ಕಿರು ನೆಲ್ಲಿಕಾಯಿ ಉಪ್ಪಿನಕಾಯಿ 

ಹುಳಿ ಖಾರ ಬಾಯಿಗೆ ಚಟ್ ಪಟ್ ಉಪ್ಪಿನಕಾಯಿ ತಿನ್ನಲು ಬಲು ಮಜಾ. ಅದನ್ನು ಮಾಡುವುದು ಕೂಡಾ ಬಲು ಸುಲಭ. ಕಿರು ನೆಲ್ಲಿಕಾಯಿ ಉಪ್ಪಿನಕಾಯಿಯನ್ನು ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು ಮಾಡುವ ವಿಧಾನವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…. 

ಬೇಕಾಗುವ ಸಾಮಗ್ರಿಗಳು :

  • ನೆಲ್ಲಿಕಾಯಿ
  • ಉಪ್ಪು
  • ಗುಂಟೂರು ಮೆಣಸಿನ ಕಾಯಿ
  • ಮೆಂತ್ಯ
  • ಸಾಸಿವೆ ಪುಡಿ
  • ಜೀರಿಗೆ
  • ಇಂಗು

ಮಾಡುವ ವಿಧಾನ :

ನೆಲ್ಲಿಕಾಯಿಗಳನ್ನು ಚೆನ್ನಾಗಿ ತೊಳೆದು ಅದರ ತೊಟ್ಟುಗಳನ್ನೆಲ್ಲ ತೆಗೆದು ಒಂದು ಭರಣಿಗೆ ಅಥವಾ ಒಂದು ಡಬ್ಬಕ್ಕೆ ಹಾಕಿ. ಹಾಕುವಾಗ ಒಂದು ಲೆಯರ್ ನೆಲ್ಲಿಕಾಯಿ ಅದ್ರ ಮೇಲೆ ಉಪ್ಪು ಪುನಃ ನೆಲ್ಲಿಕಾಯಿ ಪುನಃ ಉಪ್ಪು ಹೀಗೆ ಒಂದು ಅದು ಇದು ಹಾಕಿ ಒಂದು ಡಬ್ಬಕ್ಕೆ ಹಾಕಿ ಮುಚ್ಚಿ, ಇಟ್ಟು ಬಿಡಿ.

 

ಎರಡು ದಿನದ ನಂತರ ಡಬ್ಬಾ ಚೆನ್ನಾಗಿ ಕುಲುಕಿ ಇಡೀ ಹೀಗೆ ಎರಡು ದಿನಕ್ಕೊಮ್ಮೆ ಮಾಡಿ ನಾಲ್ಕು ಅಥವಾ ಐದು ದಿನ ಇಡಿ.  50 ಗ್ರಾಂ ಬ್ಯಾಡಗಿ ಮೆಣಸಿನ ಕಾಯಿ 50 ಗ್ರಾಂ ಗುಂಟೂರು ಮೆಣಸಿನ ಕಾಯಿ, ಕಾಲು ಸ್ಪೂನ್ ಉಪ್ಪು ಹಾಕಿ ಅದು ಮುಳುಗುವಷ್ಟು ಬಿಸಿ ನೀರಿನಲ್ಲಿ ಹಾಕಿ ಇಡಿ.

ಒಂದು ಸ್ಪೂನ್ ಸಾಸಿವೆ, ಒಂದು ಸ್ಪೂನ್ ಮೆಂತ್ಯ , ಒಂದು ಸ್ಪೂನ್ ಜೀರಿಗೆ ಹಾಕಿ ಹುರಿದು ನುಣ್ಣಗೆ ಪುಡಿ ಮಾಡಿಟ್ಟು ಕೊಳ್ಳಿ. ಈಗ ನೀರಿನಿಂದ ಮೆಣಸಿನ ಕಾಯಿ ತೆಗೆದು ರುಬ್ಬಿ ಕೊಳ್ಳಿ
ಈಗ ರುಬ್ಬಿದ ಮಿಶ್ರಣಕ್ಕೆ ಸಾಸಿವೆ ಪುಡಿ ಹಾಕಿ ಮಿಕ್ಸ್ ಮಾಡಿ ನೆನೆದ ನೆಲ್ಲಿಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮೆಣಸಿನ ಕಾಯಿ ನೆನೆಸಿದ ನೀರು ಕೂಡ ಹಾಕಿ ಮಿಕ್ಸ್ ಮಾಡಿ ಕೊಳ್ಳಿ .
ಉಪ್ಪಿನಕಾಯಿ ರಸ ಇನ್ನು ಸ್ವಲ್ಪ ಬೇಕು ಅನ್ನಿಸಿದರೆ ನೀರು ಚೆನ್ನಾಗಿ ಕುದಿಸಿ ಫುಲ್ ತಣ್ಣಗಾದ ಮೇಲೆ ಮಿಕ್ಸ್ ಮಾಡಿ.

 

ರುಚಿಯಾದ ಉಪ್ಪಿನಕಾಯಿ ರೆಡಿ. ಈಗ ಇದಕ್ಕೊಂದು ಚಂದದ ಇಂಗು , ಸಾಸಿವೆ ಒಗ್ಗರಣೆ ಕೊಡಿ. ಹಾಗೆ 3 ಸ್ಪೂನ್ ಎಣ್ಣೆ ಕಾಯಿಸಿ ತಣ್ಣಗಾದ ಬಳಿಕ ಮಾಡಿಟ್ಟ ಉಪ್ಪಿನಕಾಯಿ ಮೇಲೆ ಸುತ್ತ ಹಾಕಿ. ಹೀಗೆ ಮಾಡಿದಾಗ ಉಪ್ಪಿನ ಕಾಯಿ ಕೆಡುವುದಿಲ್ಲ. ಒಂದೆರೆಡು ದಿನದ ನಂತರ ಖಾರ ಚೆನ್ನಾಗಿ ಹಿಡಿದಿರುತ್ತದೆ..ಈಗ ಉಪ್ಪಿನಕಾಯಿ ಉಪಯೋಗಿಸಿ. ಮತ್ತೆ ಈ ತರ ರುಬ್ಬಿ ಹಾಕಿದ ಉಪ್ಪಿನಕಾಯಿ ಟೇಸ್ಟ್ ಬೇರೆ. ಅಚ್ಚ ಕಾರದ ಪುಡಿ ಕೂಡ ಹಾಕಬಹುದು. ಒಂದು ಗ್ಲಾಸ್ ಕುದಿಯುವ ನೀರು ಚೆನ್ನಾಗಿ ತಣ್ಣಗಾದ ಮೇಲೆ ಅಚ್ಚ ಮೆಣಸಿನ ಪುಡಿ, ಸಾಸಿವೆ ಮೆಂತ್ಯ ಪುಡಿ ಹಾಕಿ ಕಲಸಿ ನೆನೆದ ಲಿಂಬೆ ಹಣ್ಣಿನ ಮೇಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಆಯಿತು.


  • ಶಕುಂತಲಾ ಸವಿ – ನಳಪಾಕ ಪ್ರವೀಣೆ , ಮೈಸೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW