ಕ್ರಿಕೆಟ್ ಪ್ರಿಯರಿಗೆ Ghoomer ಸಿನಿಮಾ ಇಷ್ಟವಾಗದೇ ಇರದು. ಸಿನಿಮಾ ಕುರಿತು ರಶ್ಮಿ ಉಳಿಯಾರು ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…
ಕ್ರೀಡಾ ಆಧಾರಿತ ಸಿನಿಮಾ ಎಂದರೆ ಅದರ ರುಚಿಯೇ ಬೇರೆ. ಬೇರೆಯೇ ಪ್ರಕಾರದ್ದು. ಸೋಲು, ಗೆಲುವು, ಮಹತ್ವಾಕಾಂಕ್ಷೆ, ಕಠಿಣ ಪರಿಶ್ರಮ, ದೇಶಭಕ್ತಿ, ಒಗ್ಗಟ್ಟು, ಟೀಮ್ ವರ್ಕ್, ಕೊನೆಗೊಂದು ಮ್ಯಾಚ್, ಒಬ್ಬ ಹೀರೋ… ಆಮೇಲೆ ನಮ್ಮ ಕಣ್ಣಲ್ಲೂ ನೀರು… ಈ ಸಿನಿಮಾದಲ್ಲೂ ಅವೆಲ್ಲವೂ ಇದೆ. ಆದರೆ ಅವಷ್ಟೇ ಅಲ್ಲ. ಇದು ಅನೀನಾಳ ಕ್ರಿಕೆಟ್ ಮತ್ತು ಜೀವನದ ಸಾಹಸ… ಅದಕ್ಕೆ ಕಠಿಣ ರೀತಿಯಲ್ಲಿ ಒತ್ತಾಸೆ ಮತ್ತು ಬೆನ್ನೆಲುಬಾಗಿ ನಿಂತದ್ದು ಪದಮ್ ಸಿಂಗ್ ಎಂಬ ಮಾಜಿ ಕ್ರಿಕೆಟಿಗ. ಅವನಿಗೂ ಒಂದು ಕಾರಣವಿದೆ. ಎಲ್ಲ ಮುಗಿದ ಮೇಲೂ ಬದುಕು ಮುಗಿಯದು ಎಂಬ ರೀತಿಯಲ್ಲಿ ಫೀನಿಕ್ಸ್ ಪಕ್ಷಿಯಂತೆ ಮತ್ತೆ ಪುಟಿದೆದ್ದು ಬಂದವಳ ಬದುಕಿನ ಚಿತ್ರಣವಿದು.

ಇಲ್ಲಿ ಅನೀನಾಳ ಅಜ್ಜಿ ಪಾತ್ರದ ಶಬಾನಾ ಅಜ್ಮಿ ಅವರ ಅಭಿನಯ ಇಷ್ಟವಾಯಿತು. ಅಮಿತಾಭ್ ಅವರ ಲವಲವಿಕೆ ಮತ್ತು ಭಾವನಾತ್ಮಕ ವೀಕ್ಷಕ ವಿವರಣೆಯ ಅಭಿನಯವೂ ಕುಂದಣವಿಟ್ಟಂತಿದೆ. ಅಭಿಷೇಕ್ ಬಚ್ಚನ್ ತನ್ನ ಅದ್ಭುತ ಪ್ರತಿಭೆಯಿಂದ ಪ್ಯಾಡಿ ಪಾತ್ರವನ್ನು ಜೀವಿಸಿದ್ದಾರೆ. ಅನೀನಾ ಪಾತ್ರಧಾರಿ ಸಯಾಮಿ ಖೇರ್’ದ್ದು ಅಭಿನಯ ಎಂದು ಎಲ್ಲೂ ಅನ್ನಿಸದು. ನೈಜ ಅಭಿನಯ ಎಂದರೆ ಕ್ಲೀಷೆಯಾದೀತಾ…! ಅಂತಹ ವಿಶೇಷತೆ ಏನು.? ನೋಡಿ, ನಿಜ ಬದುಕನ್ನು ಒಂದಿಷ್ಟು ಸ್ಫೂರ್ತಿಯಾಗಿಸಿಕೊಂಡು ಕಲ್ಪನೆಯ ಮೂಸೆಯಲ್ಲಿ ಕಟೆದ ಈ Ghoomer ಸಿನಿಮಾ…primeನಲ್ಲಿ.
- ರಶ್ಮಿ ಉಳಿಯಾರು
