‘ನ್ಯಾಯದ ಕಣ್ಣು’ ಅಂಕಣ – (ಭಾಗ -೫)

ಕಕ್ಷಿದಾರಣ ಹೆಂಡತಿ ಮಕ್ಕಳು ನ್ಯಾಯಾಲಯದ ತೀರ್ಪಿನ ಮೇಲೆ ಮೆಲ್ಮನವಿ ಸಲ್ಲಿಸಿದ್ದಾರೆ. ಏನಿದು ಪ್ರಕರಣ. ತಪ್ಪದೆ ಮುಂದೆ ಓದಿ ವಕೀಲರಾದ ಪ್ರಕಾಶ ವಸ್ತ್ರದ ಅವರ ‘ನ್ಯಾಯದ ಕಣ್ಣು’ ಅಂಕಣದಲ್ಲಿ ತೀರ್ಪಿನಲ್ಲಿ ಹಸ್ತಕ್ಷೇಪ ಇಲ್ಲ, ಮೆಲ್ಮನವಿ ಕೋರ್ಟ್, ತಪ್ಪದೆ ಮುಂದೆ ಓದಿ…  

ಪುಸ್ತಕ :”ಅಡ್ವೋಕೇಟ್ ಡೈರಿ ವೃತ್ತಿ ಬದುಕಿನ ಬುತ್ತಿ”
ಬೆಲೆ : 200/
ಖರೀದಿಗಾಗಿ : 9448015613 

ಒಮ್ಮೊಮ್ಮೆ ಕಕ್ಷಿದಾರರ ನಡೆ ಗೊತ್ತಾಗುವದಿಲ್ಲ. ಅವರ ಯಡವಟ್ಟುಗಳು ಪ್ರಕರಣದ ಗುಣಮಟ್ಟದ ಮೇಲೆ ಕರಿ ನೆರಳು ಚೆಲ್ಲುತ್ತವೆ. ಕಕ್ಷಿದಾರರು ಪ್ರಾಂಜಲ ಮನಸಿನಿಂದ ತಮ್ಮ ನ್ಯಾಯವಾದಿಗಳ ಮುಂದೆ ನೈಜ ಸ್ಥಿತಿಯನ್ನು ಬಿಚ್ಚಿಟ್ಟರೆ, ಅದಕೊಂದು ಪರಿಹಾರದ, ಸಮತೋಲನದ ದಾರಿ ಸಿಗುತ್ತದೆ. ವಿಚಾರಣೆಗೆ ಇರುವ ಪ್ರಕರಣದ ವಸ್ತು ಸ್ಥಿತಿಯನ್ನು ಬಚ್ಚಿಟ್ಟು, ಇನ್ನೊಬ್ಬ ನ್ಯಾಯವಾದಿಯನ್ನು ಸಂಪರ್ಕಿಸಿ, ವಿಚಾರಣೆಗೆ ಇರುವ ಕೇಸಿನ ಮಾಹಿತಿ ಬಚ್ಚಿಟ್ಟು ಮತ್ತೆ ಏನೇನೋ ಪ್ರಕರಣ ದಾಖಲಿಸಿ ಆದೇಶ ಪಡೆದುಕೊಂಡು ಬಿಟ್ಟಿರುತ್ತಾರೆ. ಆ ಕೇಸಿನ ಆದೇಶವನ್ನು ವಿಚಾರಣೆಗೆ ಇರುವ ಪ್ರಕರಣಕ್ಕೆ ಜೋಡಿಸಲು ಪ್ರಯತ್ನಸುತ್ತಾರೆ. ಈ ನಡೆ ಒಳ್ಳೆಯ ಕೇಸಿಗೆ ಹಾನಿ ಉಂಟು ಮಾಡಿ ಬಿಡುತ್ತದೆ.

ವಾದಿಯು, ನನ್ನ ಕಕ್ಷಿದಾರ/ ಪ್ರತಿವಾದಿಯ ಮೇಲೆ ಒಪ್ಪಂದದ ನಿರ್ದಿಷ್ಟ ಕಾರ್ಯಕ್ಷಮತೆ (ಸೂಟ್ ಫಾರ್ ಸ್ಪೆಸಫಿಕ್ ಪರ್ಫಾರ್ಮನನ್ಸ್ ಆಫ್ ಕಾಂಟ್ರಾಕ್ಟ್ ) ದಾವೆ ಸಲ್ಲಿಸಿದ್ದನು. ವಾದ ಪತ್ರದಲ್ಲಿ, ಪ್ರತಿವಾದಿ ತನ್ನ ಜಮೀಣನನ್ನು ಮನೆತನದ ಅಡಚನೆಗಾಗಿ ಮಾರಾಟಕ್ಕೆ ತೆಗೆದಿದ್ದು, ವಾದಿ ಮಾರುಕಟ್ಟೆಯ ಹೆಚ್ಚಿನ ಬೆಲೆ ರೂ, 20 ಲಕ್ಷಕ್ಕೆ ಬೇಡಿ, ರೂ 15 ಲಕ್ಷ ಮುಂಗಡ
ಕೊಟ್ಟಿರುತ್ತಾನೆ. ಪ್ರತಿವಾದಿ ಬಾಕಿ ಹಣ ರೂ 5 ಲಕ್ಷ ಹಣ ವನ್ನು ಒಂದು ವರ್ಷಕ್ಕೆ ಪಡೆದು ನೋಂದಾಯಿತ ಕ್ರಯಪತ್ರ ಮಾಡಿಕೊಡುವದಾಗಿ ಒಪ್ಪಿ ನೋಂದಾಯಿತ ಕ್ರಯ ಕರಾರು ಪತ್ರ ಬರೆದುಕೊಟ್ಟಿರುವದಾಗಿ, ಕರಾರಿನಂತೆ ಪ್ರತಿವಾದಿ ನಡೆದುಕೊಂಡಿಲ್ಲವೆಂದು ದಾವೆ ಮಾಡಿರುದಾಗಿ ವಿವರಿಸಿದ್ದಾನೆ. ಕರಾರು ಪತ್ರದಂತೆ ಕ್ರಯ ಪತ್ರ ಮಾಡಿಕೊಡಲು ನಿರ್ದೇಶನ ನೀಡಿ ಜಡ್ಜಮೆಂಟ್ ಡಿಕ್ರಿ ಆದೇಶ ಮಾಡಲು ನ್ಯಾಯಾಲಯಕ್ಕೆ ಪ್ರಾರ್ಥನೆ ಮಾಡಿದ್ದನು.

ನನ್ನ ಕಕ್ಷಿದಾರ/ ಪ್ರತಿವಾದಿ ಕೇಸಿನ ತೀರ್ಪಿಗಾಗಿ ನ್ಯಾಯಾಲಯದ ಆವರಣದಲ್ಲಿ ಕಾಯುತ್ತಿದ್ದನು. ಮಧ್ಯಾಹ್ನನ ಕಲಾಪದಲ್ಲಿ ವಾದಿ ಪ್ರತಿವಾದಿಯರನ್ನು ಕರೆಯಲಾಯಿತು. ನ್ಯಾಯಾಲಯವು ತೀರ್ಪಿನ ಅಂತಿಮ ಆದೇಶವನ್ನು ಪ್ರಕಟಿಸುತ್ತ, ವಾದಿಯು ದಾಖಲಿಸಿದ ದಾವೆಯನ್ನು ಡಿಕ್ರಿಗೊಳಿಸಿ, ಪ್ರತಿವಾದಿಯು, ವಾದಿಯಿಂದ ಸ್ವತ್ತಿನ ಮೌಲ್ಯದ ಬಾಕಿ ಹಣ ರೂ 5 ಲಕ್ಷ ಪಡೆದುಕೊಂಡು ನೋಂದಾಯಿತ ಕ್ರಯ ಪತ್ರ ಮಾಡಿ ಕೊಡಲು ನಿರ್ದೇಶನ ನೀಡಿತು.

ಈ ತೀರ್ಪಿನ ಮೇಲೆ ಮೆಲ್ಮನವಿ ಮಾಡಲು ಹಲವು ಅಂಶಗಳು ಇವೆ ಎಂದು ಕಕ್ಷಿದಾರನಿಗೆ ಅಭಿಪ್ರಾಯ ತಿಳಿಸಿದೆ. ಒಂದು ವೇಳೆ ಕೋರ್ಟಿನ ಆದೇಶದಂತೆ ಕ್ರಯ ಪತ್ರ ಮಾಡಿಕೊಡದಿದ್ದರೆ ಏನಾಗುತ್ತದೆ ಅನ್ನುವ ಕಕ್ಷಿದಾರನ ಪ್ರಶ್ನೆಗೆ, ವಾದಿ ಕೋರ್ಟ್ ಕಮಿಷನರ ನೇಮಿಸಿಕೊಂಡು ಕ್ರಯ ಪತ್ರ ಮಾಡಿಕೊಳ್ಳುತ್ತಾನೆ ಎಂದು ಉತ್ತರಿಸಿದೆ. ನಂತರ ಕಕ್ಷಿದಾರ ಮೇಲ್ಮನವಿ ದಾಖಲಿಸಲು ಬರಲಿಲ್ಲ. ತಮ್ಮ ಪರ ಕೇಸು ಆಗದ ಸಂಧರ್ಭದಲ್ಲಿ ಕಕ್ಷದಾರರು ಬೇರೆ ವಕೀಲರನ್ನು ಸಂಪರ್ಕಿಸುವ ಘಟನೆ ನೋಡಿದ್ದೇವೆ. ಕೆಲವು ತಿಂಗಳು ನಂತರ ಮೆಲ್ಮನವಿಯ ನೋಟಿಸು ಹಿಡಿದುಕೊಂಡು ಭೇಟಿಯಾದನು.

ಕಕ್ಷಿದಾರಣ ಹೆಂಡತಿ ಮಕ್ಕಳು ನ್ಯಾಯಾಲಯದ ತೀರ್ಪಿನ ಮೇಲೆ ಮೆಲ್ಮನವಿ ಸಲ್ಲಿಸಿದ್ದಾರೆ. ಆದರೆ ಇವರೆಲ್ಲ ಕೆಳ ನ್ಯಾಯಾಲಯದ ದಾವೆಯಲ್ಲಿ ಪಾರ್ಟಿ ಇರಲಿಲ್ಲ. ಮೆಲ್ಮನವಿಯನ್ನು ವಜಾಗೊಳಿಸಲು ಪ್ರಾರ್ಥಿಸಿದ ಅಂಶಗಳ ಮೇಲೆ ದೃಷ್ಟಿ ಹಾಯಿಸಿದೆ. ಮೇಲ್ಮನ ವಿದಾರರು ಮತ್ತು ಮೊದಲನೆಯ ಎದುರುದಾರ/ ಗಂಡ ಜಂಟಿ ಕುಟುಂಬದ ಸದಸ್ಯರಿದ್ದು, ದಾವೆ ಸ್ವತ್ತು ಜಂಟಿ ಕುಟುಂಬದ ಆಸ್ತಿ ಇದೆ. ಹೆಂಡತಿ, ಮಕ್ಕಳು ಮತ್ತು ಗಂಡನ ನಡುವೆ ವ್ಯಾಜ್ಯ ನಡೆದು ರಾಜಿ ಡಿಕ್ರಿ ಪ್ರಕಾರ ಹಿಸ್ಸೆ ಆಗಿದೆ. ದಾವೆ ಆಸ್ತಿ ಹೆಂಡತಿ ಮಕ್ಕಳ ಹಿಸ್ಸೆಗೆ ಬಂದಿದೆ. ವಿಚಾರಣಾ v ನ್ಯಾಯಾಲಯದಲ್ಲಿ ಮೂಲ ವಾದಿ ಮತ್ತು ಪ್ರತಿವಾದಿ ಒಬ್ಬೊಬ್ಬರಿಗೊಬ್ಬರು ಹೊಂದಾಣಿಕೆಯಿಂದ ದಾವೆ ಮಾಡಿಕೊಂಡು, ಹೆಂಡತಿ ಮಕ್ಕಳ ಹಿಸ್ಸೆ ನಷ್ಟಗೊಳಿಸುವ ಉದ್ದೇಶ ದಿಂದ ವಾದಿಯ ಹೆಸರಿಗೆ ಡಿಕ್ರಿಮಾಡಿಕೊಂಡಿದ್ದಾರೆ, ಇದು ಪೂರ್ವ ನಿಯೋಜಿತ ಡಿಕ್ರಿ ಎಂದು ಆಪಾದಿಸಿ ವಿಚಾರಣೆ ನ್ಯಾಯಾಲಯ ಹಸ್ತಕ್ಷೇಪ ಮಾಡಿ ಜಡ್ಜ ಮೆಂಟ್ ಮತ್ತು ಡಿಕ್ರಿ ರದ್ದು ಪಡಿಸಲು ಕೇಳಿಕೊಂಡಿದ್ದಾರೆ.

ಇದೆಲ್ಲ ಸಂಗತಿ ಮೊದಲೆ ಹೇಳಬೇಕಿತ್ತು, ಕೆಳ ನ್ಯಾಯಾಲಯ ದಲ್ಲಿ ವಾದಿಸುತ್ತಿದ್ದೆ ಎಂದು ಕಕ್ಷಿದಾರನ ನ್ನು ನೋಡಿದೆ.ಏನು ಉತ್ತರವಿಲ್ಲದ ಮುಖಭಾವದಿಂದ ಸುಮ್ಮನೆ
ಕುಳಿತುಕೊಂಡನು. ಉದ್ದೇಶ ಪೂರ್ವಕವಾಗಿ ರಾಜಿ ಡಿಕ್ರಿ ಮಾಡಿಕೊಂಡಿದ್ದಾರೆಂದು ಗೊತ್ತಾಯಿತು.

ಮೇಲನ್ಮವಿ ಪ್ರಕ್ರಿಯೆಯಲ್ಲಿ, ವಿಚಾರಣೆ ನ್ಯಾಯಾಲಯದಂತೆ ಸಾಕ್ಷಿ ಹೇಳಿಕೆ ಇತ್ಯಾದಿ ಇರುವದಿಲ್ಲ. ಆದರೆ ಅಪರೂಪದ ಪ್ರಸಂಗದಲ್ಲಿ, ಕೆಳ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗದ ಮೌಕಿಕ, ಲಿಖಿತ ಸಾಕ್ಷಿ ಪುರಾವೆಗಳನ್ನು ನ್ಯಾಯಾಲಯದ ಪರವಾನಿಗೆ ಪಡೆದು ಹಾಜರು ಪಡಿಸಬಹುದು. ಈ ರೀತಿಯ ಪ್ರಸಂಗ ಉದ್ಭವ ಆಗದಿದ್ದರೆ, ನೇರವಾಗಿ ವಾದ ಮಂಡನೆ ಮಾತ್ರ ಮಾಡಬಹುದಾಗುತ್ತದೆ. ಮೇಲನ್ಮವಿಯಲ್ಲಿ, ಕೆಳ ನ್ಯಾಯಾಲಯ ಯಾವ ರೀತಿ ತಪ್ಪು ತೀರ್ಪನ್ನು ನೀಡಿದೆ, ಯಾವ ರೀತಿ ಮಾಡ ಬೇಕಿತ್ತು ಅನ್ನುವ ವಿಶ್ಲೇಷಣೆ ಮೇಲನ್ಮನವಿದರ ಪರ ವಕೀಲರು ವಾದ ಮಂಡಿಸುತ್ತಾರೆ. ಕೆಳ ನ್ಯಾಯಾಲಯ ಯಾವ ರೀತಿ ಸರಿಯಾದ ತೀರ್ಪು ನೀಡಿದೆ ಮತ್ತು ಯಾಕೆ ಮೇಲ್ಮನವಿ ನ್ಯಾಯಾಲಯ ಆ ತೀರ್ಪಿ ನಲ್ಲಿ ಹಸ್ತ ಕ್ಷೇಪ ಮಾಡುವ ಅವಶ್ಯವಿಲ್ಲ ಎಂದು ಎದುರುದಾರ ಪರ ವಕೀಲರು ವಾದ ಮಂಡಿಸುತ್ತಾರೆ. ಇದೊಂದು ನಿಯಮಿತ ಮೇಲನ್ಮನವಿ. ಇದರಲ್ಲಿ ಆಗುವ ತೀರ್ಪ ನ್ನು ಎರಡನೆ ನಿಯಮಿತ ಮೇಲ್ಮನವಿಯಲ್ಲಿ
ಪ್ರಶ್ನಿಸಬಹುದು.

ಈ ಪ್ರಕರಣದಲ್ಲಿ ಮೇಲನ್ಮನವಿಧಾರ ಪರ ವಕೀಲರು ನೇರವಾಗಿ ವಾದಕ್ಕೆ ಇಳಿದರು. ಮೇಲ್ಮನವಿದಾರರು ಮೂಲ ಪ್ರತಿವಾದಿಯ ಗಂಡ ಹೆಂಡತಿಯರಿದ್ದು, ದಾವೆ ಆಸ್ತಿ ಪಿತ್ರಾರ್ಜಿತತವಾಗಿ ವಾರಸು ದಾರಿಕೆಯಿಂದ ಬಂದ ಜಂಟಿ ಕುಟುಂಬದ ಆಸ್ತಿ ಇರುತ್ತದೆ. ದಾವೆ ಸ್ವತ್ತಿನಲ್ಲಿ ಮೇಲನ್ಮನವಿಧಾರರಿಗೆ ಹಿಸ್ಸೆ ಇರುತ್ತದೆ. ಎದುರುದಾರ ಗಂಡನಿಗೆ ತನ್ನ ಹಿಸ್ಸೆ ಮಾತ್ರ ಮಾರಾಟ ಮಾಡುವ ಅಧಿಕಾರ ಇದೆ, ಆದರೆ ಪೂರ್ತಿ ಅಸ್ತಿ ಮಾರಾಟ ಮಾಡಿದ್ದಾನೆ. ಕರಾರು ಮಾಡಿಕೊಂಡ ಎದುರುದಾರನಿಗೆ ಇದು ಗೊತ್ತಿದ್ದು ಒಪ್ಪಂದ ಮಾಡಿಕೊಂಡಿರುವದಾಗಿ ವಾದಿಸಿ, ಕೆಳ ನ್ಯಾಯಾ ಲಯದ ತೀರ್ಪು ರದ್ದು ಪಡಿಸಲು ಪ್ರಾರ್ಥಿಸಿದರು. ನಾನು ಮೇಲನ್ಮನವಿದಾರರ ವಾದ ಪುರಸ್ಕರಿಸುವ ಹೊರತು ಬೇರೆ ದಾರಿ ಇರಲಿಲ್ಲ. ಕ್ರಯ ಒಪ್ಪಂದಮಾಡಿಕೊಂಡ ಎದುರುದಾರ ಪರವಕೀಲರು, ಇದೊಂದು ಸಂಚಿನ ಮೇಲನ್ಮವಿ, ಕೆಳ ನ್ಯಾಯಾಲದಲ್ಲಿ ವಿಚಾರಣೆ ನಡೆದಾಗ ಗಂಡ ಹೆಂಡತಿ ಮಕ್ಕಳು ಉದ್ದೇಶ ಪೂರ್ವಕ ರಾಜಿ ಡಿಕ್ರಿ ಮಾಡಿಕೊಂಡಿದ್ದು ಅದನ್ನು ನ್ಯಾಯಾಲಯದ ಗಮನಕ್ಕೆ ತಂದಿಲ್ಲವೆಂದು ವಾದಿಸಿದರು.

ನ್ಯಾಯಾಲಯವು, ಮೆಲ್ಮನವಿಧಾರರಾದ ಹೆಂಡತಿ ಮಕ್ಕಳು ಎದುರುದಾರ ಗಂಡನ ಜೊತೆ ಉದ್ದೇಶ ಪೂರ್ವಕವಾಗಿ ರಾಜಿ ಡಿಕ್ರಿ ಮಾಡಿಕೊಂಡಿದ್ದಾರೆ. ಎದುರುದಾರ ಗಂಡ ತಾನು ಮೆಲ್ಮನವಿ ಸಲ್ಲಿಸದೆ ಹೆಂಡತಿ ಮಕ್ಕಳಿಂದ ಉದ್ದೇಶ ಪೂರ್ವಕವಾಗಿ ಮೆಲ್ಮನ ವಿ ಸಲ್ಲಿಸಿದ್ದು ಕಂಡು ಬರುತ್ತದೆ. ಮೆಲ್ಮನವಿಧಾರರು ವಿಚಾರಣೆ ನ್ಯಾಯಾಲಯದಲ್ಲಿ ಪಾರ್ಟಿ ಇರುವದಿಲ್ಲ, ಕೆಳ ನ್ಯಾಯಾಲಯದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡುವ ಅವಶ್ಯ ಇಲ್ಲವೆಂದು ಅಭಿಪ್ರಾಯ ಪಟ್ಟು ಮೆಲ್ಮನವಿ ವಜಾಗೊಳಿಸಿ, ಕೆಳ ನ್ಯಾಯಾಲಯ ತೀರ್ಪನ್ನು ಪುಷ್ಟಿಕರಿಸಿತು.

‘ನ್ಯಾಯದ ಕಣ್ಣು’ ಅಂಕಣದ ಹಿಂದಿನ ಸಂಚಿಕೆಗಳು :


  • ಪ್ರಕಾಶ ವಸ್ತ್ರದ – ವಕೀಲರು, ಲೇಖಕರು, ಮುಧೋಳ

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW