ಜಗದ ಜೀವರಾಶಿಗೆ ಕೃಷ್ಣನೆನಲು ಅಚ್ಚುಮೆಚ್ಚು

ಕೊಡುವೆ ಹಾಲು ಬೆಣ್ಣೆ ಮೊಸರು ಅವಲಕ್ಕಿ ಉಂಡೆ ಪಾಯಸ ಬರುವನವನು ನಂಬಿರುವೆ ಜಗದ ಜೀವರಾಶಿಗೆ ಕೃಷ್ಣ ಅಚ್ಚುಮೆಚ್ಚು…ಕವಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಮೂಡಿದ ಶ್ರೀಕೃಷ್ಣಜನ್ಮಾಷ್ಟಮಿಯ ಕುರಿತಾದ ಕವಿತೆಯನ್ನು ತಪ್ಪದೆ ಮುಂದೆ ಓದಿ… 

ಕೃಷ್ಣ ಬಂದನಲ್ಲ ಮನೆಗೆ
ಮನಕೆ ತಂದು ಹರುಷವ
ಎದೆಯ ನಂದನದಿಂದ
ಬಂದ ಹೊರಗೆ ಬೆಣ್ಣೆ ಮೆಲ್ಲಲು

ಭಕುತರಾಧೀನನಿವನು
ಕರೆದೊಡನೆ ಬರುವನು
ತನ್ನ ಕೊಳಲನಾದದಿಂದ
ಹರುಷಗೀತ ಉಲಿವನು

ಕೃಷ್ಣನೆನಲು ಅಚ್ಚುಮೆಚ್ಚು
ಜಗದ ಜೀವರಾಶಿಗೆ
ಹಸುಳೆಯಿಂದ ಹಿರಿಯರಿಗೆ
ಸಂಗಾತವೀವ ಖುಷಿಗೆ

ಕಷ್ಟವೆನಿಸದು ಬಾಳು
ಕೃಷ್ಣನ ಶುಭ ನೀಲಿ ಬೆಳಕು
ಹಾದಿ ತೋರಲು ಅವನ ಕಣ್ಣು
ಪ್ರೀತಿಸುಧೆಯ ಸುರಿಸಲು

ಕೊಡುವೆ ಹಾಲು ಬೆಣ್ಣೆ ಮೊಸರು
ಅವಲಕ್ಕಿ ಉಂಡೆ ಪಾಯಸ
ಬರುವನವನು ನಂಬಿರುವೆ
ಇವೆಲ್ಲ ಅವನಿಗೂ ಸ್ವಾದಿಷ್ಟ

ಮಗುವಾಗುವ ಹಿರಿಯರೆದುರು
ಗೆಳೆಯ ಬಾಲಕರ ಬಳಗಕೆ
ಆಪ್ತನಿವನು ಸಜ್ಜನರಿಗೆ
ದುರುಳ ಖೂಳ ನರರಿಗೆ

ಬಣ್ಣಿಸಲಳವೆ ಶ್ರೀಕೃಷ್ಣ ಮಹಿಮೆ
ನೆನೆದರೆ ಸಾಕು ಮನದಿ ನವಿಲನರ್ತನ
ಮೌನದಾಳದಲ್ಲಿ ಇವನ ತರತರಂಗಿತ
ಯಮುನಾ…ಕೀರ್ತನ ಆವರ್ತನ

ಹರಸು ಕೃಷ್ಣ ಧ್ಯಾನಿಸುವೆವು
ನಿನ್ನ ಭಕ್ತಿಯಲ್ಲಿ ಸತತವೂ
ನಿನ್ನ ರಾಧೆಯೊಡನೆ ಬಂದು
ಹರುಷ ನೀಡು ನಿರುತವೂ


  • ಶಿವದೇವಿ ಅವನೀಶಚಂದ್ರ – ಶಿಕ್ಷಕರು, ಲೇಖಕರು, ಕವಿಗಳು, ಕೊಡಗು

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading