‘ಘಾಸಿಯಾದ ಹೃದಯ’ ಕವನ – ರೂಪಶ್ರೀ ಎಂ

ನೀನೇ ಘಾಸಿ ಮಾಡಿರುವ ಈ ಹೃದಯವ…ನೀನೇ ಏಕೆ ವಾಸಿ ಮಾಡಬಾರದು ?…ರೂಪಶ್ರೀ ಎಂ ಅವರ ಲೇಖನಿಯಲ್ಲಿ ‘ಘಾಸಿಯಾದ ಹೃದಯ’ ಕವನ ತಪ್ಪದೆ ಮುಂದೆ ಓದಿ…

ನೀನೇ ಘಾಸಿ ಮಾಡಿರುವ ಈ ಹೃದಯವ
ನೀನೇ ಏಕೆ ವಾಸಿ ಮಾಡಬಾರದು ?

ಸರಿ – ತಪ್ಪುಗಳನ್ನು ಪಕ್ಕಕ್ಕಿಡು
ನನಗಾಗಿರುವ ನೋವಲ್ಲಿ ನಿನ್ನ ಪಾಲೆಷ್ಟು ಹೇಳು

ನೀ ನನಗೆ ಮಾಡಿದ ಅವಮಾನದ ನುಡಿಗಳಲ್ಲಿ
ನಿನಗೆಷ್ಟು ಮರಳಿಸಲಿ ನಾನು ?

ಸುಶೀಲೆಯ ಶೀಲ ಶಂಕಿಸುವ ನಿನಗೆ
ಪರಸ್ತ್ರೀಯ ಮೋಹದ ಖಾಯಿಲೆ ಅಂಟಿಲ್ಲವೇ?

ಬೇಕಾದಾಗೆಲ್ಲ ಬಳಸಿದವನು
ನಾ ನೊಂದು ಬೆಂದು ಮಗ್ಗಲು ಬದಲಿಸಿ
ನನ್ನ ದಿಂಬು ತೊಯ್ದಾಗ ಪುರುಷತ್ವದ
ಪ್ರಶ್ನೆ ಹುಟ್ಟಲಿಲ್ಲವೇಕೆ ನಿನಗೆ ?

ನನ್ನನ್ನು ಕಡೆಗಣಿಸಿ ನಿನ್ನವರ ಮುಂದೆ
ನನ್ನ ತವರ ನಿಂದಿಸುವಾಗ
ನೆನಪಾಗಲಿಲ್ಲವೇ ? ಆ ಮನೆಯ ದೀಪವೇ
ನಿನ್ನ ದೇವರಮನೆಯ
ಜ್ಯೋತಿ ಹೊತ್ತಿಸುತಿರುವುದು
ನಿನ್ನಭಿವೃದ್ಧಿ ಬೇಡುವುದು ಎಂದು ?

ಸೇರೊದ್ದು ಮನೆಯೊಳಗೆ ಬಂದಿರುವ ನನಗೆ
ಬಂಧನ ಧಿಕ್ಕರಿಸಿ ನಡೆಯಲು ಗೊತ್ತಿಲ್ಲವೇನು ?


  • ರೂಪಶ್ರೀ ಎಂ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW