆ ಆಸ್ಪದ ಕೊಡುತ್ತದೆ. ಪ್ರತಿವಾದಿ ತನ್ನ ಹೇಳಿಕೆಯಲ್ಲಿ ಸುನೀಲನು ಮೃತನಾಗುವ ದಕ್ಕಿಂತ ಮೊದಲು ಸುಮಾರು 15 ದಿನಗಳು ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯುತ್ತಿದ್ದ, ಅರೆ ಪ್ರಜ್ಞೆಯಲ್ಲಿದ್ದನು ಎಂದು ಹೇಳಿದ್ದಾಳೆ, ಅಲ್ಲದೆ ಆಸ್ಪತ್ರೆಯ ದಾಖಲಾತಿಗಳನ್ನು ಹಾಜರು ಪಡಿಸಿದ್ದಾಳೆ. ಆದ್ದರಿಂದ ಆಸ್ಪತ್ರೆಯಲ್ಲಿ ದಾಖಲಿದ್ದ ಸುನೀಲ ಚೆಕ್ಕಿನ ಮೇಲೆ ಹೇಗೆ ಸಹಿ ಮಾಡಲು ಸಾಧ್ಯ ಅನ್ನುವುದನ್ನು ಗಮನಿಸಬೇಕು. ಇದೆಲ್ಲ ಕಾರಣಗಳನ್ನು ಕೆಳ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ವಿಶ್ಲೇಷಿಸಿ ಅಭಿಪ್ರಾಯ ಪಟ್ಟಿದೆ. ಕೆಳ ನ್ಯಾಯಾಲಯದ ತೀರ್ಪಿನಲ್ಲಿ ಈ ನ್ಯಾಯಾಲಯವು ಹಸ್ತಕ್ಷೇಪ ಮಾಡುವ ಯಾವುದೇ ಅಂಶಗಳು, ಕಾರಣಗಳು ಇರುವುದಿಲ್ಲ.

ಮೇಲ್ಮನವಿ ದಾರ ಈ ನ್ಯಾಯಾಲಯ ಹಸ್ತಕ್ಷೇಪ ಮಾಡಲು ಕಾರಣಗಳನ್ನು ಮೇಲ್ಮನವಿಯಲ್ಲಿ ಅರ್ಜಿಯಲ್ಲಿನ ಮೂದಿಸಿರುವದಿಲ್ಲ. ಕೆಳ ನ್ಯಾಯಾಲಯದ ತೀರ್ಪು ಕಾನೂನು ಬದ್ದವಾಗಿದ್ದು ಹಾಗೂ ಸುಸಂದರ್ಭವಾಗಿ ಹೇಳಿದ ಒಪ್ಪಿಕೊಂಡ ಸಂಗತಿಗಳ ಆಧಾರದ ಮೇಲೆ ಇರುವುದರಿಂದ ತೀರ್ಪು ರದ್ದು ಪಡಿಸುವ ಅಂಶಗಳು, ಈ ಮೇಲ್ಮನೆಯಲ್ಲಿ ಇರುವುದಿಲ್ಲ. ಆದ್ದರಿಂದ ಯುವರ್ ಅನರ್, ಮೇಲ್ಮನವಿಯನ್ನು ಖರ್ಚು ಸಹಿತ ವಜಾ ಗೊಳಿಸಲು ಈ ಮೂಲಕ ನಾನು ನಿವೇದಿಸುತ್ತೇನೆ. ಇಷ್ಟು ನನ್ನ ವಾದ” ಎಂದು ನ್ಯಾಯಾಲಯಕ್ಕೆ ಬಿನ್ನವಿಸಿಕೊಂಡು ಪ್ರತಿವಾದಕ್ಕೆ ಪೂರ್ಣ ವಿರಾಮ ನೀಡಿದೆ.

ನ್ಯಾಯಾಲಯವು, ಮೇಲ್ಮನವಿದಾರ ಎದುರು ದಾರರ ವಾದವನ್ನು ಕೂಲಂಕುಶವಾಗಿ ಆಲಿಸಿ, ಪರಿಶೀಲಿಸಿ ಮೇಲ್ಮನವಿಯನ್ನು ವಜಾಗೊಳಿಸಿ ಆದೇಶ ಪ್ರ ಕಟಿಸಿತು. ಕೆಳ ನ್ಯಾಯಾಲಯದ ತೀರ್ಪಿನಲ್ಲಿ ಹಸ್ತ ಕ್ಷೇಪ ಮಾಡುವ ಅವಶ್ಯಕತೆ ಇಲ್ಲ ಎಂದು ತೀರ್ಪ ನ್ನು ಎತ್ತಿ ಹಿಡಿಯಿತು. ವಾದಿ ಸುನೀಲನಿಗೆ ಹಣ ಕೊಟ್ಟ ಬಗ್ಗೆ ಸಾಕ್ಷಾಧರ ಇಲ್ಲ. ಸುನೀಲನು ಮೃತನಾದ ನಂತರ ಪ್ರಶ್ನಿತ ಚೆಕ್ಕನ್ನು ವಾದಿಯು ಬ್ಯಾಂಕಿಗೆ ಹಾ ಜರು ಪಡಿಸಿದ್ದು ಸಂಶಯಕ್ಕೆ ಆಸ್ಪದ ಕೊಟ್ಟಿದೆ ಅನ್ನುವ ಅಭಿಪ್ರಾಯವನ್ನು ತೀರ್ಪಿನಲ್ಲಿ ವ್ಯಕ್ತಪಡಿಸಿತು.

‘ನ್ಯಾಯದ ಕಣ್ಣು’ ಅಂಕಣದ ಹಿಂದಿನ ಸಂಚಿಕೆಗಳು :


  • ಪ್ರಕಾಶ ವಸ್ತ್ರದ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading