‘ಗುಡಿಸಲಿಗೆ ಬಂದ ದೇವರು’ ಕೃತಿ ಪರಿಚಯ

ವೃತ್ತಿಯಲ್ಲಿ ಇಂಗ್ಲಿಷ್ ಶಿಕ್ಷಕರಾದ ರಹೀಮ್ ಬನ್ನಿಕಟ್ಟಿಯವರು ಹವ್ಯಾಸದಲ್ಲಿ ಕವಿಗಳು, ಅವರ ರಚನೆಯ ‘ಗುಡಿಸಲಿಗೆ ಬಂದ ದೇವರು’ ಕವನ ಸಂಕಲನದ ಕುರಿತು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಕಾರ್ಯದರ್ಶಿಗಳಾದ ಓಂಕಾರ ಪಾಟೀಲ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಗುಡಿಸಲಿಗೆ ಬಂದ ದೇವರು (ಕವನ ಸಂಕಲನ)
ಲೇಖಕರು : ರಹೀಮ್ ಬನ್ನಿಕಟ್ಟಿ
ಪ್ರಕಾಶಕರು : ಬನ್ನಿಕಟ್ಟಿ ಪ್ರಕಾಶನ.
ಬೆಲೆ :೧೫೦ (ನೂರ ಐವತ್ತು )

“ಬೆಂದವನೇ ಬೇಂದ್ರೆಯಾಗಬಲ್ಲ” ಅನ್ನುವ ಮಾತು ಅಕ್ಷರ ಸಹ ಸತ್ಯವಾದದು. ತನ್ನ ಬದುಕಿನುದ್ದಕ್ಕೂ ಎದುರಿಸುವ ನೋವು ಹತಾಶೆ ದುಃಖದ ಸನ್ನಿವೇಶವನ್ನು ಸ್ವತಃ ಅನುಭವಿಸುವ ಮೂಲಕ ಬದುಕಿನಲ್ಲಿ ಸಾರ್ಥಕತೆಯನ್ನು ಕಂಡು ಕೊಂಡವರಲ್ಲಿ ಶಬ್ದ ಗಾರುಡಿಗ ನಾಡು ಕಂಡಂತ ಕವಿ ದರಾಬೇಂದ್ರೆ ಅವರು. ಅವರು ತಮ್ಮ ಅನೇಕ ಕವಿತೆಗಳಲ್ಲಿ ಜೀವನಾನುಭವವನ್ನೇ ಪದ್ಯವನ್ನಾಗಿಸಿದವರು. ಅಂತಃ ನೋವು ಬದುಕಿನ ಕಷ್ಟ ನಷ್ಟಗಳಲ್ಲಿ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡವರು ಶ್ರೀ ರಹೀಮ್ ಬನ್ನಿಕಟ್ಟಿಯವರು. ವೃತ್ತಿಯಲ್ಲಿ ಇಂಗ್ಲಿಷ್ ಶಿಕ್ಷಕರಾದ ರಹೀಮ್ ಬನ್ನಿಕಟ್ಟಿಯವರು ಹವ್ಯಾಸದಲ್ಲಿ ಕವಿಗಳು ಸೃಜನ ಶೀಲ ಬರಹಗಾರರು ಆಗಿರುವರು.

ಬೇಂದ್ರೆ ಅವರಂತೆ ರಹೀಮ್ ಅವರು ಬಾಲ್ಯದಿಂದಲೇ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿದವರು ತಮ್ಮ ತಂದೆ ತಾಯಿಯ ಕಷ್ಟಗಳನ್ನು ಕಂಡವರು. ರಹೀಮ್ ಬನ್ನಿಕಟ್ಟೆ ಅವರ ತಂದೆ ‘ಜನಾಬ್ ಸಲೀಮ್’ ಶ್ರಮಿಕ ಜೀವಿ ರಿಕ್ಷಾ ಚಲಾಯಿಸುವ ಮೂಲಕ ಕುಟುಂಬಕ್ಕೆ ಆಸರೆಯಾದವರು ಅವರ ತಾಯಿ ರಿಹನಾ ಬೇಗಮ್ ಕೂಡ ಶ್ರಮಿಕ ಜೀವಿ ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಮಕ್ಕಳಿಗೆ ಒಳ್ಳೆ ಸಂಸ್ಕಾರ ಕೊಟ್ಟು ಬೆಳಿಸಿದ ದಂಪತಿಗಳು.

‘ಗುಡಿಸಿಲಿಗೆ ಬಂದ ದೇವರು (ಕವನ ಸಂಕಲನ )’ ಲೇಖಕರಾದ ರಹೀಮ್ ಬನ್ನಿಕಟ್ಟಿ ಅವರ ಕೃತಿಯು ಒಟ್ಟು ೭೨ ಕವನಗಳಿಂದ ಕೂಡಿದ ಕವನ ಸಂಕಲನವಾಗಿದ್ದು ಪ್ರತಿಯೊಂದು ಕವನಗಳಲ್ಲಿ ಅನುಭವಿಸಿದ ಬಾಲ್ಯದ ಕಹಿ ನೆನಪು, ಕಷ್ಟ ನೋವು, ತಂದೆ ತಾಯಿಯ ಶ್ರಮ ಬದುಕಿನ ಅನುಭವ ಮತ್ತು ಅನುಭಾವಗಳ ಮಿಶ್ರಣದ ಹೂರಣ ತಮ್ಮ ಕೃತಿಯಲ್ಲಿ ಓದುಗರಿಗಾಗಿ ಉಣಬಡಿಸಿದ ಅನುಭವವಾಗುತ್ತದೆ

‘ರವಿ ಕಾಣದ್ದು ಕವಿ ಕಂಡ’ ಅನ್ನುವಂತೆ ಕವಿಯಾದವನು ಒಂದು ವಸ್ತುವನ್ನು ತನ್ನದೇಯಾದ ದೃಷ್ಟಿಕೋನದಿಂದ ನೋಡುತ್ತಾನೆ. ಅದೇ ರೀತಿ ಕವಿ ಬೇಂದ್ರೆ ಅವರು ಶುಭ್ರ ಮುಂಜಾವಿನ ಸಮಯದ ಸೌಂದರ್ಯವನ್ನು ‘ಮೂಡಲ ಮನೆಯ’ ಕಾವ್ಯದ ಮೂಲಕ ರಚಿಸಿದ್ದಾರೆ.

‘ಮೂಡಲ ಮನೆಯ ಮುತ್ತಿನ ನೀರಿನ ಎರಕವಾ ಹೊಯ್ದ
ಬಾಗಿಲ ತೆರೆದು ಬೆಳಕು ಹರಿದು,
ಜಗವೆಲ್ಲ ತೊಯ್ದ ದೇವನು’ ಅನ್ನುವ ರೀತಿಯಲ್ಲಿ
ರಹೀಮ್ ಬನ್ನಿಕಟ್ಟಿ ಅವರ ಕವನಗಳು ಉಧಾಹರಣೆಗಾಗಿ ತೆಗೆದು ಕೊಳ್ಳುವದಾದರೆ

‘ಅವ್ವ’
ಊರ ಗುಡಿಯಲ್ಲಿ ಎಂದಿಗೂ ದೀಪ ಹಚ್ಚಲೇ ಇಲ್ಲವೆಂದು
ಹೇಗೆ ಬಯ್ಯಲಿ,
ಅವಳು ವಲೆ ಹಚ್ಚಿದಾಗಲೋಮ್ಮೆ
ದೇವರೇ ಗುಡಿಸಿಲಿಗೆ
ಬರುತ್ತಾನೆ ಅರತಿಗಾಗಿ /

ಎಷ್ಟು ಅರ್ಥ ಗರ್ಭಿತವಾಗಿದೆ ಮಾತು?
ಈ ಮೇಲಿನ ಕವಿತೆಗಳ ಸಾಲು ಡಾ. ಜಿ. ಎಸ್. ಶಿವರುದ್ರಪ್ಪನವರ ‘ಎಲ್ಲೋ ಹುಡುಕಿದೆ ಇಲ್ಲದ ದೇವರ,’ ಅನ್ನುವ ಕವಿತೆಗಳ ಸಾಲು ನೆನಪಿಸುತ್ತದೆ. ಆ ಮಹಾ ತಾಯಿ ದೇವರನ್ನು ಎಲ್ಲೋ ಹುಡುಕಿಕೊಂಡು ಹೋಗಿಲ್ಲ ಒಲೆ ಹಚ್ಚಿದಾಗ ದೇವರು ಆ ಮಹಾ ತಾಯಿ ಇರುವಲ್ಲಿಗೆ ಬಂದು ಆರತಿ ಮಾಡಿಸಿಕೊಂಡನು, ಅರ್ಥಾತ ಕಾಯಕದಲ್ಲಿ ದೇವರನ್ನು ಕಾಣುವದನ್ನು ಕಾಯಕಕ್ಕೆ ಮಹತ್ವ, ಮತ್ತು ಕಾಯಕವೇ ದೇವರು ಅನ್ನುವದನ್ನು ಕವಿ ಇಲ್ಲಿ ಅರ್ಥೈಸಿದ್ದಾರೆ.

‘ಗೆಳೆತನ’

ಅವ್ವ ಕೊಟ್ಟ ರೊಟ್ಟಿ ಬುತ್ತಿಯಲ್ಲಿ
ನನ್ನಷ್ಟೇ ಹಕ್ಕನ್ನು ಹೊಂದಿರುವ
ವಡ ಹುಟ್ಟಿದ ಒಡನಾಡಿ
ಈ ಗೆಳೆತನ

ಗೆಳೆತನದ ಮಹತ್ವವನ್ನು,

‘ಕನ್ನಡಿ ಒರೆಸುವ ಹುಡುಗ’

ಕನ್ನಡಿಯಂಗಡಿಯಲ್ಲಿ
ನಾನು ಧೂಳು ವರೆಸುವ ಹುಡುಗ
ದಯವಿಟ್ಟು ನನ್ನ ಅಂಗಡಿಯ*
ಮುಂದೆ ಬಿರುಸಾಗಿ ಸಾಗಿ ನಡೆಯಿರಿ
ಧೂಳು ಎದ್ದಷ್ಟು
ಕೆಲಸವೂ ಕೂಲಿಯು
ಜಾಸ್ತಿ ನನಗೆ

ಒಬ್ಬ ಕೂಲಿ ಕಾರ್ಮಿಕನಿಗೆ ಕೂಲಿ ಬಂದಷ್ಟು ಅವನಿಗೆ ಹೆಚ್ಚು ಖುಷಿ ಸಿಗುವ ಕಾರಣ ಬಿರುಸಾಗಿ ಸಾಗಿ ಧೂಳು ಇದ್ದಷ್ಟು ನನಗೆ ಕೆಲಸ ಜಾಸ್ತಿ ಮತ್ತು ಸಂಬಳ ಕೂಡ ಜಾಸ್ತಿ ಅನ್ನುವದನ್ನು ಕವಿ ರಹೀಮ್ ಬನ್ನಿಕಟ್ಟಿ ಅವರ ಕೂಲಿ ಕಾರ್ಮಿಕನ ಮನದಾಳದ ಮಾತನ್ನು ಕವಿತೆಯ ರೂಪದಲ್ಲಿ ವರ್ಣಿಸಿದ್ದಾರೆ. ಹೀಗೆ ಓದುಗರು ಒಂದೊಂದು ಕವಿತೆಗಳು ಓದುತ್ತಾ ಹೋದರೆ ಬಹುಷಃ ಶ್ರೀ ರಹೀಮ್ ಬನ್ನಿಕಟ್ಟಿ ಅವರ ಮೇಲೆ ಕವಿ ದ.ರಾ.ಬೇಂದ್ರೆ ಅವರ ಪ್ರಭಾವ ಆದಂತೆ ಕಾಣುತ್ತೆ. ಅವರ ಎಲ್ಲಾ ಕವಿತೆಗಳು ಅದ್ಭುತವಾದ ಭಾವಸಂವೆದನೆಯ ಪ್ರತಿಕಾಗಳಾಗಿವೆ ಅನ್ನಬಹುದು.

ಕವಿ ಶ್ರೀ ರಹೀಮ್ ಬನ್ನಿಕಟ್ಟಿ ಅವರ ತಾಯಿ ಭಾಷೆ ಉರ್ದು ಆದರೂ ಕೂಡ ಕನ್ನಡ ಭಾಷೆಯ ಮೇಲಿನ ಪ್ರೀತಿ ಅಭಿಮಾನ ಅವರಲ್ಲಿ ಹಚ್ಚ ಹಸಿರಾಗಿದ್ದು ಇವರ ‘ಗುಡಿಸಲಿಗೆ ಬಂದ ದೇವರು’ ಕವನ ಸಂಕಲನ ಕೃತಿಯನ್ನು ಪ್ರತಿಯೊಬ್ಬರು ಕೊಂಡು ಓದುವ ಮೂಲಕ ಯುವ ಪ್ರತಿಭೆಯ ಬರಹಗಾರನಿಗೆ ಪ್ರೋತ್ಸಾಹ ನೀಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಕವನ ಸಂಕಲನವನ್ನು ಓದುಗರ ಲೋಕಕ್ಕೆ ಅರ್ಪಣೆ ಮಾಡಿದ ಶ್ರೀ ರಹೀಮ್ ಬನ್ನಿಕಟ್ಟಿ ಅವರ ಸಾಹಿತ್ಯ ಕೃಷಿ ಹೀಗೆ ಮುಂದುವರಿಯಲೆಂದು ಹಾರೈಸುವೆ.


  • ಓಂಕಾರ ಪಾಟೀಲ್ – ಕಾರ್ಯದರ್ಶಿಗಳು, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಬೀದರ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW