ದೂರ ಸರಿದರು ಮಡದಿ, ಮಕ್ಕಳು ಮಾಯವಾದರೂ ಬಂಧು ಬಳಗ ಮದ್ಯಪಾನವ ತ್ಯಜಿಸಿರಣ್ಣ…ಕವಿ ದಸ್ತಗಿರಿ ಸಾಬ್ ಅವರ ಲೇಖನಿಯಲ್ಲಿ ಮಧ್ಯಪಾನ ಕುರಿತು ಜಾಗೃತಿ ಮೂಡಿಸುವ ಕವನವನ್ನು ತಪ್ಪದೆ ಮುಂದೆ ಓದಿ…
ಮದ್ಯಪಾನವ ತ್ಯಜಿಸಿರಣ್ಣ
ಮನುಜರೆಲ್ಲ ಮಧ್ಯಪಾನವ ತ್ಯಜಿಸಿರಣ್ಣ
ಮದ್ಯಪಾನ ಕುಡಿತದಿಂದ
ಧನ ಮಾನ ಪ್ರಾಣ ಹಾನಿ
ಮಡದಿ ಮಕ್ಕಳು ಅತ್ತು ಬಿದ್ದು
ದಿಕ್ಕು ಪಾಲು ಆದರಣ್ಣ.
ಸುಖ ಸಂಸಾರದ ಗುಟ್ಟು ಅರಿಯದೆ
ಬದುಕು ಎಲ್ಲಾ ಬಾಡಿ ಹೋಗಿ
ದೂರ ಸರಿದರು ಮಡದಿ ಮಕ್ಕಳು
ಮಾಯವಾದರೂ ಬಂಧು ಬಳಗ .
ಮಧ್ಯಪಾನದ ಚಟವ ತುಂಬಿ
ಹಗಲು ರಾತ್ರಿ ಕುಡಿದು ಕುಡಿದು
ಜೇಬು ಎಲ್ಲಾ ಖಾಲಿಯಾಗಿ
ಹಗಲು ದುಡಿತ ಬಾರು ಸೇರಿ.
ಸಾಲಾ ಸೋಲ ಮಾಡಿಕೊಂಡು
ಇದ್ದ ಆಸ್ತಿ ಮಾಯವಾಗಿ
ಹಾದಿ ಬೀದಿಯಲ್ಲೆಲ್ಲ ಮಲಗಿ
ರೋಗ ರುಜಿನವ ತುಂಬಿಕೊಂಡು
ಎದ್ದು ಬಿದ್ದು ಗೂಡು ಸೇರುವ.
ಮಧ್ಯಪಾನ ಮಾಯವಾದರೆ
ಹಸನು ಬದುಕು ಕಟ್ಟಿಕೊಂಡು
ಮನೆಯ ದೀಪ ಬೆಳಗುತ್ತಿದ್ದರೆ
ಅಂದ ಚಂದದ ಬದುಕು ನೋಡು.
- ದಸ್ತಗಿರಿ ಸಾಬ್ – ಶಿಕ್ಷಕರು, ಗೌರಿಬಿದನೂರು.
