ಸುಶೀಲ ಮೃತಳಾಗುವ ಎರಡು ತಿಂಗಳ ಮೊದಲು ಪ್ರಜ್ಞೆ ಕಳೆದುಕೊಂಡು ಹಾಸಿಗೆ ಹಿಡಿದಳು. ಸೊಸೆ ಹಾದಿ ಹೆಣ ಆಗಬಾರದೆಂದು ತಮ್ಮ ಊರಲ್ಲಿ ತಂದು, ಒಬ್ಬ ಹೆಣ್ಣು ಮಗಳನ್ನು ಆರೈಕೆಗೆ ನೇಮಿಸಿ ಆರೈಕೆ ಮಾಡಿದೆವು ಎಂದು ವಿವರಿಸಿ ಮರಣ ಪ್ರಮಾಣಪತ್ರ ನೀಡಿದರು. ‘ಸತ್ತವಳು ಎದ್ದು ಬಂದು ಬರೆದ ಮೃತ್ಯು ಪತ್ರ’ ಇದೇನಿದು?…ಪ್ರಕಾಶ ವಸ್ತ್ರದ ಅವರ ‘ನ್ಯಾಯದ ಕಣ್ಣು’ ಅಂಕಣವನ್ನು ತಪ್ಪದೆ ಮುಂದೆ ಓದಿ…
ಪುಸ್ತಕ :”ಅಡ್ವೋಕೇಟ್ ಡೈರಿ ವೃತ್ತಿ ಬದುಕಿನ ಬುತ್ತಿ”
ಬೆಲೆ : 200/
ಖರೀದಿಗಾಗಿ : 9448015613
ಈ ವೃತ್ತಿಯೆ ಹಾಗೆ, ಬಿಳಿ ಬ್ಯಾಂಡ್ ಬಿಳಿ ಶರ್ಟ್ ಕಾಲರಗೆ ಕಟ್ಟಿಕೊಂಡು, ಕಪ್ಪು ಕೋಟನ್ನು ಎರಿಸಿಕೊಂಡು ಬಿಟ್ಟರೆ ಏನೊ ಹುಮ್ಮಸ್ಸು, ಆತ್ಮವಿಶ್ವಾಸ ಮೈದುಂಬುತ್ತದೆ. ಎದುರಾಳಿ ರಾಜಕಾರಣಿ, ಸಂಬಂಧಿ, ಪ್ರ ಭಾವಿ, ಶ್ರೀಮಂತ ಎನ್ನುವದು ಗಣನೆಗೆ ಬರುವುದೆ ಇಲ್ಲ. ಕೇವಲ ಕಕ್ಷಿದಾರನ ಹಿತಾಸಕ್ತಿ ಮಾತ್ರ ಗಮನದಲ್ಲಿ ಇರುತ್ತದೆ. ಕೊರ್ಟಲ್ಲಿ ಎದುರುದಾರ ಸಾಕ್ಷಿದಾರರನ್ನು ಕ್ರಾಸ್ ಎಕ್ಸಾಮಿನೇಷನ್ ಮಾಡುವಾಗ, ನೀಡಿದ ಉತ್ತರಕ್ಕೆ ಮತ್ತೊಂದು ಪ್ರಶ್ನೆ ಮೆದುಳಲ್ಲಿ ಮೂಡಿ ಬಿಡುತ್ತದೆ. ಉತ್ತರಕ್ಕೆ ಪ್ರಶ್ನೆ , ಪ್ರಶ್ನೆಗೆ ಉತ್ತರ ಸಮಯ ಸರಿದದ್ದೆ ಗೊತ್ತಾಗುವದಿಲ್ಲ. ಪಾಟಿ ಸವಾಲಿನ ಮೊದಲು ಪ್ರಕರಣದ ಸಮಗ್ರ ಅಭ್ಯಾಸ, ಸಾಕ್ಷಿ ಕಟಕಟೆ ಏರುವ ವನ ಇತಿಹಾಸ, ಸ್ವಭಾವ ಕಕ್ಷಿದಾರನಿಂದ ಪಡೆದು ಅ ಭ್ಯಾಸಿಸ ಬೇಕಾಗುತ್ತದೆ. ಸಾಕ್ಷಿದಾರ ಕಟೆಕಟೆಯಲ್ಲಿ ನಿಲ್ಲುವ ಭಂಗಿ, ಪ್ರಶ್ನೆಗೆ ಉತ್ತರಿಸುವ ಧಾಟಿ ಅವನು ಏನೆಂಬುದು ಅರ್ಥ ಮಾಡಿಕೊಳ್ಳಬಹುದು. ಹೇಗೆ ಬೇಕಾದ ಉತ್ತರ ಪಡೆಯ ಬಹುದೆಂದು ಗೊತ್ತಾಗಿ ಬಿಡುತ್ತದೆ. ಸಾಕ್ಷಿದಾರನಿಗೆ ಎದುರುದಾರ ವಕೀಲರು ಪ್ರಭಾವ ಗೊತ್ತಿದ್ದರೆ, ಎಚ್ಚರಿಕೆಯಿಂದ ಇರುತ್ತಾನೆ. ನಾವು ಕಟಕಟೆ ಕಡೆಗೆ ಬರುವ, ನಿಲ್ಲುವ ಗತ್ತು, ಧ್ವನಿ, ಕೇಳುವ ಶೈಲಿ ಸಾಕ್ಷಿದಾರಣ ನಡುವಳಿಕೆಗೆ ಪ್ರಭಾವಬೀ ರುತ್ತದೆ. ಸಾಕ್ಷಿದಾರನ ಹೇಳಿಕೆಗಳು ನಂಬಿಕೆಗೆ ಅರ್ಹವಲ್ಲ, ಸುಳ್ಳು ಹೇಳಿದ್ದಾನೆ ಅನ್ನುವುದನ್ನು ನ್ಯಾಯಾ ಧೀಷರಿಗೆ ಮನದಟ್ಟು ಮಾಡಿಕೊಡಲು, ಗುಣ ಮಟ್ಟ ದ ಪಾಟಿ ಸವಾಲು ಸಹಕಾರಿಆಗುತ್ತದೆ. ನ್ಯಾಯಾಧೀಶರು ಸ್ಪಂದಿಸುವ ಶೈಲಿ, ಮನಸ್ಸಿನ ಉಪಸ್ಥಿತಿ ಮೇಲೆಯೂ ಪ್ರಕ್ರಿಯೆ ಆಧರಿಸಿರುತ್ತದೆ.
ಅದೊಂದು ಪ್ರತ್ಯೇಕ ಹಿಸ್ಸೆ ಮತ್ತು ಸ್ವಾಧೀನ ಕುರಿತು ದಾವೆ. ಸೊಸೆ ಸಾವಿತ್ರಿ (ಎಲ್ಲ ಹೆಸರು ಬದಲಿಸಲಾಗಿ ದೆ) ತನ್ನ ಮಾವ ಪರಶುರಾಮ, ಅತ್ತೆ ಸುಶೀಲ ಮತ್ತು ಇಬ್ಬರು ಮೈದುನರ ಮೇಲೆ ದಾವೆ ಮಾಡಿದ್ದಳು. ಪರಶುರಾಮ ದಾವೆಯ ಸಮನ್ಸ್, ನೋಟಿಸ್ ಕೊಟ್ಟು ಕೇಸನ್ನು ಒಪ್ಪಿಸಿದನು. ದಾವೆಯ ಸಮಗ್ರ ಮಾಹಿತಿ ನೀಡಿದೆ. ವಾದ ಪತ್ರದಂತೆ, ಪರಶುರಾಮನಿಗೆ ಮೂರು ಜನ ಗಂಡು ಮಕ್ಕಳು. ಹಿರಿಯ ಮಗ ರಾಜರಾಮ ಸುಶೀಲಳನ್ನು ಮದುವೆಯಾದ ಒಂದು ವರುಷದಲ್ಲಿ ಮೃತನಾದ. ಪ್ರತಿವಾದಿಯರು ಕೆಲವು ತಿಂಗಳಲ್ಲಿ ಮನೆಯಿಂದ ಹೊರಗೆ ಹಾಕಿದರು. ಅತ್ತೆ ಮಾವ, ಮೈದುನರನ್ನು ಜಂಟಿ ಕುಟುಂಬದಲ್ಲಿ ಹಿಸ್ಸೆ ಕೇಳಿದಳು ಕೊಡಲಿಲ್ಲ. ಈ ಕಾರಣದಿಂದ ದಾವೆ ಮಾಡಿದ ಮಾಹಿತಿ ನೀಡಿದೆ. ಪರಶುರಾಮ ಅವಳ ಹೇಳಿಕೆಯನ್ನು ನಿರಾಕರಿಸಿ “ಸರ್, ಗಂಡ ಮೃತನಾದ ನಂತರ ಸೊಸೆ ಸಾವಿತ್ರಿ ನಮ್ಮ ಮನೆಯಲ್ಲಿ ಇದ್ದಳು. ಚಾರಿತ್ರ್ಯ ಸರಿ ಇರಲಿಲ್ಲ. ಬುದ್ದಿ ಹೇಳಿದೆ ಕೇಳಲಿಲ್ಲ. ವಾಸಿಯಾಗದ ಏಡ್ಸ್ ರೋಗ ದೃಢವಾಯಿತು. ಹೇಳದೆ ಮನೆ ಬಿಟ್ಟಿದ್ದಾಳೆ. ಅವಳು ಬಹಳ ದಿನ ಬದುಕುವದಿಲ್ಲ “. ದಾವೆಯನ್ನು ಪ್ರತಿರೋಧಿಸುವ ಅಂಶಗಳೇನು ಕಾಣಲಿಲ್ಲ. ಗಂಡನ ಹಿಸ್ಸೆಗೆ ಹೆಂಡತಿ ವಾರಸುದಾರಳು. ಕೈಫಿಯತ್ ಸಲ್ಲಿಸಿದೆ. ಕೆಲವೆ ತಿಂಗಳಲ್ಲಿ ಸುಶೀಲ ಮೃತಳಾದಳು.

ಫೋಟೋ ಕೃಪೆ: google
ಪವಿತ್ರ, ಮೃತ ಸುಶೀಲಳ ದೂರದ ಸಂಬಂಧಿಕಳು. ಸುಶೀಲ ತನ್ನ ಹೆಸರಿಗೆ ನೋಂದಾಯಿತ ಮೃತ್ಯುಪತ್ರ ಬರೆದಿಟ್ಟಿರುವದಾಗಿ ದಾವೆ ಆಸ್ತಿಗೆ ಹಕ್ಕುದಾರಳೆಂದು ಕಾನೂನು ಬದ್ದ ಮೃತಳ ಪ್ರತಿನಿಧಿ ಎಂದು ಸೇರ್ಪಡೆಯಾಗಿ, ದಾವೆ ಮುಂದುವರೆಸಿದಳು. ಪ್ರತಿವಾದಿ/ನನ್ನ ಕಕ್ಷಿದಾರರಿಗೆ ಆಶ್ಚರ್ಯವಾಯಿತು. ಸುಶೀಲ ಮೃತಳಾಗುವ ಎರಡು ತಿಂಗಳ ಮೊದಲು ಪ್ರಜ್ಞೆ ಕಳೆದುಕೊಂಡು ಹಾಸಿಗೆ ಹಿಡಿದಳು. ಸೊಸೆ ಹಾದಿ ಹೆಣ ಆಗಬಾರದೆಂದು ತಮ್ಮ ಊರಲ್ಲಿ ತಂದು, ಒಬ್ಬ ಹೆಣ್ಣು ಮಗಳನ್ನು ಆರೈಕೆಗೆ ನೇಮಿಸಿ ಆರೈಕೆ ಮಾಡಿದೆವು ಎಂದು ವಿವರಿಸಿ ಮರಣ ಪ್ರಮಾಣಪತ್ರ ನೀಡಿದರು. ಪವಿತ್ರಾ ಮೃತ್ಯುಪತ್ರ ಬಗ್ಗೆ ವಾದಪತ್ರ ತಿದ್ದುಪಡಿ ಮಾಡಲಿಲ್ಲ.
ದಾವೆಯ ವಿಚಾರಣೆ ಪ್ರಾರಂಭವಾಯಿತು. ಪವಿತ್ರ ತನ್ನ ಮುಖ್ಯ ವಿಚಾರಣೆ ಪತ್ರ ಸಲ್ಲಿಸಿ, ಮೃತ ಸುಶೀಲ ತನ್ನ ಹೆಸರಿಗೆ ಮೃತ್ಯುಪತ್ರ ಬರೆದಿಟ್ಟಿದ್ದು, ಹಿಸ್ಸೆ ತನಗೆ ಸಲ್ಲಬೇಕು ಸಾಕ್ಷಿ ನುಡಿದಳು. ಪವಿತ್ರಾಳನ್ನು ಕ್ರಾಸ್ ಎಕ್ಸಾಮಿನೇಷನ್ ಮಾಡಲು ಎದ್ದು ನಿಂತೆ. ಎದುರಿಸುವ ದಕ್ಕೆ ರೆಡಿ ಅನ್ನುವ ಬಂಗಿಯಲ್ಲಿ ನಿಂತಿದ್ದಳು. ಪ್ರಶ್ನೆ ಉತ್ತರ ಹೀಗೆ ಸಾಗಿತು “ನಿಮಗೆ ಸುಶೀಲ ಹೇಗೆ ಸಂಬಂಧಿ? “. ಮೊದಲ ಪ್ರಶ್ನೆಗೆ, “ಹೀಗೆ ಎಂದು ಹೇಳಲು ಆಗುವುದಿಲ್ಲ. “ಸುಶೀಲಳ ವೈದ್ಯಕೀಯ ಸರ್ಟಿಫಿಕೇಟ್ ತೋರಿಸಿ” ಕೇಳಿದೆ.” ಇಲ್ಲ,” ಅಂದಳು. “ಸುಶೀಲ ಏಡ್ಸ್ ರೋಗದಿಂದ ಬಳಲುತ್ತಿದ್ದಳು”, ಎಂದು ಸೂಚಿಸಿದೆ. “ಗೊತ್ತಿಲ್ಲ “ಎಂದು ಹೇಳಿದಳು. “ಸುಶೀಲಳನ್ನು ಯಾವ ಆಸ್ಪತ್ರೆಯಲ್ಲಿ ಆರೈಕೆ ಮಾಡಿದೆ? “ಕೇಳಿದೆ. “ಮನೆಯಲ್ಲಿ ” ಚುಟಕಾಗಿ ಹೇಳಿದಳು.”ಮೃತ್ಯುಪತ್ರ ಯಾವ ತಾರೀಕಿನಂದು ಮಾಡಿಕೊಟ್ಟಳು? ನೀನೂ ಇದ್ದೆಯಾ? ಯಾವ ಊರಲ್ಲಿ ಮೃತಳಾದಳು?. ಎಲ್ಲಿ ಅಂತ್ಯ ಕ್ರಿಯೆ ಆಯಿತು.? ಅನ್ನುವ ಪ್ರಶ್ನೆಗೆ.”2ನೆ ತಾರೀಕಿ ನಂದು ಬರೆದು ಕೊಟ್ಟಳು.
ನಾನು ಇದ್ದೆ. ದಿನಾಂಕ 5 ರಂದು ನಮ್ಮಊರಲ್ಲಿ ಮೃತಳಾದಳು “. ಅವಳು ಹಾಜರು ಪಡಿಸಿದ ಡೆತ್ ಸರ್ಟಿಫಿಕೇಟ್ ತೋರಿಸಿ, ” ಇದನ್ನು ಕೊಟ್ಟ ಅಧಿಕಾರಿಯ ಸಿಕ್ಕೆ ಇದೆ, ಸಹಿ ಇಲ್ಲ ” ಎನ್ನುವ ಹೇಳಿದೆ.” ಅದು ಅವರ ಕೆಲಸ” ಎಂದು ನುನುಚಿಕೊಂಡಳು. ನನ್ನ ಕಕ್ಷಿದಾರ ಹಾಜರು ಪಡಿಸಿದ ಡೆತ್ ಸರ್ಟಿಫಿಕೇಟ್ ತೋರಿಸಿ, ಸುಶೀಲ 2 ನೆ ತಾರೀಕಿನಂದು, ಪ್ರತಿವಾದಿ ಊರಲ್ಲಿ ಮರಣ ಹೊಂದಿದ್ದಾಳೆ “ಎಂದು ಹೇಳಿದೆ.”ಹಾಗೆ ಬರೆದಿದ್ದಾರೆ ” ಚುಟುಕು ಉತ್ತರ ನೀಡಿದಳು.”ಮೃತ್ಯು ಪತ್ರದಲ್ಲಿ ಸಹಿ ಮಾಡಿದ ಸಾಕ್ಷಿದಾರರು ನಿನ್ನ ಸಂಬಂಧಿಕರು, ಸುಶೀಲಳ ಪರಿಚಯ ಇಲ್ಲ”.” ಹೌದು ” ಎಂದು ಹೇಳಿದಳು “ಸುಶೀಲ ಅನಕ್ಷರಳು ದಾವೆಯಲ್ಲಿ ಹೆಬ್ಬಟ್ಟು ಸಹಿ ಮಾಡಿದ್ದಾಳೆ “ಎಂದು ದಾವೆಯಲ್ಲಿಯ ಹೆಬ್ಬಟ್ಟು ಸಹಿ ತೋರಿಸಿದೆ, ಕಂಗಲಾದಳು. ಮೃತ್ಯುಪತ್ರ ತೋರಿಸಿ ಬರಹದಲ್ಲಿ ಮಾಡಿರುವ ಸಹಿ ತೋರಿಸಿದೆ. ಅನಿವಾರ್ಯವಾಗಿ “ಸರಿ” ಅಂದಳು. ಇನ್ನು ಹೋಗಬಹುದು ಎಂದೆ. ಸಾಕ್ಷಿ ಕಟಕಟೆಯಿಂದ, ತನ್ನ ಬಂಡವಾಳ
ಬಯಲಾಯಿತು ಎಂದು ತಲೆ ತಗ್ಗಿಸಿ ಕೋರ್ಟ್ ಹಾಲನಿಂದ ನಿರ್ಗಮಿಸಿದಳು.

ಫೋಟೋ ಕೃಪೆ: google
ಪವಿತ್ರ ಪರವಾಗಿ ಮೃತ್ಯು ಪತ್ರಕ್ಕೆ ಸಹಿ ಮಾಡಿದ ಇಬ್ಬರು ಸಾಕ್ಷಿದಾರರು ಮತ್ತು ಬಾಂಡ್ ರೈಟರ್ ಸಾಕ್ಷಿ ಕಟಕಟೆ ಏರಿದರು. ಸಾಕ್ಷಿದಾರರು ನಾನು ಮಾಡಿದ ಕ್ರಾಸ್ ಎಕ್ಸಾಮಿನೇಷನ ಪ್ರಶ್ನೆಗಳಿಗೆ ಉತ್ತರಿಸುತ್ತ , ತಮಗೆ ಮೃತ ಸುಶೀಲಳ ಪರಿಚಯ ಇಲ್ಲವೆಂದು ಮತ್ತು ತಮಗೆ ಪವಿತ್ರಾಗೆ ಮೃತ್ಯು ಪತ್ರ ಬರೆದು ಕೊಡುವುದಾಗಲಿ ಹೇಳಿಲ್ಲವೆಂದು, ಮೃತ್ಯು ಪತ್ರದಲ್ಲಿ ಏನು ಬರೆದಿದ್ದಾರೆ, ಯಾರು ಬರೆಸಿದ್ದಾರೆ ಎಂದು ಗೊತ್ತಿಲ್ಲವೆಂದು ನುಡಿದರು. ಮೃತ ಸುಶೀಲಳನ್ನು ಪವಿತ್ರ ಕರೆದುಕೊಂಡು ಬಂದು ಪರಿಚಿಯಿಸಿದಳು. ಪವಿತ್ರ ಮೃತ್ಯು ಪತ್ರ ಹೇಳಿ ಬರೆಸಿದಳು, ನಮಗೆ ಸಹಿ ಮಾಡು ಎಂದು ಹೇಳಿರುವುದರಿಂದ ಸಹಿ ಮಾಡಿದ್ದೇವೆ. ಸುಶೀಲ ಎಂದು ಮೃತಳಾದಳು ಗೊತ್ತಿಲ್ಲವೆಂದು ಒಪ್ಪಿಕೊಂಡರು. ಸುಶೀಲಳ ಫೋಟೋ ತೋರಿಸಿದಾಗ ಇವಳು ಅವಳಲ್ಲ ಎಂದರು. ಬಾಂಡ್ ರೈಟರ್, ಪವಿತ್ರ ಇವಳು ಸುಶೀಲ ಎಂದು ಪರಿಚಯಿಸಿದಳು. ಪವಿತ್ರ ಮೃತ್ಯು ಪತ್ರ ಮಾಹಿತಿ ಕೊಟ್ಟು ಬರೆಸಿದ್ದಾಳೆ. ಮೃತ್ಯು ಬರೆದ ಕಾಲದಲ್ಲಿ ಇನ್ನೂ ಆನ್ ಲೈನ್, ಡಿಜಿಟಲ್ ತಂತ್ರಜ್ಞಾನದ ವ್ಯವಸ್ಥೆ ಇರಲಿಲ್ಲ. ದಸ್ತಾವೇಜುಗಳನ್ನು ಕೈ ಬರಹದಲ್ಲಿ ಬರೆಯುತ್ತಿದ್ದೆವು. ಪತ್ರ ಬರೆದುಕೊಡುವ, ಬರೆಯಿಸಿಕೊಳ್ಳುವವರ, ಸಾಕ್ಷಿದಾರರ ಫೋಟೋ
ಆಂಟಿಸುತ್ತಿರಲಿಲ್ಲ. ಗುರುತಿನ ಚೀಟಿ ಪಡೆಯುತ್ತಿರಲಿಲ್ಲ ಎಂದು ಒಪ್ಪಿಕೊಂಡನು.ಪ್ರತಿವಾದಿ ಸಾಕ್ಷಿ ಹೇಳಿಸಿದೆ. ಹೇಳುವಂತಹದು ಏನು ಇರಲಿಲ್ಲ.
ಪವಿತ್ರಾ ಮೊದಲು ಮೃತ್ಯು ಪತ್ರ ರುಜುವಾತು ಪಡಿಸಲು ವಿಫಲ ಆಗಿರುವುದರಿಂದ, ಸುಶೀಲಳ ಪಾಲು ಅವಳಿಗೆ ದಕ್ಕುವದಿಲ್ಲ. ಪವಿತ್ರ ಮೃತ್ಯು ಪತ್ರವನ್ನು, ಸುಶೀಲ ಮೃತವಾದ ದಿನವೆ ಯಾರನ್ನೋ ಸುಶೀಲ ಎಂದು ಬಿಂಬಿಸಿ ಹೇಗೆ ಸೃಷ್ಟಿಸಿದ್ದಾಳೆ ಎಂದು ಸಾಕ್ಷಿ ಸಮೇತ ನ್ಯಾಲಯದ ಗಮನಕ್ಕೆ ತಂದು ವಾದಿಸಿದೆ.
ಪ್ರತಿವಾದಿ ಊರಿನಲ್ಲಿ ಸುಶೀಲ ದಿ 2 ರಂದು ಮೃತಳಾಗಿದ್ದು ಮರಣ ದಾಖಲೆಯಿಂದ ತಿಳಿದು ಬರುತ್ತದೆ. ಪವಿತ್ರ ತನ್ನ ಊರಿನಲ್ಲಿ ದಿ 5 ರಂದು ಮೃತಳಾಗಿದ್ದಾಳೆ ಎಂದು ನಂಬಲಾರದ ದಾಖಲಾತಿ ಹಾಜರು ಪಡಿಸಿದ್ದಾಳೆ. ಸಾಕ್ಷಿದಾರರ ಹೇಳಿಕೆ ನಂಬಲು ಅರ್ಹ. ಸತ್ತ ವ್ಯಕ್ತಿ ಮೃತ್ಯುಪತ್ರ ಹೇಗೆ ಮಾಡಲು ಸಾಧ್ಯ ?ಎಂದು ನ್ಯಾಯಾಲಯ ಖೇದ ವ್ಯಕ್ತಪಡಿಸಿ, ವಾದಿ ಪವಿತ್ರ ಮೃತ್ಯು ಪತ್ರ ರುಜುವಾತು ಪಡಿಸಲು ವಿಫಲಳಾಗಿದ್ದಾಳೆಂದು ಅಭಿಪ್ರಾಯ ಪಟ್ಟು ದಾವೆಯನ್ನು ಖರ್ಚು ಸಹಿತ ವಜಾಗೊಳಿಸಿ ತೀರ್ಪು ನೀಡಿತು.
‘ನ್ಯಾಯದ ಕಣ್ಣು’ ಅಂಕಣದ ಹಿಂದಿನ ಸಂಚಿಕೆಗಳು :
- ಪ್ರಕಾಶ ವಸ್ತ್ರದ – ವಕೀಲರು, ಲೇಖಕರು, ಮುಧೋಳ
